Breaking News

Yearly Archives: 2020

ಕಲಬುರಗಿಯಲ್ಲಿ 2 ವರ್ಷದ ಬಾಲಕಿಗೆ ಕೊರೊನಾ ಪಾಸಿಟಿವ್

ಕಲಬುರಗಿ: ಯಾವುದೇ ಕೊರೊನಾ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿರದ ಎರಡು ವರ್ಷದ ಹೆಣ್ಣು ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಮಗಳಿಗೆ ಕೊರೊನಾ ಸೋಂಕು ಹರಡಿದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಇಂದು  ಟ್ವಿಟ್ಟರ್ ಹಾಗೂ ಫೇಸ್‍ಬುಕ್‍ನಲ್ಲಿ ಈ ಮಾಹಿತಿಯನ್ನು …

Read More »

ಅಣ್ಣನ ಪತ್ನಿಯೊಂದಿಗೆ ಅನೈತಿಕ ಸಂಬಂಧಕ್ಕೆ ಅಡ್ಡಿ – ಸ್ನೇಹಿತನ ರುಂಡ ತುಂಡರಿಸಿ ಕೊಲೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ವಾರದ ಹಿಂದೆ ನಡೆದ ಕೊಲೆ ಪ್ರಕರಣವೊಂದನ್ನು ಬೇಧಿಸಿರುವ ಪೊಲೀಸರು ನಾಲ್ಕು ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ ತಾಲೂಕಿನ ಬೆಳವಟಗಿಯ ಮಾರುತಿ ಮಾದಪ್ಪಗೌಡ ಬಂಧಿತ ಆರೋಪಿ. ಈತ ತನ್ನ ಸ್ನೇಹಿತ ನಾಗರಾಜ್‍ನನ್ನು ಕೊಲೆ ಮಾಡಿದ್ದನು. ಏನಿದು ಪ್ರಕರಣ? ಏಪ್ರಿಲ್ 4 ರಂದು ಬೆಳವಟಗಿಯ ನಾಗರಾಜ್ ಕೊಳದಾರ (31) ಮನೆಯಿಂದ ದೇವಸ್ಥಾನದ ಹತ್ತಿರ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದನು. ಆದರೆ ಈತನ ಮೃತದೇಹ ಏಪ್ರಿಲ್ …

Read More »

ಗುಣಮುಖರಾದ ಸೋಂಕಿತರಿಗೆ ಹೂ ಗಿಡ, ಹಣ್ಣು ಕೊಟ್ಟು ಬೀಳ್ಕೊಡುಗೆ

ಇದುವರೆಗೂ 8 ಮಂದಿ ಸೋಂಕಿತರು ಗುಣಮುಖ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 5 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ಒಂದೇ ಕುಟುಂಬದ ನಾಲ್ವರು ಏಕಕಾಲದಲ್ಲಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಗುಣಮುಖರಾದ ನಾಲ್ವರನ್ನ ಇಂದು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಒಂದೇ ಕುಟುಂಬದ ನಾಲ್ವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅವರು ಮನೆಗೆ ಹೋಗುವಾಗ ಸರದಿ ಸಾಲಿನಲ್ಲಿ ನಿಂತು …

Read More »

ಬೋರ್ ಆಗ್ತಿದೆಂದು ಲಾಕ್‍ಡೌನ್ ನಡುವೆ ವಿದ್ಯಾರ್ಥಿಯ ಖತರ್ನಾಕ್  ಪ್ಲಾನ್”……

ಲಾಕ್‍ಡೌನ್ ನಡುವೆ ವಿದ್ಯಾರ್ಥಿಯ ಖತರ್ನಾಕ್  ಪ್ಲಾನ್ ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಇರುವವರು ಬಿಟ್ಟು ಹೊರಗಿನಿಂದ ಬರುವವರಿಗೆ ಪ್ರವೇಶಕ್ಕೆ ಕೆಲವು ಕಡೆ ನಿರ್ಬಂಧ ವಿಧಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಯೊಬ್ಬ ಸೂಟ್‍ಕೇಸ್‍ನೊಳಗೆ ಗೆಳೆಯನನ್ನ ಸಾಗಿಸುವಾಗ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ನಡೆದಿದೆ. ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ …

