ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಕೆಪಿಸಿಸಿ ಅಧ್ಯಕ್ಷನಾದ ನನಗೂ ಇಲ್ಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಭಾನುವಾರವಷ್ಟೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಡಿಕೆಶಿ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕಿದೆ. ಇದು ನಮಗಿಲ್ಲ ಎಂದು ಹೇಳಿದರು. ಯಾವ ವಿಚಾರದಲ್ಲಿ …
Read More »Yearly Archives: 2022
ಎಚ್‌ಡಿಕೆ ಕೇಂದ್ರಕ್ಕೆ ಹೋದರೆ ನಾನೇ ಸಿಎಂ ಅಭ್ಯರ್ಥಿ: ಇಬ್ರಾಹಿಂ
ಹುಬ್ಬಳ್ಳಿ: ನನಗೂ ಸಿಎಂ ಆಗಬೇಕು ಎನ್ನುವ ಆಸೆಯಿದೆ. ಆದರೆ, ಮುಂದಿನ ಸಿಎಂ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಎಂದು ನಿರ್ಧಾರವಾಗಿದೆ. ಒಂದು ವೇಳೆ ಎಚ್‌ಡಿಕೆ ಕೇಂದ್ರಕ್ಕೆ ಹೋದರೆ ನಾನೇ ಸಿಎಂ ಅಭ್ಯರ್ಥಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಕೇಶವ ಕೃಪಾ ಹಾಗೂ ಬಸವ ಕೃಪಾ ನಡುವೆ ಸಿಕ್ಕು ಒದ್ದಾಡುತ್ತಿದ್ದಾರೆ. ಅವರು ಕೂಡ ನಮ್ಮ ಪಕ್ಷದಿಂದ ಹೋದವರು. ಮರಳಿ ಬಂದರೆ ಸ್ವಾಗತಿಸುತ್ತೇವೆ. ತಂದೆ ಮುತ್ಸದ್ಧಿತನ ಮಗ …
Read More »‘ಶಬರಿಮಲೆ’ಗೆ ತೆರಳೋ ‘ಅಯ್ಯಪ್ಪನ ಭಕ್ತ’ರಿಗೆ ಗುಡ್ ನ್ಯೂಸ್: KSRTCಯಿಂದ ‘ರಾಜಹಂಸ, ವೋಲ್ವೋ ಬಸ್’ ಸಂಚಾರ ವ್ಯವಸ್ಥೆ
ಬೆಂಗಳೂರು: ಕರ್ನಾಟಕದಿಂದ ( Karnataka ) ಶಬರಿಮಲೆಯ ಅಯ್ಯಪ್ಪ ಸ್ವಾಮಿ (Sabarimala Ayyappa Swamy ) ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿಯಿಂದ ಶಬರಿಮಲೆಗೆ ರಾಜಹಂಸ, ವೋಲ್ವೋ ಬಸ್ ( KSRTC Rajahamsa, Volvo Bus ) ಸಂಚಾರದ ವ್ಯವಸ್ಥೆಯನ್ನು ಮಾಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ( Karnataka State Road Transport …
Read More »ಮುರುಘಾ ಮಠದಲ್ಲಿ ಅನಾಥ ಮಕ್ಕಳು ನಾಪತ್ತೆ ಸಾಧ್ಯತೆ: ಒಡನಾಡಿ
ಚಿತ್ರದುರ್ಗ: ಮುರುಘಾ ಮಠದಲ್ಲಿ ಆಶ್ರಯ ಪಡೆದಿದ್ದ 11 ಅನಾಥ ಮಕ್ಕಳ ಮಾಹಿತಿಯನ್ನು ಮರೆಮಾಚಲಾಗಿದ್ದು, ಆ ಎಲ್ಲ ಮಕ್ಕಳು ನಾಪತ್ತೆಯಾಗಿರುವ ಅನುಮಾನ ಕಾಡುತ್ತಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಎಂ.ಎಲ್.