Breaking News

Yearly Archives: 2022

ನಾಳೆ ‌ಸದನದಲ್ಲೇ ಸಚಿವರೊಬ್ಬರ ಭ್ರಷ್ಟಾಚಾರ ದಾಖಲೆ ಸಮೇತ ಬಯಲು ಮಾಡುವೆ : ಎಚ್‌ಡಿಕೆ ಗುಡುಗು

ಕಲಬುರಗಿ : ಸಾರ್ವಜನಿಕ ಹಿತಾಸಕ್ತಿ ಬಲಿಕೊಟ್ಟು ಕಾನೂನು ಗಾಳಿಗೆ ತೂರಿ ಆಸ್ತಿಯನ್ನು ಮಾಡಿಕೊಂಡಿರುವ ರಾಜ್ಯದ ಸಚಿವರೊಬ್ಬರ ಹಗರಣದ ಭ್ರಷ್ಟಾಚಾರವನ್ನು ನಾಳೆ (ಗುರುವಾರ) ವಿಧಾನಸಭೆ ಅಧಿವೇಶನದಲ್ಲಿ ದಾಖಲೆಗಳ ಸಮೇತ ಬಿಡುಗಡೆಗೊಳಿಸಿ ಬಯಲಿಗೆಳೆಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.   ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಶೇ. 40 ಭ್ರಷ್ಟಾಚಾರ ಈಗಾಗಲೇ ಸಾರ್ವಜನಿಕರಿಗೆ ಅನುಭವವಾಗಿದೆ. ಈಗ ಬಿಡುಗಡೆ ಮಾಡುವ ದಾಖಲೆಗಳು ಸಚಿವರೊಬ್ಬರ ಕರ್ಮಕಾಂಡವಾಗಿದೆ. ನಾಳಿನ ಸದನದಲ್ಲಿ ಇದಕ್ಕೆ …

Read More »

40% ಕಮಿಷನ್ ವಿರುದ್ಧ ‘ಪೇ ಸಿಎಂ’ ಅಭಿಯಾನ ಆರಂಭಿಸಿದ ಕಾಂಗ್ರೆಸ್‌

ಬೆಂಗಳೂರು : ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ತೀವ್ರಗೊಳಿಸಿರುವ ಕಾಂಗ್ರೆಸ್ ಈಗ ” ಪೇಸಿಎಂ” ಎಂಬ ವಿಶಿಷ್ಟ ಅಭಿಯಾನ ಆರಂಭಿಸಿದೆ. ರಾಜಧಾನಿ ಬೆಂಗಳೂರಿನ ಆಯಕಟ್ಟಿ‌ನ ಸ್ಥಳಗಳಲ್ಲಿ “ಪೇಸಿಎಂ” ಪೋಸ್ಟರ್ ಅಂಟಿಸಲಾಗಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಈ ಅಭಿಯಾನ ತೀವ್ರಗೊಳಿಸಲಾಗಿದೆ. ಕ್ಯೂ ಆರ್ ಕೋಡ್ ಇರುವ ಪೇಟಿಎಂ ಮಾದರಿ ಸ್ಟಿಕರ್ ನ್ನು ಪೇಸಿಎಂ ಎಂದು ಬದಲಾಯಿಸಿ ಇಲ್ಲಿ 40% ಕಮಿಷನ್ ಸ್ವೀಕರಿಸಲಾಗುವುದು ಎಂದು ವ್ಯಂಗ್ಯವಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಸುತ್ತಿರುವ ಈ ಅಭಿಯಾನ …

Read More »

ಸಚಿವರೊಂದಿಗೆ ಎಚ್.ಡಿ.ದೇವೇಗೌಡ ಅವರ ಭೇಟಿಯಾದ ಸಿಎಂ ಬೊಮ್ಮಾಯಿ

ಬೆಂಗಳೂರು:ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಂಪುಟ ಸಹುದ್ಯೋಗಿಗಳೊಂದಿಗೆ ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಪದ್ಮನಾಭನಗರದ ಮಾಜಿ ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿ ಕೆಲ ಹೊತ್ತು ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಕ್ಷೇಮ ವಿಚಾರಿಸಿದರು.   ಸಿಎಂ ಅವರೊಂದಿಗೆ ಸಚಿವರಾದ ಆರ್.ಅಶೋಕ್, ಮಾಧುಸ್ವಾಮಿ, ಗೋಪಾಲಯ್ಯ, ಬೈರತಿ ಬಸವರಾಜು, ಸೋಮಣ್ಣ, ಮುನಿರತ್ನ ಅವರೂ ಸದನದ ಕಲಾಪದ ನಡುವೆಯೂ ಸಿಎಂ ಬೊಮ್ಮಾಯಿ ಅವರೊಂದಿಗೆ ಭೇಟಿ …