Read More »

ಬೆಳಗಾವಿ –ಅಬಕಾರಿ ನಾಕಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ 5 ಸೋಲಾರ್ ಲೈಟ್

ಬೆಳಗಾವಿ –  ಗೋವಾ ಮತ್ತು ಕರ್ನಾಟಕದ ಗಡಿ ಖಾನಾಪುರ ತಾಲೂಕಿನ  ಸುರಾಲ್ ಕ್ರಾಸ್ ನ ಅಬಕಾರಿ ನಾಕಾದಲ್ಲಿ ದಿನದ ಇಪ್ಪತ್ನಾಲ್ಕು ಘಂಟೆಯೂ  ಅಬಕಾರಿ ಪೊಲೀಸರು ಮತ್ತು ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತರು ಗೋವಾದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲ್ಲ ಕಾರ್ಮಿಕ ಪಾದಚಾರಿಗಳ ಪ್ರಾಥಮಿಕ ಚಿಕಿತ್ಸೆ ನಡೆಸುತ್ತಿದ್ದಾರೆ. ಎಲ್ಲರ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾತ್ರಿ ವಿದ್ಯುತ್ತಿನ ತೀವ್ರ ಅಭಾವದಿಂದಾಗಿ ದಟ್ಟ ಅರಣ್ಯದ ಈ ಭಾಗದಲ್ಲಿ ಕೆಲಸ ನಿರ್ವಹಣೆ …

Read More »

ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇಂದು ಒಂದೇ ದಿನದಲ್ಲಿ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರಲ್ಲಿ ಬೆಳಗಾವಿಯಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗದ ಮೂವರಿಗೆ ಮತ್ತು ಹೀರೇಬಾಗೆವಾಡಿಯ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. …

Read More »

ಕೊರೊನಾ ಸೋಂಕು ತಗುಲಿತ್ತು ಎಂದು ಬ್ಲೇಡ್ ನಿಂದ ಕುತ್ತು ಕೊಯ್ದುಕೊಂಡು ಶನಿವಾರ ಬೆಳಿಗ್ಗೆ ಆತ್ಮಹತ್ಯೆ

ಮುಂಬೈ:  ಕೊರೊನಾ ಸೋಂಕು ದೃಢ ಪಟ್ಟಿರುವ ಅಸ್ಸಾಂನ ನಾಗೌನ್ ಜಿಲ್ಲೆಯ 30 ವರ್ಷದ ವ್ಯಕ್ತಿ ಬ್ಲೇಡ್ ನಿಂದ ಕುತ್ತು ಕೊಯ್ದುಕೊಂಡು ಶನಿವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿರುಕೊಂಡಿದ್ದಾನೆ. ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಈತನಿಗೆ ಏಪ್ರೀಲ್ 7ರಂದು ಕೊರೊನಾ ಸೋಂಕು ತಗುಲಿತ್ತು ಎಂದು ಅಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಡೀನ್ ಡಾ.ಅಪೂರ್ವ್ ಪಾವ್ಡೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದರು. ಆದರೆ ಶನಿವಾರ ಆಸ್ಪತ್ರೆಯಲ್ಲಿಯೇ …

Read More »

ನಾಗಮಂಗಲ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಆರೋಗ್ಯ ಕಿಟ್ ವಿತರಣೆ

  ಮಂಡ್ಯ ನಾಗಮಂಗಲದ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷರಾದ ಟೀ ಕೃಷ್ಣಪ್ಪನವರು ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ನಾಗಮಂಗಲ ತಾಲ್ಲೂಕು ಕಚೇರಿ ಆವರಣದಲ್ಲಿ ಆರೋಗ್ಯ ಕಿಟ್ ವಿತರಿಸಿದರು ನಂತರ ಮಾತನಾಡಿದ ಕೃಷ್ಣಪ್ಪನವರು ಸಾರ್ವಜನಿಕವಾಗಿ ಓಡಾಡುವಂತಹ ಸಮಾಜಮುಖಿ ವ್ಯಕ್ತಿಗಳಾಗಿರುವ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟೈಸರ್. ಮಾಸ್ಕ್. ಹಾಗೂ. ಕೈ ಕವಚ ವಿತರಿಸಿಲಾಗಿದೆ ಇದರಲ್ಲಿ ಯಾವುದೇ ಪ್ರಚಾರದ ಗೀಳು ಇರುವುದಿಲ್ಲ ಸಮಾಜಕ್ಕೆ ಸುದ್ದಿಗಳನ್ನು ಮುಟ್ಟಿಸುವಂಥ ವ್ಯಕ್ತಿಗಳ …

