ಶಿವಮೊಗ್ಗ: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮೀಸಲಾತಿ ಬೇಡಿಕೆ ಹೋರಾಟಗಳು ಭವಿಷ್ಯದಲ್ಲಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ದಾರಿಯಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು. ಮೀಸಲಾತಿಯ ವಾಸ್ತವಾಂಶ ಅಧಿಕಾರದಲ್ಲಿ ಇರುವ ಸರ್ಕಾರಕ್ಕೇ ಅರ್ಥವಾಗಿಲ್ಲ. ಅಂಬೇಡ್ಕರ್ ತಲತಲಾಂತದಿಂದ ಅಪಮಾನ, ತುಳಿತಕ್ಕೆ ಒಳಗಾದವರಿಗೆ, ಅವರು ಸಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೆರವಾಗಲು ಮೀಸಲಾತಿ ಬೇಕೆಂದರು. ಇಂದು ಸರ್ಕಾರದ ಸಚಿವರು, ಶಾಸಕರೇ ತಮ್ಮ ಜಾತಿಗಳ ಪರ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಸಂಪುಟ ಸಭೆಯಲ್ಲೇ ನಿರ್ಧರಿಸಬಹುದಾದ ವಿಷಯವನ್ನು ಬೀದಿಗೆ …
Read More »Monthly Archives: ಫೆಬ್ರವರಿ 2021
ಶ್ರೀಮಂತ ರೈತ..! ಹೆಲಿಕಾಪ್ಟರ್ ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ ಹಾಲು ಉತ್ಪಾದಕ..!!
ಭಿವಾಂಡಿ: ಮಹಾರಾಷ್ಟ್ರದ ಭಿವಾಂಡಿಯ ರೈತ ಮತ್ತು ಉದ್ಯಮಿ ಜನಾರ್ಧನ್ ಭೋಯಿರ್ ಅವರು 30 ಕೋಟಿ ರೂಪಾಯಿಯ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಹಾಲು ಉತ್ಪಾದಕರಾಗಿರುವ ಜನಾರ್ಧನ್ ಡೈರಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದು, ದೇಶದ ವಿವಿಧ ನಗರಗಳಿಗೆ ಪ್ರಯಾಣಿಸಲು ಹೆಲಿಕಾಪ್ಟರ್ ಖರೀದಿಸಿದ್ದಾರೆ. ಇದರಿಂದ ತಮ್ಮ ಪ್ರವಾಸ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. ಡೈರಿ ವ್ಯವಹಾರಗಳಿಗೆ ಆಗಾಗ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ಗೆಪ್ರಯಾಣಿಸಬೇಕಿದೆ. ನಾನು ಭೇಟಿ ನೀಡಲಿರುವ ಎಲ್ಲಾ ನಗರಗಳಲ್ಲಿ ವಿಮಾನ ನಿಲ್ದಾಣಗಳು ಇರುವುದಿಲ್ಲ. …
Read More »ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ
ಗಂಗಾವತಿ: ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದು ಕೂಲಿಕಾರರ ಕೊರತೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆಯ ಮೂಲಕ ಶೇ.50 ರಷ್ಟು ಖರ್ಚು ಉಳಿತಾಯ ಮಾಡಲಾಗುತ್ತಿದೆ. ಒಂದು ಎಕರೆ ಭತ್ತದ ಗದ್ದೆಗೆ ಕ್ರಿಮಿನಾಶಕ ಸಿಂಪರಣೆಗೆ ನಾಲ್ಕು ಕೂಲಿ ಕಾರ್ಮಿಕರು ಬೇಕಾಗುತ್ತದೆ. ಸಹಜವಾಗಿ ಒಂದು ಲೀಟರ್ ಕ್ರಿಮಿನಾಶಕ ಒಂದು ಎಕರೆಗೆ ಸಿಂಪರಣೆ ಮಾಡಲಾಗುತ್ತದೆ. ಆದರೆ ಡ್ರೋಣ್ ಮೂಲಕ ಒಂದು ಲೀಟರ್ ನಲ್ಲಿ ಎರಡು ಎಕರೆ …
Read More »‘ರಾಬರ್ಟ್’ ಸಿನಿಮಾದ ಟ್ರೈಲರ್ ಔಟ್..!
