ನೌಕರರ ವೇತನ ಹಾಗೂ ಪಿಂಚಣಿದಾರರ ಭತ್ಯೆ ಪರಿಷ್ಕರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗ ರಚಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Read More »Daily Archives: ಜನವರಿ 16, 2025
ನೋಟಿಸ್ ಕೊಡುವ ಅಧಿಕಾರ ಅವರಿಗಿದೆ. ಕೊಟ್ಟಿದ್ದರೆ, ನೋಟಿಸ್ಗೆ ನಾನು ಉತ್ತರ ಕೊಡುತ್ತೇನೆ. ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ.
ಬೆಂಗಳೂರು: ಕೆಪಿಸಿಸಿಯಿಂದ ನೋಟಿಸ್ ಕೊಟ್ಟಾಕ್ಷಣ ಯಾವುದೇ ದೊಡ್ಡ ಅನಾಹುತ ಆಗುವುದಿಲ್ಲ. ಅದಕ್ಕೆ ಸ್ಪಷ್ಟ ಉತ್ತರವನ್ನು ಅಧ್ಯಕ್ಷರ ಮುಂದೆ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿ ಅವರು, ನೋಟಿಸ್ ಕೊಡುವ ಅಧಿಕಾರ ಅವರಿಗಿದೆ. ಕೊಟ್ಟಿದ್ದರೆ, ನೋಟಿಸ್ಗೆ ನಾನು ಉತ್ತರ ಕೊಡುತ್ತೇನೆ. ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ. ಕೆಪಿಸಿಸಿ ಆಕಾಂಕ್ಷಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ಕುರಿತು ವಿಡಿಯೋ ಕೂಡ ನಮ್ಮ ಬಳಿ …
Read More »ಚಲಿಸುತ್ತಿರುವ ಆಟೋದ ಟಾಪ್ ಮೇಲೆ ಮಲಗಿ ಯುವಕನ ಕಸರತ್ತು
ಯುವಕರು ತಮ್ಮ ಹುಚ್ಚಾಟಗಳಿಗಾಗಿ, ಲೈಕ್ಸ್ ವೀವ್ಸ್‌ಗಳಿಗಾಗಿ ಡೇಂಜರಸ್ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಎದೆ ಝಲ್ ಎನ್ನಿಸುವ ದೃಶ್ಯವೊಂದು ವೈರಲ್ ಆಗಿದ್ದು, ಯುವಕನೊಬ್ಬ ಚಲಿಸುತ್ತಿರುವ ಆಟೋದ ಟಾಪ್ ಮೇಲೆ ಮಲಗಿ ಪ್ರಯಾಣಿಸಿದ್ದಾನೆ. ಈತನ ಹುಚ್ಚಾಟಕ್ಕೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಕೆಲ ಬಿಸಿ ರಕ್ತದ ಯುವಕರು ಇವೆಲ್ಲಾ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತವೆ ಎಂದು ಗೊತ್ತಿದ್ದರೂ ಕೂಡಾ ರಸ್ತೆಗಿಳಿದು ಬೈಕ್, ಕಾರ್‌ಗಳಲ್ಲಿ …
Read More »ಆತ್ಮರಕ್ಷಣೆಗಾಗಿ ಗನ್ ಬೇಕು: ದರ್ಶನ್ ತೂಗುದೀಪ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಅರೋಪದಲ್ಲಿ ಚಿತ್ರನಟ ದರ್ಶನ್ ಬಂಧನವಾದಾಗಲೇ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿರುವ ಪಿಸ್ಟಲ್ ಮುಟ್ಟುಗೋಲು ಹಾಕಿಕೊಂಡು ಗನ್ ಲೈಸೆನ್ಸ್ ರದ್ದು ಮಾಡಬೇಕೆಂಬ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದರು. ಅವರು ಜೈಲಲ್ಲಿದ್ದ ಕಾರಣ ವಿಷಯ ಕೊಂಚ ನೆನೆಗುದಿಗೆ ಬಿದ್ದಿದ್ದು ಸತ್ಯ. ಈಗ ಅವರು ಜಾಮೀನು ಪಡೆದು ಹೊರಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಪಿಸ್ಟಲ್ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದೆ, ಹಾಗಾಗಿ ಅವರ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ಜನವರಿ …
