ಗೋಕಾಕ: ನಿಮ್ಮ ಜೀವ ಉಳಿಸಿಕೊಳ್ಳಲು ಏಪ್ರೀಲ್ 14ರ ವರೆಗೆ ಮನೆಯಿಂದ ಆಚೆ ಬರಬೇಡಿ. ಮನೆಯಲ್ಲಿಯೇ ಉಳಿದುಕೊಂಡು ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮಹಾಮಾರಿ ಕೊರೋನಾ ಸೋಂಕಿನಿಂದ ದೇಶವನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿವೆ. ಅವುಗಳನ್ನು …
Read More »Yearly Archives: 2020
ಧಾರವಾಡ ಜಿಲ್ಲೆಯಲ್ಲಿ 437 ಜನರ ಮೇಲೆ ಕರೋನಾ ನಿಗಾ
ಹುಬ್ಬಳ್ಳಿ.:,ಮಾ,26- ಕರೋನಾ ವೈರಸ್ ಪತ್ತೆಗಾಗಿ ಧಾರವಾಡ ಜಿಲ್ಲೆಯಲ್ಲಿ ಈವರೆಗೆ 437 ಜನರ ಮೇಲೆ ನಿಗಾ ವಹಿಸಲಾಗಿದೆ. 266 ಜನರನ್ನು ಅವರ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಐಸೋಲೇಶನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 14 ದಿನಗಳ ಪ್ರತ್ಯೇಕತಾ ಅವಧಿಯನ್ನು 155 ಜನ ಪೂರ್ಣಗೊಳಿಸಿದ್ದಾರೆ. 28 ದಿನಗಳ ಪ್ರತ್ಯೇಕತೆ ಅವಧಿಯನ್ನು 14 ಜನ ಪೂರ್ಣಗೊಳಿಸಿದ್ದಾರೆ.ಇದುವರೆಗೆ 38 ಶಂಕಿತರ ಗಂಟಲು ದ್ರವದ ಪ್ರಯೋಗಾಲಯ …
Read More »ಬಳ್ಳಾರಿ:ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿ……..
ಬಳ್ಳಾರಿ: ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮುಂದುವರೆಸಿದ್ದು, ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಈ ಕುರಿತು ಬಳ್ಳಾರಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರಿನಲ್ಲಿ ನಿನ್ನೆ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈಗ ಅವರ ಕುರಿತ ಲ್ಯಾಬ್ ವರದಿ ಬಂದಿದ್ದು, ಕೊರೂನಾ ಸೋಂಕಿನಿಂದಲೇ ಮಹಿಳೆ ಮೃತಪಟ್ಟಿರುವುದು ದೃಢಪಟ್ಟಿದೆ ಎಂದಿದ್ದಾರೆ. ಈ ಹಿಂದೆ ಕಲಬುರಗಿಯಲ್ಲಿ …
Read More »ಕೊರೊನಾದಿಂದ ಕಂಗೆಟ್ಟ ಜನರಿಗೆ ಕೇಂದ್ರದಿಂದ ಅತಿದೊಡ್ಡ ಪರಿಹಾರ ಘೋಷಣೆ..! Full Details
ನವದೆಹಲಿ, ಮಾ.19-ಮಾರಕಕೊರೊನಾ ವೈರಸ್‍ನಿಂದಾಗಿ 21 ದಿನಗಳ ಲಾಕ್‍ಡೌನ್‍ಗೆ ಒಳಗಾಗಿರುವ ಭಾರತದಲ್ಲಿ ಬಡವರು, ಕೃಷಿಕರು ಮತ್ತುಕಾರ್ಮಿಕರ ಸೇರಿದಂತೆ ವಿವಿಧಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರಇಂದುಅತಿದೊಡ್ಡಆರ್ಥಿಕ ನೆರವು ಘೋಷಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸುಖಾತೆರಾಜ್ಯ ಸಚಿವಅನುರಾಗ್‍ಠಾಕೂರ್ ಸುದ್ದಿಗೋಷ್ಠಿಯಲ್ಲಿ ಈ ಪ್ಯಾಕೇಜ್‍ಗಳನ್ನು ಪ್ರಕಟಿಸಿದರು. ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಪರಿಸ್ಥಿತಿ ನಿಯಂತ್ರಣಕ್ಕೆ ಬರುವತನಕಎಲ್ಲ ಸಾಲಗಳ ಮೇಲಿನ ಇಎಂಐ ವಸೂಲಾತಿಯನ್ನು ಮುಂದೂಡಲಾಗಿದೆ. ಇದನ್ನುಎಲ್ಲ ಬ್ಯಾಂಕ್‍ಗಳು, ಮತ್ತು …
Read More »ಸಾಮಾಜಿಕ ಅಂತರಕ್ಕೆ ಕ್ಯಾರೆ ಎನ್ನದ ಗೋಕಾಕ ಜನ: ತರಕಾರಿ ಖರೀದಿಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜನಜಂಗುಳಿ
ಗೋಕಾಕ: ಕೊರೊನಾ ವೈರಸ್ ಬಿಕ್ಕಟಿನಿಂದ ಎಪ್ರೀಲ್-14 ರವರೆಗೆ ಭಾರತ ಲಾಕ್‍ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಿನ್ನಲೆಯಲ್ಲಿ ದಿ. 26 ರಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಸಾಮಾಜಿಕ ಅಂತರ ಒಂದೇ ಮದ್ದು ಆಗಿರುವ ಮಹಾಮಾರಿ ಕೊರೋನಾ ಸೋಂಕಿಗೆ ಜನರು ಕ್ಯಾರೆ ಎನ್ನದೇ ಬೃಹತ್ ಸಂಖ್ಯೆಯಲ್ಲಿ ಸೇರಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಎಂಬ …
Read More »ಗೋಕಾಕ: ಅಗತ್ಯ ವಸ್ತುಗಳ ಪೂರೈಕೆಗೆ ಕರ್ಪ್ಯೂ ಸಡಲಿಕೆ- ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ
ಗೋಕಾಕ: ಕೊರೊನಾ ವೈರಸ್ ಬಿಕ್ಕಟಿನಿಂದ ಎಪ್ರೀಲ್-14 ರವರೆಗೆ ಭಾರತ ಲಾಕ್‍ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಿನ್ನಲೆಯಲ್ಲಿ ದಿ. 26 ರಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದ್ದು. ಸಾರ್ವಜನಿಕರು ಶಿಸ್ತು ಬದ್ಧವಾಗಿ ಸರದಿ ಸಾಲಿನಲ್ಲಿ ನಿಂತು …
Read More »ನಾಳೆಯಿಂದ ಹೋಟೆಲ್ ಗಳಲ್ಲಿ ಪಾರ್ಸೆಲ್ ಸಿಗತ್ತೆ ದಿನ ನಿತ್ಯದ ವಸ್ತು ಗಳನ್ನ ಮನೆಬಾಗಿಲಿಗೆ ಬರುತ್ತೆ.:ಎಸ್.ಬಿ.ಬೊಮ್ಮನಹಳ್ಳಿ
ಬೆಳಗಾವಿ -: ರಾಷ್ಟ್ರದಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ನಾಗರಿಕರಿಗೆ ದೈನಂದಿನ ಅಗತ್ಯ ಸಾಮಗ್ರಿಗಳಾದ ದಿನಸಿ, ತರಕಾರಿ ಮತ್ತಿತರ ವಸ್ತುಗಳನ್ನು ಮನೆಬಾಗಿಲಿಗೆ ಕಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ (ಮಾ.೨೫) ದಿನಸಿ, ತರಕಾರಿ ವ್ಯಾಪಾರಸ್ಥರು ಹಾಗೂ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು. ಕೋವಿಡ್-೧೯ ವೈರಾಣು ಹರಡುವಿಕೆ ತಡೆಗಟ್ಟಲು ವಾಹನಗಳ ಸಂಚಾರ ಸೇರಿದಂತೆ ಅನೇಕ ನಿರ್ಬಂಧ ವಿಧಿಸಲಾಗಿರುವುದರಿಂದ ನಾಗರಿಕರಿಗೆ …
Read More »ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಹತ್ತೂ ವರದಿಗಳು ನೆಗೆಟಿವ್-. ಎಸ್. ಬಿ.ಬೊಮ್ಮನಹಳ್ಳಿ
Share , ಬೆಳಗಾವಿ -: ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಹತ್ತೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದುವರೆಗೆ ಹತ್ತು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಈಗಾಗಲೇ ಐದು ಮಾದರಿಗಳ ವರದಿಗಳು ನೆಗೆಟಿವ್ ಬಂದಿದ್ದವು. ಹೊಸದಾಗಿ ಕಳಿಸಲಾಗಿದ್ದ ಉಳಿದ ಐದು ಮಾದರಿಗಳ ವರದಿ ಇಂದು ಬುಧವಾರ (ಮಾ.೨೫) ಬಂದಿದ್ದು, …
Read More »ಜ್ಮಾ ಎಂ.ಪೀರಜಾದೆ ಅವರಿಗೆ 2019-20ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ…
ಬೆಳಗಾವಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿ ಪ್ರಸ್ತುತ ಧಾರವಾಡದಲ್ಲಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಜ್ಮಾ ಎಂ.ಪೀರಜಾದೆ ಅವರಿಗೆ 2019-20ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ದೊರಕಿದೆ. ಈ ಮುಂಚೆ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಜ್ಮಾ ಪೀರಜಾದೆ, ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಲಂಬಾಣಿ ತಾಂಡಾ ಹಾಗೂ ಗೊಲ್ಲರಹಟ್ಟಿ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿ …
Read More »ಭೂಪಾಲ: ಮಧ್ಯಪ್ರದೇಶದಲ್ಲಿ ಪತ್ರಕರ್ತರೊಬ್ಬರಿಗೆ ಮಾರಕ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಭೂಪಾಲ: ಮಧ್ಯಪ್ರದೇಶದಲ್ಲಿ ಪತ್ರಕರ್ತರೊಬ್ಬರಿಗೆ ಮಾರಕ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ಸೋಂಕು ತಗುಲಿರುವ ಲಕ್ಷಣಗಳು ಕಂಡು ಬಂದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ರಕ್ತದ ಮಾದರಿ, ಕಫದ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ವೈದ್ಯಕೀಯ ವರದಿ ಬಂದಿದ್ದು, ಕೊರೊನಾ ಸೋಂಕು ದೃಢಪಟ್ಟಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತನ ಸಂಪರ್ಕದಲ್ಲಿದ್ದರಿಗೂ ಹೋಮ್ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಬೋಪಾಲ್ ನ ಬಹುತೇಕ ಎಲ್ಲ ಪತ್ರಕರ್ತರು ಕ್ವಾರೆಂಟೈನ್ ನಲ್ಲಿದ್ದು, …
Read More »