ಬೆಂಗಳೂರು: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಳದ ಬೇಡಿಕೆಗೆ ವರ್ಷ ಕಳೆದರೂ “ಪರಿಶೀಲನೆ ಹಂತ’ದಿಂದ ಮುಕ್ತಿ ಸಿಕ್ಕಿಲ್ಲ. ಗೌರವಧನ ಪರಿಷ್ಕರಣೆಯ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಕಳೆದ ವರ್ಷ ಸರಕಾರ ಸದನದಲ್ಲಿ ಹೇಳಿತ್ತು. ಈಗ ಮತ್ತೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಬಾರಿಯಾದರೂ ಈಡೇರೀತೇ ಎಂಬುದು ಸುಮಾರು 99 ಸಾವಿರ ಗ್ರಾ. ಪಂ. ಪ್ರತಿನಿಧಿಗಳ ನಿರೀಕ್ಷೆ. ಗ್ರಾ.ಪಂ. ಸದಸ್ಯರ ಗೌರವಧನ 2017ರಲ್ಲಿ ಪರಿಷ್ಕರಿಸಿದ್ದು, ಅಧ್ಯಕ್ಷರಿಗೆ 1,000 ರೂ. ಗಳಿಂದ …
Read More »Yearly Archives: 2022
ಬಿಎಸ್‌ವೈ ಸೇರಿ 9 ಮಂದಿ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್
ಬೆಂಗಳೂರು: ಬಿಡಿಎ ವಸತಿ ಯೋಜನೆಯ ಗುತ್ತಿಗೆ ನೀಡುವ ಸಂಬಂಧ ಲಂಚ ಪಡೆದ ಆರೋಪದ ಮೇಲೆ ನ್ಯಾಯಾಲಯದ ಸೂಚನೆ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ 9 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿ.ಎಸ್.ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್, ಗುತ್ತಿಗೆದಾರ ಚಂದ್ರಕಾಂತ ರಾಮಲಿಂಗಮ್, ಶಾಸಕ ಎಸ್.ಟಿ. ಸೋಮಶೇಖರ್, ರೀಜಿನಲ್ ಕಮೀಷನರ್ ಡಾ.ಜಿ.ಸಿ.ಪ್ರಕಾಶ್, ಕೆ.ರವಿ. ವಿರೂಪಾಕ್ಷ ಯಮಕನಮರಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತನಿಖೆ …
Read More »ಗೋಕಾಕ್: ರಾಜ್ಯ ಹೆದ್ದಾರಿ ಮೇಲೆ ಚಿನ್ನದ ವ್ಯಾಪಾರಿ ಅಡ್ಡಗಟ್ಟಿ ಅರ್ಧ ಕೆ.ಜಿ ಬಂಗಾರ 2.80ಲಕ್ಷ ಹಣ ದರೋಡೆ !
ಘಟಪ್ರಭಾ :ಚಿನ್ನದ ವ್ಯಾಪಾರಿಗಳಿಬ್ಬರು ಗೋಕಾಕದಿಂದ ಬೈಕ್ ಮೇಲೆ ಶಿಂಧಿಕುರಬೇಟ ಗ್ರಾಮಕ್ಕೆ ಬರುತ್ತಿರುವಾಗ 8 ಜನರು ಡಕಾಯಿತರ ತಂಡ ವ್ಯಾಪಾರಿಗಳನ್ನು ರಾಜ್ಯ ಹೆದ್ದಾರಿ ಮೇಲೆ ಅಡ್ಡಗಟ್ಟಿ ಹಲ್ಲೆ ಮಾಡಿ ಅರ್ಧ ಕೆ.ಜಿ ಬಂಗಾರ ಹಾಗೂ 2.80ಲಕ್ಷ ನಗದು ಹಣ ದರೋಡೆ ಮಾಡಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯರಾತ್ರಿಯೇ ಪ್ರಕರಣ ದಾಖಲಾಗಿದ್ದು …
Read More »ಗೋಕಾಕ: ವಿದ್ಯಾರ್ಥಿನಿ ತಸ್ಮೀಯಾ ಖಾಜಿ ನೀಟ್ ಪರಿಕ್ಷೆಯಲ್ಲಿ 530ನೇ ರ್ಯಾಂಕ್ ಪಡೆದು ಎಮ್‍ಬಿಬಿಎಸ್ ಕಾಲೇಜಿಗೆ ಪ್ರವೇಶ ಪಡೆದ ಹಿನ್ನಲೆಯಲ್ಲಿ ಮಹಾವಿದ್ಯಾಲಯದಿಂದ ಸತ್ಕರಿಸಲಾಯಿತು.