Read More »

ಖಾನಾಪುರ ತಾಲೂಕಿನಲ್ಲಿ ಕಳ್ಳರ ಪತ್ತೆ ಹಚ್ಚಿ: ಎಸ್‍ಪಿಗೆ ಮನವಿ

ಖಾನಾಪೂರ ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡೆ ಧನಶ್ರೀ ಸರ್‍ದೇಸಾಯಿ ಹೌದು ಖಾನಾಪೂರ ತಾಲೂಕಿನಲ್ಲಿ ಕಳೆದ ಆರು ತಿಂಗಳಿನಿಂದ ಕಳ್ಳತನದ ಪ್ರಕರಣಗಳು ಹೆಚ್ಚುಗಿವೆ. ಇದರಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇನ್ನು ಅನರಕ್ಷಸ್ಥರ ಜನರು, ರೈತರು ತಮ್ಮ ಮನೆಗಳಲ್ಲಿ ನಡೆದ ಕಳ್ಳತನಕ್ಕೆ ಸಂಬಂಧ ಪ್ರಕರಣಗಳನ್ನು ದಾಖಲಿಸಿಲ್ಲ. ಹೀಗಾಗಿ ತಕ್ಷಣ ಇದರ ಬಗ್ಗೆ ಸೂಕ್ತ ಕ್ರಮ …

Read More »

ಬಾಲಕನ ಕಿಡ್ನ್ಯಾಪ್ ಗೆ ಯತ್ನ

ರಾಜ್ಯದಲ್ಲಿ ಮಕ್ಕಳ ಕಳ್ಳರ ಹಾವಳಿ ಇದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರದಾಡುತ್ತಿರುವಾಗಲೇ ವಿಜಯಪುರ ನಗರದಲ್ಲಿ ಅಪ್ರಾಪ್ತ ಬಾಲಕನ ಕಿಡ್ಯಾಪ್ ಆಥವಾ ಕಳ್ಳತನ ಯತ್ನಿಸಿರುವ ಘಟನೆ ನಡೆದಿದೆ‌. ಅಂಗಡಿಗೆ ಪೆನ್ ತರಲು ಹೋಗಿದ್ದ ವೇಳೆ ಅಪ್ರಾಪ್ತ ಬಾಲಕನನ್ನು ಬೈಕ್ ನಲ್ಲಿ ಇಬ್ಬರು ಯಾರೋ ಅಪರಿಚಿತರು ಎತ್ತೊಯ್ಯಿದ್ದಿದ್ದಾರೆ‌. ಭಾಸ್ಕರ್ ಶಿರನಾಳ (11) ಅಪಹರಣ ಅಥವಾ ಕಳ್ಳತನ ಮಾಡಲು ಯತ್ನಕ್ಕೋಳಗಾದ ಬಾಲಕನಾಗಿದ್ದು ಈ ಬಾಲಕನನ್ನು ಬೈಕ್ ನಲ್ಲಿ ಕರೆದೊಯ್ಯುವ ವೇಳೆ ಅವರಿಚಿತ ವ್ಯಕ್ತಿಗಳಿಂದ …

Read More »

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ರಿಟೈರ್ಡ್ ಆದ R.T.O. ಜೈಲಿಗೆ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸಾರಿಗೆ ಅಧಿಕಾರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ಮತ್ತು 63 ಲಕ್ಷ ರೂ. ಭಾರಿ ಮೊತ್ತದ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪಿ.ಶಾಂತಕುಮಾರ ತಂದೆ ಮನ್ನಸ್ವಾಮಿ, ಎಆರ್‍ಟಿಓ ಆರ್‍ಟಿ, ಠಾಣೆ ಹುಮನಾಬಾದ ಜಿಲ್ಲಾ: ಬೀದರ್ ಇವರು ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಲಂಚಗುಳಿತನದಿಂದ ಅಕ್ರಮ ಆಸ್ತಿಯನ್ನು ಸಂಪಾದಿಸಿದರ ಕುರಿತು ಗುಪ್ತ ಮಹಿತಿ ಕಲೆಹಾಕಿ ಆರ್.ಕೆ. …

Read More »

