Breaking News

Yearly Archives: 2022

ಅರಣ್ಯ ಇಲಾಖೆ ಕಾರ್ಯಾಚರಣೆ : ಉಡಗಳನ್ನು ಬೇಟೆಯಾಡಿದ ಆರೋಪಿ ಸೆರೆ

ಖಾನಾಪುರ ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ತಾವರಗಟ್ಟಿ ಗ್ರಾಮದ ಸಮೀಪ ಉಡಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಉಡದ ಸಮೇತ ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗೋಲಿಹಳ್ಳಿ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗೋದೊಳ್ಳಿ ಉಪವಲಯ ಅರಣ್ಯ ಅಧಿಕಾರಿಯ ಕಾರ್ಯ ಕ್ಷೇತ್ರದ ತಾವರಗಟ್ಟಿ ಗ್ರಾಮದ ಸಮೀಪದಲ್ಲಿ ಅಕ್ರಮವಾಗಿ ಉಡಾ ಬೇಟೆಯಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ತಾವರಗಟ್ಟಿ ಗ್ರಾಮದ ಆರೋಪಿ ಮೈಕಲ್ ಮರೆಪ್ಪ ಅಂಬೇವಾಡ್ಕರ್(34) …

Read More »

ದರ್ಶನ್ ಸಿನಿ ಜರ್ನಿಗೆ 25 ವರ್ಷ: ಪಾರ್ಟಿಯಲ್ಲಿ ಮಿಂಚಿದ ತಾರೆಯರು!

ಆಗಸ್ಟ್ 11 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಬದುಕಿನಲ್ಲಿ ಮರೆಯಲಾರದ ದಿನ. ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ ‘ಮಹಾಭಾರತ’ ರಿಲೀಸ್ ಆಗಿದ್ದ ದಿನ. 1997 ಆಗಸ್ಟ್ 11ರಂದು ಎಸ್‌. ನಾರಾಯಣ್ ನಿರ್ದೇಶನದ ‘ಮಹಾಭಾರತ’ ಚಿತ್ರ ರಿಲೀಸ್ ಆಗಿತ್ತು. ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ.   ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ ಚಿತ್ರರಂಗದಲ್ಲಿ ದರ್ಶನ್ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಮೊದಲಿಗೆ …

Read More »

ಅಂಗಾಂಗ ದಾನಕ್ಕೆ ನಾನು ಹೆಸರು ನೋಂದಾಯಿಸಿದ್ದೇನೆ, ನೀವು ಕೂಡ ನೋಂದಾಯಿಸಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ವಿಶ್ವ ಅಂಗಾಂಗ ದಾನ ದಿನಾಚರಣೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ ಕುಟುಂಬಸ್ಥರನ್ನು ಮುಖ್ಯಮಂತ್ರಿಯವರು ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸತ್ತ ಮೇಲೆ ನಮ್ಮ ದೇಹದಾನದಿಂದ …

Read More »

ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್

ಆಧಾರ್​ ಕಾರ್ಡ್​ ಇಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶಗಳನ್ನು ಪಡೆಯುವುದು, ಬ್ಯಾಂಕ್​ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅವಶ್ಯಕ. ಆಧಾರ್​ ಕಾರ್ಡ್​ ಬಯೋಮೆಟ್ರಿಕ್ಸ್​ನ ದೃಢೀಕೃತ ಮಾಹಿತಿ ಒಳಗೊಂಡಿರುವ ಜೊತೆಗೆ ಪ್ರಮುಖ ವೈಯಕ್ತಿಕ ಮಾಹಿತಿಯನ್ನು ದಾಖಲಿಸಲಾಗಿದೆ.   ಯುಐಡಿಎಐ ತನ್ನ ಆನ್​ಲೈನ್​ ಪೋರ್ಟಲ್​ ಮೂಲಕ ಈಗಾಗಲೇ ನಮೂದಿಸಿರುವ ತಮ್ಮ ವೈಯಕ್ತಿಕ ಮಾಹಿತಿಯನ್ನು ಆನ್​ಲೈನ್​ನಲ್ಲಿ ನವೀಕರಿಸಲು ಸಹಾಯ ಮಾಡುತ್ತದೆ. ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು …

Read More »

