Breaking News

Yearly Archives: 2020

ಅನಿವಾಸಿ ಭಾರತೀಯರನ್ನ ಕರೆ ತರಲು ಮುಂದಾದ ಕೇಂದ್ರ- ಹೊರ ರಾಜ್ಯದ ಕನ್ನಡಿಗರನ್ನ ಮರೆತ ರಾಜ್ಯ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರವು ಇಂದಿನಿಂದ ಆಪರೇಷನ್ ಏರ್ ಲಿಫ್ಟ್ ಮತ್ತು ಸಮುದ್ರ ಸೇತು ಹೆಸರಿನಲ್ಲಿ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು ಕರೆತರುವ ಕೆಲಸ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಹೊರ ರಾಜ್ಯಗಳಲ್ಲಿರುವ ಕನ್ನಡಗರನ್ನು ಮರೆತಂತೆ ಭಾಸವಾಗುತ್ತಿದೆ. ಕೊರೊನಾ ಲಾಕ್‍ಡೌನ್‍ನಿಂದ ಅನ್ಯ ರಾಜ್ಯಗಳಲ್ಲಿ ಕನ್ನಡಿಗರು ಸಂಕಷ್ಟದಲ್ಲಿದ್ದು ದೆಹಲಿ, ಪಂಜಾಬ್, ಚಂಡೀಗಢ್, ಹರ್ಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕನ್ನಡಿಗರು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರನ್ನು ವಾಪಸ್ ಕರೆತರುವ ಬಗ್ಗೆ …

Read More »

ಮಾಸ್ಕ್ ಧರಿಸಿ ಮದುವೆ ಮಾಡಿಕೊಂಡ ವಧು-ವರ……..

ಹುಬ್ಬಳ್ಳಿ: ಲಾಕ್‍ಡೌನ್ ವೇಳೆ ಹುಬ್ಬಳ್ಳಿಯ ಹುಡುಗ ಸಿಂಧನೂರಿನ ಯುವತಿಯನ್ನು ಕೈ ಹಿಡಿಯುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಲಾಕ್‍ಡೌನ್ ಸಂದರ್ಭದಲ್ಲಿ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಿ, ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡೆ ಸಿಂಧನೂರಿನ ವಧುವನ್ನು ಹುಬ್ಬಳ್ಳಿಯ ಹುಡುಗ ಮದುವೆಯಾಗಿದ್ದಾರೆ. ಸಿಂಧನೂರಿನಲ್ಲಿ ಸಚೇತಿಯವರ ಮನೆಯಲ್ಲಿ ಸರಳವಾಗಿ ಮದುವೆಯ ಸಮಾರಂಭ ಜರುಗಿದ್ದು, ವಧು ಪೂನಂ ಸಚೇತಿ, ವರ …

Read More »

ಜಿಲ್ಲೆಯಲ್ಲಿ ಕೊರೊನಾ ಸೋಮಕು ತಗುಲಿದವರ ಪೈಕಿ ಮತ್ತಿಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಮಕು ತಗುಲಿದವರ ಪೈಕಿ ಮತ್ತಿಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರೇಬಾಗೇವಾಡಿಯ  ಪಿ-284 ಮತ್ತು ಪಿ-300 ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿಇಲ್ಲಿಯವರೆಗೂ 74 ಜನರಲ್ಲಿ ಸೋಂಕು ಪೈಕಿ 36 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿರುತ್ತಾರೆ.

Read More »

ವಿಷ ಹಾಕಿ ಮೀನುಗಳ ಮಾರಣ ಹೋಮ- ಇಬ್ಬರ ಬಂಧನ………..

