Breaking News

Daily Archives: ಅಕ್ಟೋಬರ್ 1, 2021

ಕ್ಷೇತ್ರದ ಚರ್ಚಗಳ ಜೀರ್ಣೋದ್ಧಾರಕ್ಕೆ 1.50 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಪ್ರಸಕ್ತ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಚರ್ಚಗಳ ಜೀರ್ಣೋದ್ಧಾರಕ್ಕಾಗಿ ಅರಭಾವಿ ಕ್ಷೇತ್ರದ 13 ಚರ್ಚಗಳಿಗೆ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ನಾಗನೂರ, ಗುಜನಟ್ಟಿ, ಧರ್ಮಟ್ಟಿ, ಕಮಲದಿನ್ನಿ, ಹೊನಕುಪ್ಪಿ, ಬಿಲಕುಂದಿ, ಉದಗಟ್ಟಿ, ಬೀರನಗಡ್ಡಿ, ಅರಭಾವಿ, ದಂಡಾಪೂರ, ರಾಜಾಪೂರ ಹಾಗೂ ತುಕ್ಕಾನಟ್ಟಿ ಗ್ರಾಮಗಳಲ್ಲಿರುವ ಚರ್ಚಗಳ ಜೀರ್ಣೋದ್ಧಾರಕ್ಕೆ ಈ ಅನುದಾನ ಬಿಡುಗಡೆಯಾಗಿದೆ …

Read More »

ಇಂದಿನಿಂದ ಪಬ್-ಕ್ಲಬ್‍, ಚಿತ್ರಮಂದಿರ ಫುಲ್ ಓಪನ್..!

ಬೆಂಗಳೂರು, ಅ.1- ಇಂದಿನಿಂದ ಕ್ಲಬ್, ಪಬ್, ಚಿತ್ರಮಂದಿರ, ಧಾರ್ಮಿಕ ಕೇಂದ್ರಗಳೆಲ್ಲವೂ ಸಂಪೂರ್ಣ ತೆರೆದುಕೊಳ್ಳಲಿವೆ. ಕೊರೊನಾ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಅ. 1ರಿಂದ ಶೇ.100ರಷ್ಟು ಅನ್‍ಲಾಕ್‍ಗೆ ರಾಜ್ಯಸರ್ಕಾರ ಸೆ.25ರಂದು ಆದೇಶ ನೀಡಿತ್ತು. ಹೀಗಾಗಿ ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್-ಕ್ಲಬ್‍ಗಳು ಸೇರಿದಂತೆ ಎಲ್ಲದಕ್ಕೂ ಸಂಪೂರ್ಣ ಅನುಮತಿ ದೊರೆಯಲಿದೆ. ಶಾಲಾ-ಕಾಲೇಜುಗಳು ಶೇ.100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕಿದ್ದು, ಸೋಮವಾರದಿಂದ ಶುಕ್ರವಾರದವರೆಗೆ 5 ದಿನಗಳ ಕಾಲ ಶಾಲೆಗಳು ಸಂಪೂರ್ಣವಾಗಿ ನಡೆಯಲಿವೆ. ಈ ನಿಟ್ಟಿನಲ್ಲಿ ಇಂದಿನಿಂದ ಎಲ್ಲವೂ ಅನ್‍ಲಾಕ್ …

Read More »

“ಕೊರೋನಾ ಬಂದ ಮೇಲೆ ಸಿದ್ದರಾಮಯ್ಯನವರ ತಲೆ ಕೆಟ್ಟಿರಬಹುದು” : ಸಚಿವ ಎಸ್.ಟಿ.ಎಸ್

ಮೈಸೂರು, ಅ.1- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಕೋವಿಡ್ ಬಂದ ಮೇಲೆ ತಾವು ಏನು ಮಾತನಾಡುತ್ತಿದ್ದೇನೆ ಎಂಬುದೇ ಗೊತ್ತಾಗುತ್ತಿಲ್ಲ. ಅವರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿ ಗೊತ್ತಿಲ್ಲ. ಯಾವುದಕ್ಕೂ ಯಾವ ಸಂಬಂಧವೂ ಇಲ್ಲದೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರೂ ಆರ್.ಎಸ್.ಎಸ್ ಶಾಖೆಗೆ ಬರಲಿ. ಅವರು ಶಾಖೆಗೆ ಬರುವುದಾದರೆ ನಾವೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇವೆ. …

Read More »

