Breaking News

Yearly Archives: 2020

ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ತತ್ತರಿಸಿದೆ- ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಳವಳ

ಪೀಣ್ಯ: ಮಾರಾಣಾಂತಿಕ ಕೋವಿಡ್-19 ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ವಲಯ ಅಕ್ಷರಶಃ ನಲುಗಿದೆ. ಬೆಂಗಳೂರು ಹೊರವಲಯದ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಅಸ್ರಣ್ಣ ಕಳವಳ ವ್ಯಕ್ತಪಡಿಸಿದ್ದಾರೆ. ಕೈಗಾರಿಕ ವಲಯದ ಶೇ.70 ರಷ್ಟು ಭಾಗದ ಕೈಗಾರಿಕೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಉಳಿದ ಶೇ.30 ರಷ್ಟು ಕೈಗಾರಿಕೆಗಳು ಕಾರ್ಯ ನಿರ್ವಹಿಸದಿರುವುದು ವಿಷಾದನೀಯ ಸಂಗತಿ. ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಗಂಭೀರವಾಗಿದ್ದು, ಮುಚ್ಚುವ ಸ್ಥಿತಿಗೆ ತಲುಪಿವೆ. ಪರಿಣಾಮ ಕಾರ್ಮಿಕರ ನೆರವಿಗೆ …

Read More »

ಬಿಜೆಪಿಗೆ ಭಾರೀ ಮುಖಭಂಗ – ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ……….

ಅಹಮದಾಬಾದ್: ಗುಜರಾತ್ ನಲ್ಲಿರುವ ಬಿಜೆಪಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಸಚಿವರಾಗಿರುವ ಭೂಪೇಂದ್ರ ಸಿಂಹ ಚೂಡಾಸಮಾ ಅವರ ಚುನಾವಣಾ ಗೆಲುವನ್ನು ಹೈಕೋರ್ಟ್ ರದ್ದುಗೊಳಿಸಿದೆ. 2017ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಭೂಪೇಂದ್ರ ಸಿಂಹ ಚೂಡಾಸಮಾ ಗೆದ್ದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾ. ಪರೇಶ್ ಉಪಾಧ್ಯಾಯ ನೇತೃತ್ವದ ಪೀಠ ಮತ ಎಣಿಕೆಯ ವೇಳೆ ಅಕ್ರಮ ನಡೆದಿದೆ ಎಂದು ಅಭಿಪ್ರಾಯಪಟ್ಟು ಗೆಲುವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ …

Read More »

ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯ ಉದ್ಘಾಟನೆ

ಕಾರವಾರ: ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್  ಉದ್ಘಾಟನೆ ಮಾಡಿದರು. ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಇಂದು ಉದ್ಘಾಟಿಸಿದರು. ಇಷ್ಟು ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿನ ಸೋಂಕಿತರ ಪರೀಕ್ಷೆಯನ್ನು ಶಿವಮೊಗ್ಗ ಅಥವಾ ಬೆಂಗಳೂರಿಗೆ ಕಳುಹಿಸಿ ವರದಿ ತರಿಸಬೇಕಿತ್ತು. ಇದು ತುಂಬಾ ತಡವಾಗುತ್ತಿತ್ತು. ಇದೀಗ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿಯೇ ಮಾಡಲು …

Read More »

ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು……….

ರಾಯಚೂರು: ಬಿಸಿಲನಾಡು ರಾಯಚೂರನ್ನು ಹಸಿರು ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲೂ 20 ಸಾವಿರ ಸಸಿಗಳನ್ನು ಬೆಳೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಹಸಿರು ಜಿಲ್ಲೆಗಾಗಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರೊಂದಿಗೆ 5 ಲಕ್ಷ ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ರಾಯಚೂರಿನ ನಾಗರಿಕರ ಸಹಕಾರದೊಂದಿಗೆ …

Read More »

2 ಗಂಟೆಗೆ ಮೊದಲು ಚೆಕ್ ಇನ್, ಕ್ಯಾಬಿನ್ ಲಗೇಜ್ ಇಲ್ಲ – ವಿಮಾನ ಪ್ರಯಾಣಕ್ಕೂ ಮುನ್ನ ಓದಿ

ನವದೆಹಲಿ: ಕೋವಿಡ್ 19 ಬಗ್ಗೆ ಸಂಬಂಧಿಸಿದ ಪ್ರಶ್ನಾವಳಿ, ಕ್ಯಾಬಿನ್ ಲಗೇಜ್ ತಗೆದುಕೊಂಡು ಹೋಗುವಂತಿಲ್ಲ, ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಜೊತೆಗೆ ವಿಮಾನ ಪ್ರಯಾಣಿಸುವ 2 ಗಂಟೆಯ ಮೊದಲು ಚೆಕ್ ಇನ್ – ಇದು ಲಾಕ್‍ಡೌನ್ ತೆರವಾದ ಬಳಿಕ ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳು. ಕೋವಿಡ್ 19 ನಿಂದಾಗಿ ಮಾರ್ಚ್ 25ರಿಂದ ಪ್ರಯಾಣಿಕ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಈ ನಡುವೆ ದೇಶೀಯ ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಅಧಿಕೃತವಾಗಿ …

Read More »

