ಬೆಳಗಾವಿ: ‘ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಜಾರಿಗೊಳಿಸಿರುವ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶವಿದೆ. ಆದರೆ, ವಾಹನಗಳಲ್ಲಿ ಬರುವಂತಿಲ್ಲ; ನಡೆದುಕೊಂಡೇ ತೆರಳಬೇಕು’ ಎಂಬ ಸರ್ಕಾರದ ಆದೇಶವು ಗ್ರಾಮೀಣ ಜನರಿಗೆ ತೊಡಕಾಗಿ ಪರಿಣಮಿಸಿದೆ. ಬಹುತೇಕ ಹಳ್ಳಿಗಳಲ್ಲಿ ದಿನಸಿ, ತರಕಾರಿ ಮೊದಲಾದವುಗಳು ಸಿಗುವ ಅಂಗಡಿಗಳಿರುವುದಿಲ್ಲ. ಪಕ್ಕದಲ್ಲಿರುವ ದೊಡ್ಡ ದೊಡ್ಡ ಗ್ರಾಮಗಳು, ಪಟ್ಟಣ, ಹೋಬಳಿ, ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿನ ಅಂಗಡಿಗಳನ್ನು ಅಥವಾ ಮಾರುಕಟ್ಟೆಯನ್ನು ಅವಲಂಬಿಸಿರುತ್ತಾರೆ. ಹೀಗೆ ಹೋಗಿ ಬರುವುದಕ್ಕೆ …
Read More »Monthly Archives: ಮೇ 2021
ಇಂದು ಕೊರೊನಾ ಕೇಸ್ಗಿಂತ ಗುಣಮುಖರಾದವ್ರ ಸಂಖ್ಯೆ ಹೆಚ್ಚಳ, 24 ಗಂಟೆಗಳಲ್ಲಿ 3,56,082 ಮಂದಿ ಡಿಸ್ಚಾರ್ಜ್
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 3,29,942 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 3,876 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ನಿನ್ನೆಗೆ ಹೋಲಿಸಿದ್ರೆ ಇಂದು ವರದಿಯಾಗಿರೋ ಕೇಸ್ಗಳ ಸಂಖ್ಯೆ ಇಳಿಕೆ ಕಂಡಿದೆ. ಹಾಗೇ ಇಂದು ವರದಿಯಾಗಿರೋ ಹೊಸ ಕೇಸ್ಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚಿದ್ದು ಸಮಾಧಾನ ಮೂಡಿಸಿದೆ. ನಿನ್ನೆ ಒಂದೇ ದಿನ 3,66,161 ಕೊರೊನಾ ಪ್ರಕರಣಗಳು ಹಾಗೂ 3,754 ಸೋಂಕಿತರ ಸಾವು ವರದಿಯಾಗಿತ್ತು. 3,56,082 ಮಂದಿ ನಿನ್ನೆ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. …
Read More »ಬೆಡ್, ಆಕ್ಸಿಜನ್ ಕೊರತೆಗೆ ಕಾಂಗ್ರೆಸ್ ಕಾರಣ :ಕಟೀಲ್”
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ, ಅದರ ನಿಯಂತ್ರಣಕ್ಕೆ ಆಡಳಿತ ಪಕ್ಷವಾಗಿ ಕೋವಿಡ್ ನಿಯಂತ್ರಿಸಲು ಮಾಡುತ್ತಿರುವ ಕೆಲಸ, ಜಿಂದಾಲ್ ಸಂಸ್ಥೆಗೆ ಸರ್ಕಾರ ಜಮೀನುನೀಡಲು ಮುಂದಾಗಿರುವುದಕ್ಕೆ ಸ್ವಪಕ್ಷೀಯ ಶಾಸಕರ ವಿರೋಧ, ನಾಯಕತ್ವ ಬದಲಾವಣೆ ಈ ಎಲ್ಲ ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷನಳಿನ್ ಕುಮಾರ್ ಕಟೀಲ್” ಮುಕ್ತವಾಗಿ ಮಾತನಾಡಿದ್ದಾರೆ. ಕೋವಿಡ್ ನಿಯಂತ್ರಿಸಲು ಬಿಜೆಪಿ ಏನು ಮಾಡುತ್ತಿದೆ? ನಾವು ಕೋವಿಡ್ ಮೊದಲು ಬಂದಾಗಲೂ ಸೇವಾ ಹಿ ಸಂಘಟನೆ ಮಾಡಿದ್ದೆವು. ಈಗಲೂ ಪಕ್ಷದ 37 ಜಿಲ್ಲಾ ಘಟಕಗಳಲ್ಲಿ …
