ಬೆಂಗಳೂರು : ತಾವು ರಾಜೀನಾಮೆ ನೀಡುವಂತೆ ಹೈಕಮಾಂಡ್ ನನಗೆ ಯಾವುದೇ ಸೂಚನೆಯನ್ನೂ ಸಹ ನೀಡಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಈ ಸ್ಪಷ್ಟನೆ ನೀಡುವ ಮುನ್ನ ಬಿಜೆಪಿ ಮೂಲಗಳು ಸಿಎಂ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ನೀಡಿದ್ದವು. ಸಿಎಂ ಅವರು ಆರೋಗ್ಯ ಕಾರಣದಿಂದ ರಾಜೀನಾಮೆ ನೀಡುವುದಾಗಿ ಹೇಳಿದ್ದರು ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿತ್ತು. ಆದರೆ ಪಕ್ಷ ಸೂಚಿಸಿದರೆ ಮಾತ್ರವೇ ಸಿಎಂ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ …
Read More »Monthly Archives: ಜುಲೈ 2021
ಯಡಿಯೂರಪ್ಪ ದೆಹಲಿಗೆ ಒಯ್ದಿರುವ 6 ಬ್ಯಾಗ್ ರಹಸ್ಯವೇನು?
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೆಹಲಿ ಪ್ರವಾಸದ ಬಗ್ಗೆ ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿಎಂ 6 ಬ್ಯಾಗ್ ಗಳ ಸಮೇತ ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿನ್ನೆ ಸಿಎಂ ಯಡಿಯೂರಪ್ಪ ತಮ್ಮ ಇಬ್ಬರು ಪುತ್ರರು ಹಾಗೂ ಕೆಲ ಅಧಿಕಾರಿಗಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಫ್ಲೈಟ್ ನಲ್ಲಿ 6 ದೊಡ್ಡ ದೊಡ್ಡ ಬ್ಯಾಗ್ ಗಳನ್ನು ಕೊಂಡೊಯ್ದಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿದೆ. ಆ …
Read More »ನೀರಿಗೆ ಬಿದ್ದ ಬಾಲಕನನ್ನು ರಕ್ಷಿಸಿ ತನ್ನ ಪ್ರಾಣ ಕಳೆದುಕೊಂಡ 16 ವರ್ಷದ ಬಾಲಕಿ
ಯಾದಗಿರಿ : ನೀರಲ್ಲಿ ಕಾರು ಜಾರಿ ಬಿದ್ದ ಕುರಿಗಾಯಿ ಬಾಲಕನನ್ನು ರಕ್ಷಿಸಿ ತಾನು ಪ್ರಾಣ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ದುರಂತ ನಡೆದಿದ್ದು, ರಾಜಮ್ಮ(16) ಹೆಸರಿನ ಬಾಲಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಜೋಳದಡಗಿ ಗ್ರಾಮದ ಅಡಕಲ್ ಬಂಡೆಯಲ್ಲಿ ಕುರಿಗಾಯಿ ಬಾಲಕನೋರ್ವ ನೀರು ಕುಡಿಯಲು ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ 16 ವರ್ಷದ ಬಾಲಕಿ, ಬಾಲಕನ ಕೈ ಹಿಡಿದು …
Read More »ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೂಚನೆ ಮೇರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಭಯ ಬೇಡಾ ಆತ್ಮವಿಸ್ವಾಸದಿಂದ ಪರೀಕ್ಷೆ ಎದುರಿಸಿ : ವಿದ್ಯಾರ್ಥಿಗಳಿಗೆ ಸಲಹೆ
