Breaking News

Daily Archives: ಸೆಪ್ಟೆಂಬರ್ 26, 2021

ಬೆಳಗಾವಿ ಮಾದರಿ ಯಶಸ್ವಿಯಾದರೆ ಪ್ರತಿ ಪಾಲಿಕೆಯಲ್ಲೂ ಇ-ಗ್ರಂಥಾಲಯ ನಿರ್ಮಾಣ: ಸಿಎಂ

ಬೆಳಗಾವಿ: ಇಡೀ ಭಾರತವೇ ಬೆಳಗಾವಿಯಲ್ಲಿದೆ. ಇಲ್ಲಿಯ ಜನತೆ ಕನ್ನಡನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ದೇಶಾಭಿಮಾನಿಗಳು. ಯಾವುದೇ ರೀತಿಯ ಸಂಕುಚಿತ ಭಾವನೆ ಹಾಗೂ ವಿಚಾರಗಳಿಗೆ ಇಲ್ಲಿ ಜಾಗವಿಲ್ಲ ಎಂಬುದನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಶಹಾಪುರದ ಶಿವಾಜಿ ಉದ್ಯಾನದ ಬಳಿಯ ರವೀಂದ್ರ ಕೌಶಿಕ್ ಇ-ಗ್ರಂಥಾಲಯವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆ ಕರ್ನಾಟಕ ರಾಜ್ಯದ ಕಿರೀಟ ಪ್ರಾಯವಾಗಿದೆ. ಆದ್ದರಿಂದ …

Read More »

ಮೀನು ಹಿಡಿಯಲು ಹೋಗಿ ಕಡಲ ಪಾಲದ ನೌಕಾನೆಲೆ ಉದ್ಯೋಗಿ

ಅಂಕೋಲಾ:ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಮುಳುಗಿ ನೌಕಾನೆಲೆ ಉದ್ಯೋಗಿಯೋರ್ವ ಮೃತ ಪಟ್ಟ ಘಟನೆ ಭಾನುವಾರ ಬೆಲೇಕೆರಿಯಲ್ಲಿ ನಡೆದಿದೆ. ನೌಕಾನೆಲೆ ಉದ್ಯೋಗಿಯಾಗಿರುವ ತಾಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಪುರಂದರ ಶಿವಾನಂದ ನಾಯ್ಕ ಎಂಬಾತನೇ ಮೃತಪಟ್ಟ ವ್ಯಕ್ತಿ. ಈತನು ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಬೆಲೇಕೆರಿ ತೀರದಲ್ಲಿ ಮೀನುಗಾರಿಕೆ ನಡೆಸಲು ಹೋಗಿದ್ದನು. ಸಮುದ್ರದಲ್ಲಿ ಆಕಸ್ಮಿಕವಾಗಿ ಬಿದ್ದು ಕೆಲ ಕಾಲ ಕಣ್ಮರೆಯಾದ ಇತನನ್ನು ಅಂಕೋಲಾ ಪೊಲೀಸರು ಮತ್ತು ಕರಾವಳಿ ಕಾವಲು ಪಡೆ …

Read More »

