ಯಮಕನಮರಡಿ: ಕ್ವಾರಂಟೈನ್ ನಲ್ಲಿರುವ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದ ರಾಜ್ಯದ ಕಾರ್ಮಿಕರ ಮಕ್ಕಳಿಗೆ ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಆಟಿಕೆಯ ಸಾಮಗ್ರಿಗಳನ್ನು ನೀಡಲಾಯಿತು. ಈ ಸಮಯದಲ್ಲಿ ಆಟಿಕೆ ಸಾಮಗ್ರಿಗಳನ್ನು ಪಡೆದ ಪುಟಾಣಿ ಮಕ್ಕಳ ಮೊಗದಲ್ಲಿ ಸಂತಸ ಕಂಡು ಅಲ್ಲಿದ್ದ ಜನರೆ ಬೆರಾಗಾಗಿದ್ದರು. ಕಳೆದ ಒಂದೂವರೆ ತಿಂಗಳಿಂದ ಲಾಕ್‌ಡೌನ್ ನಿಂದ ನರಕಯಾತನೆ ಅನುಭವಿಸಿದ್ದ ಮಕ್ಕಳು ಆಟಿಕೆ ಸಾಮಗ್ರಿಗಳನ್ನು ಪಡೆದು ಖುಷಿಪಟ್ಟಿದ್ದು ಅಷ್ಟಿಷ್ಟು ಅಲ್ಲ. ಯಮಕನಮರಡಿಯ ದಡ್ಡಿ …
Read More »Yearly Archives: 2020
ಬೆಳಗಾವಿ:ನಾಳೆಯಿಂದ ಕೇಂದ್ರ ಬಸ್ ನಿಲ್ದಾಣದಿಂದ 252 ಬಸ್ ಗಳು ಬೀದಿಗಿಳಿಯಲಿವೆ.
ಬೆಳಗಾವಿ: ರಾಜ್ಯ ಸರ್ಕಾರ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆಯಿಂದ ಕೇಂದ್ರ ಬಸ್ ನಿಲ್ದಾಣದಿಂದ 252 ಬಸ್ ಗಳು ಬೀದಿಗಿಳಿಯಲಿವೆ. ಬಸ್ ಸಂಚಾರಕ್ಕಾಗಿ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ನಿಲ್ದಾಣಕ್ಕೆ ಬರೋ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವದು, ಬಸ್ ನಿಲ್ದಾಣಕ್ಕೆ ಆಗಮಿಸುವವರಿಗಾಗಿ ಸ್ಯಾನಿಟೈಸರ್ ಸ್ಪ್ರೆಯಿಂಗ್ ಮಷಿನ್ ಅಳವಡಿಕೆಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಬಸ್ ನಲ್ಲಿ 30 ಜನ …
Read More »ಇಂದು 99 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1246ಕ್ಕೇರಿಕೆ
ಬೆಂಗಳೂರು: ಮಹಾಮಾರಿ, ಡೆಡ್ಲಿ ವೈರಸ್ ಕೊರೊನಾ ಇಂದು 99 ಜನರಿಗೆ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1246ಕ್ಕೇರಿಕೆಯಾಗಿದೆ. ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 84 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಸಂಜೆಯ ಬುಲೆಟಿನ್ ನಲ್ಲಿ 15 ಜನರಿಗೆ ಸೋಂಕು ತಗುಲಿದೆ. ಗ್ರೀನ್‍ಝೋನ್ ನಲ್ಲಿದ್ದ ರಾಯಚೂರು ಮತ್ತು ಕೊಪ್ಪಳದಲ್ಲಿಯೂ ಕೊರೊನಾ ಪ್ರಕರಣಗಳ ಬೆಳಕಿಗೆ ಬಂದಿವೆ. ಇಂದು ಒಟ್ಟು 21 ಮಂದಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು 530 …
Read More »ನಾಳೆಯಿಂದ ಬೆಂಗ್ಳೂರಿನಲ್ಲಿ ಬಸ್ ಸೇವೆ ಲಭ್ಯ- ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ: ಬಿಎಂಟಿಸಿ ಎಂಡಿ ಶಿಖಾ
ಬೆಂಗಳೂರು: ಕೊರೊನಾ ಲಾಕ್‍ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಬಿಎಂಟಿಸಿ ಸೇವೆಯನ್ನು ನಾಳೆಯಿಂದ ಮತ್ತೆ ಆರಂಭ ಮಾಡುವುದಾಗಿ ಬಿಎಂಟಿಸಿ ಎಂಡಿ ಶಿಖಾ ಅವರು ಹೇಳಿದ್ದಾರೆ. ಸರ್ಕಾರದ ಸೂಚನೆ ಮೇರೆಗೆ ಬಸ್ ಆಪರೇಷನ್ ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಬಸ್ ಸೇವೆ ಆರಂಭದ ಕುರಿತು ಮಾತನಾಡಿದ ಅವರು, ಎಂಎಚ್‍ಎ ಸೂಚನೆ ಮೇರೆಗೆ ಸರ್ಕಾರ ಕೆಲ ನಿರ್ದೇಶನಗಳನ್ನು ನೀಡಿ ಬಸ್ ಸೇವೆ ಆರಂಭಿಸಲು ಸೂಚನೆ ನೀಡಿದ್ದಾರೆ. ಇದರ ಅನ್ವಯ ನಗರದಲ್ಲಿ ಗ್ರೇಡೆಡ್ ಮ್ಯಾನರ್ ನಲ್ಲಿ, …
Read More »ಕಾಮಾಗಾರಿ ವೇಳೆ ಮಣ್ಣು ಕುಸಿತ – ಚರಂಡಿಯಲ್ಲಿ ಸಿಲುಕಿದ ಕಾರ್ಮಿಕ……..
