Breaking News

Daily Archives: ಜುಲೈ 15, 2025

ನಕಲಿ ದಾಖಲೆಗಳ ಮೂಲಕ ಶೂರಿಟಿ ನೀಡುತ್ತಿದ್ದ 8 ಆರೋಪಿಗಳ ಬಂಧನ

ಬೆಂಗಳೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ನಕಲಿ ಶೂರಿಟಿ ನೀಡುತ್ತಿದ್ದ 8 ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಫಿ, ಪ್ರವೀಣ್ ಕುಮಾರ್, ಅಭಿಷೇಕ್, ಗೋವಿಂದ ನಾಯ್ಕ್ ಮತ್ತು ದೊರೆರಾಜು ಹಾಗೂ ಮತ್ತೊಂದು ಪ್ರಕರಣದಲ್ಲಿ ಅಬೀದ್, ವಾಸಿಂ ಅಹಮ್ಮದ್ ಮತ್ತು ಗೋವಿಂದರಾಜು ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ಶೂರಿಟಿಗಳನ್ನು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಭೂಮಿ ಆ್ಯಪ್‌ನ ಮೂಲಕ ಬೇರೆ …

Read More »

ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ

ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಶಕ್ತಿ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದ್ದಾರೆ ಬೆಳಗಾವಿಯ ಯುವಕನ ಈ ಸಾಧನೆ. ಹಾಗಾದರೇ, ಆ ಯುವಕ ಮಾಡಿರುವ ಸಾಧನೆಯಾದರೂ ಯಾವುದು? ಎಂಬುದನ್ನು ನೋಡೋಣ ಬನ್ನಿ. ಹೌದು, ಬೆಳಗಾವಿಯ ಕಂಗ್ರಾಳಿ ಬುದ್ರುಕ್ ಗ್ರಾಮದ ಪ್ರಶಾಂತ್ ಮಂಗೇಶ್ ಚೌಗುಲೆ. ಆರ್ಥಿಕ ಸಂಕಷ್ಟಗಳಿಂದ ಜರ್ಜರಿತ ಕುಟುಂಬದಿಂದ ಬಂದ ಈ ಪ್ರತಿಭಾವಂತ ಯುವಕ. ಈತ …

Read More »

ನಂದಗಡ ಠಾಣೆಯ ಪೊಲೀಸ್ ಮೆಂಡಿಗೇರಿಗೆ ಎಸ್ಪಿ ಪ್ರಶಂಸನಾ ಪತ್ರ

ನಂದಗಡ ಠಾಣೆಯ ಪೊಲೀಸ್ ಮೆಂಡಿಗೇರಿಗೆ ಎಸ್ಪಿ ಪ್ರಶಂಸನಾ ಪತ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಅವರಿಂದ ವಿತರಣೆ ಐತಿಹಾಸಿಕ ಪುಣ್ಯ ಭೂಮಿ ನಂದಗಡದ ಗ್ರಾಮದಲ್ಲಿರುವ ಪೋಲಿಸ್ ಠಾಣೆಯ ಪೊಲೀಸರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಿದಾನಂದ ಮೆಂಡಿಗೇರಿ ಅವರಿಗೆ ಬೆಳಗಾವಿ ಹೆಚ್ಚುವರಿ ಅಧಿಕ್ಷಕರಾದ ರಾಮಗೊಂಡ ಬಸರಗಿ ಅವರಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಚಿದಾನಂದ ಮೆಂಡಿಗೇರಿ ಅವರು ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಠಾಣೆಯ ಅವಧಿ ಮೀರದ ದಾಖಲೆಗಳ ವಿಲೇವಾರಿ ಹಾಗೂ …

Read More »

ಕತ್ತಲಲ್ಲಿ ಮುಳುಗಿದ ಖಾನಾಪೂರ!!!

