Breaking News

Monthly Archives: ಮೇ 2021

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ನೈರುತ್ಯ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಮೈಸೂರು ; ಉದ್ಯೋಗಾಕಾಂಕ್ಷಿಗಳಿಗೆ ನೈರುತ್ಯ ರೈಲ್ವೆಯ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ ವೈದ್ಯರು -ಎಂಬಿಬಿಎಸ್, ಡಿಎನ್ ಬಿ 2 ಹುದ್ದೆ ವೈದ್ಯರು-ಎಂಬಿಬಿಎಸ್ 12 ಹುದ್ದೆ ನರ್ಸಿಂಗ್-ಬಿಎಸ್ಸಿ ನರ್ಸಿಂಗ್ 19 ಹುದ್ದೆ ಫಾರ್ಮಾಸಿಸ್ಟ್-ಫಾರ್ಮಸಿ ಡಿಪ್ಲೋಮಾ 2 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. …

Read More »

ಪದೇ ಪದೇ ಜಿಲ್ಲೆಯವರನ್ನು ಬಿಟ್ಟು ಬೇರೆಯವರಿಗೆ ಉಸ್ತುವಾರಿ ನೀಡುತ್ತಿರುವುದರಿಂದ ಈಗಿರುವ ಸಚಿವರ ಬಗೆಗೆ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ.: ರಮೇಶ ಕತ್ತಿ

ಸಂಕೇಶ್ವರ : ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸಚಿವರು, ಓರ್ವ ಉಪಮುಖ್ಯಮಂತ್ರಿ ಇದ್ದರೂ ಬೇರೆ ಜಿಲ್ಲೆಯವರಿಗೆ ಬೆಳಗಾವಿ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದು ಜಿಲ್ಲೆಯ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ ಎಂದು ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಹಿರಿಯರಾದ ಗೋವಿಂದ ಕಾರಜೋಳ ಅವರ ಬಗೆಗೆ ವಯಕ್ತಿಕವಾಗಿ ಯಾವುದೇ ಅಪಸ್ವರವಿಲ್ಲ. ಆದರೆ ಬೆಳಗಾವಿ ಜಿಲ್ಲೆ ರಾಜ್ಯದ ಅತಿದೊಡ್ಡ ಜಿಲ್ಲೆಯಾಗಿದ್ದು, …

Read More »

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ.

ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ. ಫಲಿತಾಂಶ ಬಿಜೆಪಿ ಆತ್ಮಾವಲೋಕನ ಮಾಡುವಂತೆ ಮಾಡಿದೆ. ಜನರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕೇವಲ ಅನುಕಂಪದ ಮತಗಳಿಂದ ಮಂಗಲಾ ಅಂಗಡಿ ಗೆದ್ದಿದ್ದಾರೆ.  ಇದೇ ವೇಳೆ ಕಾಂಗ್ರೆಸ್ ಮತ್ತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ. ಗೋಕಾಕ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬಿಜೆಪಿ ಶಾಸಕರೇ ಇರುವ …

Read More »

