ನವದೆಹಲಿ : ಪ್ರಸ್ತುತ, ಕೇಂದ್ರ ಸರ್ಕಾರವು ದೇಶದ ಬಡ ವರ್ಗಗಳ ಜನರಿಗಾಗಿ ಅನೇಕ ಯೋಜನೆಗಳನ್ನ ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಜನರು ಅನೇಕ ರೀತಿಯ ಪರಿಹಾರ ಮತ್ತು ಪ್ರಯೋಜನಗಳನ್ನ ಪಡೆಯುತ್ತಾರೆ. ಇ-ಶ್ರಮ್ ಕಾರ್ಡ್ ಯೋಜನೆಯೂ ಇದೇ ರೀತಿಯ ಯೋಜನೆಯಾಗಿದ್ದು, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರವು ಇದನ್ನ ಪರಿಚಯಿಸಿದೆ. ಕಾರ್ಮಿಕರನ್ನ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ, ಈ ಯೋಜನೆಯು ಇಲ್ಲಿಯವರೆಗೆ ಲಕ್ಷಾಂತರ ಕಾರ್ಮಿಕರಿಗೆ ಪ್ರಯೋಜನವನ್ನ ನೀಡಿದೆ. …
Read More »Yearly Archives: 2022
ಪಿಎಸ್‌ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸಂಪರ್ಕ’ಸೇತು’ಗಳಿಗೆ ನಡುಕ ಶುರು!
ಬೆಂಗಳೂರು, ಏ. 29: ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಸಿಕ್ಕಿ ಬೀಳುತ್ತಿದ್ದಂತೆ ಕೆಲವು ಪ್ರಭಾವಿ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ದಿವ್ಯಾ ಹಾಗರಗಿ ಮಹಾರಾಷ್ಟ್ರದ ಪುಣೆಯಲ್ಲಿ ಸಿಕ್ಕಿ ಬಿದ್ದಿದ್ದು, ಆಕೆಗೆ ಆಶ್ರಯ ನೀಡಿದ ವ್ಯಕ್ತಿಯನ್ನೂ ಸಹ ಸಿಐಡಿ ಪೊಲೀಸರು ಎಳೆದು ತಂದಿದ್ದಾರೆ. ನ್ಯಾಯಾಲಯ ಅರೆಸ್ಟ್ ವಾರಂಟ್ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಪುಣೆಯಲ್ಲಿ ಸಿಐಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯ ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದು ಪಡಿಸಿ …
Read More »ಆರೋಪಿಗಳ ಕುಟುಂಬಕ್ಕೆ ಸಹಾಯ ಮಾಡಿದ್ದು ತಪ್ಪು : ಜಮೀರ್ ನಡೆಗೆ ನಲಪಾಡ್ ರಿಯಾಕ್ಷನ್
ಧಾರವಾಡ: ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮನೆಯವರಿಗೆ ರಂಜಾನ್ ಪ್ರಯುಕ್ತ ಶಾಸಕ ಜಮೀರ್ ಅಹ್ಮದ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ನಲಪಾಡ್, ನಾನು ಅದರ ಜೊತೆಗೂ ನಿಂತುಕೊಳ್ಳಲ್ಲ ಎಂದಿದ್ದಾರೆ. ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಅವರ ವೈಯಕ್ತಿಕ. ಪಕ್ಷದ ಬ್ಯಾನರ್ ನಲ್ಲಿ ಕೊಡುತ್ತಿಲ್ಲ. ಅವರ ವೈಯಕ್ತಿಕವಾಗಿ ಕೊಡುತ್ತಿದ್ದಾರೆ. ಪಕ್ಷದಿಂದ ಕೊಟ್ಟಾಗ ಕಮೆಂಟ್ ಮಾಡಬಹುದು. ನನಗೇನು ಇದು ಸರಿ ಎನ್ನಿಸುತ್ತಿಲ್ಲ. …
Read More »ಕಾಂಗ್ರೆಸ್ಸೋ, ಬಿಜೆಪಿಯೋ? ಜಿ.ಟಿ.ದೇವೇಗೌಡ ಮನಸ್ಸು ಎತ್ಲಾಗೆ!