Read More »5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪಿ ಮೇಲೆ ಫೈರಿಂಗ್
ಬಳ್ಳಾರಿ, ಜನವರಿ 16: ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮಂಜುನಾಥ್ (26) ಮೇಲೆ ಗುರುವಾರ ಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ತಪ್ಪಿಸಲು ಯತ್ನಿಸಿದ್ದರಿಂದ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು ಎನ್ನಲಾಗಿದೆ. ಸೋಮವಾರ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆಗೆ ಪೊಲೀಸರು ಮೂರು ತಂಡ ರಚಿಸಿದ್ದರು. ಕೊಪ್ಪಳದ ಹುಲಗಿಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಪಂಚಾನಾಮೆಗೆ ಹೋದಾಗ ಆತ, ಹೆಡ್ …
Read More »ಕೆಂಪೇಗೌಡ ಏರ್ಪೋರ್ಟ್ನಲ್ಲಿ ಬರೋಬ್ಬರಿ 23 ಕೋಟಿ ರೂ ಮೌಲ್ಯದ ಗಾಂಜಾ ವಶ
ಬೆಂಗಳೂರು, ಜನವರಿ 16: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಅಕ್ರಮವಾಗಿ ತಂದಿದ್ದ 23 ಕೋಟಿ ರೂ. ಮೌಲ್ಯದ ಗಾಂಜಾವನ್ನು (ganja) ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಂಕಾಕ್ನಿಂದ ಅಕ್ರಮವಾಗಿ 23 ಕೆಜಿ ಗಾಂಜಾ ತಂದಿದ್ದ ಮೂವರನ್ನು ಬಂಧಿಸಿದ್ದು, ಎನ್ಡಿಪಿಎಸ್ ಖಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.ಬಂಧಿತ ಮೂವರು ಬ್ಯಾಂಕಾಕ್ನಿಂದ ಅಕ್ರಮವಾಗಿ 23 ಕೆಜಿಯ ಹೈಡ್ರೋಪೋನಿಕ್ಸ್, ಮೈರವಾನ್ ಮತ್ತು ಹೂ ಸೇರಿದಂತೆ ವಿವಿಧ ಬಗೆಯ ಗಾಂಜಾವನ್ನು ಪ್ರತ್ಯೇಕ ಕವರ್ಗಳಲ್ಲಿ ಪ್ಯಾಕಿಂಗ್ ಮಾಡಿಕೊಂಡು …
Read More »ಥ್ರೋ ಬಾಲ್ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪವಿತ್ರ ಬೆಳಗಾವಿ ಪ್ರತಿಭೆಗೆ ಬೇಕಿದೆ ನೆರವು
ಬೆಳಗಾವಿ: ಪ್ರತಿಭೆ ಯಾರ ಸ್ವತ್ತೂ ಅಲ್ಲ. ಕಠಿಣ ಪರಿಶ್ರಮ, ಸಾಧಿಸುವ ಛಲ, ಸತತ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಬಡ ಕುಟುಂಬದ ಅದರಲ್ಲಿಯೂ ಕುರಿಗಾಹಿ ದಂಪತಿ ಪುತ್ರಿಯೊಬ್ಬರು ಈಗ ರಾಷ್ಟ್ರಮಟ್ಟದಲ್ಲಿ ಸಾಧನೆಗೈಯ್ಯಲು ಅಣಿಯಾಗಿರುವುದೇ ಸಾಕ್ಷಿ. ಇವರು ಪಕ್ಕಾ ಬಡತನದಲ್ಲೇ ಅರಳುತ್ತಿರುವ ಪ್ರತಿಭೆ. ಆದರೆ, ಸರ್ಕಾರ ಮತ್ತು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರ ಗ್ರಾಮದ ಪವಿತ್ರಾ ತಡಸಲೂರ ಎಂಬುವವರು ಥ್ರೋ ಬಾಲ್ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ …
Read More »ದಕ್ಷಿಣ ಭಾರತದ ಕುಂಭ ಮೇಳವೆಂದೇ ಪ್ರಖ್ಯಾತಿ ಪಡೆದ ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ಮಹಾ ದಾಸೋಹ
ಕೊಪ್ಪಳ : ದಕ್ಷಿಣ ಭಾರತದ ಕುಂಭ ಮೇಳವೆಂದೇ ಪ್ರಖ್ಯಾತಿ ಪಡೆದ ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ಮಹಾ ದಾಸೋಹ ಜರುಗುತ್ತಿದೆ. ದಾಸೋಹದಲ್ಲಿಂದು ಉತ್ತರ ಕರ್ನಾಟಕದ ಸ್ಪೆಷಲ್ ಮಿರ್ಚಿಯನ್ನ ಭಕ್ತರು ಸವಿಯಲಿದ್ದಾರೆ. ಭಕ್ತರಿಗೆ 10 ಲಕ್ಷಕೂ ಹೆಚ್ಚು ಮಿರ್ಚಿ ರುಚಿ: ಕಳೆದ 9 ವರ್ಷಗಳಿಂದ ಕೊಪ್ಪಳದ ಗೆಳಯರ ಬಳಗ ಮಹಾದಾಸೋಹದಲ್ಲಿ ಮಿರ್ಚಿ ಸೇವೆ ಮಾಡುತ್ತಿದೆ. ಈ ವರ್ಷ ಒಟ್ಟು 10 ಲಕ್ಷಕ್ಕೂ ಹೆಚ್ಚು ಮಿರ್ಚಿ ತಯಾರಿಸುವ ಯೋಜನೆ ರೂಪಿಸಿಕೊಂಡಿದೆ. ಅದಕ್ಕಾಗಿ ತಿಂಗಳ ಹಿಂದಿನಿಂದಲೇ ತಯಾರಿ ನಡೆಸಿದ್ದು, …
Read More »ಮೂರು ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಮಾಲೀಕರಿಗೆ ಹಸುಗಳನ್ನು ಕೊಡಿಸಿದ ಸಚಿವ ಜಮೀರ್ ಅಹ್ಮದ್
ಕೆಲ ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ದುಷ್ಕರ್ಮಿಗಳು ಮೂರು ಹಸುಗಳ ಕೆಚ್ಚಲು ಕೊಯ್ದು ಅಮಾನುಷವಾಗಿ ನಡೆದುಕೊಂಡಿದ್ದರು. ಗೋಮಾತೆಯಾದ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಘಟನೆಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪ್ರಕರನ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಗಳ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಹಸುವಿನ ಮಾಲೀಕರಿಗೆ ಮೂರು ಹಸುಗಳನ್ನು ಕೊಡಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸು ಮಾಲೀಕ ಕರ್ಣ ಅವರ ತಾಯಿ ಸವರಿ …
Read More »ಕರ್ತವ್ಯ ನಿರತ ರಾಜ್ಯದ ಯೋಧ ಹೃದಯಾಘಾತದಿಂದ ಸಾವು
ಬಾಗಲಕೋಟೆ ಮೂಲದ ಯೋಧರೊಬ್ಬರು ಕರ್ತವ್ಯನಿರತರಾಗಿದ್ದಾಗ ರಾಜಸ್ಥಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾಗೊಂಡಯ್ಯ ಚನ್ನಯ್ಯ ರೇಷ್ಮೆ (37) ಮೃತ ಯೋಧ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದವರಾದ ಮಾಗೊಂಡಯ್ಯ ಅವರು 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ರಾಜಸ್ಥಾನದಲ್ಲಿಯೇ ವಾಸವಾಗಿದ್ದಾರೆ. ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜ.15ರಂದು ನಂದಿಕೇಶ್ವರ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ ನಡೆಯಲಿದೆ.
Read More »