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಾಡೇಲು ಎಂಬಲ್ಲಿ ಫಲ್ಗುಣಿ ನದಿಗೆ ವಿಷ ಹಾಕಿ ಸಾವಿರಾರು ಮೀನುಗಳ ಮಾರಣ ಹೋಮ ಮಾಡಿದ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಮೂಡುಕೋಡಿಯ ಇರ್ಷಾದ್ ಹಾಗೂ ಮಹಮ್ಮದ್ ಹನೀಫ್ ಬಂಧಿತ ಆರೋಪಿಗಳು. ಕಿಡಿಗೇಡಿಗಳು ನದಿಗೆ ವಿಷ ಹಾಕಿದ ಪರಿಣಾಮ ಬೆಳ್ತಂಗಡಿಯ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಡ್ತಿಕಲ್ಲಿನ ದಾಡೇಲು ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದು, ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ …

Read More »

ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿಟ್ಟಿದ್ದ ಎಣ್ಣೆಯನ್ನೇ ಕದ್ದ ಪೇದೆ…….

ಹೈದರಾಬಾದ್: ಲಾಕ್‍ಡೌನ್ ಅವಧಿಯಲ್ಲಿ ಮದ್ಯದಂಗಡಿಗಳಿಂದ ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಮದ್ಯವನ್ನ ಪೊಲೀಸ್ ಪೇದೆಯೇ ಕದ್ದು ಸಿಕ್ಕಿಬಿದ್ದ ಘಟನೆ ತೆಲಂಗಾಣದ ಕರೀಮ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕರೀಮ್‍ನಗರ ಜಿಲ್ಲೆಯ ಇರಡು ಟೌನ್ ಪೊಲೀಸ್ ಠಾಣೆಯಲ್ಲಿ ಮದ್ಯವನ್ನು ಸೀಜ್ ಮಾಡಿ ಇಡಲಾಗಿತ್ತು. ಲಾಕ್‍ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಹಲವು ಮದ್ಯದಂಗಡಿಗಳನ್ನು ಸೀಜ್ ಮಾಡಿ, ಅಂಗಡಿಯಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಆದರೆ …

Read More »

ಅಮ್ಮಾ ಎದ್ದೇಳು ಎಂದು ಕಣ್ಣೀರಿಟ್ಟ ಮಗಳು- ಅಪ್ಪನ ಮಡಿಲಲ್ಲಿ ಕಂದನ ಸಾವು-ಬದುಕಿನ ಹೋರಾಟ

ವಿಶಾಖಪಟ್ಟಣಂ: ‘ಅಮ್ಮಾ ಎದ್ದೇಳು,  ಅಮ್ಮಾ ಎದ್ದೇಳು’… ‘ಪಾಪು ನಿನಗೇನೂ ಆಗಲ್ಲ, ಕಣ್ಣು ಬೀಡೋ, ಎದ್ದೇಳೋ’ ಎಂದು ನೂರಾರು ಮಕ್ಕಳು-ಪೋಷಕರು ಕಣ್ಣೀರಿಟ್ಟರು. ಅಮ್ಮನನ್ನ ಹಿಡಿದು ಮಗಳು ಗೋಳೋ ಅಂತ ಅತ್ತಳು. ಅಂಗೈಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಂದಮ್ಮನ ಸ್ಥಿತಿ ಕಂಡು ಅಪ್ಪ ಅಸಹಾಯಕರಂತೆ ಚಡಪಡಿಸಿದ ಮನಕಲುಕುವ ದೃಶ್ಯಗಳು ವಿಶಾಖಪಟ್ಟಣಂನಲ್ಲಿ ಕಂಡು ಬಂದವು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಕಾರ್ಖಾನೆಯಿಂದ ಗುರುವಾರ ನಸುಕಿನ ಜಾವ ಅನಿಲ ಸೋರಿಕೆಯಾಗಿದೆ. ಎಲ್‍ಜಿ ಪಾಲಿಮರ್ಸ್ ಇಂಡಸ್ಟ್ರಿಯ ಸ್ಥಾವರದಲ್ಲಿ 2:30 ಗಂಟೆಗೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮೊತ್ತೊಂದು ಪಾಸಿಟೀವ್ ಕೇಸ್………

