ಬೆಂಗಳೂರು: ರಾಜ್ಯದಲ್ಲಿ ಎಲ್ಲ ತರಗತಿಗಳು ಮಾ. 1ರಿಂದ ಆರಂಭ ವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಸಂಬಂಧ ಫೆ. 12ರಂದು ಬೆಂಗಳೂರಿನಲ್ಲಿ ನಡೆಯುವ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ 6ರಿಂದ 8ರ ವಿದ್ಯಾರ್ಥಿಗಳಿಗೆ ಮಾ. 1ಕ್ಕಿಂತ ಮುನ್ನವೇ ತರಗತಿ ಆರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ. ಪದವಿ, ಪದವಿಪೂರ್ವ, ಎಸೆಸೆಲ್ಸಿ ಮತ್ತು 9ನೇ ವಿದ್ಯಾರ್ಥಿಗಳಿಗೆ ಈಗಾಗಲೇ ನೇರ ತರಗತಿ …
Read More »Monthly Archives: ಫೆಬ್ರವರಿ 2021
ತ್ವರಿತವಾಗಿ ಸಾಲ ವಿತರಣೆ ಮಾಡದಿದ್ದರೆ ಕ್ರಮ: ಮುಖ್ಯಮಂತ್ರಿ ಸೂಚನೆ
ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್ ಮತ್ತು ಸ್ವನಿಧಿ ಯೋಜನೆಗಳಡಿ ತ್ವರಿತವಾಗಿ ಸಾಲ ವಿತರಣೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ವಸತಿ ಮತ್ತು ಸ್ವೋದ್ಯೋಗ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ವಿಳಂಬ ಧೋರಣೆ ತಾಳುತ್ತಿರುವುದು ಸರಿಯಲ್ಲ. ಇದರಿಂದ ಬಡವರಿಗೆ ಸೂರು ಕಲ್ಪಿಸುವ ಉದ್ದೇಶ ಸಕಾಲದಲ್ಲಿ ಅನುಷ್ಠಾನವಾಗದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ …
Read More »ಇನ್ನು ಮುಂದೆ ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿ
ನವ ದೆಹಲಿ : ಇನ್ನು ಮುಂದೆ ರೈಲಿನ ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಪಿಯೂಶ್ ಗೊಯಲ್ ಹೇಳಿದ್ದಾರೆ. ಮಹಿಳೆಯರ ಸುರಕ್ಷತಾ ಕ್ರಮವಾಗಿ ರೈಲುಗಳಿಗೆ ಹೈ ಟೆಕ್ ಟಚ್ ನೀಡಲಾಗುತ್ತಿದೆ. ಮಹಿಳೆಯರ ಕಂಪಾರ್ಟ್ ಮೆಂಟ್ ನಲ್ಲಿ ಸಿಸಿ ಟಿವಿ ಅಳವಡಿಸುವುದರ ಜೊತೆಗೆ ಟಾಕ್ ಬ್ಯಾಕ್ ಸಿಸ್ಟಮನ್ನು ಕೂಡ ಹಾಕಲಾಗುತ್ತದೆ. ಇಲ್ಲಿಯ ತನಕ 2391 ಹೊಸ ಬೋಗಿ ಮತ್ತು 668 ರೈಲ್ವೆ ನಿಲ್ದಾಣಗಳಲ್ಲಿ …
Read More »EPFO ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್: ಮನೆ ಬಾಗಿಲಲ್ಲೇ ಸಿಗಲಿದೆ ಜೀವನ ಪ್ರಮಾಣ ಪತ್ರ
ಜೀವನ ಪ್ರಮಾಣ ಪತ್ರ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಿದ್ದು, ಆ ದಿನವೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿದಾರರಿಗೆ ಹೆಚ್ಚು ಸಮಯವೇ ಉಳಿದಿಲ್ಲ. ಆದರೆ ಪಿಂಚಣಿದಾರರಿಗೆ ನೆಮ್ಮದಿ ಕೊಡುವ ನಡೆಯೊಂದರಲ್ಲಿ, ಜೀವನ ಪ್ರಮಾಣ ಪತ್ರವನ್ನು (ಡಿಎಲ್‌ಸಿ) ಡಿಜಿಟಲ್ ಆಗಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಇಪಿಎಫ್‌ಓ. ಆಧಾರ್ ಚಾಲಿತ ಬಯೋಮೆಟ್ರಿಕ್ ಅಥೆಂಟಿಕೇಶನ್ ಮೂಲಕ ಡಿಎಲ್‌ಸಿ ಜನರೇಟ್ ಮಾಡಬಹುದಾಗಿದೆ. ಬಯೋಮೆಟ್ರಿಕ್ ಆಧರಿತ ಡಿಜಿಟಲ್ ಸೇವೆಯಾದ ಡಿಎಲ್‌ಸಿ ಬಳಸಿಕೊಂಡು ಕೇಂದ್ರ ಹಾಗೂ ರಾಜ್ಯ …
Read More »ಮಗುವನ್ನು ಅಪಹರಿಸಿದ್ದ ಖತರನಾಕ್ ಗ್ಯಾಂಗ್ ನ್ನು ನಾಲ್ಕೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಬೆಳಗಾವಿ – ಅಥಣಿ ತಾಲೂಕಿನ ಸಂಕೋನಟ್ಟಿಯಲ್ಲಿ 2 ವರ್ಷದ ಮಗುವನ್ನು ಅಪಹರಿಸಿದ್ದ ಖತರನಾಕ್ ಗ್ಯಾಂಗ್ ನ್ನು ನಾಲ್ಕೇ ದಿನದಲ್ಲಿ ಪೊಲೀಸರು ಪತ್ತೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಅಪಹರಿಸಿದ ಕಾರಣವೇ ವಿಚಿತ್ರವಾಗಿದೆ. ಸಂಕೋನಟ್ಟಿಯ ಸದಾಶಿವ ಪಾರ್ಕ್ ಹತ್ತಿರ ಜೋಪಡಿಪಟ್ಟಿಯಲ್ಲಿ ವಾಸಿಸುತ್ತಿರುವ ಹುಸೇನವ್ವ ಚಿನ್ನಪ್ಪ ಬಹುರೂಪಿ ಅಲಿಯಾಸ ಬಾದಗಿ ಎನ್ನುವವರ 2 ವರ್ಷದ ಮಗು ಕಾಣೆಯಾಗಿರುವ ಕುರಿತು ಫೆ.6ರಂದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ …
Read More »ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆ, ರಸ್ತೆ ನಿಯಮಗಳ ಪಾಲನೆ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಡಿವೈ ಎಸ್ ಪಿ ಅವರಿಂದ ಜಾಗೃತಿ .
