ಬೆಂಗಳೂರು /ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದಿಡುವ ‘ಜನಸ್ಪಂದನ’ ಸಮಾವೇಶಕ್ಕೆ ದೊಡ್ಡಬಳ್ಳಾಪುರದಲ್ಲಿ ವೇದಿಕೆ ಸಜ್ಜಾಗಿದೆ. 2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಆಶಯದಿಂದ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ‘ಜನೋತ್ಸವ’ದ ಹೆಸರಿನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮ ಮೂರು ಬಾರಿ ಮುಂದೂಡಿಕೆಯಾಗಿತ್ತು. ಇದೀಗ ‘ಜನಸ್ಪಂದನ’ದ ಹೆಸರಿನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಜನ ಭಾಗವಹಿಸುವ …
Read More »Yearly Archives: 2022
ವಿವಿಧ ಆರೋಪಗಳನ್ನು ಹೊತ್ತಿರುವ 33 ಕ್ಷೇತ್ರ ಶಿಕ್ಷಣಾಧಿ ಕಾರಿಗಳನ್ನು ಸರ್ಕಾರ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವರ್ಗಾಯಿಸಿದೆ.
ಬೆಂಗಳೂರು: ಲೋಕಾಯುಕ್ತ, ಇಲಾಖಾ ವಿಚಾರಣೆ ಸೇರಿದಂತೆ ವಿವಿಧ ಆರೋಪಗಳನ್ನು ಹೊತ್ತಿರುವ 33 ಕ್ಷೇತ್ರ ಶಿಕ್ಷಣಾಧಿ ಕಾರಿಗಳನ್ನು ಸರ್ಕಾರ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವರ್ಗಾಯಿಸಿದೆ. ಜತೆಗೆ ನಾಲ್ವರು ಶಿಕ್ಷಣಾಧಿ ಕಾರಿಗಳನ್ನೂ ವಿವಿಧ ಹುದ್ದೆ ಗಳಿಗೆ ವರ್ಗಾಯಿಸಲಾಗಿದೆ. ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪಗಳು ಕೇಳಿಬಂದರೆ, ಅವರ ವಿರುದ್ಧ ತನಿಖೆ, ವಿಚಾರಣೆ ನಡೆಯುತ್ತಿದ್ದರೆ. ಅಂಥವರನ್ನು ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವರ್ಗಾಯಿಸಬೇಕು ಎಂಬ ನಿಯಮದ ಅನ್ವಯ ಈ ವರ್ಗಾ ವಣೆ ಮಾಡಲಾಗಿದೆ ಎಂದು …
Read More »ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದು: ಲೋಕಾಯುಕ್ತಕ್ಕೆ ಬಲ
ಬೆಂಗಳೂರು: ಹೈಕೋರ್ಟ್ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿರುವ ರಾಜ್ಯ ಸರ್ಕಾರ, ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹಿಂದೆ ನೀಡಿದ್ದ ಅಧಿಕಾರಗಳನ್ನು ಮರುಸ್ಥಾಪಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಪ್ರಕರಣಗಳು, ಬಾಕಿ ಇರುವ ವಿಚಾರಣೆಗಳು, ಶಿಸ್ತುಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳು ಮತ್ತು ಖಾಸಗಿ ದೂರುಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. 2016ರಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು, ಭ್ರಷ್ಟಾಚಾರ …
Read More »ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ
ಶಿವಮೊಗ್ಗ: ಇಲ್ಲಿನ ಹಿಂದೂ ಮಹಾಸಭಾದಿಂದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವದ ವೇಳೆ ಶುಕ್ರವಾರ ಕೆಲವರು ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ವೀರ ಸಾವರ್ಕರ್, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಜೊತೆಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಇತ್ತೀಚೆಗೆ ಕೊಲೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಹಾಗೂ ನಾಥೂರಾಮ್ ಗೋಡ್ಸೆಯ ಭಾವಚಿತ್ರಗಳನ್ನು …
Read More »ಕರ್ನಾಟಕ ಸಂಪುಟ: ಸಿಎಂ ಬಸವರಾಜ ಬೊಮ್ಮಾಯಿಗೆ 8 ಖಾತೆಗಳ ಜವಾಬ್ದಾರಿ ಒತ್ತಡ!