ಇವರನ್ನ ಇಟ್ಟುಕೊಂಡರೆ ಪಂಚಾಯಿತಿ ಉದ್ಧಾರವಾಗಲ್ಲ: ಪಿಡಿಒ ವಿರುದ್ಧ ಶಾಸಕ ಗರಂ

ಚಾಮರಾಜನಗರ: ಬಡ ಕೂಲಿಗಾರರಿಗೆ ಭಾರೀ ಮೊಸ ಮಾಡ್ತಿದ್ದಾರೆ, ಇವರನ್ನ ಇಲ್ಲೇ ಇಟ್ಟುಕೊಂಡರೆ ಪಂಚಾಯಿತಿ ಖಂಡಿತ ಉದ್ಧಾರ ಆಗುವುದಿಲ್ಲ ಎಂದು ಶಾಸಕ ಆರ್.ನರೇಂದ್ರ ಪಿಡಿಒಗೆ ಚಳಿ ಬಿಡಿಸಿದರು. ಮಂಗಳವಾರ ಮಂಗಲ ಗ್ರಾಮಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆನಂದ್ ಬಂಡವಾಳ ಬಯಲಾಗಿದೆ. ಒಟ್ಟು 1,137 ಜಾಬ್ ಕಾರ್ಡ್ ಇದ್ದರೂ ಕೇವಲ 100-150 ಮಂದಿಗೆ ಮಾತ್ರ ಕೆಲಸ ನೀಡಲಾಗಿದೆ. ಅಲ್ಲದೆ 637 ಮಂದಿ ಕೂಲಿ …

Read More »

ಸಮುದಾಯ ಪರೀಕ್ಷೆಯಲ್ಲಿ 7 ಮಂದಿಗೆ ಪಾಸಿಟಿವ್- ಸೋಂಕಿತರ ಮೊಬೈಲ್ ಸ್ವಿಚ್ಛ್ ಆಫ್

ಬೆಂಗಳೂರು: ಪಾದರಾಯನಪುರದಲ್ಲಿ ನಡೆಸಿದ ಸಮುದಾಯದ ಪರೀಕ್ಷೆಯಲ್ಲಿ ಬರೋಬ್ಬರಿ 7 ಮಂದಿಯಲ್ಲಿ ಸೋಂಕು ಇರೋದು ಪತ್ತೆಯಾಗಿದೆ. ಆದ್ರೆ ಏಳು ಮಂದಿ ಸದ್ಯ ಎಲ್ಲಿದ್ದಾರೆ ಎಂಬ ವಿಚಾರವೇ ನಿಗೂಢವಾಗಿದೆ. ಪರೀಕ್ಷೆ ವೇಳೆ ನೀಡಿದ ಇವರ ಮೊಬೈಲ್ ನಂಬರ್ ಗಳು ಸ್ವಿಚ್ಛ್ ಆಫ್ ಆಗಿವೆ. ಏಳು ಮಂದಿಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಪಾದರಾಯನಪುರದಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿದ್ಯಾ ಎಂಬ ಅನುಮಾನ ಮೂಡುತ್ತಿದೆ. ಕೋವಿಡ್-19 ಪರೀಕ್ಷೆ ವೇಳೆ 261 ಮಂದಿ ಪೈಕಿ 7 ಮಂದಿಯಲ್ಲಿ ಸೋಂಕು …

Read More »

20 ಲಕ್ಷ ಕೋಟಿ ರೂ. ಮೊತ್ತದಲ್ಲಿ ಈ ಹಿಂದೆ ಘೋಷಿಸಲಾದ ಕೇಂದ್ರ ಸರಕಾರದ ಪ್ರಾಯೋಜಿತ ನಿಧಿಯೂ ಸೇರಿದೆಯೋ ಅಥವಾ ಇಲ್ಲವೋ:ಪ್ರಿಯಾಂಕ್ ಖರ್ಗೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಇದೊಂದು ಗಿಮಿಕ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಬಡ ಮಧ್ಯಮ ವರ್ಗದ ಜನರು ತೀವ್ರ ಸಂಕಟಕ್ಕೀಡಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ದೇಶದ ಬೆನ್ನೆಲುಬಾದ ರೈತಾಪಿ ವರ್ಗ …

Read More »

ವಿಜಯಪುರ: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ,ಐವರ ವಿರುದ್ಧ ಎಫ್‍ಐಆರ್

ವಿಜಯಪುರ: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಯತ್ನಿಸಿದ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ದೇವರ ಹಿಪ್ಪರಗಿ ಮತ ಕ್ಷೇತ್ರದ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಲಗೋಡ ಎಲ್‍ಟಿ ಗ್ರಾಮದ ಪ್ರಮೋದ ರಾಠೋಡ (ಎ1), ಲಕ್ಷ್ಮಿ ರಾಠೋಡ (ಎ2), ರವಿ ರಾಠೋಡ(ಎ3), ಸಂಜು ರಾಠೋಡ (ಎ4), ರಾಹುಲ್ ರಾಠೋಡ್ (ಎ5) ಮೇಲೆ ಐಪಿಸಿ ಸೆಕ್ಷನ್ 353, 504ಸ ಅನ್ವಯ …

Read More »

ಬೆಳಗಾವಿ: ಕೋವಿಡ್-೧೯: 5 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೋವಿಡ್-೧೯: 5 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಮೇ 12 (ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಮೂವರು ಮಹಿಳೆಯು ಸೇರಿದಂತೆ ಒಟ್ಟು ಐದು ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಐದು ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-482 ಪಿ-485 …

Read More »