ವಿಜಯಪುರ… ಬೈಕ್‌ಗೆ ಸರ್ಕಾರಿ ಬಸ್ ಹಿಂಬದಿಯಿಂದ ಡಿಕ್ಕಿ, ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಯಕ್ಕುಂಡಿ ರಸ್ತೆಯಲ್ಲಿ ನಡೆದಿದೆ. ಮುತ್ತವ್ವ ಗಸ್ತಿ ಮೃತಪಟ್ಟಿರುವ ಮಹಿಳೆಯಾಗಿದ್ದು ಅಪಘಾತದ ಬಳಿಕ ಬಸ್ ಸ್ಥಳದಲ್ಲಿಯೇ ಬಿಟ್ಟು ಕಂಡಕ್ಟರ್, ಚಾಲಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »Yearly Archives: 2022
ನಕಲಿ ದಾಖಲೆ ನೀಡಿ ಶ್ಯೂರಿಟಿ : ಆನ್ಲೈನ್ ಮೂಲಕ ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲನೆಗೊಳಪಡಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಅಲ್ಲದೆ, ಈ ಸಂಬಂಧ ಅಗತ್ಯವಿರುವ ತಾಂತ್ರಿಕ ನೆರವನ್ನು ಕಂದಾಯ ಇಲಾಖೆ ಹಾಗೂ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ಕ್ಕೆ ಸೂಚನೆ ನೀಡಿದೆ. ಮೃತಪಟ್ಟ ವ್ಯಕ್ತಿಯ ಹೆಸರು, ಆಧಾರ್ ಕಾರ್ಡ್ ಹಾಗೂ …
Read More »2012-13ನೇ ಸಾಲಿನ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲೂ ಗೋಲ್ ಮಾಲ್: ಅಭ್ಯರ್ಥಿಯ ಆರೋಪ
ಬೆಳಗಾವಿ: 2012-13ನೇ ಸಾಲಿನಲ್ಲಿ ನಡೆದ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ನೇಮಕಾತಿ ವಂಚಿತ ಅಭ್ಯರ್ಥಿ ಮಹಾಂತೇಶ ರುದ್ರಪ್ಪ ಬೆಣ್ಣಿ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2012 ಜುಲೈ 15ರಂದು ಜನರಲ್, 17ರಂದು ಕನ್ನಡ ಭಾಷಾ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಪ್ರತಿಶತ 71. 26 ಅಂಕ 89 ರ‍್ಯಾಂಕ್ ಪಡೆದಿದ್ದೇನೆ. 89 ರ್ಯಾಂಕ್ ಪಡೆದು ಆಯ್ಕೆ ಆದರೂ ನಾನು ನೇಮಕಗೊಂಡಿಲ್ಲ. ಆದರೆ, 70.93 ಅಂಕಗಳೊಂದಿಗೆ 97 …
Read More »ಇಷ್ಟೊಂದು ಸುಳ್ಳು ಹೇಳೋ ಪ್ರಧಾನಿಯನ್ನ ಹಿಂದೆಂದೂ ನೋಡಿಲ್ಲ.. ಸಿದ್ದರಾಮಯ್ಯ
ಬಳ್ಳಾರಿ: ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ. ಮೋದಿ ಪ್ರಧಾನಿಯಾದ ನಂತರ ಧರ್ಮ ಆಧಾರಿತ ಜಾತಿ ರಾಜಕಾರಣ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದರು. ಬಳ್ಳಾರಿಯ ಗುರು ಫಂಕ್ಷನ್ ಹಾಲ್ನಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯನ್ನು ವಿರೋಧಿಸಿದರೆ, ಪ್ರಶ್ನಿಸಿದರೆ ಕ್ರಿಮಿನಲ್ …
Read More »ಭವಿಷ್ಯದ ಬಿಜೆಪಿ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣವೇ!?
ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಬಿಜೆಪಿ ಅಂದ್ರೆ ಪ್ರಧಾನಮಂತ್ರಿ ನರಂದ್ರ ಮೋದಿ.. ಪ್ರಧಾನಿ ನರೇಂದ್ರ ಮೋದಿ ಎಂದರೆ ಬಿಜೆಪಿ ಎನ್ನುವಂತಹ ರಾಜಕೀಯ ಚಿತ್ರಣ ಸೃಷ್ಟಿ ಆಗಿದೆ. ಮೋದಿಯಿಲ್ಲದೇ ಬಿಜೆಪಿಗೆ ಭವಿಷ್ಯವೇ ಇಲ್ಲ ಎನ್ನುವಂತೆ ಬಿಂಬಿಸಲಾಗುತ್ತಿದೆ. ಬಿಜೆಪಿಯ ಈ ಆಟಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಬ್ರೇಕ್ ಬೀಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯ ಏಕಚಕ್ರಾಧಿಪತ್ಯಕ್ಕೆ ಪ್ರಜೆಗಳಷ್ಟೇ ಅಲ್ಲದೇ ಸ್ವತಃ ಬಿಜೆಪಿ ನಾಯಕರೇ ರೋಸಿ ಹೋಗಿದ್ದಾರೆ. ಕೇಂದ್ರದ ಲೋಕಸಭೆಯಲ್ಲಿ …
Read More »ನಾನು ‘ಕಾಂಗ್ರೆಸ್’ ನಿಂದ ಟಿಕೆಟ್ ಕೇಳುತ್ತೀನಿ ಎಂದ ಕನ್ನಡದ ‘ಖ್ಯಾತ ನಟಿ’.?
