Breaking News

Yearly Archives: 2020

ರಂಜಾನ್ ಮುಗಿದ ಬೆನ್ನಲ್ಲೇ ನಾಲ್ವರ ಬರ್ಬರ ಕೊಲೆ, ಗುಂಡ್ಲುಪೇಟೆ ಪ್ರಕ್ಷುಬ್ಧ..!

ಕೊಳ್ಳೇಗಾಲ, ಮೇ 27- ಪವಿತ್ರ ರಂಜಾನ್ ಹಬ್ಬ ಮುಗಿದ ಬೆನ್ನಲ್ಲೇ ಮುಸಲ್ಮಾನ ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ನಾಲ್ಕು ಮಂದಿ ಭೀಕರವಾಗಿ ಹತ್ಯೆಗೀಡಾಗಿರುವ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಜಾಕಿರ್‍ಹುಸೇನ್ ಗ್ರಾಮದ ನಿವಾಸಿಗಳಾದ ಜಕಾವುಲ್ಲಾ, ಇದ್ರೀಶ್, ಕೈಸರ್ ಹಾಗೂ ನಸ್ರುಲ್ಲಾ ಕೊಲೆಯಾದ ನತದೃಷ್ಟರು. ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಅಸ್ಲಾಂ, ಜಮೀರ್ ಮತ್ತಿತರರ ಗುಂಪು …

Read More »

BIG NEWS : ಘೋಷಣೆಗಷ್ಟೇ ಸೀಮಿತವಾದ ಬಿಎಸ್‍ವೈ ಕೊರೋನಾ ಸ್ಪೆಷಲ್ ಪ್ಯಾಕೇಜ್..!

ಬೆಂಗಳೂರು, ಮೇ 27- ರಾಜ್ಯದಲ್ಲಿ ಲಾಕ್‍ಡೌನ್ ಅನುಷ್ಠಾನಗೊಳಿಸಿದ ಪರಿಣಾಮ ಸಂಕಷ್ಟದಲ್ಲಿದ್ದ ಶ್ರಮಿಕರು, ಮಧ್ಯಮ ವರ್ಗದವರು ಹಾಗೂ ರೈತರಿಗೆ ಸರ್ಕಾರ ಘೋಷಣೆ ಮಾಡಿದ್ದ ವಿಶೇಷ ಪ್ಯಾಕೇಜ್ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಏಕೆಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಘೋಷಣೆ ಮಾಡಿದ್ದ 1,777 ಕೋಟಿ ವಿಶೇಷ ಪ್ಯಾಕೇಜ್‍ನಲ್ಲಿ ಇಂದಿನವರೆಗೂ ಫಲಾನುಭವಿಗಳಿಗೆ ಬಿಡುಗಡೆ ಮಾಡಿರುವ ಮೊತ್ತ ಕೇವಲ 5.93 ಕೋಟಿ ಮಾತ್ರ. ನಂಬುವುದಕ್ಕೆ ಅಚ್ಚರಿಯಾದರೂ ಇದು ಸತ್ಯ. ಇನ್ನು ಆಶ್ಚರ್ಯಕರ ಸಂಗತಿ ಎಂದರೆ, ಪ್ಯಾಕೇಜ್ ಘೋಷಣೆಯಾಗಿ ಸರಿಸುಮಾರು …

Read More »

ಜೂನ್ 25ರಿಂದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲು ಉದ್ದೇಶಿಸಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಈಗ ಕಾರ್ಮೋಡ

ಬೆಳಗಾವಿ – ಜೂನ್ 25ರಿಂದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲು ಉದ್ದೇಶಿಸಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಈಗ ಕಾರ್ಮೋಡ ಕವಿದಿದೆ. ಕೊರೆನಾ ಮತ್ತು ಈ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ನಿಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆ ಸೇರಿದಂತೆ ಇಡೀ ಶೈಕ್ಷಣಿಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಬಹುತೇಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಇನ್ನು ಹಲವು ಪರೀಕ್ಷೆಗಳು ಸ್ಪಷ್ಟತೆ ಇಲ್ಲದೆ ಗೊಂದಲದಲ್ಲೇ ಮುಂದುವರಿದಿವೆ. ಹಲವು ದಿನಗಳ ನಂತರ ಅಂತೂ ರಾಜ್ಯ ಸರಕಾರ ಎಸ್ಎಸ್ಎಲ್ ಸಿ …

Read More »

ರೇವಣ್ಣನ ಮೇಲೆ ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ………..

