Breaking News

Yearly Archives: 2020

ಕಾರ್ಮಿಕ ದಿನಾಚರಣೆ – ಪೌರಕಾರ್ಮಿಕರು, ಬೆಸ್ಕಾಂ ಸಿಬ್ಬಂದಿಗೆ ಪುಷ್ಪವೃಷ್ಟಿ……….

ನೆಲಮಂಗಲ: ಕೊರೊನಾ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‍ಡೌನ್‍ನಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಮಸ್ಯೆ ಎದುರಾಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ. ನೆಲಮಂಗಲ ನಗರದ ಬಸವಣ್ಣ ದೇವರಮಠದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ವಾಮೀಜಿಗಳ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಆಹಾರಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಭಾರತದ ಆರ್ಥಿಕತೆ ಕುಸಿತವಾಗಿದೆ. ಆರ್ಥಿಕತೆಗಿಂತ ಜನರ ಪ್ರಾಣ ಉಳಿಸುವುದು ಮುಖ್ಯವಾಗಿದ್ದು ಮುಂದೆ ಆರ್ಥಿಕತೆ ಚೇತರಿಗೆ ಪಡೆಯಲಿದೆ. …

Read More »

ಕೋವಿಡ್ ಇರಬೇಕು ಇಲ್ಲ ನಾವಿರಬೇಕು. ಏಕೆಂದರೆ ಕೋವಿಡ್ ನಮ್ಮನ್ನು ಬಿಟ್ಟು ಅಷ್ಟು ಬೇಗ ಹೋಗಲ್ಲ: ಶ್ರೀರಾಮುಲು

ಹಾಸನ: ಕೋವಿಡ್ ಇರಬೇಕು ಇಲ್ಲ ನಾವಿರಬೇಕು. ಏಕೆಂದರೆ ಕೋವಿಡ್ ನಮ್ಮನ್ನು ಬಿಟ್ಟು ಅಷ್ಟು ಬೇಗ ಹೋಗಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಜನರ ಜೊತೆಗೆ ಸರ್ಕಾರ ಕೆಲಸ ಮಾಡುತ್ತಿದೆ. ಇಷ್ಟು ದಿನ ನಾವು ತಾಳ್ಮೆಯಿಂದ ಇದ್ದೇವೆ. ಮುಂದೆಯೂ ಯಾರು ತಾಳ್ಮೆ ಕಳೆದುಕೊಳ್ಳಬೇಡಿ. ಕೋವಿಡ್ ನಮ್ಮನ್ನು ಅಷ್ಟು ಬೇಗ ಬಿಟ್ಟು ಹೋಗಲ್ಲ. ನಾವು ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಶ್ರೀರಾಮುಲು ಹೇಳಿದರು. ಕೊರಾನಾ ವಾರಿಯರ್ಸ್ ವಿರುದ್ಧ ಹಲ್ಲೆ …

Read More »

ಕೊನೆಗೂ ಜಿಲ್ಲಾಧಿಕಾರಿ ಹಿರೇ ಬಾಗೇವಾಡಿ ಗ್ರಾಮಕ್ಕೆ ಭೇಟಿ

ಬೆಳಗಾವಿ -: ಕೊರೋನಾ ಸಂಕಷ್ಟದಿಂದ ನಲುಗಿಹೋಗಿ ತಿಂಗಳುಗಳೇ ಕಳೆದರೂ ಹಿರೇಬಾಗೇವಾಡಿ ಗ್ರಾಮಕ್ಕೆ ಭೇಟಿ ನೀಡದೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಅವರನ್ನು ಗ್ರಾಮಕ್ಕೆ ಕರೆತರುವಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಯಶಸ್ವಿಯಾಗಿದ್ದಾರೆ. ಕೋವಿಡ್ -19 ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್ ಅವರೊಂದಿಗೆ ನಿನ್ನೆ ಸುದೀರ್ಘ ಚರ್ಚೆ ನಡೆಸಿದ್ದ ಲಕ್ಷ್ಮಿ ಹೆಬ್ಬಾಳಕರ್, ಹಿರೇಬಾಗೇವಾಡಿ ಜನರು ಪಡುತ್ತಿರುವ ಪಾಡನ್ನು ವಿವರಿಸಿದ್ದರು. ಜಿಲ್ಲಾಡಳಿತ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ವಿಶೇಷವಾಗಿ, ಕೇವಲ …

Read More »

ಮಹಿಳೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬೇಡಿ, ಬೇಕಿದ್ದರೆ ನನ್ನ ಅರ್ಧ ಸಂಬಳವನ್ನು ನೀಡುತ್ತೇನೆ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ.

