Breaking News

Yearly Archives: 2022

ಹಿಂದುಳಿದ ವರ್ಗದ ಸಮುದಾಯ’ವರೇ ಗಮನಿಸಿ: ‘ಗಂಗಾ ಕಲ್ಯಾಣ ಯೋಜನೆ’ಯಡಿ ‘ಕೊಳವೆ ಬಾವಿ’ಗಾಗಿ ಅರ್ಜಿ ಆಹ್ವಾನ

ಬೆಂಗಳೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ( Ganga Kalyana Yojan ) ಸೌಲಭ್ಯ ಪಡೆಯಲು, ಹಿಂದುಳಿದ ವರ್ಗಗಳ ಸಮುದಾಯದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.   ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನಿಗಮ ಮಾಹಿತಿ ಹಂಚಿಕೊಂಡಿದ್ದು, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಅಡಿಯಲ್ಲಿ ಬರುವಂತೆ ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಕಾಡುಗೊಲ್ಲ, ಹಟ್ಟಿಗೊಲ್ಲ, ಅಲೆ ಮಾಡಿ …

Read More »

ಲತಾ ಮಂಗೇಶ್ಕರ್ ಅವರ ಗೌರವಾರ್ಥ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ

ಬೆಂಗಳೂರು : ಭಾನುವಾರ ಮುಂಬೈನಲ್ಲಿ ನಿಧನ ಹೊಂದಿದ ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ ಗಾಯಕಿ ಲತಾ ಮಂಗೇಶ್ಕರ್ ಅವರ ಗೌರವಾರ್ಥ ಕರ್ನಾಟಕ ಸರಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.ಅವರ ನಿಧನಕ್ಕೆ ಸರಕಾರ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.   ” ಅಗಲಿದ ಆತ್ಮದ ಗೌರವಾರ್ಥವಾಗಿ ಫೆಬ್ರವರಿ 6 ಮತ್ತು 7 ರಂದು ರಾಜ್ಯಾದ್ಯಂತ ಶೋಕಾಚರಣೆ ನಡೆಯಲಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ, ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಭಾರತದ …

Read More »

ಬೆಳಗಾವಿ ಬೆಂಗಳೂರಿಗೆ ಅತಿಹೆಚ್ಚು ಸಚಿವ ಸ್ಥಾನ ನೀಡಿದ್ದಾರೆ: ಅಸಮಾಧಾನ ಹೊರಹಾಕಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ರಾಜ್ಯ ಸರಕಾರ ಮಂತ್ರಿಗಿರಿ ಹಂಚಿಕೆ ವಿಚಾರದಲ್ಲಿ ಭೌಗೋಳಿಕವಾಗಿ ಅಸಮತೋಲನ ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಹಾಗೂ ಬೆಂಗಳೂರಿಗೆ ಹೆಚ್ಚು ಮಂತ್ರಿ ಸ್ಥಾನಗಳನ್ನು ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಸಚಿವ ಸಂಪುಟ ರಚನೆ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಇದು ಅವರ ವಿವೇಚನೆಗೆ ಬಿಟ್ಟಿದ್ದು. ಅದನ್ನು ಪ್ರಶ್ನೆಮಾಡುವ ನೈತಿಕ ಹಕ್ಕು ನನಗಿಲ್ಲ. ಆದರೆ ಭೌಗೋಳಿಕವಾಗಿ ಸಚವ ಸ್ಥಾನ …

Read More »

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತೀರಾ..? ‘ಇನ್ಮುಂದೆ ನಿಮ್ಮ ಆಟ ನಡೆಯಲ್ಲ’ ಹುಷಾರ್..!

