Breaking News

Yearly Archives: 2022

ಸಿಸಿಬಿ ಖಡಕ್‌ ವಾರ್ನಿಂಗ್‌ಗೆ ಬೆಂಗಳೂರು ಬಿಡ್ತಿದ್ದಾರೆ ರೌಡಿಗಳು

ಬೆಂಗಳೂರು : ರಾಜಕೀಯ ನಾಯಕರ ಜೊತೆ ರೌಡಿ ಶೀಟರ್‌ಗಳು ವೇದಿಕೆ ಹಂಚಿಕೊಳ್ಳುವುದಕ್ಕೆ ಶುರು ಮಾಡಿದ್ರೋ ಆಗಿನಿಂದ ಇದು ಪೊಲೀಸ್‌ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಸದ್ಯ ರಾಜಕೀಯದಿಂದ ಮುಜಗರಕ್ಕೆ ಇಡಾಗಿದ್ದ ಸಿಸಿಬಿ ಬೆಂಗಳೂರು ರೌಡಿಗಳ ವಿಷಯದಲ್ಲಿ ಖಡಕ್ ತೀರ್ಮಾನ ತೆಗೆದುಕೊಂಡಿದೆ. ರೌಡಿಗಳಿಗೆ ಊರು ಬಿಡುವಂತೆ ಖಡಕ್‌ ವಾರ್ನಿಂಗ್ ಕೊಟ್ಟಿದ್ದಾರೆ. ಸಿಸಿಬಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳೋದಕ್ಕಾಗಿ ರೌಡಿಗಳನ್ನ ಊರು ಬಿಡಿಸಿದ್ದಾರೆ   .ಸೈಲೆಂಟ್ ಸುನೀಲ ರಾಜಕೀಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಸಿಸಿಬಿಗೆ ದೊಡ್ಡ ಮುಜುಗರ ಊಂಟು …

Read More »

ವಿಜಯಪುರ: ಕೃಷಿ ಹೊಂಡಕ್ಕೆ ಬಿದ್ದು ಪುಟಾಣಿ ಸಹೋದರರು ಮೃತ್ಯು

ವಿಜಯಪುರ, ಡಿ.4: ಅಣ್ಣ-ತಮ್ಮಂದಿರಾದ ಬಾಲಕರಿಬ್ಬರು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದಲ್ಲಿ ಶನಿವಾರ ನಡೆದಿದೆ. ರಮೇಶ್(9) ಮತ್ತು ಮಾಳಿಂಗರಾಯ(11) ಮೃತಪಟ್ಟ ಬಾಲಕರಾಗಿದ್ದಾರೆ. ಇವರಿಬ್ಬರು ಶನಿವಾರ ಶಾಲೆಯಿಂದ ಮನೆಗೆ ಬಂದ ಬಳಿಕ ದನಗಳನ್ನು ಮೇಯಿಸಲೆಂದು ತಮ್ಮ ಪಕ್ಕದ ಜಮೀನಿಗೆ ಹೋಗಿದ್ದರು. ಈ ವೇಳೆ ಅಲ್ಲಿರುವ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಬಸವನಬಾಗೇವಾಡಿ ಪೊಲೀಸ್ …

Read More »

ವಂಶೋದ್ಧಾರಕ್ಕಾಗಿ ಸೊಸೆಯೊಂದಿಗೆ ಸೆಕ್ಸ್ ಗೆ ಮುಂದಾದ ಮಾವ: ದೂರು ಕೊಡುವ ಬದಲು ಸುಫಾರಿ ಕೊಟ್ಟ ಬೀಗರು

ಹಾಸನ: ಸೊಸೆಗೆ ಲೈಂಗಿಕ ಕಿರುಕುಳ ನೀಡಿದ ಮಾವ ಕೊಲೆಯಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಬೀಗರು ಬಂಧಿತರಾಗಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿಕಾವಲು ಗ್ರಾಮದ ಕೆರೆ ಬಳಿ ನವೆಂಬರ್ 13ರಂದು ದೊಡ್ಡಹಳ್ಳಿ ತಮ್ಮೇಗೌಡನ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ತಮ್ಮೇಗೌಡನ ಬೀಗರನ್ನು ಬಂಧಿಸಿದ್ದಾರೆ. ವಿಕಲಚೇತನ ಮಗನಿಗೆ ಮದುವೆ ಮಾಡಿದ್ದ ತಮ್ಮೇಗೌಡ ಅಜ್ಜನಾಗುವ ಕನಸು ಕಂಡಿದ್ದ. …

Read More »

