ಧಾರವಾಡ: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಪಕ್ಷ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಿದೆ ಎಂಬ ವಿಚಾರಕ್ಕೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯೆಸಿ, ನಾನು ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳಿಲ್ಲ. ಕೊಟ್ಟರೆ ನೋಡೋಣ ಏನಾಗುತ್ತದೆ ಎಂದು ಹೇಳಿದರು. ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಕೆಲ ಶಾಸಕರ ಜೊತೆ ದುಬೈಗೆ ಹೊರಟಿರುವ ವಿಚಾರ ನನಗೆ ಗೊತ್ತಿಲ್ಲ, ನನಗಂತೂ ದೇಶ …
Read More »Monthly Archives: ಅಕ್ಟೋಬರ್ 2023
ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..
ಇಂದಿನ ಪಂಚಾಂಗ: ದಿನಾಂಕ : 29-10-2023, ಭಾನುವಾರ ಸಂವತ್ಸರ : ಶುಭಕೃತ್ ಆಯನ: ದಕ್ಷಿಣಾಯಣ ಋತು: ಹೇಮಂತ ಮಾಸ: ಅಶ್ವಿನ್ ಪಕ್ಷ: ಕೃಷ್ಣ ತಿಥಿ: ಪ್ರತಿಪದಾ ನಕ್ಷತ್ರ: ಅಶ್ವಿನಿ ಸೂರ್ಯೋದಯ: ಮುಂಜಾನೆ 06:11 ಗಂಟೆಗೆ ಅಮೃತಕಾಲ: ಮಧ್ಯಾಹ್ನ 02:1156 ರಿಂದ 4:24 ಗಂಟೆ ತನಕ ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ ದುರ್ಮುಹೂರ್ತ: ಸಾಯಂಕಾಲ 4:35ರಿಂದ 5:23 ಗಂಟೆ ತನಕ ರಾಹುಕಾಲ: ಸಂಜೆ 04:24ರಿಂದ 5:51 ಗಂಟೆವರೆಗೆ …
Read More »ಕೆಇಎ ಪರೀಕ್ಷೆ ಅಕ್ರಮದಲ್ಲಿ ಮತ್ತೆ ಮುನ್ನೆಲೆಗೆ ಬಂದ ಆರ್ ಡಿ ಪಾಟೀಲ್ ಹೆಸರು
ಕಲಬುರಗಿ: ರಾಜ್ಯದ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 750 ಹುದ್ದೆಗಳಿಗೆ ಕೆಇಎ ಇಂದು ನಡೆಸಿದ ಪರಿಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮುಖಾಂತರ ಅಕ್ರಮ ಎಸಗಿರುವ ಪ್ರಕರಣದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಮಾಸ್ಟರ್ ಮೈಂಡ್ ಆರ್. ಡಿ. ಪಾಟೀಲ್ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ. ಹೌದು, ಕರ್ನಾಟಕ ಪರಿಕ್ಷಾ ಪ್ರಾಧಿಕಾರದಿಂದ ಇಂದು ವಿವಿಧ ನಿಗಮ ಮಂಡಳಿಗಳ ಖಾಳಿ ಇರುವ ಹುದ್ದೆಗಳ ನೇಮಕಾತಿಗೆ ಕನ್ನಡ ಇಂಗ್ಲಿಷ್ ಕಮ್ಯುನಿಕೇಶನ್ ಪರೀಕ್ಷೆ ನಡೆಸಿದೆ. ಕಲಬುರಗಿ ನಗರದ ಶರಣಬಸವೇಶ್ವರ …
Read More »ಪುನೀತ್ ರಾಜ್ಕುಮಾರ್ ಅವರು ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ
ಕನ್ನಡದ ಹೆಸರಾಂತ ನಟ ಪುನೀತ್ ರಾಜ್ಕುಮಾರ್ ಅವರು ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷವಾಗುತ್ತಿದೆ. ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅವರು ನಟಿಸಿರುವ ಸಾಮಾಜಿಕ ಸಂದೇಶ ಸಾರುವ ಕೆಲವು ಚಿತ್ರಗಳಿಲ್ಲಿವೆ. ಕನ್ನಡ ಚಿತ್ರರಂಗದ ರಾಜಕುಮಾರ, ನಗುಮೊಗದ ಒಡೆಯ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮೃತಪಟ್ಟು ಎರಡು ವರ್ಷ ಕಳೆಯುತ್ತಿದೆ. ಬಾಲ್ಯದಲ್ಲೇ ಸಿನಿಮಾ ಲೋಕ ಪ್ರವೇಶಿಸಿದ ಅಪ್ಪು, ಜನರಿಗೆ ಮನರಂಜನೆಯ ಔತಣವನ್ನೇ ಉಣಬಡಿಸಿದ್ದರು. ಎರಡನೇ ವರುಷದ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ಸಾಮಾಜಿಕ ಸಂದೇಶ ಸಾರುವ ಅವರ …