ಬೆಂಗಳೂರು: ಹಲವರು ಮದ್ಯದಂಗಡಿ ಯಾವಾಗ ತೆರೆಯುತ್ತೆ ಎಂದು ಕಾಯುತ್ತಿದ್ದಾರೆ. ಇನ್ನು ಕೆಲವರು ಮದ್ಯದಂಗಡಿ ತೆರೆಯುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬೇಡಿ, ಬೇಕಿದ್ದರೆ ನನ್ನ ಅರ್ಧ ಸಂಬಳವನ್ನು ನೀಡುತ್ತೇನೆ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಮುಖ್ಯಮಂತ್ರಿಗಳಿಗೆ ನನ್ನದೊಂದು ಮನವಿ. ಎಣ್ಣೆ ಅಂಗಡಿ ತೆರೆಯಲು ಅವಕಾಶ ನೀಡಬೇಡಿ. ಏಕೆಂದರೆ ಮದ್ಯ …

Read More »

ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಹೋಂಗಾರ್ಡ್​​ವೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಹೋಂಗಾರ್ಡ್​​ವೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯ ಹನುಮಂತು ಮೃತರು.ಅನಾರೋಗ್ಯದ ನಡುವೆಯೂ ಗೃಹರಕ್ಷಕ ಸಿಬ್ಬಂದಿ ಹನುಮಂತು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಡುವಿಲ್ಲದ ಕೆಲಸದಿಂದ ನಿನ್ನೆ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರು ಮಧುಮೇಹದಿಂದ ಬಳಲುತಿದ್ದರು ಎಂದು ತಿಳಿದುಬಂದಿದೆ.ತೀರ ಬಡಕುಟುಂಬದಿಂದ …

Read More »

ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆ

ಬೆಳಗಾವಿ- ಬೆಳಗಾವಿ ಪಾಲಿಗೆ ಇಂದು ಶುಭ ಶುಕ್ರವಾರ ಆಗಲಿಲ್ಲ ಯಾಕಂದ್ರೆ ಇಂದು ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆ ಯಾಗಿದೆ. ಈ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಮೂರು ಪಾಸಿಟಿವ್ ಕೇಸ್ ಪತ್ತೆಯಾಗಿವೆ ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 70 ರ ಗಡಿ ದಾಟಿ 72 ಕ್ಕೇರಿದೆ ನಿನ್ನೆ ಗುರುವಾರ ಒಂದೇ ದಿನ ಹದಿನಾಲ್ಕು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದವು ಇಂದು …

Read More »

ವೃದ್ಧ ದಂಪತಿಗಳನ್ನು ಹೊರಹಾಕಿದ ಪುರಸಭೆ ಅಧಿಕಾರಿಗಳು ತರಕಾರಿ ತರಲು ತೆರಳಿದ್ದ ದಂಪತಿಗಳ ಮನೆಗೆ ಬೀಗ ಜಡಿದ ಅಧಿಕಾರಿಗಳು.

ರಾಮದುರ್ಗ :ವೃದ್ಧ ದಂಪತಿಗಳನ್ನು ಹೊರಹಾಕಿದ ಪುರಸಭೆ ಅಧಿಕಾರಿಗಳು ತರಕಾರಿ ತರಲು ತೆರಳಿದ್ದ ದಂಪತಿಗಳ ಮನೆಗೆ ಬೀಗ ಜಡಿದ ಅಧಿಕಾರಿಗಳು. ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆಯ ವ್ಯಾಪ್ತಿಯಲ್ಲಿ ಘಟನೆ ರಾಮದುರ್ಗದ ನೇಕಾರ ಪೇಟೆಯ ನಿವಾಸಿಗಳಿಗೆ ಹೊರದಬ್ಬಿದ ಅಧಿಕಾರಿಗಳು ಕೊರೋನಾ ವೈರಸ್ ಲಾಕಡೌನ ಸಂದರ್ಭದಲ್ಲೂ ಕರುಣೆ ತೋರದ ಅಧಿಕಾರಿಗಳು ಅಧಿಕಾರಿಗಳ ಈ ವರ್ತನೆಗೆ ಕಂಗಾಲಾದ ವೃದ್ದ ದಂಪತಿಗಳು ಬಾಗಿಲು ಬಳಿ ಕುಳಿತು ಕಣ್ಣೀರು ಹಾಕುತ್ತಿರುವ ದಂಪತಿಗಳು ಮನೆಯ ಮುಂದೆಯೆ ದಿನ ಕಳೆಯುತ್ತಿರುವ ಬಸಪ್ಪ …

Read More »

ರಾಜ್ಯದ ಯಾವ ಜಿಲ್ಲೆ ಯಾವ್ ಝೋನ್ ನಲ್ಲಿ ಇದೆ ಬೆಳಗಾವಿ ಯಾವ್ ಝೋನ್ ಗೊತ್ತಾ?..

