Breaking News

Yearly Archives: 2020

ಮಂತ್ರಾಲಯದಲ್ಲಿ ತೆಪ್ಪೋತ್ಸವ ಸಂಭ್ರಮ

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಇಂದು ತುಂಗಾರತಿ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು. ಉತ್ಸವಮೂರ್ತಿ ಪ್ರಹ್ಲಾದ ರಾಜರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತುಂಗಭದ್ರಾ ನದಿಯಲ್ಲಿ ಪ್ರಹ್ಲಾದರಾಜರ ತೆಪ್ಪೋತ್ಸವ ಜರುಗಿತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ನದಿ ದಡದಲ್ಲಿ ಭಕ್ತರಿಂದ ದೀಪೋತ್ಸವ ನಡೆದಿದೆ. ಈ ವರ್ಷ ತುಂಗಭದ್ರಾ ನದಿಯಲ್ಲೆ ಪುಷ್ಕರ ಇರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ …

Read More »

ಟ್ರ್ಯಾಕ್ಟರ್ ಅಡ್ಡ ಬಂದಿದ್ದಕ್ಕೆ ಡಿವೈಡರ್‌ಗೆ ಹಾರಿದ ಬಸ್

ಹಾಸನ: ಒಮ್ಮೆಲೆ ಟ್ರ್ಯಾಕ್ಟರ್ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್ ಮೇಲೆ ಏರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲೆಯ ಶಾಂತಿಗ್ರಾಮ ಬಳಿ ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದ್ದು, ಕೆಎಸ್‍ಆರ್ ಟಿಸಿ ಬಸ್‍ಗೆ ಇದ್ದಕ್ಕಿದ್ದಂತೆ ಟ್ರ್ಯಾಕ್ಟರ್ ಅಡ್ಡ ಬಂದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈವರ್ ಮೇಲೆ ಹತ್ತಿದೆ. ಬಸ್ ಡಿವೈಡರ್ ದಾಟಿ ಹೋಗದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ …

Read More »

ಸಿಎಂಗೆ ಕಣ್ಣು, ಬಾಯಿ ಇಲ್ಲ ಅಂದ್ರು ಉಮಾಶ್ರೀ

ಬಾಗಲಕೋಟೆ: ಮಹಲಿಂಗಪುರ ಸದಸ್ಯೆ ತಳ್ಳಾಟ ನೂಕಾಟದಿಂದ ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆಯ ಪರಿಣಾಮ ಅವರಿಗೆ ಗರ್ಭಪಾತವಾಗಿದೆ. ಸಿಎಂಗೆ ಕಿವಿ, ಕಣ್ಣೂ, ಬಾಯಿಯೂ ಇಲ್ಲದಂತಾಗಿದೆ ಎಂದು ಮಾಜಿ ಸಚಿವೆ, ನಟಿ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಶಾಸಕ ಮತ್ತು ಬೆಂಬಲಿಗರ ತಳ್ಳಾಟದಿಂದಾಗಿ ಪುರಸಭೆ ಸದಸ್ಯೆಗೆ ಗರ್ಭಪಾತ ವಿಚಾರವಾಗಿ ಮಾತನಾಡಿದ ಉಮಾಶ್ರೀ, ಗರ್ಭಪಾತ ಆಗಿರೋದು ಕೊಲೆಗೆ ಸಮಾನವಾಗಿದೆ. ಆದರೆ ಸರ್ಕಾರ ಮಾತ್ರ ಏನು ಕ್ರಮ ಕೈ ಗೊಳ್ಳುತ್ತಿಲ್ಲ. ಈ ಘಟನೆಯಲ್ಲಿ ಇದ್ದ ನೀಚ …

Read More »

