Breaking News

Yearly Archives: 2022

ಬೆಳಗಾವಿ: ಕಲುಷಿತ ನೀರು ಸೇವಿಸಿ 3 ದಿನಗಳ ಅಂತರದಲ್ಲಿ 50 ಕ್ಕೂ ಅಧಿಕ ಜನರು ಅಸ್ವಸ್ಥ

ಬೆಳಗಾವಿ: ಕಲುಷಿತ ನೀರು (Polluted Water) ಸೇವಿಸಿ 3 ದಿನಗಳ ಅಂತರದಲ್ಲಿ 50 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಮುದೇನೂರು ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ದೀಪಾವಳಿ ಸಂಭ್ರಮದಲ್ಲಿ ಇರಬೇಕಿದ್ದ ಗ್ರಾಮಸ್ಥರು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಅಸ್ವಸ್ಥಗೊಂಡಿರುವ 50 ಕ್ಕೂ ಅಧಿಕ ಜನರು ರಾಮದುರ್ಗದ ಸರ್ಕಾರಿ ಹಾಗೂ ಖಾಸಗಿ …

Read More »

ಎಲ್ಲಾ ಕಡೆ ಬಿಜೆಪಿ ಇದೆ, ನಮಗೆ ರಕ್ಷಣೆ ಯಾವಾಗ?: ಹರ್ಷ ಸಹೋದರಿ ಪ್ರಶ್ನೆ

ಶಿವಮೊಗ್ಗ: ಹರ್ಷನ ಕಳಕೊಂಡು 8 ತಿಂಗಳು ಆಗಿದೆ, ಈಗಲೂ ಪ್ರೇಮಸಿಂಗ್ ಚೂರಿ ಇರಿತ ಸೇರಿದಂತೆ ಪ್ರಕರಣ ನಡೆಯುತ್ತಲೇ ಇದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಇದೆ, ಮೇಲಾಗಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಇದೆ.ನಮಗೆ ರಕ್ಷಣೆ ಯಾವಾಗ ಸಿಗುತ್ತದೆ ಎಂದು ಹರ್ಷ ಸಹೋದರಿ ಅಶ್ವಿನಿ ಮಂಗಳವಾರ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.   ಸುದಿಗಾರರೊಂದಿಗೆ ಮಾತನಾಡಿ,ಹಿಂದುತ್ವದ ಕೆಲಸ ಮಾಡುತ್ತಿದ್ದ ಎಂದು ಹರ್ಷನ ಟಾರ್ಗೆಟ್ ಮಾಡಿ ಹೊಡೆದರು. ಅಂಥವನನ್ನೇ ಕೊಲ್ಲುತ್ತಾ ರೆಂದರೆ, ನಮಗೆ ಯಾವ ರಕ್ಷಣೆ …

Read More »

ಇಪ್ಪತ್ತರವರಲ್ಲಿ ಮುಂದಿನ ಐವತ್ತರ ಕನಸು

ಬೆಂಗಳೂರು: ಭವಿಷ್ಯದ ನಾಯಕತ್ವ ಸೃಷ್ಟಿಗಾಗಿ ಬೃಹತ್‌ ಪ್ರಮಾಣದಲ್ಲಿ ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಂದಾಗಿದೆ. ಇಪ್ಪತ್ತರಿಂದ ಮೂವತ್ತರೊಳಗಿನ ಎಲ್ಲ ಜಾತಿ ಸಮುದಾಯದ ಯುವಜನರನ್ನು ಬೂತ್‌ ಮಟ್ಟ ದಲ್ಲಿ ಪಕ್ಷಕ್ಕೆ ಸೆಳೆದು ಮುಂದಿನ 50 ವರ್ಷದ ರಾಜಕಾರಣಕ್ಕೆ ಅಣಿಗೊಳಿಸುವುದು ಇದರ ಉದ್ದೇಶ.   ಈ ಯುವಜನರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಮುದಾಯ ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅವುಗಳ ಫ‌ಲಾನುಭವಿಗಳ ಅಂಕಿ ಅಂಶಗಳನ್ನು ಮತದಾರರ ಮನೆ ಮನೆಗೆ ತಲುಪಿಸುವ …

Read More »

