Breaking News

Yearly Archives: 2020

ಕರ್ನಾಟಕ ಕರಾವಳಿಯಲ್ಲಿ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಈ ಚಂಡಮಾರುತ ಬೀಸಲಿದೆ……….

ಉಡುಪಿ: ಕರ್ನಾಟಕಕ್ಕೆ ಮಾನ್ಸೂನ್ ಅಪ್ಪಳಿಸುವ ಮೊದಲೇ ‘ನಿಸರ್ಗ’ ಚಂಡಮಾರುತ ಅಬ್ಬರಿಸಲು ಸಿದ್ಧವಾಗಿದೆ. ಏಳು ವರ್ಷದ ಬಳಿಕ ಅರಬ್ಬಿ ಸಮುದ್ರದಲ್ಲಿ ಒಂದು ಶಕ್ತಿಶಾಲಿ ಚಂಡಮಾರುತ ಬೀಸಲಿದೆ. ಅರಬ್ಬಿ ಕಡಲ ತೀರದಲ್ಲಿ ಹುಟ್ಟುವ ಈ ಚಂಡಮಾರುತ ಸಮುದ್ರದ ತೀರದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಮಳೆ ತರಲಿದೆ. ಕರ್ನಾಟಕ ಕರಾವಳಿಯಲ್ಲಿ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಈ ಚಂಡಮಾರುತ ಬೀಸಲಿದೆ. ದಕ್ಷಿಣ ಮತ್ತು ಉತ್ತರ ಭಾರತಕ್ಕೆ ಇದು ಸಂಚಾರ ಮಾಡಲಿದೆ ಎಂದು ಹವಾಮಾನ ಇಲಾಖೆ …

Read More »

ಜೂ. 19 ಕ್ಕೆ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 18 ರಾಜ್ಯಸಭಾ   ಸ್ಥಾನಗಳಿಗೆ ಚುನಾವಣೆ

ಬೆಂಗಳೂರು: ಇದೇ ಜೂ. 19 ಕ್ಕೆ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 18 ರಾಜ್ಯಸಭಾ   ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ರಾಜಕೀಯ ಚಟುವಟಿಗೆಗಳು ತೀವ್ರತೆ ಪಡೆದುಕೊಂಡಿವೆ.  ಮುಖ್ಯವಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ, ತೇಜಸ್ವಿನಿ ಅನಂತಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಪಿ ಮುರುಳೀಧರ ರಾವ್ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಅಂದಿನ ಸಭೆಯಲ್ಲಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಈಗಾಗಲೇ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತಕ್ಕೆ …

Read More »

ಮುಂಬೈನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೇಪೊಲೀಸರ ಮುಂದೆಯೇ ಆಟೋ ಹತ್ತಿ ಎಸ್ಕೇಪ್

ಬೆಂಗಳೂರು: ಮುಂಬೈನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೇ ಆಟೋ ಹತ್ತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುಂಬೈನಿಂದ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದು 1700ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದು, ಅದರಲ್ಲಿ ಇಬ್ಬರು ಪ್ರಯಾಣಿಕರು ಪೊಲೀಸರ ಮುಂದೆಯೇ ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ. ರೈಲಿನಲ್ಲಿ ರಾಜ್ಯದ ಕಾರ್ಮಿಕರು ಆಗಮಿಸಿರಬಹುದು ಎಂಬ ಗೊಂದಲಕ್ಕೀಡಾದ ಪೊಲೀಸರು ಹಾಗೂ ಅಧಿಕಾರಿಗಳು ಇಬ್ಬರು ಪ್ರಯಾಣಿಕರ ತಪಾಸಣೆ ಕೂಡ …

Read More »

ಜಿಲ್ಲಾಧಿಕಾರಿ, ಜಿಪಂ ಇಸಿಒ, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಬಿ.ಎಸ್. ಯಡಿಯೂರಪ್

ಬೆಂಗಳೂರು:  ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು  ತಾಲೂಕು ಕೇಂದ್ರಗಳಲ್ಲಿ  ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ರು.  ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ,  ರಾಯಚೂರು ಮತ್ತು ಉಡುಪಿ   ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಪಂ ಇಸಿಒ, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಅಧಿಕಾರಿಗಳು  ತಾಲೂಕುಗಳನ್ನು ವಿಭಾಗಿಸಿಕೊಂಡು ತಾಲೂಕು  ಕೇಂದ್ರದಲ್ಲಿ  ಮೊಕ್ಕಾಂ …

Read More »

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಬದಲಾಗಿ,ರಮೇಶ್ ಜಾರಕಿಹೊಳಿ…..