ಬೆಂಗಳೂರು: ಲಾಕ್ ಡೌನ್ ಜಾರಿಯಲ್ಲಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ 35 ಸಾವಿರ ದಾಟಿದ್ದರೆ ಸಾವಿನ ಸಂಖ್ಯೆ 1,147ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸೋಂಕು ಅಪಾಯಕಾರಿ ಮಟ್ಟದಲ್ಲಿರುವ ಪ್ರದೇಶಗಳನ್ನ ಗುರುತಿಸಿರುವ ಕೇಂದ್ರ ಆರೋಗ್ಯ ಇಲಾಖೆ ಮೂರು ವಲಯಗಳನ್ನು ಗುರುತಿಸಿದೆ. ವೈರಸ್ ಸೋಂಕಿನ ತೀವ್ರತೆಯ ಆಧಾರದ ಮೇಲೆ ಮೂರು ಪಟ್ಟಿ ಮಾಡಲಾಗಿದ್ದು, ರೆಡ್ ಜೋನ್, ಆರೆಂಜ್ ಜೋನ್ ಮತ್ತು ಗ್ರೀನ್ ಜೋನ್ ಎಂದು ವಿಂಗಡಿಸಲಾಗಿದೆ. …

Read More »

ಆಹಾರ ಪದಾರ್ಥಕಿಟ್ ಕೊಡಲು ಕರೆಸಿ, ಜನರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವಮಾನ

ಆಹಾರ ಪದಾರ್ಥಗಳ ಕಿಟ್​ಗಳನ್ನು ಪಡೆಯುವ ಸಲುವಾಗಿ ನೂರಾರು ಜನರು ಒಂದೆಡೆ ಸೇರಿದ್ದರು. ಎಲ್ಲರೂ ಬಿಸಿಲಿನಲ್ಲಿ ಗಂಟೆಗೂ ಹೆಚ್ಚು ಕಾದರೂ ಶಾಸಕ ರೇಣುಕಾಚಾರ್ಯ ಅವರು ಸ್ಥಳಕ್ಕೆ ಬರಲಿಲ್ಲ. ಇದರಿಂದ ಅಸಮಾಧಾಗೊಂಡ ಜನರು ತಾವು ಮನೆಗೆ ಹೋಗುವುದಾಗಿ ಹೇಳಿದ್ದಾರೆ. ದಾವಣಗೆರೆ: ಆಹಾರ ಪದಾರ್ಥಕಿಟ್ ಕೊಡಲು ಕರೆಸಿ, ಜನರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವಮಾನ ಮಾಡಿದ ಘಟನೆ ಹೊನ್ನಾಳಿ ತಾಲೂಕಿನ ಹನಮಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. ಕಿಟ್ ಬೇಡ ಅಂದ್ರೆ ಎದ್ದು ಹೋಗು ಎಂದು ಶಾಸಕರು …

Read More »

ರಾಜಸ್ಥಾನದಿಂದ ಬಂದ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಬೇಡಿ:

ಬೆಂಗಳೂರು: ರಾಜಸ್ಥಾನದಿಂದ ಬಂದ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಬೆಂಗಳೂರಿನ ಸುಂಕದಕಟ್ಟೆಯ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೊರ ರಾಜ್ಯದಲ್ಲಿ ಸಿಲುಕಿದ್ದ ಬೆಂಗಳೂರಿಗರನ್ನ ಮಧ್ಯರಾತ್ರಿ ನಗರಕ್ಕೆ ಕರೆದುಕೊಂಡು ಬರುವುದನ್ನು ವಿರೋಧಿಸಿ ಸುಂಕದಕಟ್ಟೆಯ ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದಾರೆ. ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಸರ್ಕಾರ ವಿದ್ಯಾರ್ಥಿಗಳನ್ನ ಇದೀಗ ಬೆಂಗಳೂರಿಗೆ ಕಳುಹಿಸಿದೆ. ರಾಜಸ್ಥಾನದಿಂದ ಬಂದ ವಿದ್ಯಾರ್ಥಿಗಳನ್ನ ಸುಂಕದಕಟ್ಟೆಯ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲು ಬಿಬಿಎಂಪಿ ಮುಂದಾಗಿದೆ. …

Read More »