ಸಿದ್ದಾರಾಮಯ್ಯಗೆ ನನ್ನ ಕ್ಷೇತ್ರ ಬಿಟ್ಟು ಕೊಡುತ್ತೇನೆ: ಸಂತೋಷ ಲಾಡ್

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೇ ಅವರಿಗೆ ಕ್ಷೇತ್ರ ಬಿಟ್ಟು ಕೊಡುವೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. ರವಿವಾರ ‌ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಹಲವೆಡೆಗಳಲ್ಲಿ ಅನೇಕರು ಆಹ್ವಾನಿಸುತ್ತಿದ್ದಾರೆ. ಈ ದಿಸೆಯಲ್ಲಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅದು ಅವರಿಗೆ ಬಿಟ್ಟ ವಿಷಯ. ಒಂದು ವೇಳೆ ಕಲಘಟಗಿಯಿಂದಲೂ ಸ್ಪರ್ಧಿಸಲು ಇಚ್ಛಿಸಿದರೆ ಆ ಕ್ಷೇತ್ರ ಬಿಟ್ಟುಕೊಡುವೆ …

Read More »

ಪ್ರೀತಿಸಿ ಮದುವೆಯಾಗಿ ಒಟ್ಟಿಗೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ದಂಪತಿ ಬಂಧನ

ಬೆಂಗಳೂರು: ಒಂಟಿ ‌ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ದಂಪತಿಯನ್ನು ನಗರದ ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.   ನಾಗರಾಜ ಹಾಗೂ ರಮ್ಯಾ ಬಂಧಿತ ದಂಪತಿ. ಬೈಕ್ ಕಳ್ಳನೊಬ್ಬನ ಮೂಲಕ ನಾಗರಾಜ್ ಹಾಗೂ ರಮ್ಯಾಗೆ ಪರಿಚಯ ಆಗಿತ್ತು.   ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ದಿನಕಳೆದಂತೆ ಇಬ್ಬರ ನಡುವೆ ಪ್ರೇಮಾಂಕುವಾಗಿ ಮದುವೆಯಾಗಿದ್ದರು.   ಮದುವೆಯಾದ ಬಳಿಕ ಇಬ್ಬರು ಒಟ್ಟಿಗೆ ಕಳ್ಳತನ ಮಾಡಲು ಆರಂಭಿಸಿದರು. ಒಂಟಿ …

Read More »

ಭೂಮಿ ಮೇಲೆ ಕತ್ತಲು ಅವರಿಸುತ್ತೆ, ಅನ್ಯಗ್ರಹ ಜೀವಿ ದಾಳಿ, ಲ್ಯಾಬ್’ನಲ್ಲಿ ಮಕ್ಕಳು ಜನಿಸ್ತಾರೆ ; 2023ರ ಕುರಿತು ‘ವಾಂಗಾ ಬಾಬಾ’ ಸ್ಪೋಟಕ ಭವಿಷ್ಯ

ಮಹಿಳಾ ನಾಸ್ಟ್ರಾಡಾಮಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬಲ್ಗೇರಿಯಾದ ಪ್ರವಾದಿ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಜನರನ್ನ ಭಯಭೀತರನ್ನಾಗಿಸಿವೆ. 2023ರಲ್ಲಿ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಭೂಮಿಯ ಮೇಲೆ ಅನ್ಯಗ್ರಹದ ದಾಳಿಗಳು, ಪರಮಾಣು ದಾಳಿಗಳ ಬಗ್ಗೆ ಎಚ್ಚರಿಸುತ್ವೆ.   ಇನ್ನು ಈ ಭವಿಷ್ಯವಾಣಿಗಳು ಭಯಾನಕವಾಗಿದ್ದು, ಈ ಪ್ರವಾದನೆಗಳಲ್ಲಿ ಪ್ರತಿಯೊಂದೂ ಭೂಮಿಯನ್ನ ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ. 2023ರ ವರ್ಷದ ಭವಿಷ್ಯ.! ಬಲ್ಗೇರಿಯಾದ ಪ್ರವಾದಿ ಬಾಬಾ ಬೆಂಗಾ ಅವರು ತಮ್ಮ ಮರಣಕ್ಕೆ 26 ವರ್ಷಗಳ …

Read More »

16 ಹೊಸ ಮಸೂದೆ ಮಂಡನೆ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ?

ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಇದೇ 7ರಿಂದ ಆರಂಭವಾಗಲಿದ್ದು, 16 ಹೊಸ ಮಸೂದೆೆಗಳನ್ನು ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಈ ಪೈಕಿ ನಾಲ್ಕು ಮಸೂದೆ ಗಳು ಕರ್ನಾಟಕ, ತಮಿಳುನಾಡು, ಛತ್ತೀಸ್‌ಗಢ, ಹಿಮಾಚಲ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡಗಳ ಪರಿಷ್ಕೃತ ಪಟ್ಟಿಗೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ.   ಡಿ. 29ರಂದು ಅಧಿವೇಶನ ಸಮಾಪ್ತಿ ಯಾ ಗಲಿದ್ದು, ಅದಕ್ಕೂ ಮೊದಲು ಒಟ್ಟಾರೆ 23 ಮಸೂದೆಗಳಿಗೆ ಅಂಗೀ ಕಾರ ಪಡೆಯುವುದು ಸರಕಾರದ ಉದ್ದೇಶವಾಗಿದೆ. 4 ಮಸೂದೆಗಳು ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿ, …

Read More »

ಕೊತ್ವಾಲನ ಚಹಾ ಲೋಟ ಡಿ.ಕೆ ಶಿವಕುಮಾರ್ ಎತ್ತುತ್ತಾ ಇದ್ರು: ಬಿಜೆಪಿ

ಬೆಂಗಳೂರು: ಚುನಾವಣೆ ಸಮೀಪಿಸಿದಂತೆ ಪಕ್ಷಕ್ಕೆ ರೌಡಿಗಳ ಸೇರ್ಪಡೆ, ಬಿಬಿಎಂಪಿಯಲ್ಲಿ ಮತದಾರರ ಚೀಟಿ ಅಕ್ರಮ, ಹೀಗೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಸಿಲುಕಿಕೊಂಡಿದೆ. ಆದರೂ ರಣೋತ್ಸಾದಲ್ಲೇ ಇರುವ ಬಿಜೆಪಿ ಫೇಸ್​ಬುಕ್​ನಲ್ಲಿ ಕಾಂಗ್ರೆಸ್​ ವಿರುದ್ಧ ಫುಲ್​ ಫೈರಿಂಗ್​ ನಡೆಸಿದೆ.   ಫೇಸ್​ಬುಕ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಬಿಜೆಪಿ, ಡಿ.ಕೆ ಶಿವಕುಮಾರ್​ ರೌಡಿಗಳ ರಾಜ ಕೊತ್ವಾಲ್​ನ ಚಹಾ ಲೋಟ ಎತ್ತುತ್ತಿದ್ರು ಎಂದು ಟಾಂಗ್​ ನೀಡಿದೆ. ‘ಡಿಕೆಶಿಯನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿರೋ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕತೆ …

Read More »

ವೀರಶೈವ ಲಿಂಗಾಯತ ಸಮುದಾಯಕ್ಕೇ 2ಎ ಮೀಸಲಾತಿ ಸಿಗಲಿದೆ :ನಿರಾಣಿ

ಕೊಪ್ಪಳ: ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೇ 2ಎ ಮೀಸಲಾತಿ ಸಿಗಲಿದೆ ಎಂಬುದಾಗಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದಾರೆ. ಕೊಪ್ಪಳದಲ್ಲಿ ಇಂದು ಈ ವಿಷಯವಾಗಿ ಮಾತನಾಡಿರುವ ಅವರು, ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಉದ್ದೇಶ, ಅದು ಈಡೇರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.   ಸಮಸ್ತ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೇ ಹೊರತು ಕೇವಲ ಪಂಚಮಸಾಲಿಗೆ ಮಾತ್ರ ಬೇಡ ಎಂದಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಅದೇ …

Read More »

ಬಿಜೆಪಿಗರೇ, ನಾನು ರೌಡಿಶೀಟರ್‌, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ?

ಮೈಸೂರು: ‘ಬಿಜೆಪಿಗರೇ, ನಾನು ರೌಡಿಶೀಟರ್‌, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ?’ ಎಂದು ಬರೆದಿದ್ದ ಬ್ಯಾನರ್ ಹಿಡಿದು, ಮಂಜು ಅಲಿಯಾಸ್ ಪಾನಿಪುರಿ ಮಂಜ ಎನ್ನುವವರು ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಎದುರು ಶನಿವಾರ ಸಾರ್ವಜನಿಕರ ಗಮನಸೆಳೆದರು.   ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ, ಕನಕದಾಸ, ವಾಲ್ಮೀಕಿ, ಅಂಬೇಡ್ಕರ್ ಚಿತ್ರ ಹಾಕಿದ್ದ ಬ್ಯಾನರ್‌ ಹಿಡಿದಿದ್ದರು. ಗಣೇಶ ನಗರದ ನಿವಾಸಿಯಾದ ಅವರು, 2013ರಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದರು ಎಂದು ತಿಳಿದುಬಂದಿದೆ. …

Read More »