Breaking News

ಮಹಿಳೆಯ ಹಣ ಕದ್ದ ಖದೀಮರು: ಮಕ್ಕಳೊಂದಿಗೆ ಬಸ್​ ನಿಲ್ದಾಣದಲ್ಲೇ ಅಳುತ್ತಾ ಕುಳಿತ ತಾಯಿ

Spread the love

 ಊರಿಗೆ ತೆರಳಲು ಬಸ್ ಹತ್ತುವಾಗ ಬಡ ಮಹಿಳೆಯ ಪರ್ಸ್‌ನಲ್ಲಿಟ್ಟಿದ್ದ ಹದಿನೈದು ಸಾವಿರ ರೂ. ಹಣವನ್ನು ಕಳ್ಳರು ಎಗರಿಸಿದ್ದಾರೆ. ಹಾಸನದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇತ್ತ ಹಣ ಕಳೆದುಕೊಂಡ ಮಹಿಳೆ ಊರಿಗೆ ಹೋಗದೆ ಬಸ್ ನಿಲ್ದಾಣದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕಣ್ಣೀರು ಹಾಕಿದ್ದಾರೆ.ಬಳಿಕ ತಾಯಿ-ಮಕ್ಕಳ ಗೋಳಾಟ ಕಂಡು ಸ್ಥಳೀಯರು ನೆರವು ನೀಡಿದ್ದಾರೆ.

ಹಾಸನ, ಮಾರ್ಚ್​ 28: ಸಾರ್ವಜನಿಕ ಸ್ಥಳಗಳಲ್ಲಿ ಮೈಯಲ್ಲಾ ಕಣ್ಣಾಗಿದ್ದರು ಸಾಕಾಗುವುದಿಲ್ಲ. ನಮ್ಮ ಹಣ (money) , ವಸ್ತುಗಳನ್ನು ಎಷ್ಟೇ ಎಚ್ಚರಿಕೆಯಿಂದ ಕಾಯಿದು ಕೊಂಡರು, ಮೈಮರೆತ ಯಾವುದೋ ಕ್ಷಣದಲ್ಲಿ ಕಳ್ಳತವಾಗಿ ಹೋಗಿರುತ್ತದೆ. ಸದ್ಯ ಇಂತಹದ್ದೇ ಒಂದು ಹಾಸನದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಊರಿಗೆ ತೆರಳಲು ಬಸ್ ಹತ್ತುವಾಗ ಬಡ ಮಹಿಳೆಯ ಪರ್ಸ್‌ನಲ್ಲಿಟ್ಟಿದ್ದ ಹದಿನೈದು ಸಾವಿರ ರೂ. ಹಣವನ್ನು ಕಳ್ಳರು ಎಗರಿಸಿದ್ದಾರೆ. ಇತ್ತ ಹಣ ಕಳೆದುಕೊಂಡ ಮಹಿಳೆ ಊರಿಗೆ ಹೋಗದೆ ಬಸ್ ನಿಲ್ದಾಣದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕಣ್ಣೀರು ಹಾಕಿದ್ದಾರೆ. ಬಳಿಕ ತಾಯಿ-ಮಕ್ಕಳ ಗೋಳಾಟ ಕಂಡು ಸ್ಥಳೀಯರು ನೆರವು ನೀಡಿದ್ದಾರೆ.

ಬಿಜಾಪುರ ಮೂಲದ ಭಾರತಿ ಹಣ ಕಳೆದುಕೊಂಡ ಮಹಿಳೆ. ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದರು.


Spread the love

About Laxminews 24x7

Check Also

ಮುಳುಗಿದ ಲೋಳಸೂರ ಸೇತುವೆ: ಡಿಸಿ ಮೊಹಮ್ಮದ್ ರೋಷನ್ ಪರಿಶೀಲನೆ

Spread the loveಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ‌ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