Breaking News

Monthly Archives: ಸೆಪ್ಟೆಂಬರ್ 2021

ತುಂಬಿದ ಸಭೆಯಲ್ಲಿ ಬೊಮ್ಮಾಯಿಗೆ ‘ಬಾದಾಮಿ ಹಾಲು’ ಕೊಟ್ಟು ‘CM ಮಾಡಿದ್ದು ನಾನೇ’ ಎಂದ ಅಭಿಮಾನಿ..!

ಬೆಳಗಾವಿ: ಅಭಿಮಾನಿಯೋರ್ವ ಸಿಎಂ ಬಸವರಾಜ್​​ ಬೊಮ್ಮಾಯಿಗೆ ಬಾದಾಮಿ ಹಾಲು ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಶೇಷ ಗೆಟಪ್​ನಲ್ಲಿ ಆಗಮಿಸಿ ಅಭಿಮಾನಿ ಬಾದಾಮಿ ಹಾಲು ನೀಡಿದ್ದಾನೆ. ಅಭಿಮಾನಿಯನ್ನ ತಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಅವನನ್ನು ಬಿಡಿ ಎಂದು ಸಿಎಂ ಹಾಲು ಸ್ವೀಕರಿಸಿದ್ದಾರೆ. ಎಲ್ಲಿ ಹೋದರೂ ಅವನು ಏನನ್ನಾದರು ಕೊಟ್ಟೇ ಕೊಡುತ್ತಾನೆ. ಇಂದು ಬಾದಾಮಿ ಹಾಲು ಕೊಟ್ಟಿದ್ದಾನೆ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಬಾದಾಮಿ ಹಾಲು ನೀಡಿದ ಬಳಿಕ ಬೊಮ್ಮಾಯಿ ಅವರನ್ನ ಸಿಎಂ …

Read More »

ಬೆಳಗಾವಿ: ಐದು ಭಾಷೆಯ ಡಿಜಿಟಲ್ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಿರುವ ಸಿಎಂ!

ಬೆಳಗಾವಿ: ಎರಡು ದಿನ ಜಿಲ್ಲಾ ಪ್ರವಾಸ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 2. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರೋ 5 ಭಾಷೆಯ ರವೀಂದ್ರ ಕೌಶಿಕ್ ಡಿಜಿಟಲ್ ಗ್ರಂಥಾಯಲದ ಉದ್ಘಾಟನೆ ಮಾಡಿ ಲೋಕಾರ್ಪಣೆ ಆಗಲಿದೆ. ಇದೇ ರೀತಿ 2.7 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವಟ ರಾಜ್ಯದ ಮೊದಲ ಬುದ್ಧಿಮಾಂದ್ಯತೆ ಮಕ್ಕಳ ಪಾರ್ಕ್ ನ ಉದ್ಘಾಟನೆಯನ್ನು ಸಿಎಂ‌ …

Read More »

ಬೆಂಗಳೂರು: ಚರ್ಚ್ ಸ್ಟ್ರೀಟ್ ಯೋಜನೆ ನಗರದ ಇನ್ನೂ ಮೂರು ರಸ್ತೆಗಳಿಗೆ ವಿಸ್ತರಣೆ

ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ನಿರ್ಮಾಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಮತ್ತು ಭೂ ಸಾರಿಗೆ ಇಲಾಖೆ(Department of Urban and Land Transport) ಅದೇ ಮಾದರಿಯ ಯೋಜನೆಯನ್ನು ನಗರದ ಮೂರು ರಸ್ತೆಗಳಿಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಮಲ್ಲೇಶ್ವರಂ 8ನೇ ಕ್ರಾಸ್, ಜಯನಗರ 10ನೇ ಮುಖ್ಯರಸ್ತೆ ಮತ್ತು ಗಾಂಧಿ ಬಜಾರ್ ರಸ್ತೆಗಳನ್ನು ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಉನ್ನತ ದರ್ಜೆಗೆ ಏರಿಸಲಾಗುವುದು.   ಇದೇ ವೇಳೆ ನಗರ …

Read More »

ರಸ್ತೆ ಗುಂಡಿ ಸರಿಪಡಿಸದ ಇಂಜಿನಿಯರ್​​ಗಳಿಗೆ ಅಮಾನತು ಶಿಕ್ಷೆ.!