ಮನೆಯ ಸಿಲಿಂಡರ್ ಸ್ಫೋಟ

ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ-ಯಲ್ಲಾಪುರ ಗ್ರಾಮದ ಮನೆಯೊಂದರಲ್ಲಿ ಬೆಳಿಗ್ಗೆ ಸಿಲಿಂಡರ್ ಸ್ಫೋಟವಾಗಿ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ನಡೆದಿದೆ. ಕರಗುಪ್ಪಿ-ಯಲ್ಲಾಪುರ ಗ್ರಾಮದ ಗೌಡ್ರ ಓಣಿಯ ಅಲಗೌಡ ಅಪ್ಪರಾಯಗೌಡ ಪಾಟೀಲ ಎಂಬುವವರ ಮನೆಯಲ್ಲಿ ಅಡುಗೆ ಮಾಡಲು ಓಲೆಯ ಮೇಲೆ ಇಟ್ಟು ಹೊರಗಡೆ ಹೋದ ಸಂದರ್ಭದಲ್ಲಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಈ ದುರಂತ ಸಂಭವಿಸಿದೆ. ಶೇ.೫೦ರಷ್ಟು ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು …

Read More »

2.69 ಕೋಟಿ ರೂ. ಲಪಟಾಯಿಸಿದ್ದ ಅಸಿಸ್ಟೆಂಟ್​ ಬ್ಯಾಂಕ್​ ಮ್ಯಾನೇಜರ್​; ತಲೆಮರೆಸಿಕೊಂಡಿದ್ದವ ಕೊನೆಗೂ ಸಿಕ್ಕಿಬಿದ್ದ..

ಉತ್ತರಕನ್ನಡ: ಬ್ಯಾಂಕ್​ನಲ್ಲಿ ಕೋಟ್ಯಂತರ ರೂಪಾಯಿಯನ್ನು ಲಪಟಾಯಿಸಿ ತಲೆಮರೆಸಿಕೊಂಡಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಈ ಪ್ರಕರಣ ನಡೆದಿತ್ತು. ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಕುಮಾರ್ ಬೋನಾಲ್ ಎಂಬಾತ ಬ್ಯಾಂಕ್​ನಿಂದಲೇ 2.69 ಕೋಟಿ ರೂ. ಲಪಟಾಯಿಸಿದ್ದ. ಆಂಧ್ರಪ್ರದೇಶ ಮೂಲದ ಈತ ಇನ್ನೊಬ್ಬ ಉದ್ಯೋಗಿಯ ಲಾಗಿನ್​ ದುರ್ಬಳಕೆ ಮಾಡಿಕೊಂಡು 2.69 ಕೋಟಿ ರೂ. ಲಪಟಾಯಿಸಿದ್ದ. ಈ ಕುರಿತು ಯಲ್ಲಾಪುರ ಪೊಲೀಸ್ …

Read More »

ಮೈಸೂರು ಅರಮನೆಯಲ್ಲಿ ಸೆ.26ರಿಂದ ಖಾಸಗಿ ದರ್ಬಾರ್​

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಇದರ ನಡುವೆಯೇ ರಾಜವಂಶಸ್ಥರು ನಡೆಸುವ ನವರಾತ್ರಿ ಉತ್ಸವಕ್ಕೂ ಸಿದ್ಧತೆ ಶುರುವಾಗಿದೆ. ಮಂಗಳವಾರ ಅಂಬಾವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಸಂಪ್ರದಾಯಬದ್ಧವಾಗಿ ನೆರವೇರಿತು.   ಅರಮನೆಯ ನೆಲಮಾಳಿಗೆಯ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿದ್ದ ಸಿಂಹಾಸನವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್​ ಸಮ್ಮುಖದಲ್ಲಿ ಹೊರ ತೆಗೆಯಲಾಯಿತು. ಬಿಡಿಬಿಡಿಯಾಗಿದ್ದ ಸಿಂಹಾಸನದ ಭಾಗಗಳನ್ನು ಬಿಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ದರ್ಬಾರ್​ ಹಾಲ್​ಗೆ ತರಲಾಯಿತು. ದರ್ಬಾರ್​ ನಡೆಯುವ ಹಾಲ್​ನಲ್ಲಿ ಶುಭ ವೃಶ್ಚಿಕ ಲಗ್ನದಲ್ಲಿ …

Read More »

ಸಂಕಷ್ಟದಲ್ಲಿ ಮುರುಘಾ ಮಠದ ವಿದ್ಯಾಸಂಸ್ಥೆಯ 3 ಸಾವಿರ ಸಿಬ್ಬಂದಿ..!

ಪೋಕ್ಸೊ ಪ್ರಕರಣದಡಿ (POCSO) ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ (murugha shri) ಜಾಮೀನು ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.   ಹೌದು, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಜೈಲು ಪಾಲಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಚಿತ್ರದುರ್ಗ 2 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಇದೀಗ ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಇದರಿಂದ ಎಸ್ ಜೆ ಎಂ ವಿದ್ಯಾಸಂಸ್ಥೆಯ ಸಿಬ್ಬಂದಿಗೆ …

Read More »