ಹುಬ್ಬಳ್ಳಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಆಗಸ್ಟ್ 22ರ ಒಳಗೆ 2(ಎ) ಮೀಸಲಾತಿ ಕಲ್ಪಿಸಬೇಕು. ಇಲ್ಲದಿದ್ದರೆ ಆಗಸ್ಟ್ 23ರಂದು ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಪಂಚ ಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಎಚ್ಚರಿಸಿದರು. ಲಿಂಗಾಯತ ಪಂಚಮಸಾಲಿ ಸಮಾಜ ದಿಂದ ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಹಕ್ಕೊತ್ತಾಯ ರ‍್ಯಾಲಿ ಮತ್ತು ಧರಣಿಯಲ್ಲಿ ಅವರು ಮಾತನಾಡಿದರು. ‘ಮೀಸಲಾತಿ ಕಲ್ಪಿಸಿದರೆ ಮುಖ್ಯಮಂತ್ರಿಗೆ ಸನ್ಮಾನ ಮಾಡಲಾಗುವುದು. ಇಲ್ಲದಿದ್ದರೆ ಅವಮಾನ …
Read More »Yearly Archives: 2022
ರೈಲು ಡಿಕ್ಕಿ: ಬೆಳಗಾವಿಯಲ್ಲಿ ವೃದ್ಧ ಸಾವು
ಬೆಳಗಾವಿ: ಇಲ್ಲಿನ ಟಿಳಕವಾಡಿಯ ಮೊದಲನೇ ಗೇಟ್ ಬಳಿ ಶನಿವಾರ, ರೈಲು ಡಿಕ್ಕಿ ಹೊಡೆದು ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಳಕವಾಡಿಯ ಸೋಮವಾರಪೇಟೆಯ ನಿವಾಸಿ ಪ್ರಭಾಕರ ಮುಕುಂದ ಕಬ್ಬೆ (86) ಮೃತಪಟ್ಟವರು. ಪ್ರಭಾಕರ ಅವರು ಟಿಳಕವಾಡಿಯಲ್ಲಿರುವ ಮೊದಲನೇ ರೈಲ್ವೆ ಗೇಟ್ ದಾಟುತ್ತಿದ್ದರು. ಅದೇ ಕಾಲಕ್ಕೆ ರೈಲು ವೇಗವಾಗಿ ಬಂತು. ರೈಲಿನ ಶಬ್ದ ಅವರಿಗೆ ಕೇಳಸದ ಕಾರಣ ಹಳಿಗಳಿಂದ ಬೇಗ ಸರಿಯಲಿಲ್ಲ. ನಿಧಾನವಾಗಿ ಹಳಿ ದಾಟುವಷ್ಟರಲ್ಲಿ ರೈಲು ಬಂದು ಡಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ …
Read More »ಡಿಸೆಂಬರ್‌ನಲ್ಲೇ ವಿಧಾನಸಭೆ ಚುನಾವಣೆ: H.D.K.
ಬೀದರ್: ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ರಾಜ್ಯದಲ್ಲಿ ಡಿಸೆಂಬರ್‌ನಲ್ಲೇ ವಿಧಾನಸಭೆ ಚುನಾವಣೆ ನಡೆಯುವ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾಗಿ ಮೊದಲ ಹಂತದಲ್ಲಿ ಜೆಡಿಎಸ್ ಗೆಲ್ಲಲು ಸಾಧ್ಯವಿರುವ 134 ಕ್ಷೇತ್ರಗಳಲ್ಲಿ ಸಿದ್ಧತೆ ಆರಂಭಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಬೀದರ್ ಜಿಲ್ಲಾ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಯನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ ಅವರಿಗೆ ವಹಿಸಲಾಗಿದೆ. 10, 12 ದಿನಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ …
Read More »ಸೆ. 2ಕ್ಕೆ ಲಕ್ಕಿಮ್ಯಾನ್; ದೇವರಾದ ಪುನೀತ್ ರಾಜಕುಮಾರ್
ಬೆಂಗಳೂರು: ಪುನೀತ್ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’, ಅ. 28ಕ್ಕೆ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಈಗ ಪುನೀತ್ ಅಭಿನಯದ ಇನ್ನೊಂದು ಚಿತ್ರದ ಬಿಡುಗಡೆ ಬಹುತೇಕ ಪಕ್ಕಾ ಆದಂತಿದೆ. ಅದೇ ‘ಲಕ್ಕಿ ಮ್ಯಾನ್’. ಪ್ರಭುದೇವ ಸಹೋದರ ‘ಚಿತ್ರ’ ಖ್ಯಾತಿಯ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರವು ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲು ಹೇಳಲಾಗಿತ್ತು. ಮೂಲಗಳ ಪ್ರಕಾರ, ಸೆ. 02ರಂದು ‘ಲಕ್ಕಿ ಮ್ಯಾನ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ‘ಲಕ್ಕಿ ಮ್ಯಾನ್’, ತಮಿಳಿನ ‘ಓ …
Read More »ಐಟಿಆರ್ ಸಲ್ಲಿಕೆಗೆ ಇಂದು ಕೊನೇ ದಿನ; ರಿಟರ್ನ್ಸ್ ಫೈಲ್ ಮಾಡದಿದ್ದರೆ ಏನಾಗುತ್ತೆ ಗೊತ್ತಾ?