ಬೆಳಗಾವಿ : ಜುಲೈ 19 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಗೆ ಇಲ್ಲಿನ ಜಾಧವ ನಗರದ ನಿವಾಸದಲ್ಲಿ ಮಾಸ್ಕ್, ಸ್ಯಾನಿಟೈಸರ್, ಕೋವಿಡ್ ಜಾಗೃತಿ ಕರಪತ್ರ ವಿತರಿಸಿದರು. ತಾಲ್ಲೂಕಿನ ಯಮಕನಮರಡಿ ಕ್ಷೇತ್ರದ ಕಾಕತಿ, ಕಡೋಲಿ, ಹುದಲಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಒಟ್ಟು 20 ಕೇಂದ್ರಗಳಲ್ಲಿ 1269 ವಿದ್ಯಾರ್ಥಿಗಳು, 250 ಶಿಕ್ಷಕರಿಗೆ ಮಾಸ್ಕ್ , …
Read More »ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಸತೀಶ್ ಜಾರಕಿಹೊಳಿ, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಈ ಪರೀಕ್ಷೆ ಮಹತ್ವದ ಹೆಜ್ಜೆ
ಗೋಕಾಕ: ಜು. 19 ರಿಂದ ಪ್ರಾರಂಭವಾಗುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಇಲ್ಲಿನ ಹಿಲ್ ಗಾರ್ಡನ್ ಲ್ಲಿ ಗೃಹಕಚೇರಿಯಲ್ಲಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕೆಪಿಸಿಸಿಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪರೀಕ್ಷಾ ಕೇಂದ್ರಗಳಿಗೆ ಮಾಸ್ಕ್, ಸ್ಯಾನಿಟೈಸರ್ , ಕೋವಿಡ್ ಜಾಗೃತಿ ಕರಪತ್ರ ಶನಿವಾರ ವಿತರಿಸಿದರು. ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷವೂ ಕೂಡ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.ಈ ಭಾರೀ ಕೂಡ ಯಮಕನಮರಡಿ ಕ್ಷೇತ್ರದ ಶಾಲಾ ಮಕ್ಕಳಿಗೆ …
Read More »ದುಬಾಯಿಯಲ್ಲಿ ಗಿನ್ನೆಸ್ ದಾಖಲೆಯ ಮಿರಾಕಲ್ ಗಾರ್ಡನ್
ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಸುಂದರ ವರ್ಣರಂಜಿತ ನಗರಗಳಲ್ಲಿ ದುಬಾಯಿ ವಿಶ್ವ ವಿಖ್ಯಾತ ಜ್ಞಾನ ವಿಜ್ಞಾನದ ನಗರ. ಗಿನ್ನೆಸ್ ದಾಖಲೆಯಲ್ಲಿ ಹಲವಾರು ಅದ್ಭುತಗಳು ಸೇರ್ಪಡೆಯಾಗಿದೆ. ಈ ರೀತಿಯ ಮಾಡಿಕೊಂಡಿರುವ ದಾಖಲೆಗಳ ಸಾಲಿನಲ್ಲಿ ದುಬಾಯಿ ಮಿರಾಕಲ್ ಗಾರ್ಡನ್ ಪುಷ್ಪ ಪ್ರಿಯರ ಸ್ವರ್ಗ. ವಿಶ್ವದ ಉದ್ಯಾನವನಗಳಲ್ಲಿ ಅತ್ಯಂತ ಹೆಚ್ಚು ವಿಸ್ತಾರವಾಗಿಯೂ ಹಾಗೂ ಅತ್ಯಂತ ಎತ್ತರದ ವಾಸ್ತು ಶಿಲ್ಪದ ಆಕೃತಿಯ ಪುಷ್ಪ ಉಧ್ಯಾನವನದ ವಿನ್ಯಾಸಕ್ಕಾಗಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. 2013 ಫೆಬ್ರವರಿ 14ನೇ …
Read More »ನಾಯಕತ್ವ ಬದಲಾವಣೆ ವಿಚಾರವಾಗಿ ಮಾರ್ಮಿಕ ಹೇಳಿಕೆ ನೀಡಿದ ಸಿಎಂ ಯಡಿಯೂರಪ್ಪ
ನಾಲ್ಕನೇ ಅವಧಿಗೆ ಸಿಎಂ ಆಗಿ 2 ವರ್ಷಗಳನ್ನ ಪೂರೈಸಿರುವ ಸಿಎಂ ಯಡಿಯೂರಪ್ಪ ಇಂದು ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನ ಭೇಟಿಯಾದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಊಹಾಪೋಹಗಳು ಕೇಳಿ ಬರ್ತಿರುವ ಬೆನ್ನಲ್ಲೇ ಸಿಎಂ ದೆಹಲಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯ ಸಾಕಷ್ಟು ನಾಯಕರು ದನಿ ಎತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆಗೆ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಸಂಜೆ ಪ್ರಧಾನಿ ಮೋದಿಯನ್ನ …
