ಬೆಳಗಾವಿ – ಲಕ್ಷ್ಮಿ ತಾಯಿ ಫೌಂಡೇಶನ್ ಹಿಂದಿನಿಂದಲೂ ಬಡವರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರ್ಕಂಡೇಯ ನಗರ, ವಾಲ್ಮೀಕಿ ನಗರ ಹಾಗೂ ಕಲ್ಯಾಣಹಟ್ಟಿ ಪ್ರದೇಶಗಳ ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಹಾಗೂ ನಿರ್ಗತಿಕರಿಗೆ ರೇಷನ್ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಲಕ್ಷ್ಮಿ ತಾಯಿ ಫೌಂಡೇಶನ್ ಕೇವಲ ಕೊರೋನಾ ಸಂದರ್ಭದಲ್ಲಿ ಜನರ ಸೇವೆ ಮಾಡುತ್ತಿಲ್ಲ. ಈ …
Read More »Yearly Archives: 2020
ವರ್ಗಾವಣೆಯಾಗ್ತಿದ್ದಂತೆ ನಾಲ್ವರಿಗೆ ಮುಂಬಡ್ತಿ ನೀಡಿದ ಕರ್ನಾಟಕ ಭವನದ ನಿವಾಸಿ ಆಯುಕ್ತರು
ನವದೆಹಲಿ: ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ದೆಹಲಿ ಕರ್ನಾಟಕ ಭವನದ ನಿವಾಸಿ ಆಯುಕ್ತ ನಿಲಯ್ ಮಿತಾಶ್ ತಮ್ಮ ನಿರ್ಗಮನ ವೇಳೆ ನಾಲ್ವರು ಉದ್ಯೋಗಿಗಳಿಗೆ ಮುಂಬಡ್ತಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ನಿಲಯ್ ಮಿತಾಶ್ ಅವರು ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಗೆ ನೇಮಕವಾದ ಹಿನ್ನೆಲೆ ವಿ. ವಿಧ್ಯಾವತಿಯವರನ್ನು ಕರ್ನಾಟಕ ಭವನದ ನಿವಾಸಿ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಿಲಯ್ ಮಿತಾಶ್ ತಮ್ಮ ನಿರ್ಗಮನದ ಮುನ್ನ ಸಹಾಯಕ ಸಮನ್ವಯ ಅಧಿಕಾರಿಗಳಾಗಿದ್ದ ಕುಸುಮಾ …
Read More »ಭಟ್ಕಳದಲ್ಲಿ ಯುವತಿಗೆ ಕೊರೊನಾ ಪಾಸಿಟಿವ್- ಹೆಲ್ತ್ ಬುಲೆಟಿನ್‍ನಲ್ಲಿ ತಪ್ಪಾಗಿದ್ದಕ್ಕೆ ಡಿಸಿ ಸ್ಪಷ್ಟನೆ
ಕಾರವಾರ: 20 ದಿನದ ಅಂತರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ನತ್ತ ಸಾಗುತ್ತಿರುವುದರಿಂದ ಜಿಲ್ಲೆಯ ಜನ ಆತಂಕ ಪಡುವಂತಾಗಿದೆ. ಇಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಭಟ್ಕಳದ 28 ವರ್ಷದ ಯುವಕ ಎಂದು ನಮೂದಾಗಿ ಪ್ರಕಟಗೊಂಡಿತ್ತು. ಆದರೆ ಅದು 18 ವರ್ಷದ ಯುವತಿಯಾಗಿದ್ದು ಸರ್ಕಾರದ ಪ್ರಕಟಣೆಯಲ್ಲಿ ಲೋಪದಿಂದ ಯುವತಿ ಬದಲು ಪುರುಷ …
Read More »ದೇವನಹಳ್ಳಿ ಬಳಿ ವಿದೇಶದಿಂದ ಕರೆತರುವ ಕನ್ನಡಿಗರ ಕ್ವಾರಂಟೈನ್, ಸ್ಥಳೀಯ ಶಾಸಕರ ವಿರೋಧ
ಬೆಂಗಳೂರು, ಮೇ.5- ವಿದೇಶದಿಂದ ಕರೆತರುತ್ತಿರುವ ಕನ್ನಡಿಗರನ್ನು ದೇವನಹಳ್ಳಿ ಬಳಿ ಕ್ವಾರಂಟೈನ್ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ಸ್ಥಳೀಯ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿದೇಶಿಗರನ್ನು ದೇವನಹಳ್ಳಿಯಲ್ಲಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಶಾಸಕರಾದ ನಾರಾಯಣಸ್ವಾಮಿ ಹಾಗೂ ವೆಂಕಟರಮಣಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನ ಹೆಮ್ಮಾರಿ ಇಡೀ ಪ್ರಪಂಚವನ್ನೆ ಕಿತ್ತು ತಿನ್ನುತ್ತಿದ್ದು ಲಕ್ಷಾಂತರ ಜನರನ್ನ ಬಲಿ …