ವಿಷದ ಇಂಜೆಕ್ಷನ್ ಮಾಡ್ಕೊಂಡು ಬಾಬಾ ಆಮ್ಟೆ ಮೊಮ್ಮಗಳು ಸೂಸೈಡ್

ಮುಂಬೈ: ಕುಷ್ಠ ರೋಗಿಗಳಿಗಾಗಿ ಜೀವನವನ್ನೇ ಮುಡಿಪು ಇಟ್ಟಿದ್ದ ಸಾಮಾಜಿಕ ಕಾರ್ಯಕರ್ತ ಡಿ.ಬಾಬಾ ಆಮ್ಟೆ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕುಷ್ಠ ರೋಗಿಗಳ ಆನಂದವನ ಸಂಸ್ಥೆ ನಡೆಸುತ್ತಿದ್ದ ಡಾ.ಶೀತಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಪುರದಲ್ಲಿರುವ ತಮ್ಮ ನಿವಾಸದಲ್ಲಿ ವಿಷದ ಇಂಜೆಕ್ಷನ್ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಹಾರೋಗಿ ಸೇವಾ ಸಮಿತಿಯಲ್ಲಿ ಹಗರಣದ ಆರೋಪಗಳು ಕೇಳಿ ಬಂದಿದ್ದವು. ಮೃತ ಡಾ.ಶೀತಲ್ ಆಮ್ಟೆ ಮಹಾರೋಗಿ ಸೇವಾ ಸಮಿತಿಯ ಸಿಇಓ ಆಗಿದ್ದರು. ಇತ್ತ ಹಲವು ವರ್ಷಗಳಿಂದ ಪತಿ ಮತ್ತು ಕುಟುಂಬದ …

Read More »

ಸೆಕ್ಸ್ ವೀಡಿಯೋ ತೋರಿಸಿ ರೇಪ್ – ನಿರ್ದೇಶಕನ ವಿರುದ್ಧ ನಟಿ ದೂರು

ಮುಂಬೈ: ನಿರ್ದೇಶಕ ಆಯುಷ್ ತಿವಾರಿ ವಿರುದ್ಧ ಕಿರುತೆರೆ ಮತ್ತು ವೆಬ್ ಸಿರೀಸ್ ನಟಿ ಅತ್ಯಾಚಾರದ ಆರೋಪ ಮಾಡಿ ಮುಂಬೈನ ವಾರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ನಿರ್ದೇಶಕ ಆಯುಷ್ ತಿವಾರಿ ಸಹ ದೂರ ದಾಖಲಾದ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.ನಿರ್ದೇಶಕ ಕೆಲವು ದಿನಗಳಿಂದ ತಮಗೆ ಪೋರ್ನ್ ವೀಡಿಯೋಗಳನ್ನ ತೋರಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ನಟಿ ದೂರಿನಲ್ಲಿ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟಿಯ ಹೇಳಿಕೆಯನ್ನ …

Read More »

ಗ್ರಾಮ ಲೆಕ್ಕಾಧಿಕಾರಿಯನ್ನು, ರೂ.15,000 ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ: ಅತಿವೃಷ್ಠಿಯಿಂದ ಕುಸಿದ ಮನೆಯನ್ನು ಪರಿಹಾರಕ್ಕಾಗಿ ‘ಬಿ’ ಕೆಟೆಗರಿ ಸೇರಿಸಲು ಸಂತ್ರಸ್ಥನಿಂದ ಲಂಚ ಕೇಳಿದ ಮೂಡಲಗಿ ತಾಲೂಕು ಮಸಗುಪ್ಪಿಯ ಗ್ರಾಮ ಲೆಕ್ಕಾಧಿಕಾರಿಯನ್ನು, ರೂ.15,000 ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ. ಅಶೋಕ ತಳವಾರ ಬಂಧಿತ ಆರೋಪಿ. ಮಸಗುಪ್ಪಿಯ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಅಶೋಕ ತಳವಾರ ಮೂಡಲಗಿಯ ತಹಶೀಲದಾರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಅತಿವೃಷ್ಠಿಗೆ ಕುಸಿದ ಮನೆಯ ವಿವರಗಳನ್ನು ಪರಿಹಾರಕ್ಕಾಗಿ ‘ಬಿ’ ಕೆಟೆಗರಿಗೆ …

Read More »

