ಬೆಳಗಾವಿ: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ₹ 2,500 ಕೋಟಿ ಕೇಳಿದವರಾರು, ಕಳುಹಿಸಿದವರಾರು ಎನ್ನುವುದನ್ನು ತನಿಖೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಮುಖ್ಯಮಂತ್ರಿ ಅಥವಾ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಯತ್ನಾಳ್ ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಹೇಳಿದರು. ‘ಯತ್ನಾಳ್ ಕೇಂದ್ರದ ಮಾಜಿ ಸಚಿವರಾಗಿದ್ದವರು. ಅಂಥವರೇ ₹ 2,500 ಕೋಟಿ ಕೇಳಿದ್ದರು ಎಂದು …
Read More »Yearly Archives: 2022
ನಲಿವು-ನೋವುಣಿಸಿದ ಏಪ್ರಿಲ್ ಮಳೆ: ವಾಡಿಕೆಗಿಂತ ಹೆಚ್ಚಿನ ವರ್ಷಧಾರೆ
ಬೆಳಗಾವಿ: ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ವಾಡಿಕೆಗಿಂತ ಸರಾಸರಿ ಶೇ 155ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ನೋವು-ನಲಿವು ಎರಡನ್ನೂ ನೀಡಿದೆ. ಬೇಸಿಗೆಯ ಸಂದರ್ಭದಲ್ಲಿ ತಂಪನ್ನೆರೆಯುವ ಜೊತೆಗೆ ನಷ್ಟವನ್ನೂ ಉಂಟು ಮಾಡಿದೆ. ಗಡಿ ಜಿಲ್ಲೆಯಲ್ಲಿ ವಾಡಿಕೆಯಂತೆ ಸರಾಸರಿ 25.5 ಮಿ.ಮೀ. ಮಳೆಯಾಗಬೇಕಿತ್ತು. ವಾಸ್ತವವಾಗಿ 64.9 ಮಿ.ಮೀ. ಮಳೆ ಸುರಿದಿದೆ. ಕೆಲವು ದಿನಗಳು ನಿತ್ಯ ಸಂಜೆ ಗುಡುಗು-ಸಿಡಿಸಲು ಸಹಿತ ವರುಣನ ಕೃಪೆಯಾಯಿತು. ಅಲ್ಲಲ್ಲಿ ಜೋರಾಗಿಯೇ ‘ಅಡ್ಡ ಮಳೆ’ಯಾಯಿತು. ಇದರಿಂದಾಗಿ ಬೇಸಿಗೆಯಲ್ಲೂ ಹಲವು ದಿನಗಳು ತಂಪಿನ ವಾತಾವರಣ …
Read More »ಕ್ಷಿಪ್ರ ಕಾರ್ಯಪಡೆ ಪಥಸಂಚಲನ
ಬೆಳಗಾವಿ: ರ‍್ಯಾಪಿಡ್ ಆಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯಪಡೆ) ಮತ್ತು ಪೊಲೀಸ್ ಅಧಿಕಾರಿಗಳು ನಗರದ ಕೆಲವು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿ, ಸಾರ್ವಜನಿಕರಿಗೆ ಧೈರ್ಯ ತುಂಬಲು ಶುಕ್ರವಾರ ಪ್ರಯತ್ನಿಸಿದರು. 65 ಮಂದಿಯ ಪಡೆ ನಗರಕ್ಕೆ ಬಂದಿದೆ. ರಾಣಿ ಚನ್ನಮ್ಮ ವೃತ್ತದಿಂದ ಕಾಕತಿವೇಸ್, ಶನಿವಾರಕೂಟ್, ಕಂಜರ್‌ಗಲ್ಲಿ, ದರ್ಬಾರ್ ಗಲ್ಲಿ, ಶಾಸ್ತ್ರಿಚೌಕ, ಖಡಕ್‍ಗಲ್ಲಿ, ಖಡೇಬಜಾರ್ ರಸ್ತೆ, ಭಡಕಲ್ ಗಲ್ಲಿ, ನಾನಾಪಾಟೀಲ ಚೌಕ, ಚವಾಟ್ ಗಲ್ಲಿ, ಹಳೆಯ ಪಿ.ಬಿ. ರಸ್ತೆ, …
Read More »ಗೋಕಾಕ ಹಾಗೂ ಮೂಡಲಗಿ ರೈತರು ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಬೆಳಗಾವಿ: ಘಟಪ್ರಭಾ ಮೇಲ್ದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಜಿಲ್ಲೆಯ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳ ರೈತರು ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ನೀರಾವರಿ ನಿಗಮದ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿ, ಬಳಿಕ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು. ಬೇಸಿಗೆ ಹಿನ್ನೆಲೆಯಲ್ಲಿ ಜನ-ಜಾನುವಾರಿಗೆ ನೀರಿನ ಅವಶ್ಯಕತೆ ಇದೆ. ನೀರಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ಧೇವೆ. ಪ್ರತಿ ನಿತ್ಯ 2ಸಾವಿರ ಕ್ಯುಸೆಕ್ ನೀರನ್ನು ಕಾಲುವೆಗೆ ಹರಿಸಬೇಕು’ ಎಂದು ಒತ್ತಾಯಿಸಿದರು. ‘ಎಡದಂಡೆ …
Read More »ಪಿಯುಸಿ ಇಂಗ್ಲಿಷ್ ಪರೀಕ್ಷೆ: 2,530 ವಿದ್ಯಾರ್ಥಿಗಳು ಗೈರು
ಬೆಳಗಾವಿ: ಜಿಲ್ಲೆಯಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ವಾರ್ಷಿಕ ಪರೀಕ್ಷೆಗೆ ಒಟ್ಟು 2,530 ಮಂದಿ ಗೈರುಹಾಜರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿದ್ದ 21,823 ವಿದ್ಯಾರ್ಥಿಗಳ ಪೈಕಿ 20,652 ಮಂದಿ ಹಾಜರಾದರು. 1,171 ವಿದ್ಯಾರ್ಥಿಗಳು ಗೈರುಹಾಜರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 26,013 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಅವರಲ್ಲಿ 24,654 ಮಂದಿ ಹಾಜರಾದರೆ, 1,359 ಮಂದಿ ದೂರ ಉಳಿದರು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
Read More »ಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕು: ರಮೇಶ ಜಾರಕಿಹೊಳಿ
ಬೆಳಗಾವಿ ಜಿಲ್ಲೆ): ಸಚಿವ ಸಂಪುಟ ಪುನರ್‌ರಚನೆ ಮಾತುಗಳು ಕೇಳಿಬರುತ್ತಿರುವ ನಡುವೆ, ಆಕಾಂಕ್ಷಿಗಳಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಇಲ್ಲಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನ ಕೊಡುವುದು, ಬಿಡುವುದು ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದು ಪ್ರತಿಕ್ರಿಯಿಸಿದರು. ‘ಅಥಣಿ ಶಾಸಕ ಮಹೇಶ ಕುಮಠಳ್ಳಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮಂತ್ರಿ ಸ್ಥಾನ ಬೇಡ; ಕ್ಷೇತ್ರದಲ್ಲಿ ನೀರಾವರಿ …
Read More »ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ವೇಶ್ಯಾವಾಟಿಕೆ!
ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ವೇಶ್ಯಾವಾಟಿಕೆ (Prostitution) ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ಅರೆಸ್ಟ್ (Arrest) ಆಗಿದ್ದಾರೆ. ಹೊರ ರಾಜ್ಯದ ಯುವತಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ಪ್ರವೇಶಕ್ಕೆ ವ್ಯವಸ್ಥೆ ಮಾಡಿದ್ದರು. ದಾಳಿ ವೇಳೆ ವೇಶ್ಯಾವಾಟಿಕೆ ಅಡ್ಡೆಯ ಕಳ್ಳ ಬಾಗಿಲು ರಹಸ್ಯ ಬಯಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಮಾಹಿತಿ ಮೇರೆಗೆ ಚಿತ್ರದುರ್ಗ ಡಿಸಿಐಬಿ …
Read More »ಅನಾರೋಗ್ಯದಿಂದ ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್ ಜುನೇಜಾ ನಿಧನ
ಬೆಂಗಳೂರು: ಅನಾರೋಗ್ಯದಿಂದ ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್ ಜುನೇಜಾ ನಿಧನರಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಶನಿವಾರ ಮೇ 7ರಂದು ವಿಧಿವಶರಾಗಿದ್ದಾರೆ. ಇತ್ತೀಚೆಗೆ ತೆರೆಕಂಡು ಭಾರೀ ಯಶಸ್ಸು ಗಳಿಸಿದ ಕೆಜಿಎಫ್ ಭಾಗ ಒಂದು ಮತ್ತು ಎರಡು ಚಿತ್ರ ಸೇರಿದಂತೆ ನವಗ್ರಹ, ಗಣೇಶನ ಗಲಾಟೆ, ಜೋಗಿ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಯಾಂಡಲ್ ವುಡ್ ನ ಪ್ರಮುಖ ನಾಯಕ ನಟರ ಜೊತೆ ಹಾಸ್ಯನಟ …
Read More »ತನಿಖಾಧಿಕಾರಿಗಳನ್ನೇ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಸಚಿವ ಪ್ರಭು ಚೌಹಾಣ್ ಹಾಗೂ ಪರಿಷತ್ ಸದಸ್ಯ ಸಂಕನೂರು ಪತ್ರಗಳನ್ನು ತನಿಖಾಧಿಕಾರಿಗಳು ಹೇಗೆ ಆಧಾರ ರಹಿತವಾಗಿದೆ ಎಂದು ತೀರ್ಮಾನಿಸಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗಾದರೆ ಸಂಪುಟ ಸಚಿವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಯಾವುದೇ ಬೆಲೆ ಇಲ್ಲವೇ? ಈ ದಾಖಲೆಗಳು ಪ್ರಕರಣಕ್ಕೆ ಸಂಬಂಧಿಸುವುದಿಲ್ಲವೇ? ಬಿಜೆಪಿ ಶಾಸಕರು ಹಾಗೂ ಸಚಿವರಿಗೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು …
Read More »ಬಿಜೆಪಿಗೆ ಯತ್ನಾಳ್ ಶಾಕ್: ಸಿಎಂ ಪದವಿಗೆ 2500 ಕೋಟಿ , ಪೇಚು ತಂದ ಗಂಭೀರ ಆರೋಪ
ಬೆಂಗಳೂರು: ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ವಿರುದ್ಧ ಮಾಡಿರುವ ಗಂಭೀರ ಆರೋಪ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕತ್ವಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಬೆಳವಣಿಗೆ ಪದ ರಾಜ್ಯ ಟಕದಲ್ಲಿ ಹಿಡಿತವಿಲ್ಲದ ನಾಯಕತ್ವವನ್ನು ಸಾಬೀತುಪಡಿಸುವ ಜತೆಯಲ್ಲೇ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಉಸ್ತುವಾರಿಯಿಂದ ಸಂಟನೆಯಲ್ಲಿ ಶಿಸ್ತು ದೂರಾಗಿ ಪದ ಕಾರ್ಯಕರ್ತರಿಗೂ ಇರುಸುಮುರಿಸು ಉಂಟು ಮಾಡಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಹೇಳಿಕೆಗಳಿಂದಲೇ ಸರ್ಕಾರಕ್ಕೆ ಮುಜುಗರ …
Read More »