ಬೆಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಚೌತಿಯಲ್ಲಿ ಗೌರಿ ಗಣೇಶ ಮೂರ್ತಿಗಳ ದರ ಹೆಚ್ಚಾಗಿದ್ದು, ಅಲಂಕಾರಿಕ ವಸ್ತು, ಸರಕು ಸಾಗಣೆ ಕಾರಣದಿಂದ ಶೇ.
10 ರಿಂದ 20ರಷ್ಟು ಬೆಲೆ ಜಾಸ್ತಿಯಾಗಿದೆ. ಮನೆಗಳಲ್ಲಿ ಪೂಜಿಸಲ್ಪಡುವ ಚಿಕ್ಕ ಮೂರ್ತಿಗಳಿಂದ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಡುವ ದೊಡ್ಡ ಗಾತ್ರದ ಗಣೇಶ ವಿಗ್ರಹಗಳನ್ನು ಭಾನುವಾರ ಜನತೆ ಕೊಂಡೊಯ್ಯುತ್ತಿದ್ದುದು ನಗರಗಳಲ್ಲಿ ಕಂಡುಬಂತು. ಚೌತಿಗಾಗಿ ನಗರದ ಬೀದಿ ಬೀದಿಗಳಲ್ಲಿ ಗಣೇಶ ವಿಗ್ರಹಗಳು ಮಾರಾಟವಾಗುತ್ತಿವೆ.
ರಾಜ್ಯದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ: ಕಳೆದ ವರ್ಷಕ್ಕಿಂತ ತುಟ್ಟಿಯಾದ ಗೌರಿ ಗಣೇಶನ ಮಣ್ಣಿನ ಮೂರ್ತಿಗಳುಹಿಂದಿನ ವರ್ಷ 50 ರಿಂದ 80 ರೂಪಾಯಿಗೆ ಲಭ್ಯವಾಗುತ್ತಿದ್ದ ಮಣ್ಣಿನ ಚಿಕ್ಕ ಗಣೇಶ ಮೂರ್ತಿಗಳು ಈ ಬಾರಿ 100 ರಿಂದ 120 ರೂಪಾಯಿ ಆಗಿವೆ. ಸಾಧಾರಣ ಗಾತ್ರದ ಮೂರ್ತಿಗಳಿಗೆ 1 ಸಾವಿರದಿಂದ 5 ಸಾವಿರ ರೂಪಾಯಿ ಬೆಲೆಯಿದ್ದರೆ, ದೊಡ್ಡ ಗಾತ್ರದ ವಿಗ್ರಹಗಳಿಗೆ 40 ಸಾವಿರದಿಂದ 60 ಸಾವಿರ ರೂಪಾಯಿವರೆಗೂ ಬೆಲೆಯಿದೆ. ಹೀಗಾಗಿ ಮೂರ್ತಿ ಕೊಳ್ಳುವವರು ಚೌಕಾಸಿಯಲ್ಲಿ ತೊಡಗಿದ್ದು ಸಹಜವಾಗಿತ್ತು.
ರಾಜ್ಯದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ: ಕಳೆದ ವರ್ಷಕ್ಕಿಂತ ತುಟ್ಟಿಯಾದ ಗೌರಿ ಗಣೇಶನ ಮಣ್ಣಿನ ಮೂರ್ತಿಗಳುಯಶವಂತಪುರದಲ್ಲಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಚಂದ್ರಯಾನ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದಂತೆ ಗಣಪನನ್ನು ರೂಪಿಸಲಾಗಿದೆ. ಬಿಟಿಎಂ 1ನೇ ಸ್ಟೇಜ್‌ನ ಶ್ರೀ ಗಜಾನನ ಗೆಳೆಯರ ಬಳಗ ರೈತ ಹಾಗೂ ಪರಿಸರ ಅಭಿವೃದ್ಧಿಯ ಮಾದರಿಯಲ್ಲಿ ಗಣೇಶನನ್ನು ನಿರ್ಮಿಸಿದ್ದಾರೆ. ಇದಲ್ಲದೆ, ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ತಾಂಡವ ನೃತ್ಯದ ಕಾಲಭೈರವ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಮುಂಬೈನಲ್ಲಿ ಜನಪ್ರಿಯವಾಗಿರುವ ಲಾಲ್ಬಾಗ್ ರಾಜ, ಪೂನಾದ ದಗಡು ಸೇಟ್ ಹಲ್ವಾಯಿ ಹೀಗೆ ಬಗೆ ಬಗೆಯ ಗಣಪಗಳು ಮಾರುಕಟ್ಟೆಯಲ್ಲಿ ಸಾರ್ವಜನಿಕರನ್ನು ಆಕರ್ಷಸಿವೆ.