ದಳಪತಿಗಳ ಜೊತೆ ಮುನಿಸುಕೊಂಡು ಜೆಡಿಎಸ್ ಬಿಡಲು ಸಿದ್ದರಾಗಿರುವ ಹಾಲೀ ಶಾಸಕರ ಪರಿಸ್ಥಿತಿ ಇನ್ನೂ ತ್ರಿಶಂಕು ಸ್ಥಿತಿ. ಕಾಂಗ್ರೆಸ್ ಸೇರಲು ಬಯಸುತ್ತಿರುವ ಈ ನಾಯಕರುಗಳಿಗೆ, ಆ ಪಕ್ಷದಿಂದ ರೆಡ್ ಕಾರ್ಪೆಟ್ ವೆಲ್ಕಂ ಸಿಗುವುದು ಕಷ್ಟ ಎನ್ನುವುದು ತಾಜಾ ರಾಜಕೀಯ ಬೆಳವಣಿಗೆಗಳು. ಇದಕ್ಕೆ ಹಲವು ಕಾರಣಗಳಿವೆ, ಒಂದು ಅವರವರು ಪ್ರತಿನಿಧಿಸುವ ಕ್ಷೇತ್ರದ ಸ್ಥಳೀಯ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ವಿರೋಧ. ಚುನಾವಣೆಯಂತಹ ಸೂಕ್ಷ್ಮ ಸಂದರ್ಭದಲ್ಲಿ ಇಂತಹ ವಿರೋಧವನ್ನು ಎದುರು ಹಾಕಿಕೊಳ್ಳಲು ಯಾವ …
Read More »ಟ್ರೇಲರ್ ಹಿಟ್ ಎಫೆಕ್ಟ್; ‘ತೋತಾಪುರಿ’ಗೆ ಫುಲ್ ಡಿಮ್ಯಾಂಡ್
ಕೆಲವು ಸಿನಿಮಾಗಳ ತುಣುಕು ಇಡೀ ಸಿನಿಮಾದ ಭವಿಷ್ಯ ಹೇಳಿ ಬಿಡುತ್ತದೆ. ಈಗ “ತೋತಾಪುರಿ’ ಚಿತ್ರದ ಟ್ರೇಲರ್ ಕೂಡಾ ಈ ಚಿತ್ರದ ಭವಿಷ್ಯದ ಭರವಸೆ ಮೂಡಿಸಿದೆ. ಅದು ಹೇಗೆಂದು ನೀವು ಕೇಳಬಹುದು. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. 5 ಮಿಲಿಯನ್‌ಗೆ ಅಧಿಕ ವೀವ್ಸ್‌ನೊಂದಿಗೆ ಮುನ್ನುಗ್ಗುತ್ತಿದೆ. ಇದರೊಂದಿಗೆ ಸಿನಿಮಾದ ಬಿಝಿನೆಸ್ ಕೂಡಾ ಏರಿದೆ. ಸಿನಿಮಾದ ವಿತರಣೆಗೆ ನಿರ್ಮಾಪಕರನ್ನು ಸಂಪರ್ಕಿಸುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಚಿತ್ರಕ್ಕೆ ಎಲ್ಲಾ ಏರಿಯಾಗಳಿಂದಲೂ ಬೇಡಿಕೆ …
Read More »ಬಿಜೆಪಿ ಸರ್ಕಾರದಿಂದ ಬೇಸತ್ತು ದಿನಕ್ಕೆ 350 ಮಂದಿ ಭಾರತ ತೊರೆಯುತ್ತಿದ್ದಾರೆ : ಖರ್ಗೆ
ನವದೆಹಲಿ, ಏ.29- ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ಪ್ರತಿ ದಿನ 350 ಮಂದಿ ಭಾರತದ ನಾಗರೀಕತ್ವ ತೊರೆದು ದೇಶ ಬಿಟ್ಟು ಹೋಗುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ. ನಿರುದ್ಯೋಗ ಹೆಚ್ಚಳ, ವ್ಯಾಪಾರ ಮಾಡಲು ಕ್ಲಿಷ್ಟಕರ ವಾತಾವರಣ, ವಿಫಲ ಆರ್ಥಿಕತೆ, ಸಾಮಾಜಿಕ ತಾರತಮ್ಯದಿಂದ ಬೇಸರಗೊಂಡ ಲಕ್ಷಾಂತರ ಮಂದಿ ದೇಶ ಬಿಟ್ಟು ಹೋಗುತ್ತಿದ್ದಾರೆ. ಈವರೆಗೂ ಒಟ್ಟು 8.81 ಲಕ್ಷ ಮಂದಿ ಭಾರತದ ನಾಗರೀಕತ್ವ ತೊರೆದಿದ್ದಾರೆ …
Read More »ಚಿಂಚನಸೂರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಪ್ರಶ್ನೆಗೆ ಹಾಲಪ್ಪ ಆಚಾರ್ ಹೇಳಿದ್ದು ಹೀಗೆ..!