Read More »ಬೆಂಗಳೂರಿಗೆ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಆಗಮನ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಹೆಚ್ಚಾಗಿದ್ದು ಅನೇಕ ದೇಶಗಳು ಸಹಾಯಕ್ಕಾಗಿ ಮುಂದೆ ಬಂದಿವೆ. ಸದ್ಯ ಇಂದು ಇದೇ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಬಂದಿದೆ. ಜಮ್ಶೆಡ್ಪುರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್‌ಗಳು ತಲುಪಿವೆ. ತಲಾ 20 ಟನ್ ಇರುವ ಆಕ್ಸಿಜನ್ ಕಂಟೇನರ್‌ಗಳು ಈಗ ವೈಟ್‌ಫೀಲ್ಡ್‌ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ಆಗಮಿಸಿವೆ. ಜಮ್ಶೆಡ್ಪುರದಿಂದ ನಿನ್ನೆ ಮುಂಜಾನೆ 3ಕ್ಕೆ ಹೊರಟಿದ್ದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು 30 …
Read More »ರೆಮಿಡಿಸಿವರ್ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ.
ಬೆಂಗಳೂರು – ರೆಮಿಡಿಸಿವರ್ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಪ್ರಸಿದ್ಧ ಖಾಸಗಿ ಆಸ್ಪತ್ರೆಯೊಂದರ ಸ್ಟಾಪ್ ನರ್ಸ್ ಹಾಗೂ ಓರ್ವ ಅಂಬುಲೆನ್ಸ್ ಚಾಲಕ. ಇವರು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ರೆಮ್ ಡಿಸಿವರ್ ವಾಯೆಲ್ಸ್ ಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಅಧಿಕಾರಿ ಸಂದೀಪ್ ಪಾಟೀಲ ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ ಸುಮಾರು 15 ದಿನಗಳಿಂದ ರೆಮ್ ಡಿಸಿವರ್ ಕಾಳಸಂತೆಕೋರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. …
Read More »ರಾಜ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಸಿಲ್ಲ: ಸಚಿವ ಬೊಮ್ಮಾಯಿ ಸ್ಪಷ್ಟನೆ
ಬೆಂಗಳೂರು: ಕೋವಿಡ್ ನಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ವಿಚಾರವು ಅಪ್ರಸ್ತುತವಾಗಿದ್ದು, ಅಂತಹ ಯಾವುದೇ ಚರ್ಚೆಗಳೂ ನಡೆದಿಲ್ಲ. ಕೇವಲ ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಾಗಿದೆ. ಈ ವೇಳೆ ರಾಜ್ಯದಲ್ಲಿ ಕೊರೋನಾ ನಿರ್ವಹಣೆ …
Read More »ಟಾಲಿವುಡ್ ಪೋಷಕ ನಟ ಟಿಎನ್‌ಆರ್ ಇನ್ನಿಲ್ಲ
ಟಾಲಿವುಡ್‌ನ ಪೋಷಕ ನಟ, ನಿರೂಪಕ ತುಮ್ಮಲ ನರಸಿಂಹ ರೆಡ್ಡಿ (ಟಿಎನ್‌ಆರ್) ಸೋಮವಾರ ಕೋವಿಡ್‌ನಿಂದ ನಿಧನರಾದರು. ಸಿನಿಮಾ ಪತ್ರಕರ್ತರೂ ಆಗಿದ್ದ ಅವರು ತಮ್ಮದೇ ಆದ ಯುಟ್ಯೂಬ್ ಚಾನೆಲ್ ಮೂಲಕ ಹಲವಾರು ಸಿನಿಗಣ್ಯರ ಸಂದರ್ಶನ ಮಾಡಿದ್ದರು. ‘ಮಹಾಮಹೇಶ್ವರ’ ‘ಉಗ್ರ ರೂಪಸ್ಯ’, ‘ಹಿಟ್’, ‘ಜಾರ್ಜ್ ರೆಡ್ಡಿ’ ಅವರು ನಟಿಸಿದ ಪ್ರಮುಖ ಚಿತ್ರಗಳು. ಟಿಎನ್‌ಆರ್ ನಿಧನಕ್ಕೆ ಟಾಲಿವುಡ್ ಸಂತಾಪ ವ್ಯಕ್ತಪಡಿಸಿದೆ.