Read More »ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ದಿನಾಂಕ ನಿಗದಿ ………
ನವದೆಹಲಿ, ಮೇ 5- ವೈದ್ಯಕೀಯ ಶಿಕ್ಷಣ ಕುರಿತ ಸೀಟ್ ಹಂಚಿಕೆ ಕುರಿತಂತೆ ದೇಶಾದ್ಯಂತ ಜುಲೈ 26 ರಂದು ನೀಟ್ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಇಂದು ಘೋಷಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪ್ರೊಕ್ರಿಯಾಲ್ ನಿಶಾಂತ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಪಾರದರ್ಶಕ ಹಾಗೂ ನಿಸ್ಪಕ್ಷವಾಗಿ ಈ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.ಇದೇ ವೇಳೆ ಜೆಇಇ ಪರೀಕ್ಷೆ ಜು18 ರಿಂದ 23ರವರೆಗೆ ನಡೆಯಲಿದ್ದು, ಯುಪಿಎಸ್‍ಸಿ ಪರೀಕ್ಷಗಳ ಬಗ್ಗೆ ಸದ್ಯದಲ್ಲಿಯೇ ತೀರ್ಮಾನ …
Read More »ಇಂದೂ ಕೂಡ ಉಚಿತವಾಗಿ KSRTC ಬಸ್‍ಗಳಲ್ಲಿ ಊರು ಕಡೆ ಪ್ರಯಾಣ ಬೆಳೆಸಿದ ಕಾರ್ಮಿಕರು
ಬೆಂಗಳೂರು, ಮೇ 5-ಲಾಕ್‍ಡೌನ್‍ನಿಂದಾಗಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಕಾರ್ಮಿಕರನ್ನು ಅವರವರ ಊರುಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಕಳುಹಿಸುವ ವ್ಯವಸ್ಥೆ ಮೂರನೇ ದಿನವಾದ ಇಂದು ಕೂಡ ಮುಂದುವರಿಯಿತು. ಸತತ ಮೂರನೇ ದಿನವಾದ ಇಂದು ನೂರಾರು ಬಸ್‍ಗಳಲ್ಲಿ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಿದರು.ಇಂದು ಬೆಳಗ್ಗೆ ಕೆಂಪೇಗೌಡ (ಮೆಜೆಸ್ಟಿಕ್) ಬಸ್ ನಿಲ್ದಾಣಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಅವರು ಭೇಟಿ ನೀಡಿ ಕಾರ್ಮಿಕರಿಗೆ ನೀರು, ಆಹಾರದ ಪೊಟ್ಟಣಗಳು, ಸ್ಯಾನಿಟೈಸರ್, ಮಾಸ್ಕ್‍ಗಳನ್ನು ವಿತರಿಸಿದರು. ಅವರಿಗೆ ಸಚಿವರಾದ ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ , …
Read More »ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವಾಗ..? ಮಹತ್ವದ ಮಾಹಿತಿ ನೀಡಿದ ಸಚಿವ ಸುರೇಶ ಕುಮಾರ್
ಬೆಂಗಳೂರು, ಮೇ 5- ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಬಹು ನಿರೀಕ್ಷಿತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ವೇಳಾಪಟ್ಟಿ ಜೂನ್ ಎರಡನೆ ಅಥವಾ ಮೂರನೆ ವಾರದಲ್ಲಿ ಪ್ರಕಟವಾಗಲಿದ್ದು, ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಎಲ್ಲಿ ಬಯಸುತ್ತಾರೋ ಅದೇ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅವಕಾಶ ನೀಡಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಾವುದೇ ರೀತಿಯ ತೊಂದರೆಯಾಗದಂತೆ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಜೂನ್ ತಿಂಗಳ ಎರಡನೆ …
Read More »ಕೊರೊನಾ ವಾರಿಯರ್ಸ್‍ಗೆ ನೀಡುವ ಪರಿಹಾರದ ಮೊತ್ತ 50 ಲಕ್ಷಕ್ಕೆ ಏರಿಕೆ..!
