ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ರಾಜಧಾನಿಯ ಜನ ಸೇರಿದಂತೆ ಸಾವಿರಾರು ಪ್ರವಾಸಿಗರು ನಿತ್ಯ ಲಗ್ಗೆ ಇಡ್ತಾರೆ. ಹೀಗೆ ಗಿರಿಧಾಮಕ್ಕೆ ಬರುವ ಬೈಕ್ ಸವಾರ ಪ್ರವಾಸಿಗಳಿಂದ ಗಿರಿಧಾಮದಲ್ಲಿ ಅಕ್ರಮ ವಸೂಲಿ ನಡೆಯುತ್ತೆ ಅನ್ನೋ ಮಾಹಿತಿ ಟಿವಿ9ಗೆ ಸಿಕ್ಕಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಗುತ್ತಿಗೆದಾರ ಸತ್ಯನಾರಾಯಣ, ಹೆಲ್ಮೆಟ್ ಸಂಗ್ರಹ ನೆಪದಲ್ಲಿ ಬೈಕ್ ಸವಾರರಿಂದ ನಿಗದಿಗಿಂತ ಐದಾರು ಪಟ್ಟು ಹೆಚ್ಚು ಹಣ ವಸೂಲಿ ಮಾಡ್ತಿರುವ ದೃಶ್ಯ …
Read More »Monthly Archives: ಫೆಬ್ರವರಿ 2021
ಅಪಘಾತ ತಡೆಗೆ ಕೆಎಸ್ ಆರ್ ಟಿಸಿ ಹೊಸ ಕ್ರಮ
ಬೆಂಗಳೂರು : ಅಪಘಾತ ತಡೆಗೆ ಕೆಎಸ್ ಆರ್ ಟಿಸಿ ಹೊಸ ಕ್ರಮವೊಂದನ್ನು ಕೈಗೊಂಡಿದ್ದು, ದೂರ ಮಾರ್ಗಗಳಿಗೆ ಬಸ್ ಚಲಾಯಿಸುವ ಕೆಎಸ್ ಆರ್ ಟಿಸಿ ಚಾಲಕರು ಮಾರ್ಗಮಧ್ಯೆ ವಿಶ್ರಾಂತಿ ಪಡೆಯಲು ತನಿಖಾ ಬಿಂದುಗಳನ್ನು ಸ್ಥಾಪಿಸಲಾಗಿದೆ. ದೂರದ ಮಾರ್ಗಗಳಿಗೆ ಸಂಚರಿಸುವ ವಾಹನಗಳ ಚಾಲಕರಿಗೆ ವಿಶ್ರಾಂತಿಯಿಲ್ಲದ ಕಾರಣ ರಾತ್ರಿ ವೇಳೆ ಅಪಘಾತ ಸಂಭವಿಸುತ್ತಿದೆ. ಹೀಗಾಗಿ ಚಾಲಕರು ಮಾರ್ಗಮಧ್ಯೆ 15 ನಿಮಿಷ ಕಡ್ಡಾಯವಾಗಿ ವಿಶ್ರಾಂತಿ ಪಡೆಯಲು ಕೆಎಸ್‌ಆರ್ ಟಿಸಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ಕೆಎಸ್‌ಆರ್ ಟಿಸಿ …
Read More »ಮಠಾಧಿಪತಿಗಳೇ ಪಾದಯಾತ್ರೆ ಮಾಡಿ ಎಂದು ಹೇಳಿ ಜಾತಿಯ ವಿಷ ಬೀಜ ಬಿತ್ತಿದ್ದಾರೆ : ವಾಟಾಳ್ ನಾಗರಾಜ್
ಮೈಸೂರು : ರಾಜ್ಯದಲ್ಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಮಠಾಧೀಶರ ವಿರುದ್ಧ ವಾಟಾಳ್ ನಾಗರಾಜ್ ಗರಂ ಆಗಿದ್ದು, ಇಂದು ಮೈಸೂರಿನ ಹಾಡಿರ್ಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಾಧಿಪತಿಗಳು ಮೀಸಲಾತಿಗಾಗಿ ಹೋರಾಟ ಮಾಡಿ ರಾಜ್ಯವನ್ನು ಜಾತಿಗೆ ಸೀಮಿತಗೊಳಿಸಬಾರದು. ಮಠಾಧಿಪತಿಗಳು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಾಲಿಸಿ ಮಠದಲ್ಲಿಯೇ ಇರಿ. ಮೀಸಲಾತಿ ಹಾಗೂ ಜಾತಿಗಾಗಿ ಹೋರಾಟಕ್ಕೆ ಬಂದರೆ ನಿಮ್ಮ ಶಕ್ತಿ ಕುಂದುತ್ತದೆ ಎಂದು ಮನವಿ ಮಾಡಿಕೊಂಡರು. …
Read More »ಹೈಕಮಾಂಡ್ ಬುಲಾವ್: ರಾತ್ರೋರಾತ್ರಿ ದೆಹಲಿಗೆ ತೆರಳಿದ ಯತ್ನಾಳ್
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು ದಿಢೀರ್ ದೆಹಲಿಗೆ ತೆರಳಿದ್ದಾರೆ. ರಾತ್ರಿಯೇ ಬಸವನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳಿದ್ದಾರೆ. ಪದೇ ಪದೇ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಯತ್ನಾಳ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ದೆಹಲಿಗೆ ಆಗಮಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ನೀಡಿದ್ದಾರೆ. ತುರ್ತಾಗಿ …
Read More »ಪತಂಜಲಿ ಕೊರೊನಿಲ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಸಿಕ್ಕಿದೆ ಎಂಬುದು ಸುಳ್ಳು
ಪತಂಜಲಿ ಸಂಸ್ಥೆಯು ಕೊರೊನಾ ವೈರಸ್ ಸೋಂಕು ನಿಗ್ರಹಕ್ಕೆಂದು ಹೊರತಂದಿರುವ ಕೊರೊನಿಲ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಯುರ್ವೇದ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಕೊರೊನಿಲ್ಗೆ ಮಾನ್ಯತೆ ನೀಡಿದೆ ಎಂದು ವೈರಲ್ ಪೋಸ್ಟ್ ನಲ್ಲಿ ಹೇಳಲಾಗಿದೆ. ಕೋವಿಡ್-19 ತಡೆಯಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊರೊನಿಲ್ ಸಹಕಾರಿ ಎಂದು ಪತಂಜಲಿ ಸಂಸ್ಥೆ ಹೇಳಿತ್ತು. ಇದಕ್ಕೆ ಆಯುಷ್ …
