Breaking News

Monthly Archives: ಆಗಷ್ಟ್ 2021

ಇಡಿ ದಾಳಿ: ನಂಗೆ ಎಚ್‌ಡಿಕೆ ಮೇಲೆಯೇ ಡೌಟ್; ಜಮೀರ್ ವಾಗ್ದಾಳಿ

ಬೆಂಗಳೂರು: ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.​ಡಿ ಕುಮಾರಸ್ವಾಮಿ ಯಾಕೆ ಹಾಗೆ ಹೇಳಿದರು. ಎಲ್ಲೋ ಒಂದು ಕಡೆ ಅವರೇ ಜಾರಿ ನಿರ್ದೇಶನಾಲಯ (ಇಡಿ)ಗೆ ಮಾಹಿತಿ ಕೊಟ್ಟಿರಬಹುದು ಅಂತ ಡೌಟ್​ ಶುರುವಾಗಿದೆ ಎಂದು ಕಾಂಗ್ರೆಸ್​ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ. ತಮ್ಮ ನಿವಾಸದ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಬೆಳವಣಿಗೆ ಸಹಿಸಲಾಗದೆ ದಾಳಿ ಮಾಡಿಸಿದ್ದಾರೆ. ನಾನು ಈ ಹಿಂದೆ ಇದ್ದ …

Read More »

ಮಾಜಿ ಮುಖ್ಯ ಮಂತ್ರಿ ಅವರ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ

ಹುಬ್ಬಳ್ಳಿ: ನಗರದ ಕೇಶ್ವಾಪುರದ ಬಾದಾಮಿ ನಗರದಲ್ಲಿ‌ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶನಿವಾರ ಸಂಜೆ ಭೇಟಿ ನೀಡಿಗುಪ್ತ ಗುಪ್ತ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಸಂಪುಟದಿಂದ ದೂರ ಉಳಿಯುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಶಾಸಕರಾದ ಜಗದೀಶ್ ಶೆಟ್ಟರ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತಿದ್ದು ಒಂದು …

Read More »

ಸೋತ ವ್ಯಕ್ತಿಯನ್ನ ಡಿಸಿಎಂ ಮಾಡಿದರು, ಈಗ ಯಾವುದೇ ಬೇಸರ ಇಲ್ಲ: ಲಕ್ಷ್ಮಣ ಸವದಿ

ಚಿಕ್ಕೋಡಿ: ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಲಕ್ಷ್ಮಣ ಸವದಿಯನ್ನ ಕೈ ಬಿಟ್ಟಿದ್ದಾರೆ. ಇದೇ ವಿಚಾರವಾಗಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಂಪುಟದಿಂದ ತನ್ನನ್ನ ಕೈ ಬಿಟ್ಟಿದ್ದಕ್ಕೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ. ಸೋತಂತಹ ವ್ಯಕ್ತಿಯನ್ನು ಡಿಸಿಎಮ್ ಮಾಡಿದ್ದಾರೆ, ಸಚಿವನನ್ನಾಗಿ ಮಾಡಿ ನನಗೆ ಒಳ್ಳೆಯ ಸ್ಥಾನಮಾನವನ್ನ ಪಕ್ಷ ನೀಡಿದೆ. ಈಗ ಬೇಸರ ಮಾಡಿಕೊಳ್ಳುವ ಪ್ರಶ್ನೆಯೇ ಬರಲ್ಲ ಎಂದಿದ್ದಾರೆ. ಕೆಲವೊಮ್ಮೆ ಮತ್ತೊಬ್ಬರಿಗೆ ಅವಕಾಶ ಕೊಡುವುದಕ್ಕಾಗಿ ಅವಧಿ …

Read More »

ಮತ್ತೂಂದು ಸುತ್ತಿನ ಒತ್ತಡ ತಂತ್ರಗಾರಿಕೆಗೆ ಮುಂದಾದರೇ ರಮೇಶ ಜಾರಕಿಹೊಳಿ?

ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮತ್ತೂಂದು ಸುತ್ತಿನ ಒತ್ತಡ ತಂತ್ರಕ್ಕೆ ಮುಂದಾಗಿದ್ದಾರೆಯೇ? ಅವರ ಚಲನವಲನ ಗಮನಿಸಿದರೆ ಅಂತಹ ಅನುಮಾನ ಮೂಡುತ್ತದೆ. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂದಿನ ಇಡೀ ವಿದ್ಯಮಾನ ತಮ್ಮ ಸುತ್ತಲೇ ಸುತ್ತುವಂತೆ ಮಾಡಿಕೊಂಡಿದ್ದ ರಮೇಶ ಜಾರಕಿಹೊಳಿ, ಪ್ರಕರಣವೊಂದರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ ಕೆಲ ದಿನಗಳವರೆಗೆ ಮೌನವಾಗಿದ್ದರು. ಬಳಿಕ ಒಂದಿಷ್ಟು ಚಟುವಟಿಕೆಗಳಿಗೆ ಮುಂದಾಗಿದ್ದರು. ಸಚಿವ …