ಉರಿಯದ ಬೀದಿ ದೀಪಗಳು… ಕತ್ತಲಲ್ಲಿ ಮುಳುಗಿದ ಖಾನಾಪೂರ!!! ಖಾನಾಪೂರ – ನಂದಗಡ ಹಾಗೂ ಖಾನಾಪೂರ – ಬೆಳಗಾವಿ ರಸ್ತೆಗಳ ಖಾನಾಪೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾಗಗಳಲ್ಲಿ ರಸ್ತೆ ಮಧ್ಯದಲ್ಲಿರುವ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮವಾಗಿ ಆ ಪ್ರದೇಶ ಸಂಪೂರ್ಣವಾಗಿ ಕತ್ತಲೆಯಲ್ಲಿ ಮುಳುಗಿದೆ. ದಟ್ಟ ಅಂಧಕಾರದ ಹಿನ್ನೆಲೆ ಪ್ರವಾಸಿಗರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಎದುರಾಗುತ್ತಿದೆ. ಮೊದಲೇ ರಸ್ತೆಯು ತೆಗ್ಗುಮಯವಾಗಿದ್ದು, ಇದರ …

Read More »

ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ!

ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ! ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೋಮವಾರಪೇಟೆಯ ನಾಮದೇವ ಗಲ್ಲಿಯಲ್ಲಿ ಇರುವ ಹನುಮ ದೇವಾಲಯದಲ್ಲಿ ಧಾರ್ಮಿಕ ನಂಬಿಕೆಗಳನ್ನು ಪುಷ್ಟಿಪಡಿಸುವ ರೀತಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ಮುಂಭಾಗದಲ್ಲಿದ್ದ ಅರಳಿ ಮರವನ್ನು ಕಡಿದು ಕಟ್ಟಡ ನಿರ್ಮಿಸಲು ಆಡಳಿತ ಸಮಿತಿ ಮುಂದಾಗಿತ್ತು. ಮರ ಕಡಿತದ ವೇಳೆ ಮರದ ಕಾಂಡ ಕಡಿದು, ಮುಂದಿನ ಭಾಗವನ್ನು ಕತ್ತರಿಸಲು ಪ್ರಯತ್ನಿಸಿದಾಗ ಗರಗಸ ಸೇರಿದಂತೆ ಬಳಸಿದ …

Read More »

ಕೂಡಲಸಂಗಮ ಪೀಠಕ್ಕೆ ಬೀಗ…

ಕೂಡಲಸಂಗಮ ಪೀಠಕ್ಕೆ ಬೀಗ… ಮೃತ್ಯುಂಜಯ ಶ್ರೀಗಳ ನಾಲ್ವರು ಬೆಂಬಲಿಗರ ವಿರುದ್ಧ ದೂರು…!!! ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಲಾಗಿದೆ. ನಿನ್ನೆ ರಾತ್ರಿ ಪೀಠಕ್ಕೆ ಬೀಗ ಹಾಕಿರುವ ಮಾಹಿತಿ ಲಭ್ಯವಾಗಿದ್ದು, ಬೀಗ ಹಾಕಿದ್ದು ಯಾರು? ಯಾಕೆ? ಎನ್ನುವುದು ನಿಗೂಢವಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ ವಿಚಾರ ಬುಗಿಲೆದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ಶುರುವಾಗಿದ್ದ ಹೊಸ ಪೀಠದ ಚರ್ಚೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಪ್ರಸಂಗ ಬಂದರೆ …

Read More »

ಸಿಂಗದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ಶಿಷ್ಟಾಚಾರ ಉಲ್ಲಂಘಿಸಿ ಆಯೋಜಿಸಲಾಗಿದೆ’: ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಗಂದೂರು ಸೇತುವೆ ಲೋಕಾರ್ಪಣೆ ಹಾಗೂ ವಿವಿಧ ಯೋಜನೆಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಶಿವಮೊಗ್ಗದ ಈ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ಬೇರೆ ಮೂಲದಿಂದ ತಿಳಿದುಕೊಂಡಿದ್ದೇನೆ. ಬಳಿಕ ನಾನು ವೈಯಕ್ತಿಕವಾಗಿ ಮಾತನಾಡುವುದರ ಜೊತೆಗೆ ಜು.11ರಂದು ಕೇಂದ್ರ ರಸ್ತೆ ಸಾರಿಗೆ ಸಚಿವರಿಗೆ ಪತ್ರ ಬರೆದು ವಿಜಯಪುರದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಶಿವಮೊಗ್ಗದ ಕಾರ್ಯಕ್ರಮವನ್ನು ಮುಂದೂಡುವಂತೆ ಮನವಿ ಮಾಡಿದ್ದೆನು. …

