ದಿಂಡಿಗಲ್(ತಮಿಳುನಾಡು): ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದಿಂಡಿಗಲ್ನ ಪುಲ್ಲವೇಲಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಸ್ಥಳೀಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪಾಯ ಲೆಕ್ಕಿಸದೆ ಫೋಟೋ, ವಿಡಿಯೋಗೆ ಪೋಸ್ ಕೊಡಲು ಮುಂದಾದ ಯುವಕನೋರ್ವ ಆಯತಪ್ಪಿ ಪ್ರಪಾತಕ್ಕೆ ಬಿದ್ದು ನೀರು ಪಾಲಾಗಿದ್ದಾನೆ. ಪರಮಕುಡಿಯ ಅಜಯ್ ಪಾಂಡಿಯನ್ ನಿನ್ನೆ ತನ್ನ ಸ್ನೇಹಿತನೊಂದಿಗೆ ಪುಲ್ಲವೇಲಿ ಜಲಪಾತ ನೋಡಲು ಬಂದಿದ್ದ. ಜಲಧಾರೆಯ ರುದ್ರ ರಮಣೀಯ ಸೌಂದರ್ಯ ನೋಡುತ್ತಾ ಮೈಮರೆತ ಆತ ಜಲಪಾತ …
Read More »Yearly Archives: 2022
ಲಿಂಗಾಯತರ ಪವಿತ್ರ ಕ್ಷೇತ್ರ ಉಳಿವಿಗೆ ಬ್ರಹತ್ 4 ದಿನಗಳ ಪಾದಯಾತ್ರೆ
ಭೂಮಿಯ ಮೇಲಿನ ಚರಾಚರ ಜಗತ್ತಿನ ಬದುಕಿಗೆ ಅತ್ಯಂತ ಅವಶ್ಯಕವಿರುವ ನೀರು, ವಾಯು ಸುರಕ್ಷಿತವಿರಬೇಕು. ಅವುಗಳಿಲ್ಲದಿದ್ದರೆ ನಮ್ಮ ಬದುಕಿಲ್ಲ. ವನ್ಯಜೀವಿ, ಪರಿಸರದ ಉಳಿವು, ಜಗತ್ತಿನ ಉಳಿವು ಎಂದು ಅಂಕಲಗಿ ಮಠದ ಸಿದ್ದರಾಮ ಶ್ರೀಗಳು ಹೇಳಿದರು. ಗುರುವಾರ ಶ್ರೀ ಮಠದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಅಂಕಲಗಿ ಮಠದ ಸಿದ್ದರಾಮ ಶ್ರೀಗಳು ಮಾತನಾಡಿದರು. ಗುಡ್ಡ, ಬೆಟ್ಟಗಳಲ್ಲಿಯ ಮಣ್ಣು,ಕಲ್ಲು ಅಗೆಯುವದು, ವನ್ಯಪ್ರಾಣಿಗಳ ಮೇಲೆ ಹಿಂಸೆ ಸೇರಿದಂತೆ ಇತರ ನಮ್ಮ ಕ್ರೂರ …
Read More »ಚೀಲ ಹರಿದು ರಸ್ತೆ ಪಾಲಾಗುತ್ತಿದ್ದ ಅಕ್ಕಿ ತಡೆದ ಸಂತೋಷ ಧರೇಕರ್
ಬೆಳಗಾವಿ ತಾಲೂಕಿನ ದೇಸೂರು ರೈಲು ನಿಲ್ದಾಣದಿಂದ ಗಣೇಶಪುರದ ಗೋಡೌನ್ ಕಡೆಗೆ ಅಕ್ಕಿಯನ್ನು ತುಂಬಿಕೊಂಡು ಒಂದು ಲಾರಿ ಹೋಗುತ್ತಿತ್ತು. ಈ ವೇಳೆ ಚೀಲ ಕಟ್ ಆಗಿ ದಾರಿಯುದ್ದಕ್ಕೂ ಅಕ್ಕಿ ಬೀಳುತ್ತಾ ಹೋಗುತ್ತಿತ್ತು. ಇದನ್ನು ಗಮನಿಸಿದ ಸಮಾಜಸೇವಕ ಸಂತೋಷ ಧರೇಕರ್ ವ್ಯರ್ಥವಾಗುತ್ತಿದ್ದ ಅಕ್ಕಿಯನ್ನು ತಡೆದಿದ್ದಾರೆ. ಹೌದು ಒಂದು ಅಗಳಿನ ಅನ್ನದ ಬೆಲೆ ಅದನ್ನು ಕಷ್ಟಪಟ್ಟು ಬೆಳೆದ ರೈತನಿಗೆ ಗೊತ್ತು. ಆದರೆ ಈ ರೀತಿ ಅಕ್ಕಿಯು ದಾರಿಯುದ್ದಕ್ಕೂ ಬೀಳುತ್ತಿರುವುದನ್ನು ಗಮನಿಸಿದ ಸಂತೋಷ ಧರೇಕರ್ ಈ …
Read More »ತಾಂತ್ರಿಕ ತೊಂದರೆಯಿoದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಪಲ್ಟಿ