Read More »

ಬಿಜೆಪಿ ಭಿನ್ನಮತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ

ಬೆಂಗಳೂರು,ಆ.9- ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಸಂಪುಟ ವಿಸ್ತರಣೆಯಾಗಿ ಖಾತೆಗಳು ಹಂಚಿಕೆಯಾಗಿದ್ದರೂ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ನಿರೀಕ್ಷಿತ ಖಾತೆ ಸಿಗದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರನ್ನು ಸಂಬಾಳಿಸುವುದೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ. ಅಸಮಾಧಾನಗೊಂಡಿರುವ ಸಚಿವರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜ್, ವಿ.ಸೋಮಣ್ಣ, ಶ್ರೀರಾಮುಲು ಮತ್ತಿತರರು ಎಲ್ಲವೂ ಸರಿ ಹೋಗಿದೆ ಎಂದು …

Read More »

ಜಮೀರ್ ಮೇಲೆ ಇಡಿ ದಾಳಿ ಮಾಡಿಸಿದ್ಯಾರು? ಮತ್ಯಾಕೇ?

ಐಎಂಎ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೂಡಲೇ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಜಮೀರ್ ಅಹ್ಮದ್ ಅವರಿಗೆ ಸೇರಿದ್ದ ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿಯಿರುವ ನಿವಾಸ, ಸದಾಶಿವ ನಗರದ ಫ್ಲಾಟ್ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಸತತ 24 ಗಂಟೆಗಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು. …

Read More »

ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನ ಪರಿಗಣನೆಯ ಹಂತದಲ್ಲಿದೆ: ಸಂಸ್ಕೃತಿ ಖಾತೆ ಸಚಿವ

ನವದೆಹಲಿ: ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಪ್ರಸ್ತಾವ ಪರಿಗಣನೆಯಲ್ಲಿದೆ ಎಂದು ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್‌ಮೇಘ್ವಾಲ್‌ ಲೋಕಸಭೆಗೆ ತಿಳಿಸಿದರು. ಲೋಕಸಭೆಯಲ್ಲಿ ಸೋಮವಾರ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿಯವರ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡುವ ಕುರಿತು ಚರ್ಚಿಸಲು 8 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು. ‘ಇಲ್ಲಿಯವರೆಗೆ ತಮಿಳು, ತೆಲುಗು, ಸಂಸ್ಕೃತ, ಕನ್ನಡ, ಮಲಯಾಳ ಮತ್ತು ಒಡಿಯಾ ಭಾಷೆಗಳಿಗೆ …

Read More »

ಕಾಂಗ್ರೆಸ್‌ನಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

ಶಿವಮೊಗ್ಗ: ಟೋಕಿಯೋ ಒಲಿಂಪಿಕ್‌ನ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾನುವಾರ ಶಿವಪ್ಪ ನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಶೂಟರ್ ಅಭಿನವ್ ಬಿಂದ್ರಾ ನಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 140 ಕೋಟಿ ಭಾರತೀಯರ ಹಿರಿಮೆ ಎತ್ತಿಹಿಡಿದ ಸಾಧನೆ ಮಾಡಿದ್ದಾರೆ ಎಂದು ಸಂತಸ …

Read More »

ದೇವರ ದಯೆಯಿಂದ ಕೋವಿಡ್ ಮೂರನೇ ಅಲೆ ಬರಬಾರದು: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಕೋವಿಡ್ ಮೂರನೇ ಅಲೆ ದೇವರ ದಯೆಯಿಂದ ಬರಬಾರದು. ಬಂದರೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೋವಿಡ್ ಕುರಿತ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಮಾಡಿದ್ದೇನೆ. ಮೈಸೂರು ಜಿಲ್ಲೆ ಸ್ಥಿತಿಗತಿ, ಮೂರನೇ ಹಂತದ ಮುಂಜಾಗ್ರತೆ ಬಗ್ಗೆ ಪರಿಶೀಲನೆ ಮಾಡಿ ಸಭೆ ಮಾಡಿದ್ದೇನೆ. ಮೈಸೂರಿನ ಪಾಸಿಟಿವಿಟಿ ರೇಟ್ 1.19 ಇದೆ. ಕಳೆದ ಒಂದು ವಾರದಿಂದ …

Read More »

ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟ: ಶೇಕಡಾ 99.9 ವಿದ್ಯಾರ್ಥಿಗಳು ಪಾಸ್, ಓರ್ವ ಮಾತ್ರ ಫೇಲ್

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಿದರು. ಜುಲೈ 19 ಮತ್ತು 22ರಂದು ನಡೆದಿದ್ದ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಂದು ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಆತ ತನ್ನ ಬದಲು ಬೇರೆಯವರಿಂದ ಪರೀಕ್ಷೆ ಬರೆಸಿದ್ದ. ಹೀಗಾಗಿ ಆತನನ್ನು ಅನುತ್ತೀರ್ಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಕೋವಿಡ್ ಕಾರಣದಿಂದ …

Read More »