Read More »

ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರು ಬಿ ಎಂ ಕಿರಣ್ ರವರು ಕಿಕ್ಕೇರಿ ಹೋಬಳಿ ಹಲವಾರು ಗ್ರಾಮಗಳಿಗೆ ಬೇಟಿ ನೀಡಿ ಸಂಕಷ್ಟದಲಿದ್ದ ಕುಟುಂಬಗಳ ಯೋಗ ಕ್ಷೇಮ ವಿಚಾರಿಸಿ ಅಕ್ಕಿ ಸೇರಿದಂತೆ ಮನೆಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

ಮಂಡ್ಯ ಕಿಕ್ಕೇರಿ ಹೋಬಳಿಯ ಆನೆಗೂಳ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರು ಬಿ ಎಂ ಕಿರಣ್ ರವರು ಕಿಕ್ಕೇರಿ ಹೋಬಳಿ ಹಲವಾರು ಗ್ರಾಮಗಳಿಗೆ ಬೇಟಿ ನೀಡಿ ಸಂಕಷ್ಟದಲಿದ್ದ ಕುಟುಂಬಗಳ ಯೋಗ ಕ್ಷೇಮ ವಿಚಾರಿಸಿ ಅಕ್ಕಿ ಸೇರಿದಂತೆ ಮನೆಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು. ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ಬಡವರ ಕಷ್ಟ ಮತ್ತೆ ಮತ್ತೆ ಬೆಳಕಾದ ಬಿ.ಎಂ ಕಿರಣ್ ಹೌದು ಇಡೀ ದೇಶವೇ ಮಹಾಮಾರಿ ಕೊರೋನಾ ವೈರೆಸ್ ಇಂದ ಲಾಕ್ ಡೌನ್ …

Read More »

ಕಾಂಗ್ರೆಸ್ ಕಾರ್ಯಪಡೆ ಹಾಗೂ ಮೇಲುಕೋಟೆ ಬ್ಲಾಕ್ ಕೆಪಿಸಿಸಿ ಸದಸ್ಯ ಎಂ.ಆನಂದಕುಮಾರ್ ಅವರಿಂದ ಬಡವರು, ನಿರ್ಗತಿಕರಿಗೆ ಆಹಾರ ವಿತರಣೆ

  ಮಂಡ್ಯ ಜಿಲ್ಲೆ ಪಾಂಡವಪುರದ ಎಲೆಕೆರೆ ಗ್ರಾಮದ ಸ್ಲಂ ಬಡಾವಣೆ ನಿವಾಸಿಗಳಿಗೆ ಆಹಾರ ವಿತರಿಸಿದ ಕಾಂಗ್ರೆಸ್ ಕಾರ್ಯ ಪಡೆ. ಲಪಾಂಡವಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಕೆಪಿಸಿಸಿ ಸದಸ್ಯ ಎಂ.ಆನಂದಕುಮಾರ್ ಹಾಗೂ ಕಾರ್ಯ ಪಡೆ ಅಧ್ಯಕ್ಷ ಸಿ.ಆರ್.ರಮೇಶ್ ನೇತೃತ್ವದಲ್ಲಿ ನಡೆದ ಆಹಾರ ವಿತರಣೆ ಕಾರ್ಯಕ್ರಮ. ಮಹಾಮಾರಿ ಕೊರೊನೊ ಹಿನ್ನೆಲೆ ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣ ನೂರಾರು ಬಡವರು, ನಿರ್ಗತಿಕರಿಗೆ ಆಹಾರ ವಿತರಿಸಿದ ಕಾಂಗ್ರೆಸ್ ಕಾರ್ಯ ಪಡೆ. ಮೇಲುಕೋಟೆ ಬ್ಲಾಕ್ …

Read More »