ಸರ್ಕಾರದಿಂದ 40,000 ಕೋಟಿ ರೂಪಾಯಿ ಆರ್ಥಿಕ ಸಹಾಯ ಕೇಳಿದ BSNL

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಕೇಂದ್ರ ಸರ್ಕಾರದ ಬಳಿ 40,000 ಕೋಟಿ ಆರ್ಥಿಕ ಸಹಾಯವನ್ನು ಕೇಳಿದೆ. ಅದರಲ್ಲಿ ಅರ್ಧದಷ್ಟು ಅಲ್ಪಾವಧಿಯ ಸಾಲವನ್ನು ತೆರವುಗೊಳಿಸಲು ಸವರನ್ ಖಾತರಿಯ ರೂಪದಲ್ಲಿ ಅಗತ್ಯವಿದೆ ಎಂದು ಸರ್ಕಾರವನ್ನು ಸಂಪರ್ಕಿಸಿದೆ.   ಈ ಕುರಿತು ಪಿಟಿಐಗೆ ಮಾತನಾಡಿದರುವ ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪುರ್ವಾರ್ ”ಕಂಪನಿಗೆ ಯಾವುದೇ ಹೆಚ್ಚುವರಿ ಸಾಲದ ಅಗತ್ಯವಿಲ್ಲ ಮತ್ತು ಕಾರ್ಯಾಚರಣೆಯನ್ನು ಬೆಂಬಲಿಸಲು ಅದರ ವ್ಯವಹಾರವು ಸ್ವಾವಲಂಬಿಯಾಗಿದೆ” ಎಂದು ತಿಳಿಸಿದ್ದಾರೆ. …

Read More »

ಅಕ್ರಮ ಆಸ್ತಿ ಪತ್ತೆ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ಶಾಸಕ ಜಮೀರ್ ಅಹ್ಮದ್

ನವದೆಹಲಿ: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಶುಕ್ರವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆ ಎದುರಿಸಿದರು. ಇಲ್ಲಿನ ಖಾನ್ ಮಾರುಕಟ್ಟೆ ಪ್ರದೇಶದಲ್ಲಿರುವ ಲೋಕನಾಯಕ ಕಟ್ಟಡದಲ್ಲಿನ ಇ.ಡಿ ಕಚೇರಿಗೆ ಬೆಳಿಗ್ಗೆ ಕೆಲವು ದಾಖಲೆಗಳೊಂದಿಗೆ ಹಾಜರಾದ ಜಮೀರ್, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು. ‘ತನಿಖಾಧಿಕಾರಿಗಳ ಸೂಚನೆ ಮೇರೆಗೆ ಎರಡು ವಾರಗಳ ಹಿಂದೆ ಅಗತ್ಯ ದಾಖಲೆ ಸಲ್ಲಿಸಿದ್ದೆ. ನಾಲ್ಕೈದು ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದು, ಸೂಕ್ತ‌ ಉತ್ತರ ನೀಡಿದ್ದೇನೆ’ …

Read More »

ಸಿಎಂ ಭೇಟಿ ಮಾಡಿದ ಜಯಮೃತ್ಯುಂಜಯ ಸ್ವಾಮೀಜಿ; ಪಂಚಮಸಾಲಿಗೆ 2 ಮೀಸಲಾತಿ ಚರ್ಚೆ

ಬೆಂಗಳೂರು: ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಸ್ವಾಮೀಜಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿದ ಸ್ವಾಮೀಜಿ, ‘ಮೀಸಲಾತಿಗಾಗಿ ಆಗ್ರಹಿಸಿ ನಡೆಸುವ ಹೋರಾಟ ಕೈಬಿಡುವಂತೆ ಸಿಎಂ ಮನವಿ ಮಾಡಿದ್ದಾರೆ. ಅಲ್ಲದೇ ಮೀಸಲಾತಿ ವಿಚಾರವಾಗಿ ಕೆಲ ಅಂಶಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆ’ ಎಂದು ಹೇಳಿದ್ದಾರೆ. ಇನ್ನು ನಮ್ಮ ಮುಂದಿನ …

Read More »

ಕರ್ನಾಟಕದ 31ನೇ ಜಿಲ್ಲೆ ವಿಜಯನಗರ: ನಾಳೆ ಘೋಷಣೆಗೆ ವೇದಿಕೆ ಸಜ್ಜು

ವಿಜಯನಗರ:ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಲು ವೇದಿಕೆ ಸಿದ್ದವಾಗಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ವಿಜಯನಗರ ಎಂಬ ಪ್ರತ್ಯೇಕ ಜಿಲ್ಲೆಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ವಿಜಯನಗರ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆ ಮಾಡುವ ಕಾರ್ಯಕ್ರಮ ನಾಳೆ ಗಾಂಧಿ ಜಯಂತಿಯಂದು ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಅದಕ್ಕಾಗಿ ಅಲ್ಲಿನ ಕಾರ್ಯಕ್ರಮಕ್ಕೆ ವಿದ್ಯಾರಣ್ಯ ವೇದಿಕೆ ಸಜ್ಜಾಗಿದ್ದು ವಿಜಯನಗರ ಸಾಮ್ರಾಜ್ಯದ …

Read More »

