Breaking News

Daily Archives: ಫೆಬ್ರವರಿ 13, 2025

ಸಂಜಯ ಪಾಟೀಲ ಬೆಂಬಲಿಗನೇ ಮಟಕಾ ಬರೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. 

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಟಕಾ, ಗ್ಯಾಂಬ್ಲಿಂಗ್ ಹೆಚ್ಚಾಗುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಮರುದಿನವೇ  ಮಟಕಾ ಬರೆಯುತ್ತಿದ್ದ ಸಂಜಯ ಪಾಟೀಲ ಬೆಂಬಲಿಗ ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಬಡಸ್ ಕೆಎಚ್ ಲಕ್ಷ್ಮೀ ಗಲ್ಲಿಯ ಪರುಶುರಾಮ ಅರ್ಜುನ ಸುತಾರ (39) ಗಜವತಿ  – ಕುಕಡೊಳ್ಳಿ ರಸ್ತೆಯಲ್ಲಿ ಓಸಿ ಚೀಟಿ ಬರೆಯುತ್ತಿರುವ ಸಂದರ್ಭದಲ್ಲೇ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. …

Read More »

ಗೋಕಾಕಿನಲ್ಲಿ ಧಗಧಗನೆ ಹೊತ್ತಿ ಉರಿದ ಗಾದಿ ಕಾರ್ಖಾನೆ!!!!

ಗೋಕಾಕಿನಲ್ಲಿ ಧಗಧಗನೆ ಹೊತ್ತಿ ಉರಿದ ಗಾದಿ ಕಾರ್ಖಾನೆ!!!! ಗಾದಿ ತಯಾರಿಸುವ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ಸುಟ್ಟು ಕರಕಲಾದ ಮಶಿನು,ಗಾದಿ ಗೋಕಾಕ : ಗಾದಿ ತಯಾರಿಸುವ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ‌ ಹತ್ತಿದ ಪರಿಣಾಮ ಗೊಡಾವನದಲ್ಲಿದ್ದ ಹತ್ತಿ, ಮಶಿನಗಳು ಸುಟ್ಟು ಬಸ್ಮವಾದ ಘಟನೆ ಗೋಕಾಕ ತಾಲೂಕಿನ ಮಾನಿಕವಾಡಿಯಲ್ಲಿ ನಡೆದಿದೆ. ಸಂಜೆ 5 ಗಂಟೆಗೆ ಹತ್ತಿದ ಆಕಸ್ಮಿಕ ಬೆಂಕಿ ಕೆಲವೆ ಕ್ಷಣಗಳಲ್ಲಿ ಇಡಿ ಗೊಡಾವನಗೆ ಆವರಿಸಿ ಸುತ್ತಲ್ಲೂ ಬೆಂಕಿ ಹತ್ತಿಕೊಂಡಿದೆ,ಇನ್ನು ಸುದ್ದಿ ತಿಳಿದ ತಕ್ಷಣ …

Read More »

ಹಾಸನ: ಮುಖದ ಮೇಲೆ ಕಲ್ಲು ಎತ್ತಿಹಾಕಿ ಅಪರಿಚಿತ ಮಹಿಳೆಯ ಭೀಕರ ಕೊಲೆ

ಹಾಸನ: ಅಪರಿಚಿತ ಮಹಿಳೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ರೈಲ್ವೆ ನಿಲ್ದಾಣದ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ. ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಸುಮಾರು 40 ವರ್ಷ ವಯಸ್ಸಿನ ಮಹಿಳೆಯಾಗಿದ್ದಾರೆ. ರಾಜಘಟ್ಟದ ರೈಲು ನಿಲ್ದಾಣದ ಪಕ್ಕದಲ್ಲಿ ರೈಲ್ವೆ ಇಲಾಖೆಯ ಕಾಮಗಾರಿ ನಡೆಯುತ್ತಿದ್ದು, ಕಟ್ಟಡದ ಒಳಗಡೆ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಲಸಕ್ಕೆ ಬಂದ ಕಾರ್ಮಿಕರು ಕಾಮಗಾರಿ …

Read More »