ತಾಂತ್ರಿಕ ತೊಂದರೆಯಿoದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಪಲ್ಟಿಯಾದ ಘಟನೆ ಅಥಣಿ ತಾಲೂಕಿನ ಕೋಕಟನೂರು ಹೊರವಲಯದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರು ಹೊರವಲಯದಲ್ಲಿ ಒಟ್ಟು ೬೪ ಪ್ರಯಾಣಿಕರಿದ್ದ ಅಥಣಿ ಸಾರಿಗೆ ಘಟಕದ ಬಸ್ ತಾಂತ್ರಿಕ ತೊಂದರೆಯಿoದ ರಸ್ತೆ ಪಕ್ಕಕ್ಕೆ ಬಂದು ಪಲ್ಟಿಯಾಗಿದೆ. ಸ್ಥಳೀಯರು ಕೂಡಲೇ ಪ್ರಯಾಣಿಕರನ್ನು ಬಸ್‌ನಿಂದ ಹೊರತೆಗೆದು ರಕ್ಷಿಸಿದ್ದಾರೆ. ಈ ಬಸ್ಸು ಸಾವಳಗಿಯಿಂದ ಅಥಣಿಗೆ ಹೊರಟು ಎನ್ನಲಾಗಿದೆ. ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಇಬ್ಬರು ಮಹಿಳೆಯರು ಸೇರಿ …
Read More »ಬೆಳಗಾವಿ ನಗರದಲ್ಲಿ ಭಾರಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ
ಬೆಳಗಾವಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಬಳಿಕ ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದು ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 11 ಗಂಟೆವರೆಗೆ ಯಾವುದೇ ಭಾರಿ ವಾಹನಗಳು ಪ್ರವೇಶ ಮಾಡದಂತೆ ಕ್ರಮ ತೆಗೆದುಕೊಂಡಿದ್ದಾರೆ. ಹೌದು ಕ್ಯಾಂಪ್ ಮತ್ತು ಪೋರ್ಟ ರಸ್ತೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಭಾರಿ ವಾಹನಗಳಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಿಂದ ಬೆಳಗಾವಿ ನಗರ ಪೊಲೀಸರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಗುರುವಾರ ತಮ್ಮ ಕಚೇರಿಯಲ್ಲಿ ಡಿಸಿಪಿ ಪಿ.ವ್ಹಿ.ಸ್ನೇಹಾ ಅವರು ಕ್ಯಾಂಪ್ ಪ್ರದೇಶದ …
Read More »ರಸ್ತೆ ಬದಿ ಕಟ್ಟಡ ನಿರ್ಮಾಣಕ್ಕೆ ಅಂಕುಶ: ಸಚಿವ ಸಿ.ಸಿ.ಪಾಟೀಲ್
ಗದಗ: ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನ ಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಲೋಕೋಪಯೋಗಿ ಇಲಾಖೆ ಯಿಂದ ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟನೆ ನೀಡಿರುವ ಅವರು, ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ವಿವರ ಗಳನ್ನೂ ನೀಡಿದ್ದಾರೆ. ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯಭಾಗದಿಂದ 40 ಮೀ. ಅಂತರದವರೆಗೆ ಯಾವುದೇ ಕಟ್ಟಡ ಅಥವಾ …
Read More »ಫಾಝಿಲ್ ಕೊಲೆ ಪ್ರಕರಣ: ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ
ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮಹಮ್ಮದ್ ಫಾಝಿಲ್ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯವು 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳಾದ ಸುಹಾಸ್ ಶೆಟ್ಟಿ, ಮೋಹನ್, ಅಭಿಷೇಕ್, ಶ್ರೀನಿವಾಸ್, ದೀಕ್ಷಿತ್ ಮತ್ತು ಗಿರಿಧರ್‌ನನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮೊದಲು ಬಂಧಿಸಲ್ಪಟ್ಟ ಕಾರು ಮಾಲಕ ಅಜಿತ್ ಕ್ರಾಸ್ತಾನನ್ನು ಈ …