Read More »ಇಡಿ ಅಧಿಕಾರಿಯಂತೆ ನಟಿಸಿ ಟಿಎಂಸಿ ಸಂಸದನಿಗೆ ವಂಚಿಸಲು ಯತ್ನಿಸಿದ್ದ ವ್ಯಕ್ತಿ ಅರೆಸ್ಟ್
ಕೋಲ್ಕತ್ತಾ: ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿ ನಟಿಸಿ ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್ ಅವರಿಗೆ ಹಣದ ಬದಲಾಗಿ ಏಜೆನ್ಸಿಯಲ್ಲಿ ದಾಖಲಾದ ಹಲವಾರು ಪ್ರಕರಣಗಳನ್ನು ನಿಭಾಯಿಸಲು ನೆರವಾದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಎಸ್ಪ್ಲನಡೆ ಬಸ್ ಟರ್ಮಿನಸ್ನಲ್ಲಿದ್ದ ಆರೋಪಿಯನ್ನು ಚಂದನ್ ರಾಯ್ (38) ಎಂದು ಗುರುತಿಸಲಾಗಿದೆ. ಆತ ಡಮ್ ಡಮ್ ಪ್ರದೇಶದ ನಿವಾಸಿ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಸಂಸದರಿಗೆ ಅಪರಿಚಿತ ಸಂಖ್ಯೆಯಿಂದ ಕರೆ …
Read More »ಬೈಕ್ ನಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ: ಮೂವರ ಬಂಧನ
ಚಾಮರಾಜನಗರ,: ಬೈಕ್ ನಲ್ಲಿ ಅಕ್ರಮವಾಗಿ ಪಡಿತರ ಹೊತ್ತೊಯ್ಯುವಾಗ ಪೊಲೀಸರ ದಾಳಿ, ಮೂವರನ್ನು ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಬೈಕ್ ನಲ್ಲಿ ಅಕ್ರಮ ಪಡಿತರವನ್ನು ರಾಜಾರೋಷವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಸರ್ಕಾರದಿಂದ ವಿತರಣೆ ಯಾಗುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ ರಾಜಾರೋಷವಾಗಿ ಬೈಕ್ ನಲ್ಲಿ ಹೊತ್ತಯ್ಯುತ್ತಿದ್ದ ಆರೋಪಿಗಳನ್ನು ಮಾಲು ಸಮೇತ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ …
Read More »ನಾಯಕತ್ವ ಬದಲಾವಣೆ..? ಸಂಪುಟ ಪುನಾರಚನೆ..? ಭಾರಿ ಕುತೂಹಲ ಮೂಡಿಸಿದ ಸಿಎಂ ದೆಹಲಿ ಭೇಟಿ 2 ನೇ ದಿನ
ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿ ಭೇಟಿಯ ಎರಡನೇ ದಿನ ಕುತೂಹಲ ಮೂಡಿಸಿದೆ. ಮೊದಲ ದಿನ ಪ್ರಧಾನಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದ ಸಿಎಂ ಇವತ್ತು ಬಿಜೆಪಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆಯ ಬಗ್ಗೆ ಯಡಿಯೂರಪ್ಪನವರಿಗೆ ಇವತ್ತು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ದೆಹಲಿ ಬೆಳವಣಿಗೆಯ ಮೇಲೆ ಬಿಜೆಪಿ ನಾಯಕರು …
Read More »