ಬೆಂಗಳೂರು, ಮೇ 5-ಕೋವಿಡ್ 19 ರೋಗ ವಿರುದ್ಧ ಹೋರಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೊಲೀಸ್ ಅಧಿಕಾರಿಗಳು ಮತ್ತಿತರ ಸಿಬ್ಬಂದಿಗೆ ಮನೋಸ್ಥೈರ್ಯ ಹೆಚ್ಚಿಸಲು 50 ಲಕ್ಷ ರೂ.ಪರಿಹಾರ ಒದಗಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಹರಡದಂತೆ ತಡೆಗಟ್ಟುವ ಸಂಬಂಧ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಹೋಮ್ ಗಾಡ್ರ್ಸ್, ಪೌರ ರಕ್ಷಣಾ ದಳ, ಅಗ್ನಿಶಾಮಕ ದಳದ ನೌಕರರು, ಅಧಿಕಾರಿಗಳು, ಬಂದೀಖಾನೆ ಸಿಬ್ಬಂದಿಗಳು ಪೌರ ಕಾರ್ಮಿಕರು, ಸ್ಯಾನಿಟೈಸರ್ ಕೆಲಸಗಾರರು, …
Read More »ರಾಜ್ಯಕ್ಕೆ ಮದ್ಯ ಎಷ್ಟು ಮುಖ್ಯ? ಕರ್ನಾಟಕದ ಆದಾಯದಲ್ಲಿ ‘ಕಿಕ್’ ಪಾಲು ಎಷ್ಟಿದೆ?
ಲಾಕ್‍ಡೌನ್ ವಿನಾಯಿತಿ ಪ್ರಕಟವಾದ ಬೆನ್ನಲ್ಲೇ ರಾಜ್ಯಗಳು ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಮದ್ಯ ಮಾರಾಟಕ್ಕೆ ಹಲವು ವಿರೋಧಗಳು ವ್ಯಕ್ತವಾಗುತ್ತಿದ್ದರೂ ಸರ್ಕಾರಗಳು ಮಾತ್ರ ಕಂಟೈನ್‍ಮೆಂಟ್ ವಲಯ ಬಿಟ್ಟು ಎಲ್ಲ ಕಡೆ ಮಾರಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ಯಾಕೆ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತದೆ. ಮದ್ಯವನ್ನು ಯಾಕೆ ನಿಷೇಧಿಸುವುದಿಲ್ಲ ಎಂಬ ಪ್ರಶ್ನೆಗಳು ಏಳುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ. ಮದ್ಯಕ್ಕೆ ಯಾಕೆ ಮಹತ್ವ? ಜಿಎಸ್‍ಟಿ …
Read More »ಹುಬ್ಬಳ್ಳಿಯಲ್ಲಿ ಕೂಡ ಅಜ್ಜಿಯೊಬ್ಬರು ದೊಣ್ಣೆ ಹಿಡಿದುಕೊಂಡೇ ಬಂದು ಮದ್ಯದಂಗಡಿ ಸರತಿ ಸಾಲಿನಲ್ಲಿ
ಹುಬ್ಬಳ್ಳಿ: ಲಾಕ್ ಡೌನ್ ಸಡಿಲಿಕೆ ಬಳಿಕ ಮದ್ಯದಂಗಡಿ ತೆರವು 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಜನ ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಹುಬ್ಬಳ್ಳಿಯಲ್ಲಿ ಕೂಡ ಅಜ್ಜಿಯೊಬ್ಬರು ದೊಣ್ಣೆ ಹಿಡಿದುಕೊಂಡೇ ಬಂದು ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು. ಹೌದು ಹಳೆ ಹುಬ್ಬಳ್ಳಿಯ ಮದ್ಯದಂಗಡಿಯಲ್ಲಿ ಅಜ್ಜಿ ಸಾರ್ವಜನಿಕರ ಕುತೂಹಲಕ್ಕೆ ಕಾರಣರಾದರು. ಮದ್ಯ ಖರೀದಿ ಮಾಡಲು ಬಂದಿದ್ದ ಅಜ್ಜಿಯನ್ನು ನೋಡಿ ಮದ್ಯಪ್ರಿಯರು ಅಚ್ಚರಿಗೊಂಡಿದ್ದಾರೆ. ಕಳೆದ 41 ದಿನಗಳಿಂದ ಅಂದರೆ …
Read More »