ಕೋಟಿ ಮೀರಿತು ಕನ್ನಡ ಗಾಯನಕ್ಕೆ ಕಂಠ ನೋಂದಣಿ

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಇದೇ ತಿಂಗಳು 28 ರಂದು ಆಯೋಜಿಸಿರುವ ” ಕೋಟಿ ಕಂಠ ಗಾಯನ” ಕಾರ್ಯಕ್ರಮದಲ್ಲಿ ಭಾಗವಹಿಸಲು ಬರೋಬ್ಬರಿ 1 ಕೋಟಿ 10 ಲಕ್ಷ ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದು, ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗಿದೆ.   ದೇಶ- ವಿದೇಶಗಳಿಂದ ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕನ್ನಡಿಗರು ಉತ್ಸಾಹದಿಂದ ಮುಂದೆ ಬಂದಿದ್ದು, ಅಕ್ಟೋಬರ್ 28 ರಂದು ಕೋಟಿ ಕಂಠ ಗಳಲ್ಲಿ ಕನ್ನಡದ ವೃಂದ ಗಾಯನ ಮೊಳಗಿ …

Read More »

ಚುನಾವಣೆ ಬಂತೆಂದರೆ ಸಾಕು, ಹುಟ್ಟುಹಬ್ಬವೂ ಉತ್ಸವವೇ!..

ಬೆಳಗಾವಿ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಗಡಿಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಫುಲ್​ ಆಯಕ್ಟಿವ್ ಆಗಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಇರುವಾಗ ಅದ್ಧೂರಿ ಜನ್ಮದಿನ ಆಚರಿಸಿಕೊಳ್ಳಲು ವಿನಯ ಕುಲಕರ್ಣಿ ಭರ್ಜರಿ ತಯಾರಿ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕಿತ್ತೂರು ಪಟ್ಟಣದಲ್ಲಿ ಜನ್ಮದಿನ ಆಚರಣೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಹಿಂದೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ …

Read More »

ಉಳ್ಳವರ ಮನೆಯಲ್ಲಿ ಹಣ ದೋಚಿ, ಬಡವರಿಗೆ ದಾನ ಮಾಡ್ತಿದ್ದ ಕಳ್ಳ ಅರೆಸ್ಟ್

ಬೆಂಗಳೂರು: ಉಳ್ಳವರ ಮನೆಗೆ ಕನ್ನ ಹಾಕೋದು. ಕದ್ದ ಮಾಲಲ್ಲಿ ಮಂದಿರ, ಚರ್ಚ್‍ಗಳ ಹುಂಡಿಗೆ ಹಣ ಹಾಕೋದು. ಭಿಕ್ಷುಕರಿಗೆ ದಾನ ಧರ್ಮ ಮಾಡ್ತಿದ್ದ ಮಾಡರ್ನ್ ಕಳ್ಳನನ್ನು (Thief) ಬೆಂಗಳೂರಿನ (Bengaluru) ಮಡಿವಾಳ ಪೊಲೀಸರು (Police) ಬಂಧಿಸಿದ್ದಾರೆ. ಜಾನ್ ಮೆಲ್ವಿನ್ ಅಲಿಯಾಸ್ ಮಾಡರ್ನ ರಾಬಿನ್‍ವುಡ್ ಬಂಧಿತ ವ್ಯಕ್ತಿ. ರಾಬಿನ್‍ವುಡ್ ಶೈಲಿಯಲ್ಲೇ ದೋಚಿದ ವಸ್ತುಗಳನ್ನು ಬಡ ಬಗ್ಗರಿಗೆ ಈತನೂ ದಾನ ಮಾಡುತ್ತಿದ್ದ. ಮಡಿವಾಳ ಲಿಮಿಟ್ಸ್‌ನಲ್ಲಿ ಕಾಂಟ್ರ್ಯಾಕ್ಟರ್ ಒಬ್ಬರ ಮನೆಗೆ ಕನ್ನ ಹಾಕಿ 8 ಲಕ್ಷ ನಗದು …

Read More »