Read More »ವಿಶ್ವಕಪ್‌ನಲ್ಲಿಂದು ಮತ್ತೊಂದು ರೋಚಕ ಫೈಟ್: ಭಾರತ ಗೆದ್ದರೆ ಸೆಮೀಸ್‌ಗೆ ಸನಿಹ; ಇಂಗ್ಲೆಂಡ್ ಸೋತರೆ ಕಪ್ ಕನಸು ಭಗ್ನ
ಲಖನೌನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿ ಆಗಲಿವೆ. ಸತತ 5 ಗೆಲುವು ಕಂಡಿರುವ ಟೀಮ್ ಇಂಡಿಯಾ ಒಂದು ವಾರದ ಬಿಡುವಿನ ನಂತರ ಮತ್ತೊಂದು ಜಯವನ್ನು ಎದುರು ನೋಡುತ್ತಿದೆ. ಇಂಗ್ಲೆಂಡ್ ತಂಡಕ್ಕೆ ಈ ಗೆಲುವು ಅನಿವಾರ್ಯವಾಗಿದ್ದು, ಇಂದಿನ ಪಂದ್ಯವನ್ನೂ ಸೋತರೆ ವಿಶ್ವಕಪ್ ಕನಸು ಬಹುತೇಕ ಭಗ್ನ. ಲಖನೌ (ಉತ್ತರ ಪ್ರದೇಶ): ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ನಂತರ ಸೆಮಿಫೈನಲ್‌ನಲ್ಲಿ ಸ್ಥಾನ ಗಳಿಸುವ ಗುರಿಯೊಂದಿಗೆ ರೆಡ್-ಹಾಟ್ ಮತ್ತು ಇನ್ …
Read More »ರಾಜ್ಯವು ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸರ್ಕಾರ ಬಹಳ ಸ್ಥಿರವಾಗಿದೆ.: R.V.ದೇಶಪಾಂಡೆ
ಕಾರವಾರ: “ರಾಜ್ಯವು ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸರ್ಕಾರ ಬಹಳ ಸ್ಥಿರವಾಗಿದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ, ಅದರರ್ಥ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುತ್ತಾರೆ ಎಂದಲ್ಲ” ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಸಿಎಂ ಬದಲಾವಣೆ ಕುರಿತು ಕೆಲವು ಕಾಂಗ್ರೆಸ್ ಶಾಸಕರು ನೀಡಿರುವ ಹೇಳಿಕೆಗೆ ಶನಿವಾರ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಾ.ಹೆಚ್.ಸಿ.ಮಹದೇವಪ್ಪ ಭೇಟಿ ನೀಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿರುವ ಕುರಿತು …
Read More »ಕನ್ನಡ ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನೆಡುವಾಗ ವಿದ್ಯುತ್ ಶಾಕ್: ಬೆಳಗಾವಿ ಜಿಲ್ಲೆಯ ಯುವಕ ದುರ್ಮರಣ
ಬೆಳಗಾವಿ: ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜಸ್ತಂಭ ನೆಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಪ್ರಜ್ವಲ್ ಚನಗೌಡ ಮುನೇಪ್ಪನವರ(18) ಮೃತ ಯುವಕ. ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನಿರ್ಮಿಸಿ ನವೆಂಬರ್ 1ರಂದು ಧ್ವಜಾರೋಹಣಕ್ಕೆ ಗ್ರಾಮದ ಯುವಕರು ಸಿದ್ಧತೆ ನಡೆಸಿದ್ದರು. ಶನಿವಾರ ಸಂಜೆ ಧ್ವಜಸ್ತಂಭ ನೆಡುವಾಗ ಅಲ್ಲಿಯೇ ಹಾದು ಹೋಗಿದ್ದ …
Read More »ಶನಿವಾರದ ಪಂಚಾಂಗ ಹಾಗೂ ರಾಶಿ ಭವಿಷ್ಯ..