ಗೋಕಾಕ: ನಗರದ ಕೆಎಲ್‍ಇ ಸಂಸ್ಥೆಯ ಸಿಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ತಸ್ಮೀಯಾ ಖಾಜಿ ನೀಟ್ ಪರಿಕ್ಷೆಯಲ್ಲಿ 530ನೇ ರ್ಯಾಂಕ್ ಪಡೆದು ಎಮ್‍ಬಿಬಿಎಸ್ ಕಾಲೇಜಿಗೆ ಪ್ರವೇಶ ಪಡೆದ ಹಿನ್ನಲೆಯಲ್ಲಿ ಮಹಾವಿದ್ಯಾಲಯದಿಂದ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಸ್ಥಳೀಯ ಕೆಎಲ್‍ಇ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಎಮ್ ಡಿ ಚುನಮರಿ, ಆಡಳಿತಾಧಿಕಾರಿ ಜಿ ಎಮ್ ಅಂದಾನಿ, ಪ್ರಚಾರ್ಯ ಕೆ ಬಿ ಮೇಯುಂಡಿಮಠ ಇದ್ದರು.
Read More »ಶಿಕ್ಷಣ ಸಚಿವ ನಾಗೇಶ್ ಅವರನ್ನು ಬರಮಾಡಿಕೊಂಡ ಸರ್ವೋತ್ತಮ ಜಾರಕಿಹೊಳಿ
ಮೂಡಲಗಿ- ತಾಲ್ಲೂಕಿನ ಕಲ್ಲೋಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಬರಮಾಡಿಕೊಂಡರು. ಸಚಿವ ನಾಗೇಶ್ ಅವರನ್ನು ಸರ್ವೋತ್ತಮ ಅವರು ಸತ್ಕರಿಸಿದರು. ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಜಿ.ಪಂ.ಮಾಜಿ ಸದಸ್ಯ ಗೋವಿಂದ ಕೊಪ್ಪದ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಬಿಇಓ ಅಜೀತ ಮನ್ನಿಕೇರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮುತ್ತೆಪ್ಪ ಮನ್ನಾಪೂರ, …
Read More »ಬಡವರ, ಹಿಂದುಳಿದವರ, ಯುವಕರ ಪ್ರಗತಿಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಾ ಸಿದ್ದ: ಯುವ ನಾಯಕ ರಾಹುಲ್ ಜಾರಕಿಹೊಳಿ
ಬೆಳಗಾವಿ ದಕ್ಷಿಣ, ಉತ್ತರ ಮತಕ್ಷೇತ್ರದ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ವಿವಿಧ ಸಮುದಾಯದ ಸಮುದಾಯ ಭವನಗಳಿಗೆ ಕುರ್ಚಿ, ಸೌಂಡ್ ಸಿಸ್ಟಮ್ ಗಳ ವಿತರಣೆ ಬೆಳಗಾವಿ: ಎಲ್ಲಾ ಸಮಾಜದ ಬಡವರ, ಹಿಂದುಳಿದವರ, ಯುವಕರ ಪ್ರಗತಿಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ನಗರದ ಜಾಧವ ನಗರ ಕಚೇರಿಯಲ್ಲಿ ಬೆಳಗಾವಿ ದಕ್ಷಿಣ, ಉತ್ತರ ಮತಕ್ಷೇತ್ರದ ಮಸೀದಿ, …
Read More »ಮೆಥೋಡಿಸ್ಟ್ ಸಂಸ್ಥೆಗೆ ಅಕ್ರಮ ಎಸಗಿರುವವರ ವಿರುದ್ದ ಕ್ರಮಕ್ಕೆ ಆಗ್ರಹ
ಬೆಳಗಾವಿ: ಮೆಥೋಡಿಸ್ಟ್ ಚರ್ಚಗೆ ಸಂಬಂಧಿಸಿದ ಸಿಪಿಏಡ್ ಮೈದಾನ ಆಸ್ತಿಯನ್ನು ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡಿ, ಸಂಸ್ಥೆಗೆ ಒಳಪಟ್ಟ 14 ಶಾಲೆ ಹಾಗೂ ಸಂಸ್ಥೆಯಲ್ಲಿನ ಹಣವನ್ನು ದುರುಪಯೋಗ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕ್ರೈಸ್ತ ಬಾಂಧವರ ವತಿಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಮೆಥೋಡಿಸ್ಟ್ ಚರ್ಚ್ ನಿಂದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ನಡೆಸಿ, ಮೆಥೋಡಿಸ್ಟ್ ಸಂಸ್ಥೆಯಲ್ಲಿ …