ಚಿತ್ರದುರ್ಗ : ನಾನೂ ಈ ಬಾರಿ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಟಿಕೆಟ್ ಕೇಳುತ್ತೇನೆ ಎಂದು ಕನ್ನಡದ ಖ್ಯಾತ ನಟಿ ಭಾವನಾ ( Bhavana ) ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ( Bharath Jodo yathra) ಮಾತನಾಡಿದ್ದ ನಟಿ ಭಾವನಾ ಜನರ ಸೇವೆ ಮಾಡಲು ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಜನರ ಸೇವೆಗಾಗಿ ನಾನು ಚುನಾವಣೆಗೆ ನಿಲ್ಲುತ್ತೀನಿ. ಮುಂದೆ ಕೇಂದ್ರ ಹಾಗೂ ರಾಜ್ಯದಲ್ಲಿ …
Read More »2023ರ ವಿಧಾನಸಭಾ ಚುನಾವಣೆಗೆರಾಹುಲ್ ಗಾಂಧಿ ಬಚ್ಚಾ ಎಂದ B.S.Y.
ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಾಂಚಜನ್ಯ ಮೊಳಗಿಸಿದೆ. ರಾಯಚೂರು ಜಿಲ್ಲೆಯಿಂದಲೇ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮತಬೇಟೆ ಆರಂಭಿಸಿದೆ. ರಾಯಚೂರಿನ ಗಿಲ್ಲೆಸಗೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ನಿಮ್ಮ ಹಗರಣಗಳನ್ನೆಲ್ಲ ಬಯಲು ಮಾಡುತ್ತೇವೆ. ನಿಮ್ಮ ಯೋಗ್ಯತೆಗಳನ್ನು ಜನರ ಮುಂದೆ ಇಡುತ್ತೇವೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ …
Read More »ಮೂರು ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
ಅಥಣಿ (ಬೆಳಗಾವಿ): ಪಕ್ಕದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಬಿಳ್ಳೂರ ಗ್ರಾಮದ ಹೊರವಲಯದಲ್ಲಿ ತಾಯಿ ಮತ್ತು ಮೂರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ. ಮೃತ ಮಹಿಳೆ ಬೆಳಗಾವಿ ಮೂಲದವರಾಗಿದ್ದು, ಮಹಾರಾಷ್ಟ್ರ ವ್ಯಕ್ತಿಯನ್ನು ಮದುವೆಯಾಗಿದ್ದರು. ಮೂರು ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ: ಮೃತಪಟ್ಟವರನ್ನು ತಾಯಿ ಸುನೀತಾ ತುಕಾರಾಮ ಮಾಳಿ (27), ಮಕ್ಕಳಾದ ಅಮೃತಾ ತುಕಾರಾಮ ಮಾಳಿ (13), ಅಂಕಿತ ತುಕಾರಾಮ ಮಾಳಿ (10) ಮತ್ತು …
Read More »ಬೆಳಗಾವಿಯ ಸುವರ್ಣಸೌಧ ನಿರ್ಮಾಣಗೊಂಡು 10 ವರ್ಷ, ಒಂದು ಅಧಿವೇಶನ ಕೇವಲ 10 ದಿನಕ್ಕೆ ಮಾತ್ರ ಸಿಮೀತ
ಬೆಳಗಾವಿಯ ಸುವರ್ಣಸೌಧ ನಿರ್ಮಾಣಗೊಂಡು 10 ವರ್ಷ ಆಗಿದೆ. ಆದರೂ ಕೇವಲ ಕಟ್ಟಡವಾಗಿಯೇ ಈ ಶಕ್ತಿ ಸೌಧ ಉಳಿದುಕೊಂಡಿದೆ. ವರ್ಷದಲ್ಲಿ ಅಪರೂಪಕ್ಕೆ ಎನ್ನುವಂತೆ ಒಂದು ಬಾರಿ ಅಧಿವೇಶನ ನಡೆಯೋದು ಬಿಟ್ಟರೆ ಮತ್ಯಾವುದಕ್ಕೂ ಇದು ಉಪಯೋಗಕ್ಕೆ ಬರುತ್ತಿಲ್ಲ. ಹೌದು ಉತ್ತರ ಕರ್ನಾಟಕ ಜನರ ಶಕ್ತಿ ಕೇಂದ್ರವಾಗಿದ್ದ ಸುವರ್ಣಸೌಧಕ್ಕೆ ಈವರೆಗಿನ ಯಾವ ಸರ್ಕಾರಗಳು ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಈ ಸುವರ್ಣಸೌಧ ಕಟ್ಟಿ ಹತ್ತು ವರ್ಷವಾಗಿದೆ. ಈ ಹತ್ತು ವರ್ಷದಲ್ಲಿ ಅಧಿವೇಶನ ನಡೆದಿದ್ದು ಕೇವಲ …
Read More »ಎಟಿಎಂ ಎಕ್ಸಚೆಂಜ್ ಮಾಡಿ ಹಣ ಕದ್ದಿದ್ದ ಆರೋಪಿ ಅಂದರ್
ಎಟಿಎಂಗೆ ಹೋದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಪಾಸವರ್ಡ ತಿಳಿದುಕೊಂಡು 37,500 ರೂಪಾಯಿ ಹಣ ದೋಚಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಚಿಕ್ಕೋಡಿ ತಾಲೂಕಿನ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಎಂಬ ಮಹಿಳೆ ಅ.3ರಂದು ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಹೋದಾಗ, ಯಾವುದೋ ಒಬ್ಬ ವ್ಯಕ್ತಿ ಸಹಾಯ …
Read More »