ನವದೆಹಲಿ: ನೀವಿನ್ನೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿಲ್ಲವೇ? ಇನ್ನು ನಿಮಗೆ ಉಳಿದಿರುವುದು ಇವತ್ತೂಂದೇ ದಿನ! 2021-22ರ ಹಣಕಾಸು ವರ್ಷದ ಐಟಿಆರ್ ಫೈಲಿಂಗ್‌ನ ಜು.31ರ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿರುವ ಕಾರಣ, ರಿಟರ್ನ್ಸ್ ಸಲ್ಲಿಕೆಗೆ ಭಾನುವಾರವೇ ಕಡೇ ದಿನವಾಗಿದೆ. ಒಂದು ವೇಳೆ ಭಾನುವಾರ ನಿಮಗೆ ರಿಟರ್ನ್ಸ್ ಸಲ್ಲಿಕೆ ಸಾಧ್ಯವಾಗದೇ ಇದ್ದರೆ ಏನು ಮಾಡಬೇಕು? ಹೆಚ್ಚುವರಿ ಶುಲ್ಕದೊಂದಿಗೆ ಸಲ್ಲಿಕೆ ಜು.31ರ ಡೆಡ್‌ಲೈನ್‌ನೊಳಗೆ ಸಲ್ಲಿಕೆ ಮಾಡಲು ಆಗದವರಿಗೆ ಇದೇ ವರ್ಷದ …
Read More »ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ; ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
2021-22 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸ್ ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ, ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪಿಯುಸಿ ವಿದ್ಯಾರ್ಥಿಗಳಿಗೆ 20,000 ರೂ., ಪದವಿ ವಿದ್ಯಾರ್ಥಿಗಳಿಗೆ 25,000 ರೂ., ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 30,000 ರೂ. …
Read More »ದಿಢೀರ್ ಪ್ರವಾಹ: ಮಳೆಗೆ ಕೊಚ್ಚಿಹೋದ ಮನೆ, ವಾಹನಗಳು; ಏಳು ಸಾವು
ಅಬುಧಾಬಿ: ಈವರೆಗಿನ ನಮ್ಮ ಜೀವಿ ತಾವಧಿಯಲ್ಲಿ ಇಷ್ಟೊಂದು ಅಗಾಧ ಮಳೆ ಯನ್ನು ನೋಡಿರಲೇ ಇಲ್ಲ….. ಇದು ಶಾರ್ಜಾದ ಕಲ್ಬಾ ಎಂಬ ಪ್ರಾಂತ್ಯದ ನಿವಾಸಿಗಳ ಮಾತು. ಯುಎಇ ಸ್ಥಳೀಯ ಕಾಲಮಾನ, ಶುಕ್ರವಾರ ಬೆಳಗಿನ ಜಾವ ಸುಮಾರು 6 ಗಂಟೆಗೆ ಸುರಿದ ಅಗಾಧ ಮಳೆಯಿಂದಾಗಿ, ಅನೇಕ ನಗರಗಳಲ್ಲಿ ಪ್ರವಾಹದ ಸ್ಥಿತಿ ಏರ್ಪಟ್ಟು ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳು ಜಖಂ ಆಗಿರುವುದು ಮುಂತಾದ ತೊಂದರೆಗಳಾಗಿವೆ. ಅದರಲ್ಲೂ, ಹಿಂದೆಂದೂ ಕಂಡಿರದ ದಿಢೀರ್ ಪ್ರವಾಹಕ್ಕೆ ಅಬುಧಾಬಿ ತುತ್ತಾ ಗಿದೆ. ಭಾರೀ …
Read More »ರಾತ್ರಿ ನಾಯಿಗಳು ಬೊಗಳುವ ಸದ್ದು ಕೇಳಿ ಮನೆಯಿಂದ ಹೊರಬಂದ ವಿಜಯಪುರ ನಿವಾಸಿಗಳಿಗೆ ಕಾದಿತ್ತು ಶಾಕ್!