Read More »ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಬೇಕು, ನನಗೆ ನಂಬರ್ ಬೇಕು, ನಮ್ಮ ಸರ್ಕಾರ ಬರಬೇಕು: ಡಿಕೆಶಿ
ಬೆಂಗಳೂರು: ಸುಮ್ಮನೆ ಶಾಸಕರು ಕ್ಷೇತ್ರದಲ್ಲಿ ಮದುವೆಗೆ ಭಾಗಿಯಾಗುವುದು, ಟೇಪ್ ಕಟ್ ಮಾಡ್ಕೊಂಡು ಇದ್ರೆ ಆಗಲ್ಲ. ಬೂತ್ ಮಟ್ಟಕ್ಕೆ ಹೋಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಶಾಸಕರು ಏನೇನು ಮಾಡಬೇಕು ಅಂತ ಸುರ್ಜೆವಾಲಾ ಟಾರ್ಗೆಟ್ ಕೊಟ್ಟಿದ್ದಾರೆ. ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಕ್ಕಾಗತ್ತದೆ?.. ನನಗೆ ನಂಬರ್ ಬೇಕು, ನಮ್ಮ ಸರ್ಕಾರ ರಚನೆಯಾಗಬೇಕು. ಬೂತ್ ಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು ಅನ್ನೋದು ನನ್ನ …
Read More »ಸಿದ್ದರಾಮಯ್ಯರ ಮುಂದೆ ಸಿ.ಟಿ ರವಿ ಇನ್ನೂ ಬಚ್ಚಾ: ಶಾಸಕ ರಾಘವೇಂದ್ರ ಹಿಟ್ನಾಳ್
ಕೊಪ್ಪಳ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ರಾಷ್ಟ್ರ ಮಟ್ಟದ ನಾಯಕನಾಗುತ್ತೇನೆಂಬ ಭಮ್ರೆಯಲ್ಲಿ ಸಿ.ಟಿ ರವಿ ಇದ್ದಾರೆ. ಸಿದ್ದರಾಮಯ್ಯರ ಮುಂದೆ ಸಿ.ಟಿ ರವಿ ಇನ್ನೂ ಬಚ್ಚಾ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ವಾಗ್ದಾಳಿ ನಡೆಸಿದರು. ಕೊಪ್ಪಳದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವದಲ್ಲಿ ಲಕ್ಷ ಲಕ್ಷ ಜನ ಸೇರಿದ್ದರು. ಅದು ರಾಜ್ಯದ ಜನ ಸಿದ್ದರಾಮಯ್ಯರ ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಅಂತವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ಸಿ.ಟಿ ರವಿಗೆ …
Read More »ಪಿಎಸ್ಐ ನೇಮಕಾತಿ ಅಕ್ರಮ ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಅಧಿಕಾರಿಗಳು
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ 36ನೇ ಆರೋಪಿ ಸಿದ್ದರಾಜು ಸದ್ಯ ಅರೆಸ್ಟ್ ಆಗಿದ್ದಾರೆ. ಇವರು ಪಿಎಸ್ಐ ಹಗರಣದಲ್ಲಿ ಮಧ್ಯವರ್ತಿಯಾಗಿದ್ದರು ಎನ್ನಲಾಗ್ತಿದೆ. ಪಿಎಸ್ಐಯಾಗಿ ಆಯ್ಕೆಯಾಗಿದ್ದ ಗಜೇಂದ್ರ, ಮನೋಜ್ಗೆ ಮಧ್ಯವರ್ತಿಯಾಗಿದ್ದ ಸಿದ್ದರಾಜು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ಐದು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ಹೀಗಾಗಿ ಆರೋಪಿಯ ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಅಧಿಕಾರಿಗಳು ಆರೋಪಿಯ ಕುರಿತು ಮಾಹಿತಿ ನೀಡುವಂತೆ ಪ್ರಚಾರ ಮಾಡಿದ್ದರು. ಕೋರ್ಟ್ನಿಂದ …
Read More »