ಹುಬ್ಬಳ್ಳಿ: ಒಳಚರಂಡಿ ಕಾಮಾಗಾರಿ ಮಾಡುತ್ತಿದ್ದಾಗ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿಯಲ್ಲಿ ಕಾರ್ಮಿಕನೋರ್ವ ಸಿಲುಕಿಕೊಂಡ ಘಟನೆ ಹುಬ್ಬಳ್ಳಿಯ ಬೈಲಪ್ಪನವರ ನಗರದ ನಡೆದಿದೆ. ಕಾರ್ಮಿಕ ಯಲ್ಲಪ್ಪ ಮಣ್ಣಿನಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಇಂದು ಬೆಳಗ್ಗೆ ಒಳಚರಂಡಿ ಒಳಗೆ ಇಳಿದು ಯಲ್ಲಪ್ಪ ಕೆಲಸ ಮಾಡುತ್ತಿದ್ದರು. ಈ ವೇಳೆ ಮೇಲಿಂದ ಮಣ್ಣು ಕುಸಿದು ಯಲ್ಲಪ್ಪ ಅವರ ಮೇಲೆ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರ ರಕ್ಷಣೆಗೆ ಧಾವಿಸಿದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು …
Read More »ಭಾನುವಾರದಂದು ಮದ್ಯ ಮಾರಾಟ ಕೂಡ ಮಾಡುವಂತಿಲ್ಲ
ಬೆಂಗಳೂರು: ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆಯಾಗಿದ್ದು, ರಾಜ್ಯ ಸರ್ಕಾರ ಕೆಲವು ನಿಯಮಗಳನ್ನು ಘೋಷಣೆ ಮಾಡಿದೆ. ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ತಿಳಿಸಿದ ಸರ್ಕಾರ ಭಾನುವಾರದಂದು ಯಾವುದೇ ವ್ಯಾಪಾರ, ವಹಿವಾಟು ನಡೆಯಲ್ಲ. ಭಾನುವಾರದಂದು ಮದ್ಯ ಮಾರಾಟ ಕೂಡ ಮಾಡುವಂತಿಲ್ಲ. ಹೀಗಾಗಿ ವಾರದ 6 ದಿನಗಳ ಕಾಲ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದೂ ಸಹ ಪಾರ್ಸೆಲ್ ಮಾತ್ರ ಅನುಮತಿ ಇರೋದು. 6 ದಿನ ಮಾರಾಟ ಮಾಡಿದರೂ, …
Read More »ನಾಲ್ಕು ದಿನ ಹಸುಗೂಸಿಗೆ ವಿಷ ಕೊಟ್ಟು ಕೊಂದ ತಂದೆ, ಅಜ್ಜಿ
ಚೆನ್ನೈ: ಮತ್ತೆ ಹೆಣ್ಣು ಮಗುವಾಯಿತು ಎಂದು ನಾಲ್ಕು ದಿನದ ಹಸುಗೂಸನ್ನು ಸ್ವಂತ ತಂದೆ ಮತ್ತು ಅಜ್ಜಿ ಸೇರಿಕೊಂಡು ಕೊಲೆ ಮಾಡಿರುವ ಅಮಾನವೀಯ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಜಿಲ್ಲೆಯ ಸೊಲವಂದನ್ ಪಂಚಾಯತ್ ಪಟ್ಟಣದಲ್ಲಿ ಮಗುವಿನ ತಾಯಿ ಚಿತ್ರಾ ಮನೆಯಲ್ಲಿ ಇಲ್ಲದಿದ್ದಾಗ ಕೊಲೆ ಮಾಡಲಾಗಿದೆ. ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳನ್ನು …
Read More »ಉದ್ದುದ್ದ ಕೂದಲು, ಕುರುಚಲು ಗಡ್ಡಕ್ಕೆ ಮುಕ್ತಿ- ಎಲ್ಲಾ ಸಲೂನ್ ಓಪನ್…..