ಶನಿವಾರದ ಪಂಚಾಂಗ ಹಾಗೂ ರಾಶಿ ಭವಿಷ್ಯ.. ಇಂದಿನ ಪಂಚಾಂಗ: ದಿನಾಂಕ : 28-10-2023, ಶನಿವಾರ ಸಂವತ್ಸರ : ಶುಭಕೃತ್ ಆಯನ: ದಕ್ಷಿಣಾಯಣ ಋತು: ಹೇಮಂತ ಮಾಸ: ಅಶ್ವಿನ್ ಪಕ್ಷ: ಪೂರ್ಣಿಮಾ ತಿಥಿ: ಪೂರ್ಣಿಮಾ ನಕ್ಷತ್ರ: ರೇವತಿ ಸೂರ್ಯೋದಯ: ಮುಂಜಾನೆ 06:11 ಗಂಟೆಗೆ ಅಮೃತಕಾಲ: ಬೆಳಗ್ಗೆ 06:11ರಿಂದ 07:38 ಗಂಟೆ ತನಕ ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ ದುರ್ಮುಹೂರ್ತ: ಬೆಳಗ್ಗೆ 7:47ರಿಂದ 8:35 ಗಂಟೆ ತನಕ ರಾಹುಕಾಲ: ಬೆಳಗ್ಗೆ …
Read More »ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದರಲ್ಲಿ ತಪ್ಪೇನು? ಅವರು ಯೂತ್ ಐಕಾನ್: ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್
ಬೆಂಗಳೂರು: ಪಕ್ಷ ಸಂಘಟನೆ ಗಟ್ಟಿಯಾಗಲು ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಬೇಕೆಂದು ಜನ ಮಾತಾಡುತ್ತಿದ್ದಾರೆ. ಮಾಜಿ ಸಿಎಂ ಅವರ ಯಡಿಯೂರಪ್ಪ ಮಗ ಅಂತ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಡಿ. ಸ್ವಂತ ವರ್ಚಸ್ಸಿನ ಯುವ ನಾಯಕ ಎಂದು ನೀಡಿ ಎನ್ನುವ ಮೂಲಕ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ಕ್ಷೇಮ ವಿಚಾರಿಸಿದ …
Read More »ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ.. ಯಾದಗಿರಿಯಲ್ಲಿಯೂ ಮೂವರು ಪೊಲೀಸ್ ವಶಕ್ಕೆ
ಯಾದಗಿರಿ: ಕಲಬುರಗಿಯಲ್ಲಿ ಬ್ಲೂಟೂತ್ ಬಳಕೆ ಮಾಡಿದಂತೆ ಯಾದಗಿರಿಯಲ್ಲಿಯೂ ಬಳಕೆ ಮಾಡಿದ್ದಾರೆ. ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಕೆ ಮಾಡಿದ್ದು, ನಗರ ಪೊಲೀಸರು ಪುಟ್ಟಪ್ಪ ಎಂಬ ಅಭ್ಯರ್ಥಿ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುಟ್ಟಪ್ಪ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನಾ ಗ್ರಾಮದವನು. ಈತ ಸೇರಿದಂತೆ ಪರೀಕ್ಷಾ ಕೇಂದ್ರದ ಹೊರಗಿದ್ದು, ಮಾಹಿತಿ ನೀಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. …
Read More »