Read More »

ಪಾರ್ಟಿಯ ವೇಳೆ ಸ್ನೇಹಿತರು ಯುವಕನೊಬ್ಬನ ಮೇಲೆ ಹಲ್ಲೆ

ಬೆಂಗಳೂರು : ಎಣ್ಣೆ ಪಾರ್ಟಿಯಲ್ಲಿ ಜೊತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತೇಜಸ್ (24) ಎಂಬಾತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತನ ಸ್ನೇಹಿತರಿಂದ ಹಲ್ಲೆ : ಆಟೋ ಚಾಲಕನಾಗಿದ್ದ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿದ ಬಳಿಕ ಸ್ನೇಹಿತ ಸಂತೋಷ್ ಜೊತೆ ರುದ್ರಪ್ಪ …

Read More »

ಫಾಸ್ಟ್‌ಟ್ಯಾಗ್‌ ನಿಯಮ ಮತ್ತಷ್ಟು ಕಠಿಣ

FASTag Blacklist: ‘ಲೂಸ್ ಫಾಸ್ಟ್‌ಟ್ಯಾಗ್’ ಸಮಸ್ಯೆ ನಿಭಾಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಈಗ ಕಾರಿನಿಂದ ಫಾಸ್ಟ್‌ಟ್ಯಾಗ್ ತೆಗೆದು ಟೋಲ್ ಪ್ಲಾಜಾದಲ್ಲಿ ತೋರಿಸುವವರನ್ನು ಬ್ಲ್ಯಾಕ್​ ಲಿಸ್ಟ್​ಗೆ ಸೇರಿಸಲಾಗುತ್ತದೆ. ಕಾರಿನ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಸರಿಯಾಗಿ ಅಳವಡಿಸುವುದು ಅವಶ್ಯಕ. ಟೋಲ್ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಸಡಿಲವಾದ ಫಾಸ್ಟ್‌ಟ್ಯಾಗ್ ವರದಿ ಮಾಡುವಿಕೆಯನ್ನು ಬಲಪಡಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಟೋಲ್ ಸಂಗ್ರಹ ಏಜೆನ್ಸಿಗಳು ಮತ್ತು ರಿಯಾಯಿತಿ ನೀಡುವವರು ಲೂಸ್​ ಫಾಸ್ಟ್‌ಟ್ಯಾಗ್‌ಗಳನ್ನು …

Read More »

ಪಂಚಮಸಾಲಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಪ್ರಕರಣ: ಏಕ ಸದಸ್ಯ ಪಿಠದ ತನಿಖೆ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಚಿಕ್ಕೋಡಿ (ಬೆಳಗಾವಿ) : ಕಳೆದ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಮಯದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಟನೆಕಾರರ ಮೇಲೆ ನಡೆಸಿದ ಲಾಠಿ ಚಾರ್ಜ್ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್​ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಈ ಮೂಲಕ ಸರ್ಕಾರದ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಇದರಿಂದ ನಮಗೆ ಎರಡನೇ ಬಾರಿಗೆ ಕಾನೂನಾತ್ಮಕವಾಗಿ ಜಯ ಸಿಕ್ಕಿದೆ ಎಂದು ಕೂಡಲಸಂಗಮ ಪೀಠದ ಪಂಚಮಸಾಲಿ ಸಮಾಜದ ಜಗದ್ಗುರು ಬಸವ …

Read More »