ಸಿದ್ದರಾಮಯ್ಯನವರನ್ನು ನಾನೇ ಆರ್ ಎಸ್‌ಎಸ್ ಶಾಖೆಗೆ ಕರೆದುಕೊಂಡು ಹೋಗುತ್ತೇನೆ: ಸಚಿವ ಸೋಮಶೇಖರ್

ಮೈಸೂರು: ಸಿದ್ದರಾಮಯ್ಯರಿಗೆ ಕೋವಿಡ್ ಬಂದ ಬಳಿಕ ತಾವು ಏನು ಮಾತನಾಡುತ್ತಿದ್ದೇನೆ ಎಂಬುವುದೇ ಅವರಿಗೆ ಗೊತ್ತಾಗುತ್ತಿಲ್ಲ. ಅವರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿಯೂ ಗೊತ್ತಿಲ್ಲ. ಯಾವುದಕ್ಕೂ ಯಾವ ಸಂಬಂಧವೇ ಇಲ್ಲದೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್‌ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರು ಆರ್ ಎಸ್‌ಎಸ್ ಶಾಖೆಗೆ ಬರಲಿ. ಅವರು ಶಾಖೆಗೆ ಬರುವುದಾದರೆ ನಾನೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇವೆ. ಅವರಿಗೆ ಮಾನಸಿಕವಾಗಿ …

Read More »

ಮೂವರು ಮೋದಿಗಳು ದೇಶವನ್ನು ಕೊಳ್ಳೆ ಹೊಡೆದಿದ್ದಾರೆ; ಇಬ್ಬರು ಓಡಿ ಹೋಗಿದ್ದಾರೆ!

ಬೆಂಗಳೂರು: ಮೂವರು ಮೋದಿಗಳು ದೇಶವನ್ನು ಕೊಳ್ಳೆ ಹೊಡೆದಿದ್ದಾರೆ, ಮೂವರು ಮೋದಿಗಳಿಂದ ದೇಶ ಹಾಳಾಗಿದೆ. ಇಬ್ಬರು ಓಡಿ ಹೋಗಿದ್ದಾರೆ, ಮತ್ತೊಬ್ಬರು ಓಡಿ ಹೋಗಲು ತಯಾರಾಗುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಪ್ರಧಾನಿ ಮೋದಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ದೇಶದಲ್ಲಿ ಏರಿಕೆ ಪರ್ವ ನಡೆಯುತ್ತಿದೆ! ಜನಸಾಮಾನ್ಯರಿಗೆ ದರ ಏರಿಕೆ, ಅದಾನಿ ಅಂಬಾನಿಗಳ ಸಂಪಾದನೆ ಏರಿಕೆ, ದೇಶದ ಸಾಲ ಏರಿಕೆ, ನಿರುದ್ಯೋಗ ಏರಿಕೆ, ಬಡತನ ಏರಿಕೆ. ನೈಸರ್ಗಿಕ ಅನಿಲ ದರ …

Read More »

ಹಾನಗಲ್​ನಲ್ಲಿ ಕಾಂಗ್ರೆಸ್​ ಸಂಧಾನ ಸಕ್ಸಸ್​.. ‘ಯು ಟರ್ನ್’​ ಹೊಡೆದ ತಹಶೀಲ್ದಾರ್​ ಹೇಳಿದ್ದೇನು?

ಬೆಂಗಳೂರು: ಹಾನಗಲ್​ ಬೈ ಎಲೆಕ್ಷನ್​ ಘೋಷಣೆಯಾಗ್ತಿದ್ದಂತೆ ಕಾಂಗ್ರೆಸ್​ ಗೊಂದಲದ ಗೂಡಾಗಿತ್ತು. ಇಬ್ಬರು ನಾಯಕರ ನಡುವೆ ಟಿಕೆಟ್​ ವಿಚಾರವಾಗಿ ಬಹಿರಂಗ ಸಮರ ಶುರುವಾಗಿತ್ತು. ಇದು ಹಸ್ತ ಪಾಳಯಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಕದನಕ್ಕೆ ನಿಂತಿದ್ದವರನ್ನ ಸಮಾಧಾನ ಪಡಿಸಲು ಮುಖಂಡರು ಯಶಸ್ವಿಯಾಗಿದ್ದಾರೆ. ಸಂಧಾನ ಸೂತ್ರ ಜಾರಿಯಾಗಿದೆ. ಮನೋಹರ್​​ ತಹಶೀಲ್ದಾರ್​. ಶ್ರೀನಿವಾಸ್ ಮಾನೆ. ಈ ಇಬ್ಬರು ನಾಯಕರ ನಡುವೆ ಹಾನಗಲ್​ ಕಾಂಗ್ರೆಸ್​ಗೆ ಅಭ್ಯರ್ಥಿ ಆಗೋ ನಿಟ್ಟಿನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಬಹಿರಂಗ ಅಸಮಾಧಾನಕ್ಕೂ ಸಾಕ್ಷಿಯಾಗಿತ್ತು. ಕೆಪಿಸಿಸಿ …

Read More »