ಇಷ್ಟು ದಿನ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ಫೈನ್ ಕಟ್ಟದೆ ರಾಜಾರೋಷವಾಗಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಮನೆಗೆ ನೋಟಿಸ್ ನೀಡುವ ಆನ್​​ಲೈನ್ ವ್ಯವಸ್ಥೆ ಕಲ್ಪಿಸಿದ್ದ ಸಂಚಾರಿ ಪೊಲೀಸ್ ಇಲಾಖೆ, ಈಗ ತನ್ನ ವರಸೆ ಬದಲಾಯಿಸಿದೆ.   ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸ್ ಕೈಲೀ ತಗ್ಲಾಂಡೋರಲ್ಲಿ, ಸ್ವಯಂಪ್ರೇರಿತವಾಗಿ ಫೈನ್ ಕಟ್ಟೋರು ವಿರಳ ಸಂಖ್ಯೆಯ ಸವಾರರು ಮಾತ್ರ. ಆದ್ರೆ, ಇನ್ಮುಂದೆ ಇಂತಹ ವಾಹನ …

Read More »

ನೀವು ಸಿಧು ಹೃದಯ ಕತ್ತರಿಸಿ ನೋಡಿ ರಕ್ತ ಬರುತ್ತೆ, ಪಂಜಾಬ್​​ ಬರುತ್ತೆ.. ರಾಹುಲ್​​ ಗಾಂಧಿ ​​

ಎಐಸಿಸಿ ವರಿಷ್ಠ ರಾಹುಲ್​​ ಗಾಂಧಿಯವರು ಪಂಜಾಬ್​​​​ ಕಾಂಗ್ರೆಸ್ ಸಿಎಂ​​ ಅಭ್ಯರ್ಥಿಯನ್ನಾಗಿ ಚರಣ್​​ಜೀತ್ ಸಿಂಗ್ ಚನ್ನಿಯವರನ್ನು ಘೋಷಿಸಿದ್ದಾರೆ. ಈ ಮೂಲಕ ರಾಹುಲ್​ ಗಾಂಧಿಯವರು ಈ ಬಾರಿ ಸಿಎಂ ಆಗಬೇಕು ಎಂದಿದ್ದ ಪಂಜಾಬ್​​​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​​ ಸಿಂಗ್​ ಸಿಧು ಅವರಿಗೆ ಶಾಕ್​​ ನೀಡಿದ್ದಾರೆ. ಇನ್ನು, ಸಿಎಂ ಅಭ್ಯರ್ಥಿ ಅನೌನ್ಸ್​ ಮಾಡಿದ ಬಳಿಕ ಮಾತಾಡಿದ ರಾಹುಲ್​ ಗಾಂಧಿಯವರು, ಪಂಜಾಬ್​ ಕಾಂಗ್ರೆಸ್​​ನಲ್ಲಿ ನಾಯಕರಿಗೇನು ಕೊರತೆ ಇಲ್ಲ ಎಂದಿದ್ದರು. ಚನ್ನಿ, ನವಜೋತ್​ ಸಿಂಗ್​​​ ಸಿಧು ಕೂಡ …

Read More »

ಉದ್ಯಾನವನದಲ್ಲಿದ್ದ ಡಾ.ರಾಜ್ ಕುಮಾರ್ ಕಂಚಿನ ಪ್ರತಿಮೆ ನಾಪತ್ತೆ..!

ಬೆಂಗಳೂರು: ನಗರದ ಲುಂಬಿನಿ ಗಾರ್ಡನ್​​ನಲ್ಲಿದ್ದ ವರನಟ ಡಾ.ರಾಜ್ ಕುಮಾರ್ ಪುತ್ಥಳಿಯನ್ನ ಕಳ್ಳರು ಕದ್ದೊಯ್ದಿದ್ದಾರೆ. ಎರಡು ದಿನಗಳ ಹಿಂದೆ ಕಂಚಿನ ಪ್ರತಿಮೆಯನ್ನ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿ ಯೋಗೇಶ್ ಅನ್ನೋರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Read More »

ಭೀಕರವಾಗಿ ಮರಕ್ಕೆ ಗುದ್ದಿದ ಕಾರು; ಐದು ವರ್ಷದ ಮಗು ಸೇರಿ ಮೂರು ಸಾವು

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐದು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಂದಾಪುರ ಮೂಲದ ಧೃತಿ (5), ಗೀತಾ(32), ಶಾರದಾ (60) ಮೃತ ದುರ್ದೈವಿಗಳು. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೋಡಿ ಶ್ರೀರಂಗಾಪುರ ಬಳಿ ರಸ್ತೆ ಬದಿಯಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದವರು ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಹೊಸದುರ್ಗ ಪೊಲೀಸ್ …

Read More »

