Breaking News

Yearly Archives: 2020

ಡಿಕೆಶಿ ಬಳಿ ವೀಡಿಯೋಗಳಿದ್ದರೆ ಕೊಡಲಿ ತನಿಖೆ ಮಾಡುತ್ತೇವೆ: ಬೊಮ್ಮಾಯಿ

ರಾಯಚೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಯಚೂರಿನಲ್ಲಿ ಹೇಳಿದ್ದಾರೆ. ರಾಯಚೂರು ಪ್ರವಾಸದಲ್ಲಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂತೋಷ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಒಂದೆರಡು ದಿನದಲ್ಲಿ ಸರಿಹೋಗಬಹುದು. ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆ ಮಾಡಲಾಗುವುದು ಎಂದರು. ಎಂಎಲ್‍ಸಿ ಹಾಗೂ ಮಿನಿಸ್ಟರ್ ವೀಡಿಯೋ ವಿಚಾರದಲ್ಲಿ ಒತ್ತಡ ಹಿನ್ನೆಲೆ ಆತ್ಮಹತ್ಯೆಗೆ …

Read More »

ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಅವರ ಪರ್ಸನಲ್ ವೀಡಿಯೊ ತೋರಿಸಿದ್ದಾರೆ. ಹೀಗಾಗಿ ಬೇಸರದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು: ಡಿಕೆ ಶಿವಕುಮಾರ್.

ಕಾರವಾರ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಏನೋ ಬೇಜಾರಾಗಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.ಕಾರವಾರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಂತೋಷ್‍ರವರು ಯಾವುದೋ ವೀಡಿಯೋ ಮಾಡಿ ಎಂಎಲ್‍ಸಿಗೆ ಮತ್ತು ಮಿನಿಸ್ಟರ್ ಕೈಗೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇತ್ತು. ಅದನ್ನು ಮಿನಿಸ್ಟರ್ ಮತ್ತು ಎಂಎಲ್‍ಸಿಗೆ ಸೇರಿ ದೆಹಲಿ ನಾಯಕರಿಗೆ ತಲುಪಿಸಿದ್ದಾರೆ ಎನ್ನುವುದು ಮಾಹಿತಿ ಇದೆ ಎಂದರು. ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಅವರ …

Read More »

ಆನ್‍ಲೈನ್ ಗೇಮ್ ಹುಚ್ಚಿನಿಂದ ವ್ಯಕ್ತಿಯೊಬ್ಬ 16 ಲಕ್ಷ ರೂ. ಕಳೆದುಕೊಂಡು ಇದೀಗ ಆತ್ಮಹತ್ಯೆಗೆ ಶರಣಾದ

ಹೈದರಾಬಾದ್: ಆನ್‍ಲೈನ್ ಗೇಮ್ ಹುಚ್ಚಿನಿಂದ ವ್ಯಕ್ತಿಯೊಬ್ಬ 16 ಲಕ್ಷ ರೂ. ಕಳೆದುಕೊಂಡು ಇದೀಗ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈತ ಎಲ್‍ಬಿ ನಗರ ನಿವಾಸಿ. ಆನ್‍ಲೈನ್ ಗೇಮ್ ಚಟದಿಂದಾಗಿ ಜಗದೀಶ್ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡನು. ಅಲ್ಲದೆ ಸಾಲ ತೀರಿಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲವು ದಿನಗಳ ಹಿಂದೆ ಜಗದೀಶ್ ತಂದೆ …

Read More »

B.S.Y. ಭೇಟಿ‌ ಮಾಡಿದ ರಮೇಶ್ ಜಾರಕಿಹೊಳಿ‌, ತಮ್ಮದೇ ಮಿತ್ರಮಂಡಳಿ ವಿರುದ್ಧ ಸಾಹುಕಾರ್ ಗರಂ..!

ಬೆಂಗಳೂರು : ರಾಜ್ಯದ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮಧ್ಯೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು, ಇಂದು ನವ ದುರ್ಗಾ ಪೂಜೆ ಮತ್ತು ಹೋಮದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ವಾರಕ್ಕೆರಡು ಬಾರಿಯಂತೆ ನವದೆಹಲಿಯ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವ ರಮೇಶ್ ಜಾರಕಿಹೊಳಿ‌, ರಾಜ್ಯ ರಾಜಕೀಯದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವರ ಮೊರೆ ಹೋಗಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೂ ಮೊದಲು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ‌ ಮಾಡಿ ರಾಜ್ಯದ ಅಣೆಕಟ್ಟೆಗಳ …

Read More »

ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿದರೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ : ಸತೀಶ್ ಜಾರಕಿಹೊಳಿಯ

ಶಿರಸಿ: ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಇದರಲ್ಲಿ ಅತ್ಯಂತ ಮುಖ್ಯವಾದ ಪಾತ್ರ ಕಾರ್ಯಕರ್ತರದ್ದಾಗಿರುತ್ತದೆ. ವಿಧಾನಸಭೆ, ಲೋಕಸಭೆ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಯಾವ ಚುನಾವಣೆಯೇ ಆಗಿರಲಿ ನಾವೆಲ್ಲ ಒಗ್ಗೂಡಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದರೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ತೋಟಗಾರರ ಕಲ್ಯಾಣಮಂಟಪದಲ್ಲಿ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ …

Read More »