ಬಿಜೆಪಿ ಶಾಸಕರಿಂದ ‘ರಾಷ್ಟ್ರಧ್ವಜ’ಕ್ಕೆ ಅಪಮಾನ: ‘ತಿರಂಗ’ದ ಹೊದ್ದ ಆನೆ ಮೇಲೆ ಮಗನನ್ನು ಕೂರಿಸಿ ಸವಾರಿ

ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟೆಯಲ್ಲಿ ಹಮ್ಮಿಕೊಂಡಿದ್ದಂತ ಕಾರ್ಯಕ್ರಮದಲ್ಲಿ, ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗರಿಸಲಾಗಿತ್ತು. ಹೀಗೆ ಸಿಂಗಾರಗೊಂಡಿದ್ದಂತ ತಿರಂಗ ಹೊದ್ದಿದ್ದಂತ ಆನೆಯ ಮೇಲೆಯೇ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ( MLA A S Patil Nadahalli ) ತಮ್ಮ ಮಗನನ್ನು ಕೂರಿಸಿ, ಮೆರವಣಿಗೆ ಮಾಡಿ, ರಾಷ್ಟ್ರಧ್ವಜಕ್ಕೆ ( …

Read More »

ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕುಯ್ದು ಕೊಂದ ಗಂಡ:

ಹಾಸನ: ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಗಂಡ ಬರ್ಬರವಾಗಿ ಹತ್ಯೆ ಮಾಡಿದ ಭಯಾನಕ ಘಟನೆ ಹೊಳೆನರಸೀಪುರದಲ್ಲಿ ಶನಿವಾರ ಸಂಭವಿಸಿದೆ. ಪತ್ನಿ ಚೈತ್ರಾಳನ್ನು ಕೊಂದದ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್. ಅಮಾನುಷವಾಗಿ ಪತ್ನಿಯ ಕತ್ತು ಪರಾರಿಯಾಗಲು ಯತ್ನಿಸಿದ್ದ ಶಿವಕುಮಾರ್​ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಹೊನಮಾರನಹಳ್ಳಿ ಗ್ರಾಮದ ಚೈತ್ರಾಳನ್ನು 7 ವರ್ಷದ ಹಿಂದೆ ಶಿವಕುಮಾರ್​ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡೂ ಮಕ್ಕಳು ಹೆಣ್ಣು ಎಂಬ ಕಾರಣಕ್ಕೆ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ. …

Read More »

ವಿವಾದದ ಹೇಳಿಕೆಯೇ ʼಲಾಲ್‌ ಸಿಂಗ್‌ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್‌ ಆದ್ರು ಬೇಬೋ

ಮುಂಬಯಿ: ಮಿಸ್ಟರ್‌ ಪರ್ಫೆಕ್ಟ್‌ ಆಮಿರ್‌ ಖಾನ್‌ ನಟನೆಯ ಬಹು ನಿರೀಕ್ಷಿತ ʼಲಾಲ್‌ ಸಿಂಗ್‌ ಚಡ್ಡಾʼ ಸಿನಿಮಾ ರಿಲೀಸ್‌ ಆಗಿ ದೊಡ್ಡ ಮಟ್ಟದ ಸದ್ದು ಮಾಡುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಸಿನಿಮಾದ ಮೊದಲ ದಿನದ ಗಳಿಕೆಯಿಂದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿಲ್ಲ ಎನ್ನುವುದು ಸಾಬೀತಾಗಿದೆ.   1994 ರಲ್ಲಿ ಬಂದ ʼಫಾರೆಸ್ಟ್‌ ಗಂಪ್‌ʼ ರಿಮೇಕ್‌ ಚಿತ್ರವಾಗಿರುವ ʼಲಾಲ್‌ ಸಿಂಗ್‌ ಚಡ್ಡಾʼದಲ್ಲಿ ಬಹು ಸಮಯದ ಬಳಿಕ ಆಮಿರ್‌ ಖಾನ್‌ ಹಾಗೂ ಕರೀನಾ …

Read More »