ಬಿಜೆಪಿ ಗೆಲುವಿನ ಅಂತರಕ್ಕಿಂತ ನೋಟಾಗೆ ಹೆಚ್ಚು ಮತಗಳು – ಶೇ.42.56ರಷ್ಟು ಮತ ಪಡೆದ ಕಾಂಗ್ರೆಸ್

ಬೆಳಗಾವಿ: ಕುಂದಾ ನಗರಿ ಬೆಳಗಾವಿಯನ್ನ ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಯಶಸ್ವಿಯಾದ್ರೆ, ಕಾಂಗ್ರೆಸ್ ವೀರೋಚಿತ ಸೋಲು ಕಂಡಿದೆ. ಬಿಜೆಪಿ ಗೆಲುವಿನ ಅಂತರ ನೋಟಾಗೆ ಬಿದ್ದ ಮತಗಳಿಂತ ಕಡಿಮೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ 5,240 ಮತಗಳ ಅಂತರದಿಂದ ಕಾಂಗ್ರೆಸ್ಸಿನ ಸತೀಶ್ ಜಾರಕಿಹೊಳಿ ವಿರುದ್ಧ ಗೆದ್ದಿದ್ದಾರೆ. ಆದ್ರೆ ಬೆಳಗಾವಿ ಲೋಕಸಭಾ ಕ್ಷೇತ್ರದ 10,631 ಜನರು ನೋಟಾಗೆ ಮತ ಚಲಾಯಿಸಿದ್ದಾರೆ. ಸತೀಶ್ ಜಾರಕಿಹೊಳಿ ಶೇ.42.56 ಮತ್ತು ಮಂಗಳಾ ಅಂಗಡಿ ಶೇ.43.07ರಷ್ಟು ಮತ ಗಳಿಸಿದ್ದಾರೆ. ಬಿಜೆಪಿ …

Read More »

ಸೋತು ಗೆದ್ದ ಸಾಹುಕಾರ

ಗೋಕಾಕ: ಬೆಳಗಾವಿ ಇದೊಂದು ದೊಡ್ಡ ಜಿಲ್ಲೆ ಇಲ್ಲಿ 18 ವಿಧಾನಸಭಾ ಹಾಗೂ ಎರಡು ಲೋಕಸಭಾ ಕ್ಷೇತ್ರ ಗಳನ್ನ ಹೊಂದಿದ ದೊಡ್ಡ ಜಿಲ್ಲೆ . ಇಲ್ಲಿ ಜಾರಕಿಹೊಳಿ ಅಂದ್ರೆ ಒಂದು ಶಕ್ತಿ ಬೆಳಗಾವಿಯ ಜನತೆಯ ಜನಪ್ರಿಯ ನಾಯಕರು ಯಾವದೇ ಸರ್ಕಾರ ಇರಲಿ ಎಲ್ಲಿಯಾದರೂ ಜಾರಕಿಹೊಳಿ ಸಹೋದರರು ಇದ್ದೆ ಇರತಾರೆ. ಇನ್ನು ಇವತ್ತಿನ ವಿಷಯಕ್ಕೆ ಬರೋದಾದರೆ ದಿವಂಗತ ಶ್ರೀ ಸುರೇಶ್ ಅಂಗಡಿಯವರ ನಿಧನದ ನಂತರ ಬೆಳಗಾವಿಯಲ್ಲಿ ಲೋಕಸಭಾ ಉಪ ಚುನಾವಣೆ ಮಾಡಲು ನಿರ್ಧಾರ …

Read More »

ಕಿರುತೆರೆ ನಟ ಅನಿರುದ್ಧ್ ಆರೋಗ್ಯ ಸ್ಥಿತಿ ಗಂಭೀರ: ಶೀಘ್ರ ಚೇತರಿಕೆಗೆ ಹಾರೈಸಿ ಎಂದ ಪತ್ನಿ

ಹಿಂದಿ ಕಿರುತೆರೆಯ ಖ್ಯಾತ ನಟ ಅನಿರುದ್ಧ್ ದೇವ್ ಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪತಿ ಶೀಘ್ರ ಚೇತರಿಕೆ ಹಾರೈಸಿ ಎಂದು ಪತ್ನಿ ಶುಭಿ ಅಹುಜಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪತಿ ಅನುರುದ್ಧ್ ಭೋಪಾಲ್ ಆಸ್ಪತ್ರೆಗೆ ಅನಿರುದ್ಧ ದಾಖಲಾಗಿದ್ದು, ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರೆಂದು ಅಹುಜಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಾನು ನನ್ನ 2 ತಿಂಗಳ …

Read More »