ಬೆಳಗಾವಿ- ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಬದಲಾಗಿ,ರಮೇಶ್ ಜಾರಕಿಹೊಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಮೇಶ್ ಜಾರಕಿಹೊಳಿ ಅವರು ಈಗ ಬೆಳಗಾವಿ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಾರೆ.ಕೋರೆ,ಕತ್ತಿ ಸಹೋದರರ ಕಿತ್ತಾಟದ ಬಳಿಕ ಜಾರಕಿಹೊಳಿ ಸಾಹುಕಾರ್ ಗೆ ಅದೃಷ್ಠ ಒಲಿದಿದೆ. ಮೈತ್ರಿ ಸರ್ಕಾರದ ಪತನದ ರೂವಾರಿ ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಲ್ಲದೇ ಬಿಜೆಪಿ ಸರ್ಕಾರದಲ್ಲಿ …

Read More »

ಧಾರ್ಮಿಕ ಪ್ರಚಾರ ನಡೆಸಿದ ಆರೋಪ ಮೇಲೆ, ಇಂಡೋನೇಷ್ಯಾದ 10, ದೆಹಲಿಯ ಇಬ್ಬರು ಸೇರಿ 12 ಜನರನ್ನು ಪೋಲೀಸರ ವಶಕ್ಕೆ

ಬೆಳಗಾವಿ- ವೀಸಾ ನಿಯಮ ಉಲ್ಲಂಘಿಸಿ ದೆಹಲಿಯಿಂದ ಬೆಳಗಾವಿಗೆ ಆಗಮಿಸಿ, ಧಾರ್ಮಿಕ ಪ್ರಚಾರ ನಡೆಸಿದ ಆರೋಪ ಮೇಲೆ, ಇಂಡೋನೇಷ್ಯಾದ 10, ದೆಹಲಿಯ ಇಬ್ಬರು ಸೇರಿ 12 ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಐವರು ಮಹಿಳೆಯರು ಸೇರಿ , 12 ಜನರು ಪೊಲೀಸ್ ವಶದಲ್ಲಿದ್ದು ಬೆಳಗಾವಿ ನಗರದ ಮಾಳಮಾರುತಿ ಠಾಣೆ ಪೊಲೀಸರು 12 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೇ ಮಾಳಮಾರುತಿ ಪೋಲೀಸರು ಈ ಹನ್ನೆರಡು ಜನರ ವಿರುದ್ಧ ಎಫ ಐ …

Read More »

ಮುಂಬೈ ಇಂದ ಮೂಡಲಗಿ ತಾಲೂಕಿಗು ಹಬ್ಬಿತು ಕರೋನ ಸೋಂಕು………..

ಮುಂಬೈ ನಿಂದ ಮೂಡಲಗಿ ತಾಲೂಕಿನ ಕಲ್ಲೊಳಿ ಗೆ ಆಗಮಿಸಿದ ಮೂರು ಜನರ ಪೈಕಿ ಒಬ್ಬ ವ್ಯಕ್ತಿಗೆ. ಕರೋನ ಸೋಂಕು ತಟ್ಟಿರುವ ಶಂಕೆ ಇಷ್ಟು ದಿನ ಒಂದೇ ಒಂದು ಪ್ರಕರಣ ಕೂಡ ಇಲ್ಲದ ಮೂಡಲಗಿ ತಾಲೂಕಿಗೆ ಇಂದು ಬಿಗ್ ಶಾಕ್ ಸೋಂಕು ತಟ್ಟಿರುವ ವ್ಯಕ್ತಿಗಳ ವಾಸಿಸುವ 100 ಮೀಟರ್ ಪ್ರದೇಶ ಸೀಲ್ ಡೌನ್ ಮುಂಬೈನಿಂದ ಆಗಮಿಸಿದ ಮೂರು ಜನ ಪಟ್ಟಣದಲ್ಲಿ ಸುತ್ತಾಡಿರುವ ಶಂಕೆ ಮುನ್ನೆಚಚರಿಕೆ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸ್ ಹಾಗೂ …

Read More »