ಸಣ್ಣ ಖರ್ಗೆಯವರೇ, ನಾಲಿಗೆ ಮೇಲೆ ಹಿಡಿತವಿರಲಿ: ಸಚಿವ ಶ್ರೀರಾಮುಲು ಎಚ್ಚರಿಕೆ

ಬಳ್ಳಾರಿ: ಮಹಿಳೆಯರ ಬಗ್ಗೆ ಮಾತನಾಡುವಾಗ ಸಣ್ಣ ಖರ್ಗೆಯವರಿಗೆ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದರು. ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಹರ್ ಘರ್ ತ್ರಿವರ್ಣಾ ನಿಮಿತ್ತ 150 ಅಡಿ ಎತ್ತರದ ಧ್ವಜಸ್ತಂಭಕ್ಕೆ ಧ್ವಜಾರೋಹ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.   ತಂದೆ ಮಲ್ಲಿಕಾರ್ಜುನ ಖರ್ಗೆಯವರಂತೆ ಸಣ್ಣ ಖರ್ಗೆ ಪ್ರಿಯಾಂಕ್ ಖರ್ಗೆಯವರು ಸಹ ಸಂಸ್ಕಾರವಂತರು ಅಂದುಕೊಂಡು ಸದನದಲ್ಲಿ ಮಾತನಾಡುವಾಗ ಸಣ್ಣ ಖರ್ಗೆ ಎಂದು ಉಲ್ಲೇಖ ಮಾಡುತ್ತಿದ್ದೆ. …

Read More »

ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ 75ನೆಯ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ

ಗೋಕಾಕ: ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ತಮ್ಮ ಸುಪುತ್ರ ರಾದ ಚಿ, ಸೂರ್ಯ ಶ್ರೇಷ್ಠ ಅವರ ಜನನ ದ ನಂತರ ಪ್ರತಿ ಶನಿವಾರ ಗೋಕಾಕ, ಅರಭಾವಿ, ಯರಗಟ್ಟಿ, ಸವದತ್ತಿ ಸೇರಿದಂತೆ ವಿವಿಧ ಹಳ್ಳಿ ಗಳಲ್ಲಿ ಪ್ರತಿ ಶನಿವಾರ ಅನ್ನ ಸಂತರ್ಪಣೆ ಮಾಡುವ ಒಂದು ಕಾರ್ಯ ಕ್ರಮವನ್ನು ಮಾಡಿ ಕೊಂಡು ಬಂದಿದ್ದಾರೆ. ಇಂದು ಆ ಒಂದು ಅನ್ನ ಸಂತರ್ಪಣೆ 75ನೆಯ ವಾರಕ್ಕೆ ತಲುಪಿದೆ, ಇನ್ನೊಂದು ವಿಶೇಷ ಎಂದರೆ ಸ್ವತಂತ್ರ ನಮ್ಮ …

Read More »

ಮನೆ ಮನೆ ಗಳಿಗೆ ಧ್ವಜ ವಿತರಿಸಿ ಜನರ ಪ್ರೀತಿಯ ಪಾತ್ರಕ್ಕೆ ಮೇರೆ ಆಗಿದ್ದಾರೆ ಬಸವರಾಜ ಸಾಯನ್ನವರ

ಗೋಕಾಕ: ನಾಡಿನಾದ್ಯಂತ ಹರ ಘರ ತಿರಂಗಾ ಅಭಿಯಾನ ಶುರುವಾಗಿದೆ ಗೋಕಾಕ ನಗರದಲ್ಲಿ ಕೂಡ ಮಹಾ ಲಿಂಗೇಶ್ವರ ನಗರದಲ್ಲಿ ವಾರ್ಡ್ ನಂಬರ್ 19ಹಾಗೂ 20ನೆಯ ವಾರ್ಡಿನಲ್ಲಿ ಧ್ವಜ ವಿತರಣೆ ಕಾರ್ಯಕ್ರಮ ಮಾಡಲಾಯಿತು. ಏ ಪೀ ಎಂ ಸಿ ನಿರ್ದೇಶಕರಾದ ಬಸವರಾಜ್ ಸಾಯಿನ್ನವರ ಮನೆ ಮನೆ ಗಳಿಗೆ ಧ್ವಜ ವಿತರಣೆ ಮಾಡಿದರು ಮನೆ ಮನೆ ಗಳಿಗೆ. ಅಗಸ್ಟ್ ಹದಿಮೂರು ರಿಂದ ಹದಿನೈದು ದಿನಾಂಕದ ವರೆಗೆ ಧ್ವಜ ಹಾರಿಸುವ ಕಾರ್ಯಕ್ರಮ ಮಾಡಲಾಗಿದೆ   A …

Read More »