ಹಾಸನ: ಜಿಲ್ಲೆಯಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಕೊರೊನಾ ವಿರುದ್ಧ ಹೋರಾಡಲು ಬಳಸಬಹುದಾಗಿದ್ದ ಸುಮಾರು 112 ಕೋಟಿ ಹಣ ಮಾಜಿ ಸಚಿವ ರೇವಣ್ಣ ಅವರಿಂದ ಬಳಕೆಯಾಗದೆ ವಾಪಸ್ಸಾಗುವ ಪರಿಸ್ಥಿತಿ ಬಂದಿದೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 15ನೇ ಹಣಕಾಸಿನಲ್ಲಿ ಜಿಲ್ಲಾಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಮೂರಕ್ಕೂ ಸೇರಿ ಹಾಸನ ಜಿಲ್ಲೆಗೆ ಸುಮಾರು 112 ಕೋಟಿ ಹಣ ಬಂದಿದೆ. ಈ ಹಣವನ್ನು ಅಭಿವೃದ್ಧಿ …

Read More »

ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಠಾಣೆಯಲ್ಲಿ ಈ 19 ಜನರ ವಿರುದ್ಧ ಕೇಸ್ ದಾಖಲಾಗಿದೆ. ಲಾಕ್‍ಡೌನ್ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದು, ಆ ಬಳಿಕ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದೇ ಕೂಲಿಕಾರ್ಮಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿಯೇ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ರು. ದಾಸಗಾಂವ – ಮಾಗಾಂವ – ಮೀರಜ್ …

Read More »

ಸ್ನಾನ ಮಾಡುವ ವಿಡಿಯೋ ಮಾಡಿ, ಅಪ್ಪನಿಂದಲೇ ಲೈಂಗಿಕ ಕಿರುಕುಳ- 18ರ ಮಗಳು ಆತ್ಮಹತ್ಯೆ

ಚಿಕ್ಕಮಗಳೂರು: ಮಗಳು ಸ್ನಾನ ಮಾಡುತ್ತಿರುವ ಫೋಟೋ ತೆಗೆದು, ವಿಡಿಯೋ ಮಾಡಿ, ಹೆತ್ತ ಅಪ್ಪನೇ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಜಗಳದಿಂದ ಯುವತಿಯ ಅಮ್ಮ ಬೇರೆಡೆ ವಾಸವಿದ್ದಳು. ಅಪ್ಪ-ಮಗಳು ಒಂದೇ ಮನೆಯಲ್ಲಿ ವಾಸವಿದ್ದರು. ಈ ವೇಳೆ 40 ವರ್ಷದ ಪಾಪಿ ಅಪ್ಪ ತಾನೇ ಸಾಕಿದ 18 ವರ್ಷದ ಮಗಳು ಸ್ನಾನ ಮಾಡುವ …

Read More »

ಕೊರೊನಾ ಲಾಕ್‍ಡೌನ್ ದೇಶದ ಆರ್ಥಿಕತೆಗೆ 30 ಲಕ್ಷ ಕೋಟಿ ರೂ. ನಷ್ಟ- ಎಸ್‍ಬಿಐ………

ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಈವರೆಗೂ ಭಾರತದ ಆರ್ಥಿಕತೆಗೆ 30 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‍ಬಿಐ) ಸಂಶೋಧನಾ ವರದಿಯ ಪ್ರಕಾರ, ರಾಷ್ಟ್ರೀಯ ಅಂಕಿ ಅಂಶಗಳ ಸಂಘಟನೆ (ಎನ್‍ಎಸ್‍ಒ) ಮೇ 29 ರಂದು ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ವರದಿ ಬಿಡುಗಡೆಗೊಳಿಸಲಿದೆ. ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 4.7ರಷ್ಟಿತ್ತು. ಆದರೆ ಕೊರೊನಾ ಹೊಡೆತದಿಂದ ಜಿಡಿಪಿ ಮತ್ತೆ ಕುಸಿತ ಕಾಣಲಿದೆ ಎನ್ನಲಾಗುತ್ತಿದೆ. ಕೊರೊನಾ ಲಾಕ್‍ಡೌನ್‍ನಿಂದ …

Read More »

ಡಿಜೆ ಹಳ್ಳಿಯ ಎಸ್.ಕೆ.ಗಾರ್ಡನ್ ಸ್ಲಂ ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ನಿದ್ದೆಯನ್ನ ನಿದ್ದೆಗೆಡಿಸಿದೆ.