ಬೆಳಗಾವಿಯಲ್ಲಿ ಬದಲಾದ ಚಿತ್ರಣ ; ಮಂಗಳಾ ಅಂಗಡಿಗೆ ಹಿನ್ನಡೆ, ಜಾರಕಿಹೊಳಿಗೆ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆ ಗಳಿಸಿದ್ದಾರೆ. ಎರಡರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ಬೆಳಗಾವಿ ದಕ್ಷಿಣ ಹಾಗೂ ಗೋಕಾಕ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮುಂದಿದ್ದಾರೆ. ಉಳಿದಂತೆ ಅರಭಾವಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ- ಯಲ್ಲಮ್ಮ ಹಾಗೂ ರಾಮದುರ್ಗದಲ್ಲಿ ಕಾಂಗ್ರೆಸ್ ಮುನ್ನಡೆ …

Read More »

ಸೋಲು, ಗೆಲುವನ್ನು ಒಪ್ಪಬೇಕು, ಮಮತಾಗೆ ಕೊಡಬಾರದ ಕಾಟ ನೀಡಿದ್ದರು – ಡಿಕೆಶಿ

ಬೆಂಗಳೂರು: ನಾವು ನೀವೆಲ್ಲಾ ಫಲಿತಾಂಶ ನೋಡ್ತಿದಿವಿ ಸೋಲನ್ನು ಒಪ್ಪಬೇಕು. ಗೆಲುವನ್ನು ಒಪ್ಪಬೇಕು ಇದು ಪ್ರಜಾಪ್ರಭುತ್ವದ ನಿಯಮವಾಗಿದೆ. ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಕಾರ್ಯಕರ್ತರು ಯಾರೂ ಸಂಭ್ರಮ ಮಾಡಬಾರದು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ. ಬೈ ಎಲೆಕ್ಷನ್ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ್‍ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ. …

Read More »

ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ ಇಲ್ಲಾ ಸಾರ್ 30 ಸಾವಿರ ಓಟ್‍ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ

ಬೆಂಗಳೂರು: ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ ಉಪಚುನಾವಣೆಯಲ್ಲಿ ಇಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಗೆಲುವಿನ ನಗೆಬೀರಿರುವ ಕಾಂಗ್ರೆಸ್ ಬೆಳಗಾವಿ ಕ್ಷೇತ್ರದ ರಿಸಲ್ಟ್‍ಗಾಗಿ ಕಾಯುತ್ತಿದೆ. ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ. ಇಲ್ಲಾ ಸಾರ್ 30 ಸಾವಿರ ಓಟ್‍ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಒಳ್ಳೆದಾಗಲಿ ಗೆದ್ದು ಬಾ ಎಂದ ಸಿದ್ದರಾಮಯ್ಯ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಮಸ್ಕಿ …

Read More »

ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲ ಅವಕಾಶವಿತ್ತು, ರಾಜಕೀಯ ಕುತಂತ್ರದಿಂದ ಹಿನ್ನಡೆಯಾಗಿದೆ; ಯತೀಂದ್ರ ಸಿದ್ದರಾಮಯ್ಯ ಟ್ವೀಟ್

ಮೈಸೂರು: ಬಸವಕಲ್ಯಾಣ ಕ್ಷೇತ್ರದ ಬೈ ಎಲೆಕ್ಷನ್ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲ ಅವಕಾಶವಿತ್ತು. ಆದರೆ ಜಾತ್ಯತೀತ ಮುಖವಾಡ ಧರಿಸಿರುವ ಕೋಮುವಾದಿಗಳ ರಾಜಕೀಯ ಕುತಂತ್ರದಿಂದ ಕಾಂಗ್ರೆಸ್ ಹಿನ್ನಡೆಯಾಗಿದೆ. ನಕಲಿ ಜಾತ್ಯತೀತರ ಬಗ್ಗೆ ಮುಂದೆ ಜಾಗೃತರಾಗಿರಬೇಕೆಂದು ಜೆಡಿಎಸ್ ಬಗ್ಗೆ ಪರೋಕ್ಷವಾಗಿ ಶಾಸಕ ಯತೀಂದ್ರ ಆಕ್ರೋಶ ಹೊರಹಾಕಿದ್ದಾರೆ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ …

Read More »