Breaking News

Monthly Archives: ಮಾರ್ಚ್ 2021

ರಮೇಶ್ ಜಾರಕಿಹೊಳಿ ಖಾತೆಯ ಮೇಲೆ ಎಲ್ಲರ ಕಣ್ಣು..

ರಮೇಶ ಜಾರಕಿಹೊಳಿಯಿಂದ ತೆರವಾದ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರ ಕಣ್ ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆ ಬೃಹತ್ ನೀರಾವರಿ ಖಾತೆ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಸಿಎಂ ಬಳಿ ತಮಗೇ ಖಾತೆ ನೀಡುವಂತೆ ಲಾಬಿ ನಡೆಸಿದ್ದಾರೆ. ಪ್ರಬಲ ಆಕಾಂಕ್ಷಿಗಳು: ಮೊದಲಿನಿಂದಲೂ ನೀರಾವರಿ ಖಾತೆ ಮೇಲೆ ಕಣ್ಣಿಟ್ಟಿದ್ದ …

Read More »

ಸರ್ಕಾರದ ಮೇಲೆ ಅಶೋಕ್ ಪೂಜಾರಿ ಗಂಭೀರ್ ಆರೋಪ..

ಓರ್ವ ಜವಾಬ್ದಾರಿಯುತ ಹಿರಿಯ ಸಚಿವ ರಾಸಲೀಲೆ ಸಿಡಿ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ಸಣ್ಣ ವಿಷಯ ಅಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಸರ್ಕಾರ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಗಂಭೀರ ಆರೋಪ ಮಾಡಿದರು. ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ ಪೂಜಾರಿ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸಂಪೂರ್ಣವಾಗಿ ಇದು ಫೇಕ್ ವಿಡಿಯೋ ಇದೆ ಎಂದು …

Read More »

2020ರಲ್ಲಿ ದೇಶದ 10 ಸಾವಿರ ಕಂಪನಿಗಳು ಬಂದ್! ಕರ್ನಾಟಕದಲ್ಲಿ ಎಷ್ಟು ಗೊತ್ತಾ?

ನವದೆಹಲಿ : 2020ರ ಏಪ್ರಿಲ್ ನಿಂದ ಈ ವರ್ಷದ ಫೆಬ್ರವರಿವರೆಗೆ ದೇಶದಲ್ಲಿ 10,000 ಕ್ಕೂ ಹೆಚ್ಚು ಕಂಪನಿಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಲಭ್ಯವಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿವರೆಗೆ ಒಟ್ಟು 10,113 ಕಂಪನಿಗಳು ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 248(2) ರ ಅಡಿಯಲ್ಲಿ ಸ್ಥಗಿತವಾಗಿವೆ.ಸೆಕ್ಷನ್ 248(2) ಪ್ರಕಾರ ಕಂಪನಿಗಳು ಸ್ವಯಂ ಪ್ರೇರಿತವಾಗಿ …

Read More »

ಕರ್ನಾಟಕದಲ್ಲಿ ಒಂದೇ ದಿನ 590 ಮಂದಿಗೆ ಕೊರೊನಾವೈರಸ್

ಬೆಂಗಳೂರು, ಮಾರ್ಚ್.09: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಕಡಿಮೆ ಆಗುತ್ತಲೇ ಇಲ್ಲ. ಬೆಂಗಳೂರಿನಲ್ಲಿ ಒಂದೇ ದಿನ 363 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ 590 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 956041ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 6 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಈವರೆಗೂ 12373 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಕೊವಿಡ್ …

Read More »

ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

ಮಂಡ್ಯ: ದ್ವಿಚಕ್ರ ವಾಹನ ದಾಖಲೆಗಳ ತಪಾಸಣೆ ವೇಳೆ ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ವ್ಯಗ್ರಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಯುವತಿಯ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ. ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಈ ಘಟನೆ ನಡೆದಿದೆ. ಪಿಎಸ್‌ಐ ಹೊಡೆದ ಬಳಿಕ ಯುವತಿಯೂ ಏಕವಚನದಲ್ಲಿ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಅವರನ್ನು ನಿಂದಿಸಿದ್ದಾರೆ. ಈ ಬಗ್ಗೆ ಯುವತಿಯು ಸ್ಥಳದಲ್ಲಿದ್ದ ಹಿರಿಯರೊಬ್ಬರ ಗಮನ ಸೆಳೆದಾಗ ಅವರೂ ಸಹ ಪೊಲೀಸ್​ ಅಧಿಕಾರಿಯ ದರ್ಪವನ್ನು ಪ್ರಶ್ನಿಸಿದ್ದಾರೆ. …

Read More »

ಮೈಸೂರು: ಪಾರ್ಕ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಮೈಸೂರು, ಮಾರ್ಚ್ 9: ಮೈಸೂರು ನಗರದಲ್ಲಿ ಮಂಗಳವಾರ ಅಪರೂಪದ ಹೆರಿಗೆಯಾಗಿದೆ. ಸಿನಿಮೀಯ ಶೈಲಿಯಲ್ಲಿ ತಾಯಿಯೊಬ್ಬಳು ಉದ್ಯಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಪೀಪಲ್ಸ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಕೊಡಗು ಮೂಲದ ಮಹಿಳೆ ಪಾರ್ಕ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತುಂಬು ಗರ್ಭಿಣಿ ಆಗಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಪಾರ್ಕ್‌ನಲ್ಲಿ ಕುಳಿತ್ತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ …

Read More »

ವಿದ್ಯುತ್ ಉತ್ಪಾದನೆಗೆ ಬ್ಯಾರೇಜ್ ನಿರ್ಮಾಣ, ದೀಪದ ಬುಡಕ್ಕೆ ಕತ್ತಲು; ಸಿಎಂ ಸಾಹೇಬ್ರೇ ಪರಿಹಾರ ನೀಡಿ!

ಯಾದಗಿರಿ: ಕರ್ನಾಟಕ ರಾಜ್ಯಕ್ಕೆ ಬೆಳಕಿನ ಸೌಲಭ್ಯ ಕಲ್ಪಿಸುವ ಆರ್ ಟಿಪಿಎಸ್ ಕೇಂದ್ರವು ಈಗ ರೈತರ ಜೀವಕ್ಕೆ ಮಾತ್ರ ಕತ್ತಲಾಗಿಸಿದೆ. ರಾಯಚೂರಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್ ಕೇಂದ್ರಕ್ಕೆ ವಿದ್ಯುತ್ ಉತ್ಪಾದನೆ ಗಾಗಿ ನೀರು ಪೂರೈಕೆ ಮಾಡಲು ಸರಕಾರ 2016 ನೆ ಸಾಲಿನಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದೆ. ಬ್ಯಾರೇಜ್ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದಿದ್ದು, ಈಗ ಬ್ಯಾರೇಜ್ ರೈತರ ಪಾಲಿಗೆ ಜಲಕಂಟಕ ತಂದಿದೆ. …

Read More »

ಪರಿಣೀತಿ ಚೋಪ್ರಾ ಡಬಲ್ ಧಮಾಕಾ: 19ಕ್ಕೆ ಒಂದು, 26ಕ್ಕೆ ಮತ್ತೊಂದು ಸಿನಿಮಾ ರಿಲೀಸ್​!