ಸಾರಥಿ, ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ಎಂದೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ದರ್ಶನ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಇಂದು ‘ರಾಬರ್ಟ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಟ್ರೇಲರ್ ಬಿಡುಗಡೆಯಾಗಿ 20 ನಿಮಿಷಗಳ ಅವಧಿಯಲ್ಲಿ ಸುಮಾರು 3.50 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 2:20 ನಿಮಿಷ ಅವಧಿಯ ಟ್ರೇಲರ್ “ನನ್ನನ್ನು ಸಂಹಾರ ಮಾಡ್ತೀನಿ ಅಂತ ಬರೋನು ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು” ಎಂಬ ಧ್ವನಿಯಿಂದ …
Read More »ಬಾಲಿವುಡ್ಗೆ ರವಿ ಬಸ್ರೂರು
ಬೆಂಗಳೂರು: ರವಿ ಬಸ್ರೂರು ಈಗಾಗಲೇ ‘ಕೆಜಿಎಫ್’ ಚಿತ್ರಗಳ ಮೂಲಕ ಬೇರೆ ಭಾಷೆಯ ಚಿತ್ರರಂಗಗಳಿಗೂ ಪರಿಚಿತರಾಗಿದ್ದಾರೆ. ಇನ್ನು, ಈಗಾಗಲೇ ತೆಲುಗು, ಮಲಯಾಳಂ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಬಾಲಿವುಡ್ನ ಜನಪ್ರಿಯ ನಟ-ನಿರ್ದೇಶಕ ಫರ್ಹಾನ್ ಅಖ್ತರ್, ‘ಯುದ್ರ’ ಎಂಬ ಚಿತ್ರವನ್ನು ನಿರ್ವಿುಸುತ್ತಿದ್ದು, ಈ ಚಿತ್ರಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು, ಮತ್ತೊಬ್ಬ ಕನ್ನಡಿಗ ರವಿ ಉದ್ಯಾವರ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಸೋಮವಾರ ಸೋಷಿಯಲ್ ಮೀಡಿಯಾ …
Read More »ಮಧ್ಯ ಪ್ರದೇಶ: ಬಸ್ ಕಾಲುವೆಗೆ ಬಿದ್ದು 35 ಮಂದಿ ಸಾವು, ಹಲವು ಪ್ರಯಾಣಿಕರು ನಾಪತ್ತೆ
ಸಿಧಿ/ರೇವಾ/ಭೋಪಾಲ್: ಮಧ್ಯ ಪ್ರದೇಶದ ಸಿಧಿ ಜಿಲ್ಲೆಯ ಪಾಟ್ನಾ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಬಸ್ಸೊಂದು ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದಿದ್ದು, ಏಳು ಮಹಿಳೆಯರು ಸೇರಿದಂತೆ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇತರ ಹಲವು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ ಕಾಲುವೆಯಿಂದ 35ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಸಾವಿನ ಸಂಖ್ಯೆ 40 ದಾಟಬಹುದು ಎಂದು ಇನ್ಸ್‌ಪೆಕ್ಟರ್ ಜನರಲ್(ರೇವಾ ವಲಯ) ಉಮೇಶ್ ಜೋಗಾ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ …
Read More »ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವ ದಿನಾಂಕ ವಿಸ್ತರಣೆ..!