ನಗರದ ಕೆಟ್ಟ ರಸ್ತೆಗಳಿಗೆ ಪಾಲಿಕೆ ನಾಲ್ವರು ಇಂಜಿನಿಯರ್​ಗಳೇ ನೇರ ಹೊಣೆ ಎಂದು ಹೇಳಿದ ಮಹಾರಾಷ್ಟ್ರದ ಥಾಣೆ ನಾಗರಿಕ ಆಯುಕ್ತ ಡಾ. ವಿಪಿನ್​ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ. ಈ ನಾಲ್ವರು ಇಂಜಿನಿಯರ್​ಗಳು ರಸ್ತೆಗಳಲ್ಲಿ ಗುಂಡಿ ತುಂಬಿಸುವ ಕಾರ್ಯ ಮಾಡಿಲ್ಲ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯ ಬಗ್ಗೆಯೂ ಲಕ್ಷ್ಯ ನೀಡಿಲ್ಲ ಎಂದು ಶರ್ಮಾ ಹೇಳಿದ್ದಾರೆ. ಉತ್ತಲ್ಸರ್​​ ವಾರ್ಡ್ ಎಕ್ಸಿಕ್ಯೂಟಿವ್​ ಇಂಜಿನಿಯರ್ ಚೇತನ್​ ಪಡೆಲ್​, ವಾರ್ತಾಕ್​ ನಗರ ವಾರ್ಡ್​ನ ಪ್ರಕಾಶ್​ ಕಡ್ತಾರೆ, ಜ್ಯೂನಿಯರ್​ ಇಂಜಿನಿಯರ್​ …

Read More »

ಕಾಸ್ಮೊಪಾಲಿಟನ್ ಸಂಸ್ಕೃತಿ ಹೊಂದಿರುವ ಬೆಳಗಾವಿಯಲ್ಲಿ ಇಡೀ ಭಾರತವೇ ಇದೆ: ಬೊಮ್ಮಾಯಿ

ಬೆಳಗಾವಿ: ಬೆಳಗಾವಿಯಲ್ಲಿ ಇಡೀ ಭಾರತವೇ ಇದೆ. ಕಾಸ್ಮೊಪಾಲಿಟನ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ವಿಶಾಲ ಮನೋಭಾವದ ಜನರು ಈ ನಗರದವರು ಎಂದು ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಹೇಳಿದರು. ನಗರದ ‌ಎಸ್‌ಪಿಎಂ ರಸ್ತೆಯಲ್ಲಿ ಶಿವಾಜಿ ಉದ್ಯಾನದ ಸಮೀಪದಲ್ಲಿ ಸ್ಮಾರ್ಟ್ ‌ಸಿಟಿ‌ ಯೋಜನೆಯಲ್ಲಿ ನಿರ್ಮಿಸಲಾದ ರವೀಂದ್ರ ಕೌಶಿಕ್ ಇ- ಗ್ರಂಥಾಲಯವನ್ನು ಭಾನುವಾರ ಉದ್ಘಾಟಿಸಿ‌ ಅವರು ಮಾತನಾಡಿದರು. ಸಂಕುಚಿತ ಮನೋಭಾವಕ್ಕೆ ಇಲ್ಲಿ ಜಾಗ ಇಲ್ಲ ಎನ್ನುವುದನ್ನು ಈಚೆಗೆ ನಡೆದ ಮಹಾನಗರಪಾಲಿಕೆ ಸಾರ್ವತ್ರಿಕ ‌ಚುನಾವಣೆಯಲ್ಲಿ ಜನರು ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿಗೆ …

Read More »

ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರು ಸ್ಟಾರ್ ನಾಯಕಿಯರು ರೊಮ್ಯಾನ್ಸ್

ಸೆಪ್ಟಂಬರ್ 27 ರಂದು ನಟ ಡಾರ್ಲಿಂಗ್ ಕೃಷ್ಣ ಹೊಸ ಚಿತ್ರವೊಂದಕ್ಕೆ ಚಾಲನೆ ಕೊಡ್ತಿದ್ದಾರೆ. ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ, ಐಪಿಎಸ್ ರವಿ ಡಿ ಚೆನ್ನಣ್ಣನವರ್ ಈ ಸಿನಿಮಾದ ಟೈಟಲ್ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರು ನಾಯಕಿಯರು ನಟಿಸುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಕನ್ನಡ ಚಿತ್ರರಂಗ ಯುವ ಪ್ರತಿಭಾನ್ವಿತ ನಟಿ ನಿಶ್ವಿಕಾ ನಾಯ್ಡು ಹಾಗೂ ಕಿರುತೆರೆಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿರುವ ಮೇಘಾ ಶೆಟ್ಟಿ ಇಬ್ಬರು ಪ್ರಮುಖ …

Read More »

ಇದೇ 27ಕ್ಕೆ ಭಾರತ್ ಬಂದ್ : ಯಾರೆಲ್ಲಾ ಬಂದ್ ಬೆಂಬಲ ಸೂಚಿಸಿದ್ದಾರೆ ಗೊತ್ತಾ..?

