Breaking News

Yearly Archives: 2022

ಮುಸ್ಲಿಮರ ಆಜಾನ್‌ ವಿರುದ್ಧ ಮಂತ್ರ ಪಠಣೆ ಅಭಿಯಾನಕ್ಕೆ ಚಾಲನೆ

ಹಾಸನ: ಮುಸ್ಲಿಮರ ಆಜಾನ್‌ ವಿರುದ್ಧ ಮಂತ್ರ ಪಠಣೆ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಹಾಸನದ ಅರಸೀಕೆರೆ ಕಾಳಿಕಾಂಬ ದೇಗುಲದಲ್ಲಿ ಕಾಳಿ ಮಂತ್ರವನ್ನು ಕಾಳಿ ಸ್ವಾಮೀಜಿ ಪಠಿಸಿದ್ದಾರೆ. ಅಧಿಕೃತ ಮಸೀದಿಗಳಲ್ಲಿ ಮಾತ್ರ ಆಜಾನ್‌ ಕೂಗಲು ಅನುಮತಿ ಇದೆ. ಆದರೆ ಎಲ್ಲ ಮಸೀದಿಗಳಲ್ಲಿ ಆಜಾನ್‌ ಕೂಗಲಾಗುತ್ತದೆ. ಅಷ್ಟೇ ಅಲ್ಲದೇ ಆಜಾನ್‌ ಕೂಗಲು‌ ಸ್ಪಷ್ಟವಾದ ಕೋರ್ಟ್‌ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಆಜಾನ್‌ ಕೂಗಲಾಗುತ್ತದೆ.  ಈ ರೀತಿ ಆಜಾನ್‌ ಕೂಗುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಇದ್ದರೆ …

Read More »

ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ – ಮೂವರು ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಫ್ಲೆಕ್ಸ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಮೂವರು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಮಂಗಳವಾರ ಹಿರಿಯೂರು ಪಟ್ಟಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಬುಜಗಜೀವನ್ ರಾಮ್ ಜಯಂತಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಮಾಜಿ ಸಚಿವ ಡಿ.ಸುಧಾಕರ್ ಹಾಗೂ ಎಂಎಲ್‍ಸಿ ಚುನಾವಣೆಯ ಪರಾಜಿತ ಅಭ್ಯರ್ಥಿ ಸೋಮಶೇಖರ್ ನಡುವೇ ಶಕ್ತಿ ಪ್ರದರ್ಶನದ ಪೈಪೋಟಿ …

Read More »

ಮನೆ ಕಳ್ಳತನಕ್ಕೆ ಬಂದ ಖತರ್ನಾಕ್​ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ

ಬೆಳಗಾವಿ: ಮನೆ ಕಳ್ಳತನಕ್ಕೆ ಬಂದ ಖತರ್ನಾಕ್​ ಕಳ್ಳನೋರ್ವ ಬಾಲಕಿಯನ್ನೇ ಹೊತ್ತೊಯ್ದ ವಿಚಿತ್ರ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.  1 ವರ್ಷದ ಬಾಲಕಿಯನ್ನು, ಅನಿಲ್ ರಾಮು ಲಂಬೂಗೋಳ (31) ಎಂಬ ಖದೀಮ ಭಾನುವಾರ ತಡರಾತ್ರಿ ಅಪಹರಿಸಿದ್ದಾನೆ. ಮನೆಯಲ್ಲಿ ಕಳ್ಳತನ ಮಾಡುವಾಗ ಮನೆಯವರ ಕಣ್ಣಿಗೆ ಬಿದ್ದಿದ್ದ ಅನಿಲ್ ರಾಮು, ಹೊರಗಡೆ ನಿಂತಿದ್ದ ಮಗುವನ್ನ ಅಪಹರಿಸಿದ್ದಾನೆ. ಈ ಬಗ್ಗೆ ಪೋಷಕರು ಅಂಕಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪಹರಣ ಮಾಡಿದ ಬಾಲಕಿ ಮತ್ತು …

Read More »