ಸಿಎಂ ಬೆಂಗಾವಲು ವಾಹನಗಳಿಂದ ಗಾಬರಿಬಿದ್ದು ಸ್ಕೂಟಿಯಿಂದ ಬಿದ್ದ ಮಹಿಳೆ

ಬೆಳಗಾವಿ: ಸಿಎಂ ಬೆವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಹೆದರಿ ಮಹಿಳೆಯೋರ್ವರು ಆಯತಪ್ಪಿ ಸ್ಕೂಟಿಯಿಂದ ಬಿದ್ದ ಘಟನೆ ಜಿಲ್ಲೆಯ ಸಾಂವಗಾವ್​ ರಸ್ತೆಯಲ್ಲಿ ನಡೆದಿದೆ. ಸಿಎಂ ಬೊಮ್ಮಾಯಿ ಕಾರ್ಯಕ್ರಮದ ನಿಮಿತ್ತ ಸಾಂವಗಾವ್​ ರಸ್ತೆಯಲ್ಲಿ ಬೆಂಗಾವಲು ವಾಹನ ಸಮೇತ ಬರುವಾಗ ದಿಢೀರ್​ನೆ ಎದುರಾದ ಬೆಂಗಾವಲು ವಾಹನಗಳಿಗೆ ಹೆದರಿದ ಮಹಿಳೆಗೆ ಪೋಲಿಸರು ಪಕ್ಕಕ್ಕೆ ಹೋಗಿ ಎಂದು ಗದರಿಸಿದ್ದಾರೆ ಎನ್ನಲಾಗಿದ್ದು ಈ ವೇಳೆ ಸ್ಕೂಟಿಯನ್ನು ಪಕ್ಕಕ್ಕೆ ತಿರುಗಿಸುವಾಗ ಆಯತಪ್ಪಿ ಮಹಿಳೆ ಬಿದ್ದಿದ್ದು ಮಹಿಳೆಗೆ ಚಿಕ್ಕ ಪುಟ್ಟ ಗಾಯಗಳಾಗಿವೆ.

Read More »

ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಕನ್ನಡಿಗರ ಹಲವು ವರ್ಷಗಳ ಕನಸಾಗಿದೆ. ನಾನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಆಯ್ಕೆಯಾದರೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವುದು ಮಾತ್ರವಲ್ಲದೆಯೇ ಗೋವಾದಲ್ಲಿ ಕನ್ನಡಶಾಲೆಗಳನ್ನು ಕಾಲೇಜು ಶಿಕ್ಷಣದ ವರೆಗೂ ವಿಸ್ತರಣೆ ಮಾಡುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಿರುವ ಮಹೇಶ್ ಜೋಶಿ ಭರವಸೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾದ ಮಡಗಾಂವನಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು-ಕಳೆದ …

Read More »

ಡಿಜಿಟಲ್ ಓದುಗರಿಗೆ ಭಾರಿ ಭರವಸೆ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ಬೆಂಗಳೂರು, ಸೆ. 26: ಬೆಳಗಾವಿಯ ಇ-ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸುತ್ತೇವೆ. ಅದು ಯಶಸ್ವಿಯಾದಲ್ಲಿ, ಇದೇ ಮಾದರಿಯಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ ಇ ಲೈಬ್ರರಿ ತೆರೆಯಲು ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯಲ್ಲಿ ರವೀಂದ್ರ ಕೌಶಿಕ್ ಹೆಸರಿನಲ್ಲಿ ಇ-ಗ್ರಂಥಾಲಯವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದ್ದಾರೆ. ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ. ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ. ಜ್ಞಾನ …

Read More »

ಉಗ್ರರ ವಿರುದ್ಧ ಹೋರಾಡಲು ಮಂಗಳೂರು ಪೊಲೀಸರಿಗೆ ‘ರಾಣಿ’ ಬಲ!

ಮಂಗಳೂರು, ಸೆಪ್ಟೆಂಬರ್ 26; ದಕ್ಷಿಣ ಕನ್ನಡ ಜಿಲ್ಲೆಗೆ ಉಗ್ರರ ಭೀತಿ ಇರೋದನ್ನು ಕೇಂದ್ರ ಗುಪ್ತಚರ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿರಬೇಕೆಂದು ಇಲಾಖೆ ಸೂಚಿಸಿದೆ. ಹಬ್ಬದ ಸಂದರ್ಭದಲ್ಲಿ ಉಗ್ರರು ಕರಾವಳಿ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ಎಸಗಬಹುದೆಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ಮುನ್ನೆಚ್ಚೆರಿಕಾ ಕ್ರಮವಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಆದರೆ ಈ ಭೀತಿಯಿಂದ ಮಂಗಳೂರನ್ನು …

Read More »

