Breaking News

Yearly Archives: 2022

BREAKING ಸಿನಿಮೀಯ ರೀತಿಯಲ್ಲಿ ಮೂವರು ವಿಚಾರಣಾಧೀನ ಕೈದಿಗಳು ಎಸ್ಕೇಪ್

ರಾಯಚೂರು: ಮೂವರು ವಿಚಾರಣಾಧೀನ ಕೈದಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಹರ್ಷ, ರಾಜೇಶ್ ಖನ್ನಾ ಮಯ ಹಾಗೂ ಗೋವಿಂದ ಪಲ್ಲು ಪರಾರಿಯಾದ ವಿಚಾರಣಾಧೀನ ಕೈದಿಗಳು. ಏನಿದು ಪ್ರಕರಣ..? ಈ ಮೂವರು ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ರಾಬರಿ ಮತ್ತು ಕೊಲೆ ಮಾಡಿರುವ ಆರೋಪ ಇದೆ. ಆರೋಪ ಪ್ರಕರಣದಲ್ಲಿ ಬಂಧಿತರಾಗಿದ್ದ ಇವರನ್ನ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು. ವಿಚಾರಣೆ ಮುಗಿದ ಬಳಿಕ …

Read More »

ಹೊಂಬಾಳೆ ಫಿಲಂಸ್​ನಿಂದ ಬಿಗ್​ ಅನೌನ್ಸ್​ಮೆಂಟ್.. ಮುಂದಿನ ಚಿತ್ರದ ಬಗ್ಗೆ ರಿವೀಲ್..!

ರಾಕಿ ಭಾಯ್​​ ಅಭಿನಯದ ಕೆಜಿಎಫ್​ ಚಾಪ್ಟರ್ 2 ಪ್ಯಾನ್​ ಇಂಡಿಯಾ ಸಿನಿಮಾವನ್ನ ಇಡೀ ವಿಶ್ವ ಸಿನಿಮಾರಂಗ ಮೆಚ್ಚಿಕೊಂಡಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಇಂಡಸ್ಟ್ರೀಯ ಘಟಾನುಘಟಿ ಸಿನಿಮಾ ಮೇಕರ್ಸ್, ನಟ-ನಟಿಯರು ಕೆಜಿಎಫ್​ ಸಿನಿಮಾಗೆ ಫುಲ್ ಮಾರ್ಕ್ಸ್​ ಕೊಟ್ಟಿದ್ದಾರೆ.  ‘ಹೊಂಬಾಳೆ ಫಿಲಂಸ್’ ಈಗ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಇದರ ನಡುವೆ  ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ಬರಲಿದೆ ಈ ನೂತನ ಸಿನಿಮಾ. ಈ ಸಂಸ್ಥೆಯ ನಿರ್ಮಾಣದ “ಕೆಜಿಎಫ್ 2” ವಿಶ್ವದೆಲ್ಲೆಡೆ ಯಶಸ್ಸಿನ ಜಯಭೇರಿ …

Read More »

ಜನ ಹಾಗೂ ಜಾನುವಾರಿಗಳಿಗೆ ಕುಡಿಯುವ ನೀರಿಗಾಗಿ 10 ದಿನಗಳವರೆಗೆ ನೀರು ಬಿಡಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಹಿಡಕಲ್ ಜಲಾಶಯದಿಂದ ಜಿಆರ್‌ಬಿಸಿ, ಜಿಎಲ್‌ಬಿಸಿ, ಸಿಬಿಸಿ ಕಾಲುವೆಗಳಿಗೆ ನೀರು ಬಿಡಲು ಕೆಎಮ್‌ಎಫ್ ಅಧ್ಯಕ್ಷ ಬಾಲಚ ಮೂಡಲಗಿ: ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ತಕ್ಷಣವೇ ಘಟಪ್ರಭಾ ಎಡದಂಡೆ, ಘಟಪ್ರಭಾ ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗುರುವಾರ ಸಂಜೆ ಪ್ರತಿಕಾ ಹೇಳಿಕೆಯನ್ನು ನೀಡಿರುವ ಅವರು, …

Read More »

