Breaking News

Daily Archives: ಆಗಷ್ಟ್ 22, 2025

ಚಿಕ್ಕೋಡಿ: ಮಳೆಯ ಆರ್ಭಟ ಕಡಿಮೆಯಾದರೂ ತಗ್ಗದ ಕೃಷ್ಣೆಯ ಒಳಹರಿವು

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರ ಪಶ್ಚಿಮಘಟ್ಟ ಹಾಗೂ ಕೃಷ್ಣಾನದಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಗಣನೀಯವಾಗಿ ಕಡಿಮೆಯಾದರೂ ರಾಜ್ಯಕ್ಕೆ ಇನ್ನೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನಾಲ್ಕು ಅಡಿಯಷ್ಟು ಕೃಷ್ಣಾನದಿ ಏರಿಕೆ ಕಂಡಿದ್ದು, ನದಿ ಪಾತ್ರದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು, ಹಲವು ಸೇತುವೆಗಳು ಜಲಾವೃತವಾಗಿವೆ.  ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ ರಾಯಬಾಗ, ಅಥಣಿ, ಕಾಗವಾಡ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ರೈತರಲ್ಲಿ ಆತಂಕಕ್ಕೆ …

Read More »

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಬಿಜೆಪಿ ಧರ್ಮ ಯುದ್ಧ ನಡೆಸುವುದಾಗಿ ಘೋಷಿಸಿದೆ.

ಬೆಂಗಳೂರು: ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ “ಧರ್ಮದ ಉಳಿವಿಗಾಗಿ ಧರ್ಮ ಯುದ್ಧ” ಹೋರಾಟವನ್ನು ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, “ಧರ್ಮಸ್ಥಳದ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿರುವ ಹೇಳಿಕೆಗಳು ಎಲ್ಲರಿಗೂ ತಿಳಿದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಚಾರವಾಗಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ನಮಗೂ ಅನುಮಾನಗಳು ಕಾಡುತ್ತಿವೆ” ಎಂದು ಹೇಳಿದರು. “ರಾಜ್ಯ ಸರ್ಕಾರದ ಈ …

Read More »

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ ಸಿಹಿ ಸುದ್ದಿಯೊಂದು ನೀಡಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ತನ್ನ ಮೂರನೇ ಪ್ರಮುಖ ರಿಟೇಲ್​ ಮಳಿಗೆಯನ್ನು ತೆರೆಯಲು ಆಪಲ್ ಸಜ್ಜಾಗಿದೆ. ಇದಕ್ಕೂ ಮೊದಲು ಆಪಲ್ ಮುಂಬೈನಲ್ಲಿ ಆಪಲ್ ಬಿಕೆಸಿ ಮತ್ತು ನವದೆಹಲಿಯಲ್ಲಿ ಆಪಲ್ ಸಾಕೆಟ್ ಶಾಪ್​ಗಳನ್ನು ಯಶಸ್ವಿಯಾಗಿ ತೆರೆದಿದೆ. ಆಪಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಪ್ರಕಾರ, ಆಪಲ್ ಹೆಬ್ಬಾಳ ಅಂಗಡಿ ಸೆಪ್ಟೆಂಬರ್​ರಂದು ತೆರೆಯಲಿದೆ. ಅಂಗಡಿಯ ಉದ್ಘಾಟನೆ …

Read More »

ನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿ – ಆರ್​​ಎಸ್​​ಎಸ್ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ: ಡಿಸಿಎಂ

ಬೆಂಗಳೂರು : ನಾನು ಅಪ್ಪಟ ಕಾಂಗ್ರೆಸಿಗ. ಹುಟ್ಟಿನಿಂದ ಕಾಂಗ್ರೆಸ್​ ಪಕ್ಷದಲ್ಲಿದ್ದೇನೆ. ಜೀವ ಇರುವ ತನಕವೂ ಕಾಂಗ್ರೆಸಿಗನಾಗಿಯೇ ಇರುತ್ತೇನೆ. ನನ್ನ ಜೀವ, ನನ್ನ ರಕ್ತ ಎಲ್ಲವೂ ಕಾಂಗ್ರೆಸ್. ನಾನೀಗ ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಅದಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತೇನೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವಿಧಾ‌ನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಆರ್​​ಎಸ್​​ಎಸ್ ಗೀತೆ ಹಾಡಿದ್ದರ ಪರಿಣಾಮ ನೀವು ಬಿಜೆಪಿ ಹಾಗೂ ಆರ್​​ಎಸ್​​ಎಸ್ ಜೊತೆ ಕೈ ಜೋಡಿಸುವ ಬಗ್ಗೆ ಚರ್ಚೆಯಾಗುತ್ತಿದೆ …

Read More »

ಮಹೇಶ್ ಶೆಟ್ಟಿ ತಿಮರೋಡಿ ಕರೆತರುವಾಗ ಪೊಲೀಸ್​ ಕರ್ತವ್ಯಕ್ಕೆ ಅಡ್ಡಿ; ಮೂವರು ಬೆಂಗಲಿಗರ ಬಂಧನ

ಉಡುಪಿ: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬ್ರಹ್ಮಾವರ ಠಾಣೆಗೆ ಕರೆತರುತ್ತಿರುವಾಗ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರ ಮೂವರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ಉಜಿರೆ ನಿವಾಸಿಗಳಾದ ಸೃಜನ್ ಎಲ್., ಹಿತೇಶ್ ಶೆಟ್ಟಿ ಹಾಗೂ ಸಹನ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ತಿಮರೋಡಿಯನ್ನು ಹಿಂಬಾಲಿಸಿ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಂದಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಪೊಲೀಸರು ಸೂಚನೆ ನೀಡಿದರೂ ಕೇಳಿರಲಿಲ್ಲ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ …

Read More »

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ ಕಸರತ್ತು ನಡೆಯುತ್ತಿದೆ. ಐಟಿ ಹಬ್ ಆಗಿ ಹೊರಹೊಮ್ಮವ ಎಲ್ಲ ರೀತಿಯ ಸಾಮರ್ಥ್ಯ ದಾವಣಗೆರೆಗಿದೆ.‌ ಈಗಾಗಲೇ ಎಸ್​ಟಿಪಿಐ ಉಪ ಕೇಂದ್ರ ಈ ಜಿಲ್ಲೆಯಲ್ಲಿದೆ. ಇಲ್ಲಿ ಐಟಿ ಪಾರ್ಕ್ ಆರಂಭಕ್ಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಾಲ್ಕೈದು ಕಡೆ ಸ್ಥಳವನ್ನು ಗುರುತಿಸಿದ್ದಾರೆ. ಎರಡು ಎಕರೆ ಜಮೀನು, ವಿಶಾಲವಾದ ಕಟ್ಟಡದ ಬೇಡಿಕೆ: ದಾವಣಗೆರೆಯಲ್ಲಿ ಐಟಿ ಪಾರ್ಕ್​ ಆರಂಭಿಸಲು …

Read More »

ವಾಹನ ಸವಾರರೇ ಗಮನಿಸಿ.. ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಪಾವತಿಗೆ ಮತ್ತೊಮ್ಮೆ ಶೇ.50 ರಿಯಾಯಿತಿ ಘೋಷಣೆ

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ದಂಡ ಪಾವತಿಗೆ ರಿಯಾಯಿತಿ ಆಫರ್ ನೀಡಿದೆ. ಬಾಕಿ ಉಳಿಸಿಕೊಂಡ ದಂಡದಲ್ಲಿ ಶೇಕಡ 50ರಷ್ಟು ರಿಯಾಯತಿ ಘೋಷಿಸಿ ಸಾರಿಗೆ ಇಲಾಖೆ ಗುರುವಾರ ಆದೇಶ ಹೊರಡಿಸಿದೆ. ಈ ತಿಂಗಳ 23ರಿಂದ ಸೆಪ್ಟೆಂಬರ್ 12ರೊಳಗೆ ದಂಡ ಪಾವತಿಸಿದರೆ ಮಾತ್ರ ದಂಡದ ಡಿಸ್ಕೌಂಟ್ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದಿನ ಅವಧಿಯಲ್ಲಿ 2023ರ ಫೆಬ್ರವರಿ 23ರೊಳಗೆ …

Read More »

ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆ: ವಾಯುವ್ಯ ಸಾರಿಗೆಯಿಂದ ಹೆಚ್ಚುವರಿ ವಿಶೇಷ ಬಸ್​​ ಸೌಲಭ್ಯ

ಹುಬ್ಬಳ್ಳಿ (ಧಾರವಾಡ): ಗಣೇಶ ಚತುರ್ಥಿ ಹಾಗೂ ಸರಣಿ ರಜೆ ಹಿನ್ನೆಲೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆಗಸ್ಟ್ 22 ರಿಂದ 31 ರವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ. ಆಗಸ್ಟ್​ 26ರಂದು ಮಂಗಳವಾರ ಗೌರಿ ಹಬ್ಬ, ನಿರ್ಬಂಧಿತ ರಜೆ, ಆ. 27 ರಂದು ಬುಧವಾರ ಗಣೇಶ ಚತುರ್ಥಿ ಸಾರ್ವಜನಿಕ ರಜೆ, ಆ. 24ರಂದು 4ನೇ ಶನಿವಾರ …

Read More »

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನದಲ್ಲಿ ಹಲವು ಲೋಪ ಗುರುತಿಸಿದ ಸಿಎಜಿ

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ (2018 ರಿಂದ 2023) ರಾಜ್ಯದ ಒಟ್ಟು ವೆಚ್ಚವು ಶೇ.36ರಷ್ಟು ಹೆಚ್ಚಾಗಿತ್ತು. ಈ ಪೈಕಿ 2022-23ರ ಒಂದು ವರ್ಷದ ಅವಧಿಯಲ್ಲಿ ರಾಜಸ್ವ ವೆಚ್ಚವು ಒಟ್ಟು ವೆಚ್ಚದ ಶೇಕಡಾ 78 ರಷ್ಟಿದೆ (2.15 ಲಕ್ಷ ಕೋಟಿ) ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ. ವಿಧಾನಸಭೆಯಲ್ಲಿ ಇಂದು ವರದಿಯನ್ನು ಮಂಡಿಸಲಾಯಿತು. ವಿವಿಧ ಇಲಾಖೆಗಳು ಮತ್ತು ಬಾಬ್ತುಗಳ ಪರಿಶೀಲನೆಯ ಹಿನ್ನೆಲೆಯಲ್ಲಿ ವೆಚ್ಚದ ಒಟ್ಟು ಸ್ವರೂಪವನ್ನು ಸಿಎಜಿ …

Read More »

ಗೋಕಾಕ್ ಫಾಲ್ಸ್: ಪ್ರವಾಸಿಗರಿಗೆ ಖುಷಿಯೋ ಖುಷಿ

ಬೆಳಗಾವಿ: ಘಟಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಒಂದು ಕಡೆ ಪ್ರವಾಹದ ಸಂಕಟ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಪ್ರವಾಸಿಗರು ಗೋಕಾಕ್ ಫಾಲ್ಸ್​​ನ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳುವ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ನಿಸರ್ಗ ಪ್ರಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೌದು, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುತ್ತಿದೆ. ಹಾಗಾಗಿ, ಜಲಾಶಯದಿಂದ ಸುಮಾರು 36 ಸಾವಿರ …

Read More »