ಬೆಂಗಳೂರು: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನ ಜಾರಿಗೆ ತಂದು ವರ್ಷವಾಗ್ತಿದೆ. ಈ ನಿಟ್ಟಿನಲ್ಲಿ ಅಂದಿನಿಂದಲೂ ಈ ಕಾಯ್ದೆಗಳನ್ನ ರೈತರು ವಿರೋಧಿಸಿಕೊಂಡೇ ಬರ್ತಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇದೀಗ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ, ರೈತ ಸಂಘಟನೆ ಇದೇ ತಿಂಗಳ 27 ಕ್ಕೆ ಭಾರತ್ ಬಂದ್ ಗೆ ಕರೆ ನೀಡಿದೆ. ಇದೀಗ ರೈತ ಸಂಘಟನೆ ನೀಡಿರುವ ಭಾರತ್ ಬಂದ್ ಗೆ …

Read More »

ನಾಳೆ ಎಂದಿನಂತೆ ರಾಜ್ಯದಲ್ಲಿ ಸಂಚರಿಸಲಿದೆ ಸಾರಿಗೆ ಬಸ್

ಬೆಂಗಳೂರು : ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ವೇಳೆ ಸಂಚರಿಸಲಿರುವ ಬಿಎಂಟಿಸಿ ಹಾಗೂ ಕೆಎಸ್‌ಆರ್ಟಿಸಿ ಬಸ್ ಗಳಿಗೆ ಭದ್ರತೆ ಕೋರಿ ಪೊಲೀಸರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ, ಸೋಮವಾರ ರಾಜ್ಯದಲ್ಲಿ ಎಂದಿನಂತೆ ಸಾರಿಗೆ ಬಸ್ ಸಂಚರಿಸಲಿದ್ದು, ಬಸ್ ಮತ್ತು ಸಂಸ್ಥೆಯ ಆಸ್ತಿಗೆ ಹಾನಿಯಾಗದಂತೆ ಭದ್ರತೆ ಒದಗಿಸಲು …

Read More »

ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ : ಬಸವರಾಜ ಬೊಮ್ಮಾಯಿ

ಬೆಳಗಾವಿ: ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಿಟ್ಟು, ಅನುಮೋದನೆ ಪಡೆಯಲಾಗುವುದು. ಈಗಾಗಲೇ ಅನೇಕ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಲಾಗಿದೆ. ಡಿಸೆಂಬರ್ ಒಳಗಡೆ ಸಾಧ್ಯವಿರುವ ಮತ್ತಷ್ಟು ಕಚೇರಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ಬಾಕಿ ಪಾವತಿಸದಿದ್ದಲ್ಲಿ …

Read More »

ಸಿಎಂ ಬೊಮ್ಮಾಯಿ ಎದುರೇ ಧಿಕ್ಕಾರ ಕೂಗಿದ ಜೆಡಿಎಸ್​ ಕಾರ್ಯಕರ್ತರು.. ನಡೆದಿದ್ದೇನು..?

ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿಗೆ ಸ್ವತಃ ಅವರ ಎದುರಲ್ಲೇ ಧಿಕ್ಕಾರ ಕೂಗಿದ ಘಟನೆ ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಮಹಿಳೆಗೆ ಅತ್ಯಾಚಾರವೆಸಗಿ ಕೊಲೆ ಆರೋಪಿಗಳನ್ನ ಬಂಧಿಸಲು ಈ ವೇಳೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳನ್ನ ಬಂಧಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಜೆಡಿಎಸ್ ಕಾರ್ಯಕರ್ತರು‌ ಬಂದಿದ್ದರು.. ಕಾರ್ಯಕರ್ತರ ಮನವಿ ಪಡೆಯದೇ ಹೊರಟ ಸಿಎಂಗೆ ಕಾರ್ಯಕರ್ತರು …

Read More »