ಬೆಂಗಳೂರು: 2021ನೇ ಜೂನ್ ತಿಂಗಳಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲಾ/ ಕಾಲೇಜುಗಳಿಂದ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳು. ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಇವರ ಮಾಹಿತಿಯನ್ನು ಆನ್‌ಲೈನ್ ಮುಖಾಂತರ ನೋಂದಾಯಿಸಲು ಹಾಗೂ ಅದರ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಣೆ ಮಾಡಲು ಹೊಸ ನಿಯಮವನ್ನು ತಿಳಿಸಲಾಗಿದೆ.
Read More »ಉತ್ತರ ಕನ್ನಡ ಜಿಲ್ಲಾಧಿಕಾರಿ ಆಗಿ ಮುಲ್ಲೈ ಮುಹಿಲನ್ ಅಧಿಕಾರ ಸ್ವೀಕಾರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ ಅವರು ಅಧಿಕಾರಿ ಸ್ವೀಕರಿಸಿದರು. ಮೂಲತಃ ತಮಿಳುನಾಡಿನ ಮಧುರೈ ನವರಾದ ಅವರು 2013 ರ ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದು, ಪ್ರೋಬೆಷನರಿ ಅವಧಿಯನ್ನು ಬಳ್ಳಾಯರಿಯಲ್ಲಿ ಪೂರೈಸಿದ್ದಾರೆ. ಜಮಖಂಡಿ ಉಪವಿಭಾಗಾಧಿಕಾರಿಯಾಗಿ, ಬೆಳಗಾವಿ ಸ್ಮಾರ್ಟ್ ಸಿಟಿಯ ಎಂಡಿಯಾಗಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಕಮಿಷನರ್ ಆಗಿ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಎಂಡಿ, ರಾಮನಗರ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ …
Read More »ಇನ್ಮುಂದೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡಿದ್ರೆ ಹುಷಾರ್!
ಬೆಂಗಳೂರು: ಬೆಂಗಳೂರು ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವ ಮಂದಿಯ ವಿರುದ್ದ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಅವರು ಆದೇಶಿಸಿದ್ದಾರೆ. ಬೆಂಗಳೂರು ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವ ಮಂದಿಯಿಂದ ಮಂದಿಯಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು, ಇದರಿಂದ ತೊಂದರೆ ಉಂಟಾಗುತ್ತಿದೆ ಹೀಗಾಗಿ ಇವರ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಅನೇಕ ಮಂದಿ ಪೊಲೀಸರಿಗೆ ಸೂಚನೆ ನೀಡಿದ್ದರು. ಟ್ರಾಫಿಕ್ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸುವಂತೆ ಅಯಾ ವ್ಯಾಪ್ತಿಯ ಟ್ರಾಫಿಕ್ …
Read More »ಕೋವಿಡ್ ವಾರಿಯರ್ಸ್ ಗೆ ಸಿಗದ ವಿಮೆ ಪರಿಹಾರ: ಲೋಕಾಯುಕ್ತದಿಂದ ಸ್ವಯಂ ಪ್ರೇರಿತ ದೂರು ದಾಖಲು; ಸರ್ಕಾರಕ್ಕೆ ನೋಟಿಸ್
ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಕರ್ತವ್ಯ ನಿರ್ವಹಿಸಿ ಮೃತಪಟ್ಟ ಕೋವಿಡ್ ವಾರಿಯರ್ಸ್ ಗೆ ಸರ್ಕಾರ ಘೋಷಣೆ ಮಾಡಿದ್ದ ವಿಮೆ ಪರಿಹಾರ ಪಾವತಿಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕೋವಿಡ್ ಕರ್ತವ್ಯದಲ್ಲಿ ಭಾಗಿಯಾಗಿ ಮೃತಪಟ್ಟ ಕೋವಿಡ್ ವಾರಿಯರ್ಸ್ ಕುಟುಂಬಗಳಿಗೆ ವಿಮಾ ಪರಿಹಾರ ಪಾವತಿಯಾಗದ ವಿಷಯವನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಸ್ವಯಂ ಪ್ರೇರಿತ ಅರ್ಜಿ …
Read More »