ಬೆಳಗಾವಿ- ಇಂದು ಗುರುವಾರ ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮೊತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಹಿರೇಬಾಗೇವಾಡಿ ಗ್ರಾಮದ ಸೊಂಕಿತನ ಸಂಪರ್ಕಕ್ಕೆ ಬಂದಿರುವ ಮತ್ತೋರ್ವನಿಗೆ ಸೊಂಕು ತೊಗಲಿದ್ದು ದೃಡವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 74 ಕ್ಕೆ ಏರಿದಂತಾಗಿದೆ ಹಿರೇಬಾಗೇವಾಡಿಲ್ಲಿ ಸೊಂಕಿತರ ಸಂಖ್ಯೆ 37 ಕ್ಕೆ ಏರಿದೆ.

Read More »

ಪತಿಯ ಚಿಕಿತ್ಸೆಗಾಗಿ ಪತ್ನಿ ತನ್ನ ತಾಳಿಯನ್ನೇ ಮಾರಿರುವ ಮನಕಲಕುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಪತಿಯ ಚಿಕಿತ್ಸೆಗಾಗಿ ಪತ್ನಿ ತನ್ನ ತಾಳಿಯನ್ನೇ ಮಾರಿರುವ ಮನಕಲಕುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಬೀರಮ್ಮ ಹಾಗೂ ಬೆಂಗಳೂರು ಮೂಲದ ಲಿಂಗಪ್ಪ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಇಷ್ಟು ದಿನ ಬೆಂಗಳೂರಿನಲ್ಲಿ ಗಾರೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್‍ಗೂ ಮುನ್ನ ಬೀರಮ್ಮಳ ಸ್ವಗ್ರಾಮ ಕೆ.ಕುರಪ್ಪಲ್ಲಿಗೆ ಬಂದು ಬಾಡಿಗೆ ಮನೆ ಮಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಲಿಂಗಪ್ಪನಿಗೆ ಹೃದಯಾಘಾತವಾಗಿದ್ದು, …

Read More »

ಕರುನಾಡಿಗೆ ಇದೀಗ ಮುಂಬೈನಿಂದ ವಾಪಸ್ ಆಗುತ್ತಿರುವವರೇ ಕಂಟಕವಾಗ್ತಿದ್ದಾರೆ.

ಬೆಳಗಾವಿ: ಕರುನಾಡಿಗೆ ಇದೀಗ ಮುಂಬೈನಿಂದ ವಾಪಸ್ ಆಗುತ್ತಿರುವವರೇ ಕಂಟಕವಾಗ್ತಿದ್ದಾರೆ. ಸೋಂಕಿತರು ಲಾರಿಗಳ ಮೂಲಕ ಕದ್ದುಮುಚ್ಚಿ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ ದಿನದಿಂದ ದಿನಕ್ಕೆ ತನ್ನ ರೌದ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಲಾಕ್‍ಡೌನ್ ಸಡಿಲಿಕೆ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕದ್ದು ನುಸುಳುತ್ತಿರುವರೂ ಕಾರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಭಾರೀ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಮುಂಬೈನಿಂದ ಅಂಬುಲೆನ್ಸ್ ನಲ್ಲಿ …

Read More »

ಮಂಗಳೂರು: ಬೇಳೂರು ಪ್ರದೇಶದ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು

ಮಂಗಳೂರು: ಬೇಳೂರು ಪ್ರದೇಶದ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ತಗುಲಿದೆ. ಮೊದಲು ವೃದ್ಧೆ (ರೋಗಿ-536)ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾದಾಗ ವೃದ್ಧೆಗೆ ಕೊರೊನಾ ತಗುಲಿರೋದು ದೃಢಪಟ್ಟಿತ್ತು. ತದನಂತರ ವೃದ್ಧೆಯ ಪತಿ, ಅಳಿಯ, ಮಗಳು ಮತ್ತು ಮೊಮ್ಮಗಳಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಎಲ್ಲರಿಗೂ ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೃದ್ಧೆಯ ಆರೋಗ್ಯ ತೀವ್ರ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. …

Read More »