ಬಾಲಿವುಡ್ ಸುಂದರಿ ಪರಿಣೀತಿ ಚೋಪ್ರಾ. ಬಿಟೌನ್‍ಗೆ ಎಂಟ್ರಿ ಕೊಟ್ಟಾಗ ಅದಾಗಲೇ ಮುಂಬೈನಲ್ಲಿ ಸೆಟಲ್ ಆಗಿದ್ದ ಪ್ರಿಯಾಂಕಾ ಚೋಪ್ರಾರ ತಂಗಿ ಎಂದು ಅವರ ನೆರಳಿನಲ್ಲಿಯೇ ಕರಿಯರ್ ಪ್ರಾರಂಭಿಸಿದರು. ಆದರೆ ಈಗ ಅತ್ತ ಪ್ರಿಯಾಂಕಾ ನಿಕ್ ಜೋನಸ್ ಮದುವೆಯಾಗಿ ಹಾಲಿವುಡ್‍ನತ್ತ ಮುಖ ಮಾಡಿದರೆ, ಇತ್ತ ಪರಿಣೀತಿ ಬಾಲಿವುಡ್‍ನಲ್ಲಿ ಬಿಂದಾಸ್ ಆಗಿ ಮಿಂಚುತ್ತಿದ್ದಾರೆ. ಎರಡು ತಿಂಗಳಲ್ಲಿ ಮೂರು ಸಿನಿಮಾಗಳು ರಿಲೀಸ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ. ಹೌದು, ಬಿ-ಟೌನ್ ಬ್ಯೂಟಿ ಪರಿಣೀತಿ ಚೋಪ್ರಾ ಸದ್ಯ ಸಿನಿಮಾಗಳ …

Read More »

IPL 2021: ಆರ್‌ಸಿಬಿ ಆಟಗಾರರ ಫಿಟ್‌ನೆಸ್‌ ಪರೀಕ್ಷೆ ಆರಂಭ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಭಾರತದಲ್ಲಿ ಬಯೋಬಬಲ್‌ ವ್ಯವಸ್ಥೆಯಲ್ಲಿ ನಡೆಯಲಿರುವ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಆಟಗಾರರಿಗೆ ತಾಲೀಮು ಆರಂಭಿಸಿದೆ. ಮಂಗಳವಾರ ಪ್ರಕಾಶ್ ಪಡುಕೋಣೆ-ರಾಹುಲ್ ದ್ರಾವಿಡ್ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ತಂಡದ ಯುವ ಆಟಗಾರರ ಫಿಟ್‌ನೆಸ್‌ ಫರೀಕ್ಷೆ ನಡೆಯಿತು. ಆಧುನಿಕ ತಂತ್ರಜ್ಞಾನದ ಸಲಕರಣೆಗಳು ಇರುವ ಇಲ್ಲಿಯ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ಆಟಗಾರರ ಎಲುವು ಸಾಂದ್ರತೆ, …

Read More »

ಬೆಳಗಾವಿ ಗಡಿಯಲ್ಲಿ ಜಾರಿಯಾಗದ ಕಟ್ಟುನಿಟ್ಟಿನ ಕ್ರಮ; ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಕೊರೋನಾತಂಕ

ಬೆಳಗಾವಿ: ಸರ್ಕಾರ ಕೋವಿಡ್ ಎರಡನೇ ಅಲೆಯಿಂದ ಜನರನ್ನ ರಕ್ಷಣೆ ಮಾಡಬೇಕು ಅಂತ ಟಫ್ ರೂಲ್ಸ್ ಜಾರಿಗೆ ತಂದಿದೆ.‌ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಎಂಟ್ರಿಯಾಗ ಬೇಕಾದರೆ ಖಾಸಗಿ ಸರ್ಕಾರಿ ವಾಹನಗಳ ಮೂಲಕ ಬರುವವರು ಕೈಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹಿಡಿದೇ ಬರಬೇಕು ಅಂತಿದೆ ಆದರೆ ಕರ್ನಾಟಕದ ಗಡಿಯಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿಗೆ ಬರ್ತಿಲ್ಲಾ. ಬಾರ್ಡರ್ ನಲ್ಲಿ ಚೆಕ್ ಪೊಸ್ಟ್ ನಿರ್ಮಾಣ ಆಗಿದೆ ಖಾಸಗಿ ಕಾರಿನಲ್ಲಿ ಬರೋರನ್ನ ಮಾತ್ರ ತಪಾಸಣೆ ಮಾಡುತ್ತಿರುವ ಪೊಲೀಸರು ಬೈಕ್ …

Read More »