ರಾಯಚೂರು: ಕಳೆದ ಕೆಲವು ದಿನಗಳಿಂದ ಬಾಬೂರಾವ್ ಚಿಂಚನೂರ್ ಮತ್ತೆ ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಮಾತಿದೆ. ಈ ಬಗ್ಗೆ ಸಚಿವ ಹಾಲಪ್ಪ ಆಚಾರ್ ಮಾತನಾಡಿದ್ದು, ಹೋಗೋರಿಗೆ, ಬರುವವರಿಗೆ ಬಾಗಿಲು ಯಾರು ಮುಚ್ಚೋದಕ್ಕೆ ಆಗುತ್ತೆ. ತೆಗೆಯೋದಕ್ಕೆ ಆಗುತ್ತೆ. ಬಹುಶಃ ಅವರು ಹೋಗುವುದಿಲ್ಲ. ಇವತ್ತು ಕೂಡ ನನ್ನ ಜೊತೆಯಲ್ಲಿ ಸಭೆಯಲ್ಲಿದ್ದಾರೆ ಎಂದು ಹೇಳುವ ಮೂಲಕ ವಿಚಾರ ಸುಳ್ಳು ಎಂದಿದ್ದಾರೆ. ಇದೆಲ್ಲಾ ಯಾರೋ ಹೇಳಿರುವ ವಿಚಾರವಿರಬಹುದು. ಬಿಜೆಪಿ ಪಾರ್ಟಿಯ ಸಿದ್ದಾಂತವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು, …
Read More »SSC MTS ಪೇಪರ್ 2 ಪ್ರವೇಶ ಕಾರ್ಡ್ 2022 ಬಿಡುಗಡೆ: ಈ ರೀಡಿ ಡೌನ್ ಲೋಡ್ ಮಾಡಿಕೊಳ್ಳಿ
ನವದೆಹಲಿಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮಲ್ಟಿ ಟಾಸ್ಕಿಂಗ್ ಸ್ಟಾಫ್ ಪೇಪರ್ 2 2020 ರ ಪ್ರವೇಶ ಕಾರ್ಡ್ ಅನ್ನು NWR ವೆಬ್‌ಸೈಟ್ ಅಂದರೆ sscnwr.org ನಲ್ಲಿ ಬಿಡುಗಡೆ ಮಾಡಿದೆ. ಆಯೋಗವು SSC ER ವೆಬ್‌ಸೈಟ್‌ನಲ್ಲಿ (sscer.org) ಅಪ್ಲಿಕೇಶನ್ ಸ್ಥಿತಿಯನ್ನು ಸಕ್ರಿಯಗೊಳಿಸಿದೆ. SSC MTS ಪೇಪರ್ 1 ಅನ್ನು ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಬಹುದು ಮತ್ತು SSC ಯ ಅಧಿಕೃತ ಪ್ರಾದೇಶಿಕ ವೆಬ್‌ಸೈಟ್‌ನಿಂದ SSC MTS ಪೇಪರ್ …
Read More »ರಾಜ್ಯದಲ್ಲಿ ಒಂದೇ ದಿನ ಇಬ್ಬರು ಪೊಲೀಸ್ ಹೆಡ್ಕಾನ್ಸ್ಟೇಬಲ್ಸ್ ಆತ್ಮಹತ್ಯೆ
ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯುತ್ತಿದ್ದ ಕೇಂದ್ರದ ಬಳಿ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ಕರ್ತವ್ಯನಿರತ ಸ್ಥಳದಲ್ಲೇ ಗುಂಡಿಕ್ಕಿಕೊಂಡು ಮೃತಪಟ್ಟಿದ್ದಾರೆ. ಇತ್ತ ಬೆಂಗಳೂರು ಉತ್ತರ ತಾಲೂಕು ಹೆಸರಘಟ್ಟದಲ್ಲಿ ಮತ್ತೊಬ್ಬ ಮುಖ್ಯಪೇದೆ ನೇಣಿಗೆ ಶರಣಾಗಿದ್ದಾರೆ. ಗುಂಡು ಹಾರಿಸಿಕೊಂಡು ಸಾವು: ಉಡುಪಿ ಜಿಲ್ಲಾ ಕೇಂದ್ರದ ಆದಿಉಡುಪಿ ಪ್ರೌಢಶಾಲೆ ಆವರಣದಲ್ಲಿ ಸಶಸ್ತ್ರ ಮೀಸಲು ಪಡೆಯ ಮುಖ್ಯಪೇದೆ ರಾಜೇಶ್ ಕುಲಾಲ್ ಗುಂಡಿಕ್ಕಿಕೊಂಡು ಮೃತಪಟ್ಟಿದ್ದಾರೆ. …
Read More »ಕಮಲಿ ಧಾರಾವಾಹಿಯ ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ
ಬೆಂಗಳೂರು: ಧಾರಾವಾಹಿ ನಿರ್ಮಾಪಕನಿಂದ ಹಣಪಡೆದ ವಂಚನೆ ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಿರ್ಮಾಪಕ ರೋಹಿತ್ಅರವಿಂದ್ ಕೌಶಿಕ್ ಅವರು ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ್ದಾರೆ. ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಹಾಗೂ ಶಾರ್ದೂಲ ಹೆಸರಿನಿ ಸಿನಿಮಾಗಳನ್ನು ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮೂಡಿಬಂದ ಕಮಲಿ ಧಾರವಾಹಿಯನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಆರೋಪ ಏನೆಂದರೆ, ಕಮಲಿ ಧಾರವಾಹಿ ನಿರ್ಮಾಣ ಮಾಡಲಿಕ್ಕೆ …
Read More »