ವಸತಿ ಸಹಿತ ಉದ್ಯಮಶೀಲತಾ ತರಬೇತಿ ನೀಡಲು ಮುಂದಾದ ಸತೀಶ್‌ ಜಾರಕಿಹೊಳಿ

  ಬೆಳಗಾವಿ: ಸತೀಶ್ ಜಾರಕಿಹೊಳಿ ಫೌಂಡೇಷನ್ ನಿಂದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಉದ್ಯೋಗ ಅರಸುತ್ತಿರುವ ಮತ್ತು ಸ್ವಯಂ ಉದ್ಯೋಗ ಮತ್ತು ಉದ್ದಿಮೆ ಸ್ಥಾಪಿಸಲು ಆಸಕ್ತಿ ಇರುವ ನಿರುದ್ಯೋಗಿ ಯುವಕ, ಯುವತಿಯರಿಗೆ ಮೂರು ದಿನಗಳ ಕಾಲ ಉಚಿತ ವಸತಿ ಸಹಿತ ಉದ್ಯಮಶೀಲತಾ ತರಬೇತಿ ಶಿಬಿರವನ್ನು ಇದೇ ಫೆ. 12 ರಿಂದ 14ರವರೆಗೆ ನಡೆಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳ ಕುರಿತು, ಬ್ಯಾಂಕ್ ಗಳಲ್ಲಿ ಸಿಗುವ ಸಾಲ ಸೌಲಭ್ಯಗಳ ಬಗ್ಗೆ, ಮಾರುಕಟ್ಟೆ ಸಮೀಕ್ಷೆ, ಉದ್ದಿಮೆಯ …

Read More »

ರಾಜ್ಯ ಬಜೆಟ್ ಬಗ್ಗೆ ಸಂಸದರೊಂದಿಗೆ ಚರ್ಚಿಸಲು ದೆಹಲಿಗೆ ಹೋಗುತ್ತೇನೆ: ಬೊಮ್ಮಾಯಿ

ಬೆಂಗಳೂರು: ‘ಮುಂದಿನ ತಿಂಗಳು ರಾಜ್ಯ ಬಜೆಟ್ ಇರುವ ಹಿನ್ನೆಲೆಯಲ್ಲಿ ಹಲವು ಯೋಜನೆಗಳ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ರಾಜ್ಯದ ಸಂಸದರ ಜೊತೆ ಸಭೆ ನಡೆಸಲಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯ ಕೋರಲಾಗಿದೆ. ರಾಜ್ಯ ಬಜೆಟ್, ಹಣಕಾಸಿನ ಪರಿಸ್ಥಿತಿ, ಜಿಎಸ್‌ಟಿ, ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ’ ಎಂದರು. …

Read More »

ಉದ್ಯಮಿ ಅಪಹರಣ ಪ್ರಕರಣ: ಮತ್ತೆ ಮೂವರ ಬಂಧನ

ಬೆಳಗಾವಿ: ಕ್ರಿಪ್ಟೋಕರೆನ್ಸಿ ವ್ಯವಹಾರ ನಡೆಸುತ್ತಿದ್ದ ಹುಬ್ಬಳ್ಳಿಯ ಉದ್ಯಮಿ ಅಪಹರಣ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಯೂನೂಸ್ ಖಾಜಿಗಾಗಿ ಶೋಧಕಾರ್ಯ ಮುಂದುವರೆದಿದೆ. ಮಹಾರಾಷ್ಟ್ರದ ಸಾಂಗಲಿಯ ಶಹನವಾಜ್ ಚಮನಶೇಖ್, ಅಜ್ಜು ಚಮನಶೇಖ್, ಅಭಿಷೇಕ ಶೆಟ್ಟಿ ಬಂಧಿತರು. ಮಹಾರಾಷ್ಟ್ರದಲ್ಲಿ ತಲೆಮರಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂಲಕ ಉದ್ಯಮಿ ರವಿಕಿರಣ್ ಭಟ್ ಅಪಹರಣ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಬಿಟ್‌ಕಾಯಿನ್ ವ್ಯವಹಾರದಲ್ಲಿ ವಂಚನೆ ಹಿನ್ನೆಲೆಯಲ್ಲಿ …

Read More »