ಬೆಳಗಾವಿ: ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಮೂಲದ ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ಮಂಡಿ ನೋವಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳುತ್ತಿದ್ದಾರೆಂದು ಮತ್ತು ಸಂಕ್ರಾಂತಿ ನಂತರ ರಾಜ್ಯ ಮತ್ತೊಬ್ಬ ಮುಖ್ಯಮಂತ್ರಿಯನ್ನು ಕಾಣಲಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಬೊಮ್ಮಾಯಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದ ಲೋಕೇಶ್ ಟೇಕಲ್ ಅವರನ್ನು ಸಂಪರ್ಕಿಸಿ ಮಂಡಿ ನೋವಿಗೆ …
Read More »Daily Archives: ಡಿಸೆಂಬರ್ 28, 2021
ಹಿಂದೂ ಮಸೀದಿ, ಚರ್ಚ್‍ಗೆ ಹೋಗಬಹುದು, ಮತಾಂತರವಾದ್ರೆ ದೇವಸ್ಥಾನದ ಬಾಗಿಲು ಬಂದ್: ಸಿ.ಟಿ.ರವಿ
ಚಿಕ್ಕಮಗಳೂರು: ಓರ್ವ ಹಿಂದೂವಾಗಿ ಜೀಸಸ್-ಅಲ್ಲಾ ದೇವರು ಎಂದು ಒಪ್ಪಿಕೊಳ್ಳಬಹುದು. ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವದಿದೆ. ಆದರೆ, ಇಸ್ಲಾಂ-ಕ್ರೈಸ್ತ ಆದ ಕೂಡಲೇ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಅವರಿಗೆ ಉಳಿದ ದೇವರುಗಳ ಬಗ್ಗೆ ನಿರಾಕರಣೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸರ್ವಧರ್ಮ ಸಮನ್ವಯದ ಕುರಿತು ಮಾತನಾಡಿದ್ದಾರೆ. ಚಿಕ್ಕಮಗಳೂರು ನಗರಸಭೆ ಚುನಾವಣೆ ಹಿನ್ನೆಲೆ ಮತದಾನ ಮಾಡಿ ಮಾತನಾಡಿದ ಅವರು, ನಮ್ಮಲ್ಲಿ ಬಹುದೇವತಾರಾಧನೆ ಇದೆ. ಹಿಂದೂವಾಗಿ ಅಲ್ಲಾ-ಕ್ರೈಸ್ತನನ್ನು ಒಪ್ಪಿಕೊಳ್ಳಬಹುದು. …
Read More »ಕರ್ನಾಟಕ ಬಂದ್’ ದಿನ ಕರ್ತವ್ಯಕ್ಕೆ ಹಾಜರಾಗದಿದ್ದರೆ ಸಾರಿಗೆ ನೌಕರರ ಸಂಬಳ ಕಡಿತ
ಬೆಂಗಳೂರು : ಎಂಇಎಸ್ ನಿಷೇಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿ.31ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ಸಾರಿಗೆ ಸಂಸ್ಥೆಯ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ. ಕರ್ತವ್ಯಕ್ಕೆ ಗೈರು ಹಾಜರಾಗುವ ನೌಕರರ ವೇತನ ಕಡಿತಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಕೆ.ಎಸ್.ಆರ್.ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳು ಅಗತ್ಯ ಸೇವಾಗಳಡಿಯಲ್ಲಿ ಬರುವುದರಿಂದ ಯಾವುದೇ ಕಾರಣಕ್ಕೂ ಬಸ್ ಸಂಚಾರ ನಿಲ್ಲಿಸುವಂತಿಲ್ಲ. ಹೀಗಾಗಿ ಎಲ್ಲ ನೌಕರರು ತಪ್ಪದೇ ಕರ್ತವ್ಯಕ್ಕೆ ಹಾಜರಾಗುವಂತೆ …
Read More »ರಾಜ್ಯದಲ್ಲಿ ‘ಶಾಲೆ ಹಂತದಲ್ಲಿಯೇ ‘ಮಕ್ಕಳಿಗೆ ಲಸಿಕೆ’ ನೀಡಿಕೆ – ಸಿಎಂ ಬೊಮ್ಮಾಯಿ
ಬೆಂಗಳೂರು: ಕೇಂದ್ರ ಸರ್ಕಾರ ಜನವರಿ 3ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಘೋಷಣೆ ಮಾಡಿದೆ. ರಾಜ್ಯದಲ್ಲಿ ಆಯಾ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶಾಲೆಗಳಲ್ಲಿ ಲಸಿಕೆ ಅಭಿಯಾನ ಜನವರಿ 3 ರಿಂದ ಪ್ರಾರಂಭವಾಗಲಿದ್ದು, ಜನವರಿ 10 ರಿಂದ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸಹ-ಅಸ್ವಸ್ಥತೆಹೊಂದಿರುವ ಅರ್ಹರಿಗೆ ಇನ್ನೋಕ್ಯುಲೇಷನ್ ಶಿಬಿರಗಳು ಕೇಂದ್ರದ ನಿರ್ದೇಶನದಂತೆ ಪ್ರಾರಂಭವಾಗುತ್ತವೆ ಎಂದು ಹೇಳಿದರು. ಈ …
Read More »ಒಮಿಕ್ರಾನ್ ಮಟ್ಟಹಾಕಲು ಲಸಿಕೆಯ ಮೂರನೇ ಡೋಸ್ ಪರಿಚಯ!
ನವದೆಹಲಿ : ಕೇಂದ್ರ ಸರ್ಕಾರವು ಒಮಿಕ್ರಾನ್ ಮಟ್ಟಹಾಕಲು ಲಸಿಕೆಯ ಮೂರನೇ ಡೋಸ್ ಪರಿಚಯಿಸಿದ್ದು, ‘ಮುನ್ನೆಚ್ಚರಿಕೆ ಡೋಸ್’ ಎಂದು ಕರೆದಿದೆ.ಕೋವಿನ್‌ನ ಮುಖ್ಯ ವೈದ್ಯ ಡಾ.ಆರ್.ಎಸ್.ಶರ್ಮಾ, ‘ನೀವು 60 ವರ್ಷ ವಯಸ್ಸಿನವರಾಗಿದ್ದರೆ ಮತ್ತು ಎರಡೂ ಡೋಸ್‌ಗಳನ್ನ ತೆಗೆದುಕೊಂಡಿದ್ದರೆ, ಎರಡನೇ ಡೋಸ್ ಮತ್ತು ನೀವು ನೋಂದಾಯಿಸುವ ದಿನದ ನಡುವಿನ ವ್ಯತ್ಯಾಸವು 9 ತಿಂಗಳುಗಳಿಗಿಂತ ಹೆಚ್ಚಿದ್ರೆ (39 ವಾರಗಳು) ನೀವು ಮೂರನೇ ಡೋಸ್ ತೆಗೆದುಕೊಳ್ಳಲು ಅರ್ಹರು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರವನ್ನುದ್ದೇಶಿಸಿ …
Read More »