ಉಡುಪಿ: ಜಿಲ್ಲೆಯಲ್ಲಿ 54 ದಿನಗಳ ನಂತರ ಸಲೂನ್ ಓಪನ್ ಆಗಿದೆ. ಲಾಕ್‍ಡೌನ್ ಆರಂಭದಿಂದ ಕೂದಲು ಗಡ್ಡ ಬಿಟ್ಟು ಟೆನ್ಷನ್ ಮಾಡಿಕೊಂಡಿದ್ದ ಪುರುಷರು ಫುಲ್ ರಿಲೀಫ್ ಆಗಿದ್ದಾರೆ. ಉಡುಪಿಯಲ್ಲಿ ಹೇರ್ ಕಟ್ಟಿಂಗ್ ಸಲೂನ್‍ಗಳು ಬಂದ್ ಆಗಿ 54 ದಿನ ಕಳೆದಿದೆ. ಲಾಕ್‍ಡೌನ್ ಘೋಷಣೆ ಆಗುವ ಮೊದಲೇ ಸಲೂನ್ ಗಳನ್ನು ಉಡುಪಿಯಲ್ಲಿ ಬಂದ್ ಮಾಡಲಾಗಿತ್ತು. ಒಟ್ಟು ನಾಲ್ಕು ಹಂತಗಳಲ್ಲಿ ಲಾಕ್‍ಡೌನ್ ರಿಲೀಸ್ ಆಗುತ್ತಾ ಬಂದರೂ ಹೇರ್ ಕಟ್ಟಿಂಗ್ ಗೆ ಅವಕಾಶ ಸರ್ಕಾರ ಕೊಟ್ಟಿರಲಿಲ್ಲ. …
Read More »BIG BREAKING : ಎಸ್‍ಎಸ್‍ಎಲ್‍ಸಿ-ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಬೆಂಗಳೂರು. ಮೇ. 18 ; .ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಕೊನೆಗೂ ಪ್ರಕಟವಾಗಿದೆ. ಜೂನ್ 26 ರಿಂದ ಜುಲೈ 4 ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ. ಇಂದು ಸುದ್ದಿಘೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ ಕುಮಾರ್ ವೇಳಾಪಟ್ಟಿ ಪ್ರಕಟ ಮಾಡಿದರು. ಕೋವಿಡ್ – 19 ಆತಂಕದ ನಡುವೆ ಗೊಂದಲದಲ್ಲಿದ್ದ ಪರೀಕ್ಷಾ ದಿನಾಂಕವನ್ನು ಕೊನೆಗೂ ಪ್ರಕಟಿಸಿದ್ದು 2879 ಕೇಂದ್ರಗಳಲ್ಲಿ 848196 ವಿದ್ಯಾರ್ಥಿಗಳು …
Read More »ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲ್ಲ : ಡಿಸಿಎಂ ಸವದಿ ………….
ಬೆಂಗಳೂರು, ಮೇ 18-ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಎನ್‍ಇಕೆಎಸ್‍ಆರ್‍ಟಿ ಹಾಗೂ ಎನ್‍ಡಬ್ಲು ಕೆಎಸ್‍ಆರ್‍ಟಿಸಿ ಸೇರಿದಂತೆ ನಾಲ್ಕು ನಿಗಮಗಳು ನಷ್ಟದಲ್ಲಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಬಸ್ ಪ್ರಯಾಣವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮಗಳು ನಷ್ಟದಲ್ಲಿವೆ. ದರ ಹೆಚ್ಚಳ ಮಾಡುವುದು ಅನಿವಾರ್ಯವಾದರೂ ಇಂದಿನ ಪರಿಸ್ಥಿತಿಯಲ್ಲಿ ದರ ಏರಿಕೆ ಮಾಡುವುದಿಲ್ಲ ಎಂದು ಹೇಳಿದರು. ಲಾಕ್‍ಡೌನ್ ಜಾರಿಯಾಗಿ ಸರಿಸುಮಾರು ಒಂದೂವರೆ ತಿಂಗಳಾಗಿವೆ. ಸದ್ಯಕ್ಕೆ ಯಾವುದೇ ರೀತಿಯ ಆದಾಯ …
Read More »