ಸಂಪಾದನ ಮಠದ ವಾಣಿಜ್ಯ ಸಂಕೀರ್ಣಗಳನ್ನ ಉದ್ಘಾಟಿಸಿದ ರಮೇಶ್ ಜಾರಕಿಹೊಳಿ

ಗೋಕಾಕ : ನಗರದ ಬ್ಯಾಳಿಕಾಟ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ ಶೂನ್ಯ ಸಂಪಾದನ ಮಠದ ವಾಣಿಜ್ಯ ಸಂಕೀರ್ಣಗಳನ್ನು ಸೋಮವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಸುಣದೋಳಿಯ ಶಿವಾನಂದ ಸ್ವಾಮೀಜಿ, ಜಿಪಂ.ಸದಸ್ಯ ಟಿ.ಆರ್.ಕಾಗಲ್, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪೌರಾಯುಕ್ತ ಶಿವಾನಂದ ಹಿರೇಮಠ, ಮುಖಂಡರಾದ ಅಬ್ದುಲ್ ರಹೇಮಾನ್ ದೇಸಾಯಿ, ಹುಸೇನ ಫನಿಬಂದ್, ದುರ್ಗಪ್ಪ ಶಾಸ್ತ್ರಿಗೊಲ್ಲರ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಬಸವರಾಜ ಹಿರೇಮಠ, …

Read More »

ಮಸ್ಕಿಯಲ್ಲಿ ಸಚಿವರ ದಂಡು – ಕಾಂಗ್ರೆಸ್ ಮುಕ್ತ ಗ್ರಾ.ಪಂಗಳ ನಿರ್ಮಾಣಕ್ಕೆ ಬಿಜೆಪಿ ಸಂಕಲ್ಪ

ರಾಯಚೂರು: ರಾಜ್ಯದಲ್ಲಿ ಶೇಕಡ 80 ರಷ್ಟು ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಬೇಕು. ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಗ್ರಾಮಸ್ವರಾಜ್ಯ ಸಮಾವೇಶ ನಡೆಸಿದ್ದೇವೆ ಅಂತ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಜಿಲ್ಲೆಯ ಮಸ್ಕಿಯಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸವದಿ ಉಪಚುನಾವಣೆಯ ದೃಷ್ಠಿಕೋನದಲ್ಲಿ ಇಂದು ಮಸ್ಕಿಯಲ್ಲಿ ಸಮಾವೇಶ ಮಾಡಿದ್ದೇವೆ ಎಂದರು. ಸಿದ್ದರಾಮಯ್ಯ ಆಧಾರ ರಹಿತವಾಗಿ ಮಾತನಾಡುತ್ತಾರೆ. ಆದ್ರೆ ಮೋದಿ ಯಾವುದನ್ನು ಹೇಳುತ್ತಾರೊ ಅದನ್ನೇ ಮಾಡುತ್ತಾರೆ, ಕೊಟ್ಟ …

Read More »

ಚುನಾವಣೆ ಅಂದ್ರೆ ಏನು ಅಂತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತೋರಿಸುತ್ತೇವೆ: ಪ್ರಜ್ವಲ್ ರೇವಣ್

ಹಾಸನ: ಚುನಾವಣೆ ಅಂದ್ರೆ ಏನು ಅಂತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ರಸ್ತೆ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ತಂದಿರುವ ಅನುದಾನಕ್ಕೆ ಶಾಸಕ ಪ್ರೀತಂಗೌಡ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಎಂಪಿ ಅನುದಾನದಲ್ಲಿ ಎಂಪಿಯವರ ಸಹಿ ಇಲ್ಲದೆ ರಸ್ತೆ ಮಂಜೂರಾತಿ ಆಗಲ್ಲ ಎಂಬುದು ಅವರಿಗೆ ಗೊತ್ತಿಲ್ಲ. ಅವರು ತಂದ ಅನುದಾನವನ್ನು ನಾವೇನು ಹೋಗಿ ಪೂಜೆ ಮಾಡಲ್ಲ. ನಾವು …

Read More »

BIG BREAKING ಕನ್ನಡ ಹೋರಾಟಗಾರರಿಗೆ ಸೆಡ್ಡು-ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಈ ಮೂಲಕ ಕನ್ನಡ ಹೋರಾಟಗಾರರಿಗೆ ಸೆಡ್ಡು ಹೊಡೆದಿದೆ.ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್‍ವೈ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡ ಹೋರಾಟಗಾರರ ಬಂದ್ ಎಚ್ಚರಿಕೆಗೂ ಸರ್ಕಾರ ಕ್ಯಾರೇ ಎಂದಿಲ್ಲ. ಮರಾಠ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗಾಗಿ ನಿಗಮ …

Read More »