ಪರಶುರಾಮ್ ಆರೋಪಿಸಿದರು. ‘ಮಠದಲ್ಲಿದ್ದ ಅನಾಥ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗಿಲ್ಲ. ಮಕ್ಕಳ ಕಲ್ಯಾಣ ಸಮಿತಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಈ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿರುವ ಆತಂಕ ಕಾಡುತ್ತಿದೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಕಳವಳ ವ್ಯಕ್ತಪಡಿಸಿದರು. ‘ಮಠದಲ್ಲಿದ್ದ ಇನ್ನೂ ಹತ್ತು …
Read More »ಧಾರವಾಡದ ಗಿಟಾರ್ ಸಂಗೀತ ಸುಧೆ: ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲು
ಧಾರವಾಡ : ಧರ್ಮಸ್ಥಳದ ಧರ್ಮಾಧಿಕಾರಿಯಾದ ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು, ರಾಜರ್ಷಿ ಡಾ|ಡಿ. ವೀರೆಂದ್ರ ಹೆಗ್ಗಡೆ ಅವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ಏಕಕಾಲದಲ್ಲಿ ಗಿಟಾರ್ ಸಂಗೀತ ಸುಧೆಯ ಮೂಲಕ ಶುಭಾಶಯ ಕೋರಿದ್ದು, ಇದೀಗ ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲಾಗಿದೆ. ಧಾರವಾಡದ ಇಲ್ಲಿಯ ವಿದ್ಯಾಗಿರಿಯ ಜೆಎಸ್‌ಎಸ್ ಸೆಂಟ್ರಲ್ ಶಾಲೆಯ 200 ಮಕ್ಕಳು ನ. 18 ರಂದು ಶುಕ್ರವಾರ ಏಕಕಾಲದಲ್ಲಿ ಗಿಠಾರ ನುಡಿಸಿ, ಸಂಗೀತ ಸುಧೆಯಲ್ಲಿ ಪೂಜ್ಯರಿಗೆ ಹುಟ್ಟು ಹಬ್ಬದ …
Read More »ಮತಪಟ್ಟಿ ಹಗರಣ ನಡೆದಿದೆ, ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಿ: ಸತೀಶ್ ಜಾರಕಿಹೊಳಿ
ಕೊಪ್ಪಳ: ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆಯಲ್ಲಿ ಬಹುದೊಡ್ಡ ಹಗರಣ ನಡೆಯುತ್ತಿದೆ. ಇದರ ಬಗ್ಗೆ ನಾವೆಲ್ಲ ಜಾಗೃತರಾಗಬೇಕು. ಕೇವಲ ಬೆಂಗಳೂರು ಒಂದೇ ಅಲ್ಲ, ಎಲ್ಲ ಜಿಲ್ಲೆಯಲ್ಲಿಯೂ ನಡೆದಿದೆ. ನಮ್ಮೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮತದಾರರ ಪಟ್ಟಿಯಲ್ಲಿ ನಮ್ಮ ಪರ ಇರುವ ಮತದಾರರನ್ನು ಡಿಲಿಟ್ ಮಾಡುವ ಕೆಲಸ ನಡೆದಿದೆ. ಈ ಬಗ್ಗೆ ನಾವು ಜಾಗೃತರಾಗಬೇಕಿದೆ. ಬಿಜೆಪಿ ಗೆಲ್ಲಲು ನಮ್ಮ …
Read More »ಕಲಾವಿದರಿಂದ ರಚನೆಗೊಂಡ ನಾಡದೇವತೆಯ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯದ ನಾಡದೇವತೆಯ ಒಂದು ನಿರ್ದಿಷ್ಟವಾದ ಚಿತ್ರವನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯು ನಿಯೋಜಿತ ಕಲಾವಿದರಿಂದ ರಚನೆಗೊಂಡ ನಾಡದೇವತೆಯ ಚಿತ್ರವನ್ನು ಸ್ವೀಕರಿಸಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ನಾಡದೇವತೆಯ ಭಾವಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಇತ್ಯಾದಿ ದೇವತೆಗಳ ಚಿತ್ರಗಳನ್ನು ಬಳಸಲಾಗುತ್ತಿದ್ದು, ಒಂದು ನಿರ್ದಿಷ್ಟ ಚಿತ್ರಕೃತಿಯ ಕೊರತೆಯಿರುವುದನ್ನು ಮನಗಂಡ ಸರ್ಕಾರವು ಚಿತ್ರವನ್ನು ಆಯ್ಕೆ ಮಾಡಲು ಹಿಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಲಲಿತ …
Read More »ಯು.ಬಿ.ಬಣಕಾರ್ ಸೇರಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಈ ರಾಜ್ಯ ನಾಶ ಆಗುತ್ತದೆ. ಸರ್ವನಾಶ ಆಗುತ್ತದೆ. ಹೀಗಾಗಿ ಬಿಜೆಪಿ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಸೇರಿಕೊಂಡು ಸೋಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು. 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ ಯು.ಬಿ.ಬಣಕಾರ್ ತಮ್ಮ ಬೆಂಬಲಿಗರಾದ ಮಂಜಣ್ಣ, ಶಿವರಾಜ್, ಹೇಮಣ್ಣ, ಷಣ್ಮುಖಯ್ಯ ಮಳಿಮಠ ಸೇರಿದಂತೆ …
Read More »ಕಾಂಗ್ರೆಸ್ ಮುಖಂಡ ಧರ್ಮಸ್ಥಳ ಚಂದನ್ ಕಾಮತ್ ಬಿಜೆಪಿ ಸೇರ್ಪಡೆ
ಧರ್ಮಸ್ಥಳ : ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಚಂದನ್ ಪ್ರಸಾದ್ ಕಾಮತ್ ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಅವರ ಆಪ್ತರಾಗಿರುವ ಚಂದನ್ ಕಾಮತ್ ಅವರು ಸೋಮವಾರ ಬೈರತಿ ಬಸವರಾಜ್ ಅವರ ಆಶಯದಂತೆ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದಾರೆ. ಪಕ್ಷ ಸೇರ್ಪಡೆ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಂಗಳೂರು ಬೃಹತ್ ಮಹಾನಗರ ಕಾರ್ಪೋರೇಟರ್ ಗಳಾದ ಶ್ರೀಕಾಂತ್, …
Read More »ಕೊಪ್ಪಳ ನಗರಸಭೆ ಮುಂದೆ ಮಹಿಳೆ ಶವವಿಟ್ಟು ಪ್ರತಿಭಟನೆ
ಕೊಪ್ಪಳ: ಕೊಪ್ಪಳ ನಗರದ 30ನೇ ವಾರ್ಡಿನಲ್ಲಿ ಬಿಡಾಡಿ ದನಗಳ ದಾಳಿಯಿಂದಾಗಿ ರಮಿಜಾ ಬೇಗಂ ಎನ್ನುವ ಮಹಿಳೆ ಮೃತಪಟ್ಟಿದ್ದು, ಶವವನ್ನು ನಗರಸಭೆ ಮುಂದಿಟ್ಟು ಸೋಮವಾರ ಪ್ರತಿಭಟನೆ ನಡೆಸಲಾಗಿದೆ. ಕೊಪ್ಪಳ ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದ್ದು, ಇದರಿಂದ ಜನರು ರಸ್ತೆಯ ಮೇಲೆ ಸಂಚಾರ ಮಾಡದಂತ ಸ್ಥಿತಿ ಎದುರಾಗಿದೆ. ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳು ರಸ್ತೆ ಮೇಲೆ ಮಲಗಿ ಪ್ರಯಾಣಿಕರಿಗೆ ತುಂಬಾ ತೊಂದರೆ ಮಾಡುತ್ತಿವೆ. ಈ ಮಧ್ಯೆ …
Read More »