ಹುಬ್ಬಳ್ಳಿ ಕೋಮು ಗಲಭೆ : ಮೌಲ್ವಿಯ ಅಸಲಿ ಬಣ್ಣ ಬಟಾ ಬಯಲು

ಹುಬ್ಬಳ್ಳಿ, ಏ.21- ಶನಿವಾರ ರಾತ್ರಿ ನಡೆದ ಹುಬ್ಬಳ್ಳಿ ಗಲಭೆಯಲ್ಲಿ ಕಾಣಿಸಿಕೊಂಡಿದ್ದ ಮೌಲ್ವಿಯ ಅಸಲಿ ರೂಪ ಬಯಲಾಗಿದೆ. ಆತ ಮೌಲ್ವಿಯೇ ಅಲ್ಲ. ಮೌಲ್ವಿಯ ವೇಷ ಧರಿಸಿ ಬಂದಿದ್ದ ಲಾರಿಚಾಲಕ ಎಂಬುದು ಗೊತ್ತಾಗಿದೆ. ಹುಬ್ಬಳ್ಳಿ ಗಲಾಟೆಯಲ್ಲಿ ಮೌಲ್ವಿ ವೇಷದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಅಸಲಿಗೆ ಮೌಲ್ವಿಯೇ ಅಲ್ಲ. ಆತ ಲಾರಿ ಚಾಲಕ ವಾಸಿಂ. ಈ ಹಿಂದೆ ಲಾರಿ ಚಾಲಕನಾಗಿದ್ದ ಈತ ಮೌಲ್ವಿಯಂತೆ ವೇಷ ಹಾಕಿಕೊಂಡು ಓಡಾಡುತ್ತಿದ್ದ. ಈ ವೇಷ ಹಾಕಿ ತನ್ನದೇ ಆದ ಅಭಿಮಾನಿಗಳನ್ನು …

Read More »

ಮನೆ ಕಟ್ಟೋರಿಗೆ ಬಿಗ್ ಶಾಕ್ : ಶೀಘ್ರವೇ ಸಿಮೆಂಟ್ ಪ್ರತಿ ಚೀಲಕ್ಕೆ 50 ರೂ. ಏರಿಕೆ!

ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.  ಟಿಪ್ಪು ಸುಲ್ತಾನ್ `ಮೈಸೂರು ಹುಲಿ’ ಬಿರುದು ಕೈಬಿಡಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ ದೇಶಿಯ ಸಿಮೆಂಟ್ ಕಂಪನಿಗಳು ಶೀಘ್ರವೇ ಸಿಮೆಂಟ್ ಬೆಲೆಯನ್ನು 25-50 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್ …

Read More »

ಫುಲ್‍ಟೈಟ್ ಆಗಿ ರಸ್ತೆ ಮಧ್ಯೆ ನಿಂತುಕೊಂಡ ಕುಡುಕ ವಾಹನಗಳನ್ನು ಅಡ್ಡಗಟ್ಟಿ ಹುಚ್ಚಾಟ

ಕುಡುಕರಿಗೆ ಗಂಟಲಲ್ಲಿ ಎಣ್ಣೆ ಬಿದ್ದರೆ ಅವರು ಏನು ಮಾಡುತ್ತಾರೆ ಅಂತಾ ಅವರಿಗೆ ಗೊತ್ತೇ ಆಗೋದಿಲ್ಲ. ಇಲ್ಲೊಬ್ಬ ಕುಡುಕ ಮಹಾಶಯ ಫುಲ್ ಟೈಟ್ ಆಗಿ ನಡು ರಸ್ತೆಯಲ್ಲಿ ಡಿಪ್ಸ್ ಹೊಡೆದು ರಂಪಾಟ ಮಾಡಿದ್ದಾನೆ. ಹೌದು ನೀವು ನೋಡುತ್ತಿರುವ ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿ. ನಡು ರಸ್ತೆಯಲ್ಲಿ ಕುಡುಕ ರಂಪಾಟ ಮಾಡಿದ್ದಾನೆ. ಫುಲ್‍ಟೈಟ್ ಆಗಿ ರಸ್ತೆ ಮಧ್ಯೆ ನಿಂತುಕೊಂಡ ಕುಡುಕ ವಾಹನಗಳನ್ನು ಅಡ್ಡಗಟ್ಟಿ ಹುಚ್ಚಾಟ ಮೆರೆದಿದ್ದಾನೆ. ಫುಲ್‍ಟೈಟ್ ಆಗಿ …

Read More »

ಎಸ್​ಐ ನೇಮಕ ಅಕ್ರಮಕ್ಕೆ ಓಎಂಆರ್ ಸಾಕ್ಷ್ಯ!; 50 ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ, ಮತ್ತೆ 50 ಮಂದಿ ವಿಚಾರಣೆಗೆ ನೋಟಿಸ್..