ಚಲಿಸುತ್ತಿದ್ದ ರೈಲಿನಿಂದ ತಳ್ಳಿ ವ್ಯಕ್ತಿಯ ಹತ್ಯೆ

ಬೆಂಗಳೂರು : ಕುಳಿತುಕೊಳ್ಳುವ ವಿಚಾರಕ್ಕೆ ಜಗಳವಾಗಿ ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯನ್ನು ತಳ್ಳಿ ಹತ್ಯೆ ಮಾಡಿದ ಆರೋಪದ ಮೇಳೆ ಇಬ್ಬರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಸೆರೆಹಿಡಿದಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ಮೂಲದ ದೇವಪ್ಪ (45) ಹಾಗೂ ಪೀರಪ್ಪ (31) ಬಂಧಿತ ಆರೋಪಿಗಳು. ಚನ್ನರಾಯಪಟ್ಟಣ ಹಿರೇಸಾವೆಯ ಕುಮಾರ್ (28) ಹತ್ಯೆಯಾದ ವ್ಯಕ್ತಿ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸರು ಹೇಳಿದ್ಧೇನು ? ಫೆ. 11ರಂದು ಯಶವಂತಪುರ-ಬೀದರ್ ಎಕ್ಸ್​ಪ್ರೆಸ್​​ ರೈಲಿನ …

Read More »

ಮಹಾ ಕುಂಭಮೇಳ : ಮೈಸೂರು-ತುಂಡ್ಲಾ ನಡುವೆ ಮತ್ತೊಂದು ವಿಶೇಷ ಎಕ್ಸ್​ಪ್ರೆಸ್ ರೈಲು ಸೌಲಭ್ಯ

ಹುಬ್ಬಳ್ಳಿ: ಪ್ರಯಾಗರಾಜ್ ಮಹಾ​ ಕುಂಭಮೇಳದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮೈಸೂರು ಮತ್ತು ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲು ಸಂಖ್ಯೆ 06219 ಮೈಸೂರು-ತುಂಡ್ಲಾ ವಿಶೇಷ ಎಕ್ಸ್​ಪ್ರೆಸ್ ರೈಲು ಫೆ.20ರಂದು (ಗುರುವಾರ) ಮೈಸೂರಿನಿಂದ ರಾತ್ರಿ 9:40 ಗಂಟೆಗೆ ಹೊರಟು, ಫೆಬ್ರವರಿ 23ರಂದು (ಭಾನುವಾರ) ಬೆಳಗ್ಗೆ 9:30 ಗಂಟೆಗೆ ತುಂಡ್ಲಾ ನಿಲ್ದಾಣ ತಲುಪಲಿದೆ. ಪುನಃ ಇದೇ ರೈಲು (06220) ಫೆ.24ರಂದು …

Read More »

ಆಕಸ್ಮಿಕವಾಗಿ ಗುಂಡು ತಗುಲಿ ಬೆಳಗಾವಿ ಯೋಧ ಸಾವು

ಬೆಳಗಾವಿ: ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಬೆಳಗಾವಿ ಜಿಲ್ಲೆಯ ಯೋಧ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಇಂದು ನಡೆದಿದೆ. ಮೂಡಲಗಿ ತಾಲೂಕಿನ ಕಲ್ಲೋಳಿಯ ಸುಭಾಷ ಖಾನಗೌಡ್ರ (24) ಮೃತಪಟ್ಟ ಯೋಧ.‌ ಇವರು ಕಳೆದ ಐದು ವರ್ಷಗಳಿಂದ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.2020ರಲ್ಲಿ ನೌಕಾಪಡೆಗೆ ನೇಮಕಾತಿ ಹೊಂದಿದ್ದ ಸುಭಾಷ ಅವರು ಕೇರಳದ ಕೊಚ್ಚಿಯಲ್ಲಿ ತರಬೇತಿ ಪಡೆದಿದ್ದರು. ನಂತರ …

Read More »

ನಿಯಮ ಮೀರಿ ನಿರಾತಂಕವಾಗಿ ನಡೆದಿರುವ ಗಣಿಗಾರಿಕೆ

ಬಾಗಲಕೋಟೆ : ನಿಯಮ ಮೀರಿ ನಿರಾತಂಕವಾಗಿ ನಡೆದಿರುವ ಗಣಿಗಾರಿಕೆ ಗಣಿಗಾರಿಕೆ ನಿಯಮ ಬದ್ಧವಾಗಿ ನಡೆಸಲು ಅದಕ್ಕಂತೆನೇ ಇಲಾಖೆ ಇದೆ.ಅಕ್ರಮ,ನಿಯಮ ಮೀರಿ ಗಣಿಗಾರಿಕೆ ನಡೆಸುವವರ ಮೇಲೆ ಕ್ರಮ ವಹಿಸುವ ಮತ್ತು ಗಣಿಗಾರಿಕೆ ಸ್ಥಳ ಪರಿಶೀಲನೆ ಮಾಡುವ ಕೆಲಸ ಮೈನಿಂಗ್ ಅಧಿಕಾರಿಗಳದ್ದು,ಆದ್ರೆ ಇಲ್ಲಿ ಸ್ಥಳೀಯರು ದೂರು ನೀಡಿದ್ರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಅಕ್ರಮ ಮರಂ ಸಾಗಾಟದ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಒಂದೆಡೆ ಜೆಸಿಬಿಗಳ ಮೂಲಕ ಅಗೆಯುತ್ತಿರೋ ಗುಡ್ಡ.ಮತ್ತೊಂದೆಡೆ ಮರಂ ಸಾಗಾಟ …