ಬೆಂಗಳೂರು: ಡಿಜೆ ಹಳ್ಳಿಯ ಎಸ್.ಕೆ.ಗಾರ್ಡನ್ ಸ್ಲಂ ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ನಿದ್ದೆಯನ್ನ ನಿದ್ದೆಗೆಡಿಸಿದೆ. ಹೌದು. ಡಿ.ಜೆ.ಹಳ್ಳಿ ಮೂಲದ 34 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪತ್ತೆ ಪ್ರಕರಣ ಈಗ ತಲೆ ಬಿಸಿಗೆ ಕಾರಣವಾಗಿದೆ. ಮಹಿಳೆಯನ್ನು ರೋಗಿ-2180 ಗುರುತಿಸಲಾಗಿದ್ದು, ಅವರ ಪ್ರಯಾಣದ ಹಿನ್ನೆಲೆ ಜನರನ್ನು ಬೆಚ್ಚಿಬೀಳಿಸುವಂತಿದೆ. ಮಹಿಳೆ ಮೇ 25ರಂದು ಉಸಿರಾಟದ ಸಮಸ್ಯೆ ಎಂದು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬೋರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ …

Read More »

ಜಿಲ್ಲಾಡಳಿತ ಎಡವಟ್ಟು,ಅಥಣಿ ತಾಲೂಕಿನ 4 ಗ್ರಾಮಗಳು ಸಂಕಷ್ಟ ಎದುರಿಸುವಂತಾಗಿದೆ.

ಒಂದು ಸಮುದಾಯದ ನಂಟಿಂದ ಬರೋಬ್ಬರಿ 13 ಕೇಸ್ ಕೊರೊನಾ ಪಾಸಿಟಿವ್ ಕೊರೊನಾ ಪರೀಕ್ಷೆ ರಿಪೋರ್ಟ್ ಬರೋದಕ್ಕೂ ಮೊದಲೇ ಕ್ವಾರಂಟೈನ್‍ನಲ್ಲಿದ್ದವರನ್ನ ಬಿಡುಗಡೆ  ಪ್ರಭಾವ ಬಳಸಿ ತಮ್ಮ ಮನೆಗಳು ಸೇರಿದಂತೆ ಜೈನ ಸಮುದಾಯದವರು ಆಯೋಜಿಸದ್ದ ಪೂಜೆಯಲ್ಲೂ ಭಾಗಿ   ಚಿಕ್ಕೋಡಿ(ಬೆಳಗಾವಿ): ಕುಂದಾನಗರಿ ಬೆಳಗಾವಿಗೆ ತಬ್ಲಿಘಿ, ಅಜ್ಮೀರ್ ಬಳಿಕ ಹೊಸದಂದು ಕಂಟಕ ಶುರುವಾಗಿದೆ. ಒಂದು ಸಮುದಾಯದ ನಂಟಿಂದ ಬರೋಬ್ಬರಿ 13 ಕೇಸ್ ಕೊರೊನಾ ಪಾಸಿಟಿವ್ ಆಗಿದೆ. ಕುಂದಾನಗರಿ ಬೆಳಗಾವಿಗೆ ಈಗ ತಬ್ಲಿಘಿ, ಅಜ್ಮೀರ್ ಬಳಿಕ …

Read More »

‘ಪ್ಯಾಟೆ  ಹುಡ್ಗೀರ್ ಹಳ್ಳಿ ಲೈಫ್’ ಖ್ಯಾತಿಯ ಮೆಬಿನಾ ಮೈಕಲ್ ಇಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮಂಡ್ಯ: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಖ್ಯಾತ ರಿಯಾಲಿಟಿ ಶೋ ‘ಪ್ಯಾಟೆ  ಹುಡ್ಗೀರ್ ಹಳ್ಳಿ ಲೈಫ್’ ಖ್ಯಾತಿಯ ಮೆಬಿನಾ ಮೈಕಲ್ ಇಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಜೆ 4.30ರ ವೇಳೆಗೆ ಅಪಘಾತ ಸಂಭವಿಸಿರುವ ಕುರಿತು ಮಾಹಿತಿ ಲಭಿಸಿದ್ದು, ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ …

Read More »