ಗೋಕಾಕ: ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆ, ರಸ್ತೆ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆಗಾಗಿ ತಗೆದುಕೊಳ್ಳಲು ಪೋಲಿಸ್ ಇಲಾಖೆಯ ವತಿಯಿಂದ ನಗರದಲ್ಲಿ ಸಂಚರಿಸುವ ಆಟೊ ರಿಕ್ಷಾಗಳು, ಬಸ್ಸುಗಳು ಮತ್ತು ಇನ್ನಿತರ ವಾಹನಗಳಿಗೆ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ ಪಿ ಜಾವೇದ ಇನಾಮದಾರ, ಹುಕ್ಕೇರಿ ಸಿಪಿಐ ರಮೇಶ ಚಾಯಾಗೋಳ, ಪಿಎಸ್ಐಗಳಾದ ಗಣಪತಿ ಕೊಂಗನೊಳಿ, ಎಸ್ ಎಚ್ ಕರನಿಂಗ, ರಮೇಶ್ ಪಾಟೀಲ, ಆರ್ …
Read More »ಫೆ.15 ರಿಂದ ಎಲ್ಲಾ ವಾಹನಗಳಿಗೆ `FASTAG’ ಕಡ್ಡಾಯ
ದೆಹಲಿ : ಫೆಬ್ರವರಿ 15 ರಿಂದಲೇ ದೇಶಾದ್ಯಂತ ಫಾಸ್ಟ್ಯಾಗ್ ಜಾರಿಗೆ ಬರಲಿದ್ದು. ಕೊರೊನಾ ಮತ್ತು ನಾನಾ ಕಾರಣಗಳಿಂದ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ವ್ಯವಸ್ಥೆ ಜಾರಿ ದಿನಾಂಕವನ್ನು ಯಾವುದೇ ಕಾರಣಕ್ಕೂ ಮುಂದೂಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಫೆಬ್ರವರಿ 15 ರಿಂದ ಟೋಲ್ ಗೇಟ್ ಗಳಲ್ಲಿ ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಪಾವತಿ ಕಡ್ಡಾಯ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಈ ಹಿಂದಿನಿಂದಲೂ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ ಎಂದು ಹೇಳುತ್ತಲೇ …
Read More »ಮನೆಯಲ್ಲೇ ಕುಳಿತು ಅಂಚೆ ಕಚೇರಿ ಖಾತೆ ನಿರ್ವಹಿಸಲು ಇಲ್ಲಿದೆ ಮಾಹಿತಿ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ನೀಡ್ತಿದೆ. ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್ ನ ಪ್ಲೇ ಸ್ಟೋರ್‌ನಿಂದ ಅಥವಾ ಐಫೋನ್ ಆಪ್ ಸ್ಟೋರ್‌ನಿಂದ ಇದನ್ನು ಡೌನ್ಲೋಡ್ ಮಾಡಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವವರು ಈ ಖಾತೆಯನ್ನು ತೆರೆಯಬಹುದು. ಮನೆಯಲ್ಲಿ ಕುಳಿತು ಆರಾಮವಾಗಿ ಈ ಖಾತೆ ತೆರೆಯಬಹುದು. …
Read More »ಮೂರು ತಿಂಗಳ ಮಗುವಿನ ಮೇಲೆ ಕಾಮುಕನೊಬ್ಬನ ಅತ್ಯಾಚಾರ
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ಸಿಟಿಯಲ್ಲಿ ಮಾನವ ತಲೆತಗ್ಗಿಸುವ ಘಟನೆ ನಡೆದಿದೆ. ಮೂರು ತಿಂಗಳ ಮಗುವಿನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜೇಮ್ಸ್ ರುಡಾಲ್ಫ್ ಹೆಸರಿನ ವ್ಯಕ್ತಿ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆರೋಪಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಅತ್ಯಾಚಾರದ ನಂತ್ರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಡಿಸೆಂಬರ್ 16ರಂದೇ ಆರೋಪಿಯನ್ನು ಪೊಲೀಸರು …
Read More »BREAKING : ಡಿಕೆ ಶಿವಕುಮಾರ್ ನಿವಾಸಕ್ಕೆ ಮಧು ಬಂಗಾರಪ್ಪ ಭೇಟಿ, ಕಾಂಗ್ರೆಸ್ ಸೇರ್ಪಡೆ ಖಚಿತ.?
ಬೆಂಗಳೂರು : ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಲು ಮುಂದಾಗಿರುವಂತ ಮಧು ಬಂಗಾರಪ್ಪ ಅವರು, ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗೋದು ಖಚಿತ ಎಂಬಂತೆ ಆಗಿದೆ. ಈಗಾಗಲೇ ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟ ಪಡಿಸಿದ್ದಂತ ಮಧು ಬಂಗಾರಪ್ಪ ಅವರು, ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. …
Read More »