Read More »ಚಿತ್ರರಂಗದ 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಮುಂದಾದ ನಟ ಉಪೇಂದ್ರ
ಬೆಂಗಳೂರು: ಕೋವಿಡ್ ಹೊಡೆತಕ್ಕೆ ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರವೂ ತತ್ತರಿಸಿದೆ. ಸಿನಿಮಾವನ್ನೇ ನಂಬಿಕೊಂಡಿದ್ದ ಸಾವಿ ರಾರು ಕಾರ್ಮಿಕರು ಇವತ್ತು ಕಷ್ಟದ ಸ್ಥಿತಿಯಲ್ಲಿದ್ದಾರೆ. ಇವರ ಕಷ್ಟಕ್ಕೆ ಅನೇಕ ನಟ-ನಟಿಯರು ಸಹಾಯ ಮಾಡುತ್ತಿದ್ದು, ಈಗ ನಟ ಉಪೇಂದ್ರ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಒಕ್ಕೂಟದ ಮೂರು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ಉಪೇಂದ್ರ ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಉಪೇಂದ್ರ, “ಕನ್ನಡ ಚಲನ ಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ …
Read More »ಜೂನಿಯರ್ ಆರ್ಟಿಸ್ಟ್‌ಗಳಿಗೆ ಪಡಿತರ ಕಿಟ್ ವಿತರಣೆ; ಮಾನವೀಯತೆ ಮೆರೆದ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್
ಬೆಂಗಳೂರು: ಕೊರೊನಾ ದೇಶದೆಲ್ಲೇಡೆ ಹಬ್ಬಿದ್ದು, ಸಾವು-ನೋವು ಸಂಭವಿಸಿದೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಪತಿಸ್ಥಿತಿಯನ್ನು ಹತೋಟಿಗೆ ತರಲು ಲಾಕ್‌ಡೌನ್ ಘೋಷಣೆ ಮಾಡಿದ್ದು, ಜನರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸಿನಿಮಾ ರಂಗದವರು ಕೂಡ ಈ ಸಂಕಷ್ಟದಿಂದ ಹೊರತಾಗಿಲ್ಲ. ಹೀಗಾಗಿ ಅನೇಕರು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಸಹಾಯ ಹಸ್ತ ನೀಡುತ್ತಿದ್ದಾರೆ. ಈ ರೀತಿ ನೆರವಿಗೆ ದಾವಿಸಿದವರಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ ನಟ ವಿನೋದ್ ರಾಜ್ ಕೂಡ ಒಬ್ಬರು. ಇದೀಗ ಸಿನಿಮಾ …
Read More »‘SSLC’ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ
: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಸಂಬಂಧ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಮೇ 13ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿಡಿಪಿಐ ಕೃಷ್ಣಮೂರ್ತಿ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಗೊಂದಲಗಳನ್ನು ಆಯಾ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ. ಪ್ರಥಮ ಭಾಷೆ ಕನ್ನಡ-ಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆಯಲು …
Read More »