ಅನುಮತಿ ಇಲ್ಲದೇ ಸಾರ್ವಜನಿಕರ‌ ಮೊಬೈಲ್‌ ಕಸಿದುಕೊಳ್ಳಬೇಡಿ.. ಕಮಿಷನರ್ ಪಂತ್‌​ ಟ್ವೀಟ್​

ಬೆಂಗಳೂರು : ತಪಾಸಣೆ‌ ನಡೆಸುವಾಗ ಪೊಲೀಸರು ಅನುಮತಿಯಿಲ್ಲದೇ ಸಾರ್ವಜನಿಕರ‌‌ ಮೊಬೈಲ್​​ಗಳನ್ನು ಬಲವಂತವಾಗಿ ಕಸಿದುಕೊಂಡು ಪರಿಶೀಲಿಸುವುದು ಸರಿಯಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಟ್ವೀಟ್‌ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಪಾಸಣೆ ನಡೆಸುವಾಗ ಸುಖಾಸುಮ್ಮನೆ‌ ಸಾರ್ವಜನರಿಂದ ಪೊಲೀಸರು ಮೊಬೈಲ್ ಕಸಿದುಕೊಂಡು, ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನಿಸುತ್ತಿರುವ ದೂರುಗಳು ಕೇಳಿ ಬಂದಿದ್ದವು.‌ ಇದಕ್ಕೆ‌‌ ಪೂರಕ ಎಂಬಂತೆ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನಿಖಿಲ್ ಎಂಬುವರು ಘಟನೆಯೊಂದರ ಬಗ್ಗೆ ಟ್ವೀಟ್​ ಮಾಡಿದ್ದರು. ಕೆಲದಿನಗಳ ಹಿಂದೆ …

Read More »

ತಲೆ ಮೇಲೆ ಖಾಲಿ ಸಿಲಿಂಡರ್ ‌ಹೊತ್ತು ಕೇಂದ್ರ ಸರ್ಕಾರದ ವಿರುದ್ಧ ಶಾಸಕಿ ಹೆಬ್ಬಾಳ್ಕರ್ ಪ್ರತಿಭಟನೆ

ಬೆಳಗಾವಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ‌ನಾಯಕರು ವಿಭಿನ್ನ ಪ್ರತಿಭಟನೆ ನಡೆಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ನೇತೃತ್ವದಲ್ಲಿ ಇಲ್ಲಿನ‌ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ತೈಲ, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿರುವ ಸರ್ಕಾರದ ‌ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ತಲೆ ಮೇಲೆ ಖಾಲಿ ಸಿಲಿಂಡರ್ ‌ಹೊತ್ತು ಪ್ರತಿಭಟನೆಯಲ್ಲಿ …

Read More »

ದೇವಸ್ಥಾನದ ಎದುರೇ ಸುಟ್ಟು ಕರಕಲಾಯ್ತು ಪೂಜೆ ಮಾಡಿಸಲು ತಂದಿದ್ದ ಹೊಸ ರಾಯಲ್‌ ಎನ್‌ ಫೀಲ್ಡ್‌ ಬೈಕ್‌

ಕಳೆದ ಕೆಲವು ದಿನಗಳಿಂದೀಚೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಳಲ್ಲಿ ಬೆಂಕಿ ಕಾಣಿಸಿಕೊಂಡಿರೋ ಸುದ್ದಿ ಆಗಾಗ ಕೇಳಿ ಬರ್ತಾನೇ ಇತ್ತು. ಇದೀಗ ರಾಯಲ್‌ ಎನ್‌ ಫೀಲ್ಡ್‌ ಬೈಕ್‌ ಒಂದು ಸುಟ್ಟು ಕರಕಲಾಗಿರೋದನ್ನು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಮಾಲೀಕ ಹೊಸ ಬೈಕ್‌ ಗೆ ಪೂಜೆ ಮಾಡಿಸುವ ಸಲುವಾಗಿ ದೇವಸ್ಥಾನಕ್ಕೆ ತಂದಿದ್ದರು. ಕೆಲವೇ ಕ್ಷಣಗಳಲ್ಲಿ ಬೈಕ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಬೈಕ್‌ ಬಾಂಬ್‌ ನಂತೆ ಭಯಂಕರ ಸದ್ದಿನೊಂದಿಗೆ ಸ್ಫೋಟಗೊಂಡಿದೆ. ಈ ಘಟನೆ …

Read More »

ಕೇಂದ್ರ ಸರ್ಕಾರ ರೂ. 3,600 ಕೋಟಿಯನ್ನು ಹಣವನ್ನು ರೈತರಿಂದ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದೆ.

ಯುಗಾದಿ ಸಿಹಿ – ಕಹಿಗಳ ಹಬ್ಬ, ಆದರೆ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಚೀಲವೊಂದಕ್ಕೆ ರೂ. 150 ಏರಿಕೆ ಮಾಡುವ ಮೂಲಕ ನಾಡಿನ ರೈತರಿಗೆ ಬರೀ ಕಹಿಯನ್ನು ನೀಡಿದೆ. ದೇಶದ ರೈತರು ವರ್ಷದಲ್ಲಿ 1 ಕೋಟಿ 20 ಲಕ್ಷ ಟನ್ ರಸಗೊಬ್ಬರ ಬಳಕೆ ಮಾಡುತ್ತಾರೆ. ಕೇಂದ್ರ ಸರ್ಕಾರ ರೂ. 3,600 ಕೋಟಿಯನ್ನು ಹಣವನ್ನು ರೈತರಿಂದ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದೆ. ಇದನ್ನು ಹಗಲು ದರೋಡೆ ಎಂದರೆ ತಪ್ಪೇನು? ಪ್ರಧಾನಿ ನರೇಂದ್ರ ಮೋದಿ …