‘ಹೆಡ್ ಬುಷ್’ ಚಿತ್ರದ ವಿರುದ್ಧ ಕರಗ ಸಮಿತಿಯೂ ಆಕ್ರೋಶ: ಎರಡೆರಡು ವಿವಾದಲ್ಲಿ ಡಾಲಿ

ಡಾಲಿ ಧನಂಜಯ್ (Dhananjay) ನಟನೆಯ ಹೆಡ್ ಬುಷ್ (Head Bus) ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಎರಡೆರಡು ವಿವಾದಗಳು ಚಿತ್ರತಂಡಕ್ಕೆ ಅಂಟಿಕೊಂಡಿವೆ. ಈಗಾಗಲೇ ವೀರಗಾಸೆ ಕಲಾವಿದರಿಗೆ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು, ಇದೀಗ ಚಿತ್ರದಲ್ಲಿ ಕರಗ ಆಚರಣೆ ಬಗ್ಗೆ ಮತ್ತು ಕರಗ ಹೊತ್ತವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ ಕೇಳಿ ಬಂದಿದೆ. ಹೆಡ್ ಬುಷ್ ಚಿತ್ರದಲ್ಲಿ ದ್ರೌಪದಮ್ಮನ ಕರಗಕ್ಕೆ ಅವಮಾನ ಮಾಡಲಾಗಿದೆ ಎಂದು …

Read More »

ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಇಂದು ಕಾಂಗ್ರೆಸ್ ಅಧ್ಯಕ್ಷರಾಗಿ (Congress President) ಪ್ರಮಾಣ ವಚನ ಸ್ವೀಕರಿಸಿದರು. 24 ವರ್ಷಗಳ ನಂತರ ಈ ಹುದ್ದೆಯನ್ನು ಅಲಂಕರಿಸುತ್ತಿರುವ ಮೊದಲ ಗಾಂಧಿಯೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಪಾತ್ರರಾಗಿದ್ದಾರೆ. ಜೊತೆಗೆ ಸುಮಾರು 5 ದಶಕಗಳ ಬಳಿಕ ಕನ್ನಡಿಗರೊಬ್ಬರಿಗೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‍ನ ನೇತೃತ್ವ ಸಿಕ್ಕಿದೆ. ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ …

Read More »

ನೋಟುಗಳ ಮೇಲೆ ಲಕ್ಷ್ಮಿ, ಗಣೇಶನ ಫೋಟೋವನ್ನು ಮುದ್ರಿಸಿ – ಮೋದಿಗೆ ಕೇಜ್ರಿವಾಲ್ ಮನವಿ

ನವದೆಹಲಿ: ಹೊಸ ನೋಟುಗಳ ಮೇಲೆ ಇನ್ಮುಂದೆ ಲಕ್ಷ್ಮಿ ದೇವಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಒತ್ತಾಯಿಸಿದ್ದಾರೆ. ಹೊಸ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ (Mahatma Gandhi) ಫೋಟೋ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮಿ ದೇವಿ (Lakshmi)  ಮತ್ತು ಗಣೇಶನ (Ganesh) ಫೋಟೋಗಳನ್ನು ಮುದ್ರಿಸಬಹುದು. ಕರೆನ್ಸಿ ನೋಟುಗಳ ಮೇಲೆ ಎರಡು ದೇವರ …

Read More »

ಮೇಕಪ್‌ ಮ್ಯಾನ್‌ ಕೈಚಳಕ: ನಟಿಯ ವೀಡಿಯೋ ಬ್ಲ್ಯಾಕ್‌ಮೇಲ್: ಬಂಧನ

ಬೆಂಗಳೂರು: ನಟ, ನಟಿಯರೇ ಎಚ್ಚರ. ನಿಮ್ಮ ಮೇಕಪ್‌ ಮ್ಯಾನ್‌ಗಳಿಗೆ ಮೊಬೈಲ್‌ ಕೊಡುವ ಮೊದಲು ಎಚ್ಚರ ವಹಿಸಬೇಕಿದೆ. ಇಲ್ಲೊಬ್ಬ ಮೇಕಪ್‌ಮ್ಯಾನ್‌ ಹಿರಿ ಮತ್ತು ಕಿರುತೆರೆ ನಟಿಯೊಬ್ಬರ ಅರೆನಗ್ನ ವೀಡಿಯೋ ಇಟ್ಟುಕೊಂಡು 30 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.   ಭುವನೇಶ್ವರಿನಗರ ನಿವಾಸಿ ಮಹಾಂತೇಶ್‌ (37) ಬಂಧಿತ. ಆರೋಪಿಯಿಂದ ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು. ಸಂತ್ರಸ್ತೆಗೆ ಆರೋಪಿ ದೂರದ ಸಂಬಂಧಿಯಾಗಿದ್ದು, ಆಕೆಗೆ ಮೇಕಪ್‌ ಮ್ಯಾನ್‌ …

Read More »