ಪ್ರತ್ಯೇಕವಾಗಿ ನಡೆದ ಸಚಿವರು ಹಾಗೂ ಶಾಸಕರು ಸಭೆ ಅಸಮಾಧಾನ ಹೊರಹಾಕಿದ ರಮೇಶ್ ಜಾರಕಿಹೊಳಿ

ಬೆಂಗಳೂರು: ನಿನ್ನೆ ರಾತ್ರಿ ಖಾಸಗಿ ಹೋಟೆಲ್‍ನಲ್ಲಿ ಪ್ರತ್ಯೇಕವಾಗಿ ನಡೆದ ಸಚಿವರು ಹಾಗೂ ಶಾಸಕರು ಸಭೆಗೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ‘ಈಗಲೂ ಕೂಡ ಅವರೆಲ್ಲರೂ ನನ್ನ ಸ್ನೇಹಿತರೆ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಮುಂದೆ ಈ ರೀತಿ ಸಭೆಗಳು ನಡೆಯಬಾರದು. ಪ್ರತ್ಯೇಕ ಸಭೆಗಳನ್ನು ನಡೆಸುವುದಕ್ಕೆ ಕಡಿವಾಣ ಹಾಕಬೇಕು. ಇದರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ನಾನು ನಾಯಕ ಎಂದು ಎಲ್ಲಿಯೂ ಹೇಳಿಲ್ಲ. …

Read More »

BJP ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ ನಿಧನರಾಗಿದ್ದಾರೆ.

ಬೆಳಗಾವಿ – ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ವಿಭಾಗದ ಸಹ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಕೊರೋನಾ ಸೋಂಕು ತಗುಲಿದ್ದ ಅವರು 2 ಬಾರಿ ಗುಣಮುಖರಾಗಿ ಹೊರಬಂದಿದ್ದರು. ಆದರೆ ಆ ವೇಳೆ ದೇಹದ ಅನೇಕ ಅಂಗಾಂಗಗಳಿಗೆ ಡ್ಯಾಮೇಜ್ ಆಗಿತ್ತು. ಸಧ್ಯ ಅವರು ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಯೇ ನಿಧನರಾದರು. ಯಮಕನಮರಡಿ ಸಮೀಪ ಕುರಣಿಯವರಾಗಿದ್ದ ಅವರು ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು.

Read More »

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಸ್ತಿ ಮಾರಾಟಕ್ಕೆ

ಬೆಂಗಳೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಸ್ತಿ ಮಾರಾಟಕ್ಕೆ ಆಂಧ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಹಿಂದೂಪರ ಸಂಘಟನೆಗಳ ವಿರೋಧ ವ್ಯಕ್ತವಾಗಿದೆ. ಮಂತ್ರಾಲಯದ ಒಟ್ಟು 208 ಎಕರೆ ಇನಾಮು ಭೂಮಿಯನ್ನು ಮಾರಾಟ ಮಾಡಲು ಸರ್ಕಾರ ಪ್ರಕಟಣೆ ಹೊರಡಿಸಿದೆ. ಮಠಕ್ಕೆ ಸಂಬಂಧಿಸಿದ ವಡ್ಡೆಪಲ್ಲೆ, ಮಲದಕಲ್, ಧರೂರು ಮಂಡಲ ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿಯಾಗಿದೆ ಎಂಬ ಕಾರಣಕ್ಕೆ ಮಾರಾಟ ಮಾಡಲು ಮಠವೇ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದ ಕಾರಣ ಸರ್ಕಾರ ಪ್ರಕಟಣೆ ಹೊರಡಿಸಿದೆ. …

Read More »

ಎಂಎಲ್‍ಸಿ ಮತ್ತು ಮಂತ್ರಿ ಇಬ್ಬರೂ ಸೇರಿ ಸಿಎಂ ಹಾಗೂ ಸಂತೋμïಗೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಕೇಳಿದ್ದೆ.: ಡಿ.ಕೆ.ಶಿವಕುಮಾರ

ಕಾರವಾರ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ರಹಸ್ಯ ವಿಡಿಯೋ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ಕಾರವಾರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಾವುದೋ ಒಂದು ವೈಯಕ್ತಿಕ ವಿಡಿಯೋ ಎತ್ತಿಕೊಂಡು ಹೋಗಿ, ಎಂಎಲ್‍ಸಿಗೆ ಹಾಗೂ ಸಚಿವರಿಗೆ ಕೊಟ್ಟ ಮಾಹಿತಿ ಎರಡು ಮೂರು ತಿಂಗಳ ಹಿಂದೇ ಇತ್ತು. ಎಂಎಲ್‍ಸಿ ಮತ್ತು ಮಂತ್ರಿ ಇಬ್ಬರೂ ಸೇರಿ ಸಿಎಂ ಹಾಗೂ ಸಂತೋμïಗೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು …

Read More »

ಕೇಂದ್ರ ಸರ್ಕಾರ ಪ್ರಕಟಿಸಿರುವ ಆನ್‌ಲಾಕ್‌ 6 ಮಾರ್ಗಸೂಚಿ

ಬೆಂಗಳೂರು,ನ.28- ಕೇಂದ್ರ ಸರ್ಕಾರ ಪ್ರಕಟಿಸಿರುವ ಆನ್‌ಲಾಕ್‌ 6 ಮಾರ್ಗಸೂಚಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಮಾರ್ಗಸೂಚಿಯಲ್ಲಿ ಕೊರೊನಾ ಹಿನ್ನೆಲೆ ಮುಖ್ಯವಾಗಿ ಕಣ್ಗಾವಲು, ನಿಯಂತ್ರಣ ಮತ್ತು ಕಟ್ಟುನಿಟ್ಟಾದ ಪಾಲನೆಯನ್ನು ಒಳಗೊಂಡ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಕಂಟೇನ್ಮೆಂಟ್ ವಲಯದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವುದು, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಕೋವಿಡ್-19 ಹರಡುವುದನ್ನು …

Read More »