Read More »ತ್ರಿವರ್ಣ ಧ್ವಜ ವೈಭವ; ಕೆಂಪುಕೋಟೆಯಿಂದ ಸಂಸತ್ ಭವನಕ್ಕೆ ಸಂಸದರ ಬೈಕ್ ರ‍್ಯಾಲಿ
ನವದೆಹಲಿ: ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ಅಭಿಯಾನಗಳನ್ನು ಕೈಗೊಂಡಿರುವಂತೆಯೇ ಎಲ್ಲೆಲ್ಲೂ “ತ್ರಿವರ್ಣ ಧ್ವಜ’ಗಳು ಕಂಗೊಳಿಸತೊಡಗಿವೆ. ರಾಜಕೀಯ ನಾಯಕರಾದಿಯಾಗಿ ಎಲ್ಲರ ಪ್ರೊಫೈಲ್ ಪಿಕ್ಟರ್‌ಗಳಲ್ಲಿ ತಿರಂಗಾ ರಾರಾಜಿಸುತ್ತಿವೆ. ಮಂಗಳವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ತಿರಂಗಾ ಉತ್ಸವ’ಕ್ಕೆ ಚಾಲನೆ ನೀಡಿದ್ದಾರೆ. ಸದ್ಯದಲ್ಲೇ ಮನೆ -ಮನೆಗಳಲ್ಲೂ ಧ್ವಜ ಹಾರಾಟ ನಡೆಯಲಿದೆ. ಇದರ ನಡುವೆಯೇ, ದೆಹಲಿಯಲ್ಲಿ ಬುಧವಾರ ಸಂಸದರು ತಿರಂಗಾ ಬೈಕ್ ರ‍್ಯಾಲಿ ನಡೆಸಿದ್ದಾರೆ. ಕೆಂಪುಕೋಟೆಯಿಂದ ಹೊರಟು ಸಂಸತ್ ಭವನದವರೆಗೆ …
Read More »ಬಿಜೆಪಿಗೆ ಬಿಸಿ ತಂದ ಸಿದ್ದರಾಮೋತ್ಸವದ ಯಶಸ್ಸು
ಬೆಂಗಳೂರು: ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಾ ಹೈರಾಣಾಗಿದ್ದ ರಾಜ್ಯ ಸರಕಾರಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸು ಈಗ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಷ ಹಾಗೂ ಹೈಕಮಾಂಡ್ ನ ವಿಮರ್ಶೆಯ ನಿಕಶಕ್ಕೆ ಒಳಗಾಗುವ ಸಾಧ್ಯತೆ ನಿಚ್ಚಳವಾಗಿದೆ. ಬೊಮ್ಮಾಯಿ ಅವರ ಕಾರ್ಯಶೈಲಿ, ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಂಘಪರಿವಾರದ ಮುಖಂಡರು ಇತ್ತೀಚೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಸೃಷ್ಟಿಯಾದ ಸೈದ್ಧಾಂತಿಕ …
Read More »ಭೂ ಹಗರಣ ಪ್ರಕರಣ: ಸಂಜಯ್ ರಾವತ್ ಇ.ಡಿ ಕಸ್ಟಡಿ ಆಗಸ್ಟ್ 8ರವರೆಗೆ ವಿಸ್ತರಣೆ
ಮುಂಬೈ: ಪಟ್ರಾ ಚಾವ್ಲ್ ಭೂ ಪುನರ್ ಅಭಿವೃದ್ಧಿ ಪ್ರಕರಣ ಮತ್ತು ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಶಿವಸೇನಾ ಹಿರಿಯ ಮುಖಂಡ ಸಂಜಯ್ ರಾವತ್ ಬಂಧನದ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದೆ. ಇಂದು ರಾವತ್ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನಂತರ ಸಂಜಯ್ ರಾವತ್ ಅವರನ್ನು ಆಗಸ್ಟ್ 8ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ ಎಂದು ವರದಿ ತಿಳಿಸಿದೆ. ಭೂ ಹಗರಣಕ್ಕೆ …
Read More »