Read More »

ಮುಸ್ಲಿಂ ನೌಕರರಿಗೆ 1 ಗಂಟೆ ಬೇಗ ಮನೆಗೆ ಹೋಗಲು ಅವಕಾಶ

ಹೈದರಾಬಾದ್: ರಂಜಾನ್ ಉಪವಾಸ ಆಚರಣೆ ಆರಂಭವಾದ ಹಿನ್ನೆಲೆಯಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿ ಅವಧಿಗಿಂತ ಒಂದು ಗಂಟೆ ಮೊದಲು ಮನೆಗೆ ತೆರಳಲು ತೆಲಂಗಾಣ ಸರ್ಕಾರ ಅವಕಾಶ ನೀಡಿದೆ. ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದ ಸರ್ಕಾರಿ ಉದ್ಯೋಗಿಗಳು, ಸಾರ್ವಜನಿಕ ವಲಯದ ಉದ್ಯೋಗಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿ ಸಂಜೆ 4 ಗಂಟೆಗೆ ಮನೆಗೆ ತೆರಳಬಹುದು. ಏಪ್ರಿಲ್ 3 ರಿಂದ ಮೇ 2 ರವರೆಗೆ ಸಂಜೆ 5 ಗಂಟೆ ಬದಲಿಗೆ 4 ಗಂಟೆಗೆ ಮನೆಗೆ ಹೋಗಬಹುದಾಗಿದೆ …

Read More »

ಗೋಕಾಕ ತಾಲೂಕಿನ ಶ್ರೀ ಸಿದ್ಧಾರೂಢ ಮಹೋತ್ಸವದ ಉದ್ಘಾಟನೆ ಸಮಾರಂಭಕ್ಕೆ ಶ್ರೀ ಸಂತೋಷ್ ಜಾರಕಿಹೊಳಿ ಅವರ ಭೇಟಿ…

ಗೋಕಾಕ: ಗೋಕಾಕ ನಗರದ ಜನತೆಯ ಮಧ್ಯೆ ಶ್ರೀ ಸಂತೋಷ್ ಜಾರಕಿಹೊಳಿ ಅವರು ಬೆರೆಯಲು ಪ್ರಾರಂಭ ಮಾಡಿದ್ದಾರೆ, ಇಷ್ಟು ದಿನ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕೆಲಸದಲ್ಲಿ ಬ್ಯೂಸಿ ಇದ್ದ ಸಾಹುಕಾರರು ಪ್ರತಿದಿನ ತಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮ ಗಳಿಗೆ ಹಾಜರ ಆಗಿ, ಜನರ ಜೊತೆ ಜನ ಸಾಮಾನ್ಯರಂತೆ ಬೆರೆತು ಎಲ್ಲ ಕಾರ್ಯಕ್ರಮ ಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಶಿವ ಶಕ್ತಿ ನಗರದಲ್ಲಿ ಶ್ರೀ ಸಿದ್ದಾರೂಢ ಮಹೋತ್ಸವ …

Read More »

ತೈಲ ಬೆಲೆ ಏರಿಕೆ ಬೆನ್ನಲ್ಲೇ ತರಕಾರಿಗಳೂ ಈಗ ಬಲು ದುಬಾರಿ

ಪೆಟ್ರೋಲ್ ಡಿಸೇಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಭಾರೀ ಏರಿಕೆಯಾದ ಬೆನ್ನಲ್ಲೇ ತರಕಾರಿಗಳು ಕೂಡ ಸಿಕ್ಕಾಪಟ್ಟೆ ದುಬಾರಿಯಾಗ್ತಿವೆ. ಬಿರು ಬೇಸಿಗೆಯಲ್ಲಿ ಬೇಯುತ್ತಿರೋ ಜನಸಾಮಾನ್ಯರು ತರಕಾರಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ಕೆಲವು ತರಕಾರಿಗಳ ಬೆಲೆಯಂತೂ ಗಗನಕ್ಕೇರಿದೆ.   ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಹಸಿರು ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಅಂಗಡಿಗಳಲ್ಲಿ ತರಕಾರಿಗಳು ಮೊದಲಿನಂತೆ ರಾಶಿ ರಾಶಿಯಾಗಿ ಕಾಣುತ್ತಿಲ್ಲ. ತರಕಾರಿ ದುಬಾರಿಯಾಗಿರೋದ್ರಿಂದ ಊಟದ ತಟ್ಟೆಯ ರುಚಿಯೂ ಹದಗೆಟ್ಟಿದೆ. ದೆಹಲಿಯಲ್ಲಿ ಪಾಲಕ್ ಸೊಪ್ಪಿನ …

Read More »