ಗೋಕಾಕ ನಗರದಲ್ಲಿ ಬೈಕ್ ಗಳಿಗೆ ಡಿಕ್ಕಿ ಹೊಡೆದು ಆಸ್ಪತ್ರೆಗೆ ಹೋಗುವಾಗ ನಡುದಾರಿಯಲ್ಲಿ ಸಾವು

ಗೋಕಾಕ: ದ್ವಿ ಚಕ್ರವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಿದ್ದು.ಲ. ಮುರಕಿಬಾವಿ (24)ಗಂಭೀರ ಗಾಯಗೊಂಡ ಘಟನೆ ನಡೆದಿದೆ.   ಗೋಕಾಕನಗರದ ಹೆದ್ದಾರಿ ಪ್ರವಾಸಿ ಮಂದಿರ ಬಳಿ ಈ ಅಪಘಾತ ನಡೆದಿದ್ದು ಗಂಭೀರ ಗಾಯಗೊಂಡ ಯವಕನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನಡುದಾರಿಯಲ್ಲಿ ಸಾವನ್ನಪಿದ್ದಾರೆ.ಗೋಕಾಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

Read More »

ಕೊರೊನಾ ಹಾಟ್‍ಸ್ಪಾಟ್ ಪುಣೆಯಿಂದ ಬಂದು ಕ್ವಾರಂಟೈನ್ ಆಗಲು ನಕಾರ- ಯುವತಿ ರಂಪಾಟ

ಗದಗ: ರಾಜ್ಯದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಪೈಕಿ ಬಹುಪಾಲು ಅನ್ಯರಾಜ್ಯಗಳದ್ದವೇ ಆಗಿವೆ. ಅದರಲ್ಲೂ ಮಹಾರಾಷ್ಟ್ರದ ಪಾಲು ದೊಡ್ಡದು. ಇಂತಹ ಸಂದರ್ಭದಲ್ಲಿ ದೇಶದ ಕೊರೊನಾ ಹಾಟ್‍ಸ್ಪಾಟ್‍ನಿಂದ ಬಂದ ಯುವತಿ ಕ್ವಾರಂಟೈನ್ ಆಗಲು ನಿರಾಕರಿಸಿದ್ದು, ರಂಪಾಟ ಮಾಡಿದ್ದಾರೆ. ಯುವತಿ ಪುಣೆಯಿಂದ ಗದಗ ರೈಲ್ವೆ ನಿಲ್ದಾಣಕ್ಕೆ ಬಂದು ಇಳಿದಿದ್ದು, ಇಲ್ಲಿ ಕ್ವಾರಂಟೈನ್ ಆಗುವುದಿಲ್ಲ ಎಂದು ರಂಪಾಟ ನಡೆಸಿದ್ದಾರೆ. ನಮ್ಮ ಊರು ಕೊಪ್ಪಳ ಜಿಲ್ಲೆಯ ಗಂಗಾವತಿ. ಅಲ್ಲಿಯೇ ಕ್ವಾರಂಟೈನ್ ಆಗುತ್ತೇನೆ. ನನ್ನನ್ನು ಅಲ್ಲಿಗೆ ಕಳುಹಿಸಿಕೊಡಿ ಎಂದು …

Read More »

ಏರ್ ಲಿಫ್ಟ್‌ನಲ್ಲೂ ಕೇರಳದ ಲಾಬಿ, ವಿಮಾನವಿಲ್ಲದೆ ಲಕ್ಷಾಂತರ ಕನ್ನಡಿಗರು ಕಂಗಾಲು……….

ಮಂಗಳೂರು: ಕೊರೊನಾ ವಿಚಾರದಲ್ಲೂ ಕೇರಳ ಲಾಬಿ ಮಾಡುತ್ತಿದ್ದು, ವಿದೇಶದಲ್ಲಿ ಸಹ ಲಾಬಿ ಮಾಡುತ್ತಿದೆ. ಇದರಿಂದ ನೇರವಾಗಿ ಕರ್ನಾಟಕದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಎಫೆಕ್ಟ್ ಆಗುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ರಾಜ್ಯದ 5 ಲಕ್ಷ ಕನ್ನಡಿಗರಿದ್ದಾರೆ. ಅದರಲ್ಲೂ ಕರಾವಳಿ ಮೂಲದವರೆ ಹೆಚ್ಚಿದ್ದಾರೆ. ಆದರೆ ಕೇರಳ ಲಾಬಿಯಿಂದ ಅವರು ಇದೀಗ ಅಲ್ಲೇ ಉಳಿದುಕೊಳ್ಳುವಂತಾಗಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಎರ್ ಲಿಫ್ಟ್‍ನಲ್ಲಿ ಕೇರಳ ಸರ್ಕಾರ ಲಾಬಿ ನಡೆಸುತ್ತಿರುವುದರಿಂದ ಕನ್ನಡಿಗರು ಸಂಕಷ್ಟಕ್ಕೀಡಾಗಿದ್ದಾರೆ. …

Read More »