ಬೆಂಗಳೂರು: ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣದ ಸಂಬಂಧ ಬುಧವಾರ 50 ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಪ್ರವೇಶ ಪತ್ರದ ಅಸಲು ಪ್ರತಿ ಹಾಗೂ 2ನೇ ಪತ್ರಿಕೆಯ ಓಎಂಆರ್ ಶೀಟ್ ಕಾರ್ಬನ್ ಪ್ರತಿ ಸಂಗ್ರಹಿಸಿದ್ದಾರೆ. ಅವ್ಯವಹಾರ ನಡೆದಿದ್ದಲ್ಲಿ ಕಾರ್ಬನ್ ಪ್ರತಿ ಪರಿಶೀಲನೆಯಿಂದ ದೃಢಪಡಲಿದೆ. ಕಲಬುರಗಿಯಲ್ಲಿ ಠಿಕಾಣಿ ಹೂಡಿರುವ ಸಿಐಡಿಯ ಒಂದು ತಂಡ, ಅಕ್ರಮ ನೇಮಕಾತಿಯಲ್ಲಿ ಭಾಗಿಯಾದವರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬಂಧಿಸುತ್ತಿದ್ದಾರೆ. ಮತ್ತೊಂದು ತಂಡ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ …

Read More »

ಶೋಷಿತರ ಸಬಲೀಕರಣಕ್ಕೆ ಸಾಲ ಯೋಜನೆ; ಬ್ಯಾಂಕ್​ಗಳು ಅರ್ಜಿ ತಿರಸ್ಕರಿಸಿದರೆ ನಿಗಮದಿಂದಲೇ ಆರ್ಥಿಕ ಸಹಾಯ

ಬೆಂಗಳೂರು: ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಶೋಷಿತರಿಗೆ ಸಕಾಲಕ್ಕೆ ಪುನರ್ವಸತಿ ಮತ್ತು ಪರಿಹಾರ ಸಿಗುತ್ತಿಲ್ಲ ಎಂಬ ಕೊರಗು ನಿವಾರಿಸಲು ಸರ್ಕಾರ ಮುಂದಾಗಿದೆ. ಉದ್ಯಮ, ಸೇವೆ, ವ್ಯಾಪಾರ ಯೋಜನೆಯಡಿ ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕ್​ಗಳು ತಿರಸ್ಕರಿಸಿದರೂ ಪರಿಶಿಷ್ಟ ಜಾತಿ ಸಂತ್ರಸ್ತರು ಇನ್ನು ಹೆದರಬೇಕಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೇ ಸಹಾಯಧನದ ಜತೆಗೆ ನೇರ ಸಾಲ ಸೌಲಭ್ಯವೂ ದೊರೆಯಲಿದೆ. ಜಿಲ್ಲಾಧಿಕಾರಿ ಹಂತದಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ದಲಿತ ಸಂಘಟನೆಗಳ ಧರಣಿಗೆ ಸರ್ಕಾರ ಸ್ಪಂದಿಸಿದ್ದು, ಸಮಾಜ ಕಲ್ಯಾಣ ಇಲಾಖೆ …

Read More »

ಹುಬ್ಬಳ್ಳಿ ಗಲಭೆ ಪ್ರದೇಶಕ್ಕೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಭೇಟಿ

ಹುಬ್ಬಳ್ಳಿ: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹಾಗೂ ಕಾರ್ಯದರ್ಶಿ ಮೊಹಮದ್ ನಜೀರ್ ಗುರುವಾರ ಬೆಳಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿ ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.   ನಂತರ ದಿಡ್ಡಿ ಓಣಿಯ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ದೇಗುಲದ ಟ್ರಸ್ಟಿ ಮತ್ತು ಅರ್ಚಕರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಮುಂದೆ ಹೀಗಾಗದಂತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ …

Read More »

ಹುಬ್ಬಳ್ಳಿ ಗಲಭೆ: ಎಐಎಂಐಎಂ ಮುಖಂಡ ಬಂಧನ?

ಹುಬ್ಬಳ್ಳಿ: ನಗರದಲ್ಲಿ ಇತ್ತೀಚಿಗೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಐಎಂಐಎಂ ಮುಖಂಡ ಮೊಹಮ್ಮದ್​ ಆರೀಫ್​ನನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಮುಖ ಆರೋಪಿ ಮೌಲ್ವಿ ಜತೆ ಸೇರಿ ಈತ ಪೊಲೀಸ್ ಇನ್ಸ್‌ಪೆಕ್ಟರ್ ಜತೆ ವಾಗ್ವಾದ ಮಾಡಿದ್ದ. ಗಲಭೆಗೆ ಕಾರಣವಾಗಿದ್ದ ಎಂಬ ಆರೋಪದಡಿ ವಶಕ್ಕೆ ಪಡೆಯಲಾಗಿದೆ‌ ಎಂಬ ಮಾಹಿತಿ ಲಭ್ಯವಾಗಿದೆ. ಗಲಭೆಗೆ ಪ್ರಚೋದನೆ ನೀಡಿದ್ದ ಮಂಟೂರ ರಸ್ತೆ ಮಿಲ್ಲತ್ ನಗರದ ಮೌಲ್ವಿ ಹೈದರಾಬಾದ್​ನಲ್ಲಿ ಅವಿತುಕೊಂಡಿದ್ದಾನೆಂಬ ಮಾಹಿತಿ ಆಧರಿಸಿ ತನಿಖಾ …

Read More »