Read More »

ನೀರಿಗಾಗಿ ಮಜಗಾವ ದಲ್ಲಿ ಪ್ರತಿಭಟನೆ

ನೀರಿಗಾಗಿ ಮಜಗಾವ ದಲ್ಲಿ ಪ್ರತಿಭಟನೆ ಬೆಳಗಾವಿ ನಗರದ ಮಜಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಅಲ್ಲಿಯ ನಿವಾಸಿಗಳು ಇಂದು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ಮಾಡಿದರು. ಕಳೆದ ಮೂರು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರೀಕ್ಷಿಗೂ ಮೀರಿ ಮಳೆಯಾಗಿದ್ದರ ಪರಿಣಾಮವಾಗಿ ಜಿಲ್ಲೆಯ ಘಟಪ್ರಭಾ ಮಲಪ್ರಭಾ ಹಾಗೂ ರಕ್ಕಸಕೊಪ್ಪ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ನಗರದ ಅನೇಕ ಬಡಾವಣೆಯಲ್ಲಿ ಕಳೆದ ‌10 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಬೇಸಿಗೆ ಆರಂಭವಾಗಿದ್ದು, ನೀರು ಸಿಗದಿರುವುದಕ್ಕೆ ಜನರು …

Read More »

ಬಾಗಪ್ಪ ಹರಿಜನ ಹತ್ಯೆ ಹಿಂದೆ ಪಿಂಟು ​ಕೈವಾಡ ಶಂಕೆ,

ವಿಜಯಪುರ, (ಫೆಬ್ರವರಿ 12): ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಕೊಲೆ ನಡೆದಿದೆ. ಆಟೋದಲ್ಲಿ ಬಂದಿದ್ದ ನಾಲ್ಕೈದು ದಾಳಿಕೋರರು, ಪಕ್ಕಾ ಪ್ಲ್ಯಾನ್ ಮಾಡಿ ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಸಂಬಂಧಿಕರ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಊಟ ಮಾಡಿ ವಾಕ್ ಮಾಡುತ್ತಿದ್ದಾಗಗಲೇ ಬಾಗಪ್ಪನನ್ನು ಕೊಲೆಗೈದು ಪರಾರಿಯಾಗಿರೋ, ಹಂತಕರ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಬಾಗಪ್ಪ ಕೊಲೆ ವಕೀಲ ರವಿ …

Read More »

ಬೆಟಗೇರಿಯ ಬಡ್ಡಿ ಯಲ್ಲಪ್ಪನ ಮನೆಯಲ್ಲಿ ಕಂತೆ ಕಂತೆ ಹಣ: ಪೊಲೀಸರೇ ಶಾಕ್!

ಗದಗ, ಫೆಬ್ರವರಿ 12: ಆತ ಬಡ್ಡಿ ಬಕಾಸುರ, ಅಕ್ರಮವಾಗಿ ಬಡ್ಡಿ ದಂಧೆ (meter interest) ಮಾಡುತ್ತಿದ್ದ. ಕೋಟಿ ಕೋಟಿ ಲೆಕ್ಕದಲ್ಲಿ ಬಡ್ಡಿದಂದೆ ಮಾಡ್ತಾಯಿದ್ದ. ಬಡ ಜನರ ರಕ್ತ ಹೀರಿ ಹೀರಿ ಕುಬೇರನಾಗಿದ್ದ. ಆದರೆ ಬಡ್ಡಿ ಬಕಾಸುರನ ಖಜಾನೆಯನ್ನು ಪೊಲೀಸರು ಜಾಲಾಡಿದ್ದಾರೆ. ಪದ್ಮನಾಭನ ಖಜಾನೆಯಂತೆ ಹತ್ತಾರು ಲಾಕರ್ ಗಳಲ್ಲಿ ಕೋಟಿ ಕೋಟಿ ರೂ. ಮೊತ್ತದ ಹಣದ ಕಂತೆಗಳು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಯಾರಿಗೂ ಅನುಮಾನ ಬರದಂತೆ ಹಳೆಯ ಕಟ್ಟಡದಲ್ಲಿ ಕೋಟಿ ಕೋಟಿ ರೂ. …

Read More »