ಬೆಂಗಳೂರು, ಸೆಪ್ಟೆಂಬರ್, 09: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸಂಕಟಕ್ಕೆ ಮುಕ್ತಿ ಯಾವಾಗ ಅನ್ನೋ ಪ್ರಶ್ನೆ ಮೂಡಿದೆ. ಬಸವರಾಜ ಬೊಮ್ಮಾಯಿ ಹೆಗಲ ಮೇಲೆ ಮತ್ತಷ್ಟು ಹೊರೆ ಹೆಚ್ಚಾಗುತ್ತಿದೆ. ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆಯಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಖಾತೆ ಸೇರಿದಂತೆ ಉಮೇಶ್ ಕತ್ತಿ ಸಾವಿನಿಂದ ಅರಣ್ಯ ಖಾತೆಯ ಜವಾಬ್ದಾರಿಯು ಸಿಎಂ ಲಭಿಸಿದೆ. ಬಸವರಾಜ ಬೊಮ್ಮಾಯಿ ಪ್ರಸ್ತುತ 8 ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಹಣಕಾಸು, ಬೆಂಗಳೂರು ನಗರಾಭಿವೃದ್ದಿ, ಗುಪ್ತಚರ, …
Read More »ಉಮೇಶ್ ಕತ್ತಿ ಜೀವನದ ಕುರಿತು ಪುಸ್ತಕ ಹೊರತರಬೇಕು: ಅರುಣ್ ಸಿಂಗ್
ಬೆಳಗಾವಿ: ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ. ಕೆ. ಸುಧಾಕರ್, ಮುನಿರತ್ನ ಭೈರತಿ ಬಸವರಾಜ ಸೇರಿದಂತೆ ಹಲವು ಗಣ್ಯರು ಬೆಲ್ಲದ ಬಾಗೇವಾಡಿಯ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಗಣ್ಯರು, ಉಮೇಶ್ ಕತ್ತಿ ಅವರ ಪತ್ನಿ …
Read More »ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆಗ್ರಹ
ಬೆಳಗಾವಿ: ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶವನ್ನು ಬೇಗನೇ ನೀಡಬೇಕು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ …
Read More »‘ಸೈನಿಕರ ಸಾಹಸ ಯುವಕರಿಗೆ ಪ್ರೇರಣೆ’
ಸವದತ್ತಿ: 1965ರ ಸೆಪ್ಟೆಂಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಆಧೀನಕ್ಕೊಳಪಟ್ಟ ಮಹಾರಾಜ ಕೆ ಗ್ರಾಮವನ್ನು ಯುದ್ಧದಿಂದ ಮರಳಿ ಪಡೆಯುವ ಸಂದರ್ಭದಲ್ಲಿ ಕರ್ನಲ್ ಹನಬರಲಾಲ್ ಮೆಹ್ತಾ, ಸುಬೇದಾರ ನಂಬಿಯಾರ್, ಸಿಪಾಯಿ ಕನ್ನನ್, ಸಿ.ಬಿ. ಪಾಟೀಲ ಸೇರಿ ಹುತಾತ್ಮರಾದ ಯೋಧರಿಗೆ ಗುರುವಾರ ನವಿಲುತೀರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಾಲ್ಕನೇ ಮದ್ರಾಸ್ ಬಟಾಲಿಯನ್‍ದಲ್ಲಿ ಸೇವೆ ಸಲ್ಲಿಸಿದ 55 ಮಾಜಿ ಸೈನಿಕರು ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಗಿಲ್, ಪಂಜಾಬ ಸುವರ್ಣ ಸೌಧದಲ್ಲಿ …
Read More »ಭಾರತ ಒಗ್ಗೂಡಿಸಿ ಯಾತ್ರೆಗೆ 5ಸಾವಿರ ಜನ: ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ: ದೇಶದಲ್ಲಿ ಜಾತಿ, ಧರ್ಮಗಳ ವಿಷಬೀಜವನ್ನು ಕಿತ್ತೊಗೆದು ಸಮನ್ವಯತೆ ಹುಟ್ಟುಹಾಕುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ‘ಭಾರತ ಒಗ್ಗೂಡಿಸಿ’ ಪಾದಯಾತ್ರೆ ಹಮ್ಮಿಕೊಂಡಿದ್ದು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶದಲ್ಲಿ ಇದು ಆರಂಭವಾಗಿದೆ. ನಮ್ಮದು ಶಾಂತಿಪ್ರಿಯ ದೇಶ. ಇಲ್ಲಿ ವಿವಿಧ ಭಾಷೆಗಳು, ಜನಾಂಗಗಳು, ಧರ್ಮಗಳ ಜನರಿದ್ದರೂ ನಾವು ಒಂದೇ ಎಂದು ಸಾರುವ ದೇಶವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಜಾತಿ, ಧರ್ಮಗಳ ಸಂಘರ್ಷ, …
Read More »ಪರೀಕ್ಷೆ ಅಕ್ರಮ| ಎಲೆಕ್ಟ್ರಾನಿಕ್ ಉಪಕರಣ ಮಾರುತ್ತಿದ್ದ ಬೆಂಗಳೂರಿನ ಆರೋಪಿ ಬಂಧನ
ಬೆಳಗಾವಿ: ಜಿಲ್ಲೆಯ ಗೋಕಾಕ ನಗರದಲ್ಲಿ ಈಚೆಗೆ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ, ಎಲೆಕ್ಟ್ರಾನಿಕ್ ಡಿವೈಸ್ ಹಾಗೂ ಸ್ಮಾರ್ಟ್ ವಾಚ್ ಪೂರೈಸಿದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ರಾಜ್ಯದ ವಿವಿಧ ಪರೀಕ್ಷೆಗಳಲ್ಲೂ ಅಕ್ರಮ ಎಸಗಲು ಅವಕಾಶ ಮಾಡಿಕೊಟ್ಟ ಪ್ರಕರಣಗಳಿಗೂ ಸಾಕ್ಷ್ಯ ಸಿಕ್ಕಂತಾಗಿದೆ. ಬೆಂಗಳೂರಿನ ದೇವಸಂದ್ರದ ನಿವಾಸಿ, ಎಸ್ಪಿ ರಸ್ತೆಯಲ್ಲಿ ‘ಸ್ಪೈ ಜೋನ್’ ಎಂಬ ಎಲೆಕ್ಟ್ರಾನಿಕ್ ಮಳಿಗೆ ಇಟ್ಟುಕೊಂಡ ಮಹಮ್ಮದ್ ಅಜೀಮುದ್ದೀನ್ (37) ಬಂಧಿತ …
Read More »