ವಿಜಯಪುರ: ಕಾಳರಾತ್ರಿ, ನಿರವ ಮೌನ, ನಾಯಿಗಳ ಬೊಗಳುವಿಕೆಯ ಸದ್ದು, ಗಾಬರಿಗೊಂಡು ಮನೆಯಿಂದ ಹೊರಬಂದ ನಿವಾಸಿಗಳಿಗೆ ಕಂಡಿದ್ದು ದೊಣ್ಣೆ ಹಿಡಿದುಕೊಂಡು, ಮುಸುಕು ಧರಿಸಿ ಹೊರಟಿದ್ದ ದಾಂಡಿಗರ ಪಡೆ….! ಅಬ್ಬಾ ಏನಿದು? ಯಾರು ಈ ಮುಸುಕುಧಾರಿಗಳು? ಎಲ್ಲಿಗೆ ಹೊರಟಿದ್ದಾರೆ? ಎಂದು ಅರಿಯದ ಜನ ಆತಂಕದಿಂದಲೇ ಮನೆಯ ಬಾಗಿಲು, ಕಿಟಕಿ ಹಾಕಿಕೊಂಡು ಬೆಚ್ಚಗೆ ಮಲಗಿಕೊಂಡಿದ್ದಾರೆ. ಆದರೆ, ರಾತ್ರಿ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು ನಾಯಿಗಳ ಜೋರಾದ ಬೊಗಳುವಿಕೆಯ ಸದ್ದು ಕೇಳಿ ಆ ಬಡವಾಣೆಗೆ ಕಾಲಿಟ್ಟರೆ ಇದ್ದಕ್ಕಿದ್ದಂತೆ ಎಲ್ಲರೂ ಮಂಗಮಾಯ. …
Read More »ಸತೀಶ ಜಾರಕಿಹೊಳಿ ಅಭಿಮಾನಿ ಯಮಕನಮರಡಿಯಿಂದ ಸಿದ್ದರಾಮಯ್ಯ ಹುಟ್ಟು ಹಬ್ಬಕ್ಕೆ ಬೈಕ್ ಮೂಲಕ ಪ್ರಯಾಣ
ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಭಾಗಿಯಾಗಲು ಯಮಕನಮರಡಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಮಾನಿ ಓರ್ವ ಬೈಕ್ ಮೂಲಕ ಪ್ರಯಾಣ ಆರಂಭಿಸಿದ್ದಾರೆ. ಹೌದು ಯಮಕನಮರಡಿಯ ಕಾಂಗ್ರೆಸ್ ಕಾರ್ಯಕರ್ತ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿ ಅವರ ಅಪ್ಪಟ ಅಭಿಮಾನಿ ಆಗಿರುವ ಅರುಣ ರಾವಳ ಯಮಕನಮರಡಿಯಿಂದ ಬೈಕ್ ಮೂಲಕ ದಾವಣಗೆರೆಗೆ ಪ್ರಯಾಣ ಬೆಳೆಸಿದ್ದಾನೆ. ಕಡೋಲಿ ಗ್ರಾ.ಪಂ. ಮುಂದೆ ಆಗಮಿಸಿದ …
Read More »ದೇಶದಲ್ಲಿ ಸಂಪೂರ್ಣವಾಗಿ ಹಿಂದೂ ರಾಷ್ಟ್ರದ ವಿರುದ್ಧ ಇಸ್ಲಾಮೀಕರಣ ಮಾಡುವ ಹುನ್ನಾರ: ಲಕ್ಷ್ಮಣ ಸವದಿ
ದೇಶದಲ್ಲಿ ಸಂಪೂರ್ಣವಾಗಿ ಹಿಂದೂ ರಾಷ್ಟ್ರದ ವಿರುದ್ಧವಾಗಿ ಇಸ್ಲಾಮೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಹೀಗಾಗಿ ಸರಣಿ ಕೊಲೆಗಳು ನಡೆಯುತ್ತಿವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗಂಭೀರ ಆರೋಪ ಮಾಡಿದ್ದಾರೆ. ಅಥಣಿ ತಾಲೂಕಿನ ರಡ್ಡೆರಹಟ್ಟಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂಎಲ್‍ಸಿ ಲಕ್ಷ್ಮಣ ಸವದಿ ಬಿಜೆಪಿ ಕಾರ್ಯಕರ್ತರ ಕೊಲೆ ಖಂಡನೀಯವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಯಾರೇ ಆಗಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾದರೆ ಸರ್ಕಾರ ಸಹಿಸಲ್ಲ ಉಗ್ರ ಕಾನೂನು ತಂದು ಶಿಕ್ಷಿಸಲಾಗುವುದು …
Read More »