Read More »ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ :ಎಚ್ಚರಿಕೆ ನೀಡಿದ ಮಹಾ ಸಿಎಂ
ಮುಂಬೈ : ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಅಗತ್ಯ ಇರುವ ಕಡೆಗಳಲ್ಲಿ ನಾಳೆ ಸಂಜೆಯಿಂದಲೇ ಲಾಕ್ ಡೌನ್ ಮಾಡಲಾಗುವುದು ಎಂದು ತಿಳಿಸಿದರು. ‘ಲಾಕ್ ಡೌನ್ ಇದ್ದಕ್ಕಿದ್ದಂತೆ ಪ್ರಾರಂಭವಾಗುವುದಿಲ್ಲ. ನಾವು ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ಹಾಕುತ್ತಿಲ್ಲ. ನಾಳೆ ಸಂಜೆಯಿಂದಲೇ ಅಗತ್ಯವಿರುವೆಡೆ ಲಾಕ್ …
Read More »ಗಡಿ, ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಕರ್ನಾಕದ ಜೊತೆ ಕ್ಯಾತೆ
ಬೆಳಗಾವಿ: ಗಡಿ, ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಕರ್ನಾಕದ ಜೊತೆ ಕ್ಯಾತೆ ತೆಗೆಯುತ್ತಿರುವ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮ ಕೂಡ ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ಧಮ್ಕಿ ಹಾಕಿ ಪತ್ರವೊಂದನ್ನು ರವಾನಿಸಿದೆ. ಮಿರಜದ ಶಾಸ್ತ್ರಿ ವೃತ್ತದಲ್ಲಿ ಬಸ್ಸುಗಳ ನಿಲುಗಡೆಯೇ ಇಲ್ಲ. ಅಲ್ಲಿಗೆ ಬರುವ ಕರ್ನಾಟಕದ ” ಪರ್ಮಿಟ್ ಇಲ್ಲದ” ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತವೆ. ಇದರಿಂದಾಗಿ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮಕ್ಕೆ …
Read More »ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರಕ್ಕೆ ಒತ್ತಾಯ
ಬೆಳಗಾವಿ: ಆರ್ಥಿಕವಾಗಿ ಹಾಗೂ ಶೈಕ್ಷಣೀಕವಾಗಿ ಹಿಂದುಳಿದ ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅಖಿಲ ಭಾರತ ಜಂಗಮ ಮಹಾಸಭಾದ ರಾಜ್ಯಾಧ್ಯಕ್ಷ ಅರುಣಕುಮಾರ ಜಡಿಮಠ ಎಚ್ಚರಿಕೆ ನೀಡಿದ್ದಾರೆ. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಜಂಗಮ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ದಶಕಗಳಿಂದ …
Read More »ಜಿ ಎನ್ ಎಸ್ ಶಾಲೆಯ 1998-99 ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುಸ್ಮoತಿ ಕಾರ್ಯಕ್ರಮ
ಗೋಕಾಕ: ದೇಶದ ಸಮಸ್ಯೆಯನ್ನು ನಿವಾರಿಸಲು ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಆರೋಗ್ಯಯುತ ಭಾರತವಾಗಬೇಕು. ಭಾರತೀಯ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಅವರು ರವಿವಾರದಂದು ಇಲ್ಲಿಯ ಶುಭಂ ಗಾರ್ಡನ್‍ನಲ್ಲಿ ಜರುಗಿದ ನಗರದ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ನಮನ ಹಾಗೂ ಸ್ನೇಹಿತರ ಪುನರ್ ಮಿಲನ ಹಾಗೂ ಗುರುಸ್ಮøತಿ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ …
Read More »ಮೂಡಲಗಿಯಲ್ಲಿ ಅರಭಾವಿ ಶಾಸಕರ ಕಛೇರಿ ಉದ್ಘಾಟನೆ ಸಾರ್ವಜನಿಕರ ಅನುಕೂಲಕ್ಕಾಗಿ ಕಛೇರಿ ಕಾರ್ಯಾರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರೀಕರಿಗೆ ಅನುಕೂಲವಾಗಲು ಪಟ್ಟಣದಲ್ಲಿರುವ ತಹಶೀಲ್ದಾರ ಕಛೇರಿ ಬಳಿ ತಮ್ಮ ಶಾಸಕರ ಕಛೇರಿಯನ್ನು ಪ್ರಾರಂಭಿಸಲಾಗಿದ್ದು, ಇದರ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ಬಸವನಗರದಲ್ಲಿ ನೂತನವಾಗಿ ಆರಂಭಿಸಲಾದ ಅರಭಾವಿ ಶಾಸಕರ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ ಹೊಸ ತಾಲೂಕು ರಚನೆ ಬಳಿಕ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಡಲಗಿಯಲ್ಲಿ ತಮ್ಮ ಕಛೇರಿಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. …
Read More »