ಗೋವಾ: ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ “ಎಸ್‍ಒಪಿ” ಜಾರಿ

ಪಣಜಿ: ರಾಜ್ಯದಲ್ಲಿ ಜಾರಿಯಲ್ಲಿದ್ದ ಸೆಕ್ಷನ್ 144 ಹಿಂತೆಗೆದುಕೊಳ್ಳಲಾಗಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ “ಎಸ್‍ಒಪಿ” ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು. ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,’ರಾಜ್ಯದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಯಲ್ಲಿದ್ದ ಕಫ್ರ್ಯೂ ತೆಗೆದು ಹಾಕಿ ವಿಶೇಷ ಎಸ್‍ಒಪಿ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಎರಡೂ ಡೋಸ್ ಲಸಿಕೆ ಪಡೆದಿರುವ ಅಥವಾ ಕೋವಿಡ್ ನೆಗೆಟಿವ್ ವರದಿ ಹೊಂದಿರುವವರಿಗೆ ರಾಜ್ಯದಲ್ಲಿ ಕ್ಯಾಸಿನೊ, ಸ್ಪಾ, ನೈಟ್ ಕ್ಲಬ್ …

Read More »

ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ

ಬೆಂಗಳೂರು: ರೈತರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ರೈತರ ಬೆನ್ನುಲುಬಾಗಿ ನಿಲ್ಲುತ್ತದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ರೈತರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ನಮ್ಮ ಪಕ್ಷ ರೈತರ ಧ್ವನಿಗೆ ಜೊತೆಯಾಗಿ ಸೋಮವಾರದ ಭಾರತ್ ಬಂದ್ ಗೆ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತಾನಾಡಿದ ಅವರು, ನಾವು ಯಾರನ್ನೂ ಬಲವಂತ ಮಾಡಿ ನಮ್ಮ ಪಕ್ಷಕ್ಕೆ ಬನ್ನಿಯೆಂದು ಕರೆದಿಲ್ಲ. ಅವರಾಗಿಯೇ ಪಕ್ಷಕ್ಕೆ ಬರಲು …

Read More »

ನಾವು ರಾಜೀನಾಮೆ ನೀಡಿ ಬಿಜೆಪಿಗೆ ಬರದಿದ್ದರೆ ಸಚಿವರಾಗುತ್ತಿರಲಿಲ್ಲ : ಬಿ.ಸಿ ಪಾಟೀಲ್

ಶಿವಮೊಗ್ಗ: ನಾವು ರಾಜೀನಾಮೆ ನೀಡಿ ಬಿಜೆಪಿ ಬರದಿದ್ದರೆ ಸಚಿವರಾಗುತ್ತಿರಲಿಲ್ಲಎಂದು ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು. ಈಸೂರು ಹುತಾತ್ಮರ ಸ್ಮಾರಕ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ‌ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದರಿಂದಲೇ ನಾವು ಬಿಜೆಪಿಗೆ ಬಂದಿದ್ದು. ನಂಬಿದವರಿಗೆ ಒಳ್ಳೆಯದನ್ನು ಮಾಡಲು ತಮ್ಮ ಸ್ಥಾನ ಬಿಡಲೂ ಯಡಿಯೂರಪ್ಪ ಅಂಜುವುದಿಲ್ಲ‌. ಯಡಿಯೂರಪ್ಪ ಅವರು ಜಾತ್ಯಾತೀತ ನಾಯಕ. ನಾವು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ 17 ಜನರಲ್ಲಿ ಇಬ್ಬರು …

Read More »

ಯಡಿಯೂರಪ್ಪ ಲೂಟಿ‌ ಹೊಡೆಯುದನ್ನು ಬಿಟ್ಟು ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ರಾಜಾಹುಲಿಯಂತೆ, ಇಂದಿರಾ ಕ್ಯಾಂಟಿನ್ ಮುಚ್ಚಿದಕ್ಕೆ ಅವರು ರಾಜಾಹುಲಿಯಾ? ಅತ್ಯುತ್ತಮ ಶಾಸಕನಂತೆ, ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಿದ್ದರು. ಲೂಟಿ‌ ಹೊಡೆಯುವುದನ್ನು ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಸಂಜಯನಗರದ ಕುವೆಂಪು ಆಟದ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಏಳು ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ, ಕುಮಾರಸ್ವಾಮಿ ಅಕ್ಕಿ ಕೊಟ್ಟಿದ್ದರೆ ಹೇಳಿ? ಯಡಿಯೂರಪ್ಪ ಕೊಟ್ಟಿದ್ದರೇ? ಈಗ ಬೊಮ್ಮಾಯಿ …

Read More »