Breaking News

Yearly Archives: 2020

ಕೋರೆ ಕತ್ತಿ ಕಿತ್ತಾಟ,ಈರಣ್ಣಾ ಕಡಾಡಿಗೆ ಒಲಿದು ಬಂದ ರಾಜ್ಯ ಸಭಾ ಟಿಕೆಟ್……

ಬೆಳಗಾವಿ- ಇಬ್ಬರ ಜಗಳ ಮೂರನೇಯ ವ್ಯೆಕ್ತ ಗೆ ಯಾವ ರೀತಿ ಲಾಭ ಮಾಡಿ ಕೊಡುತ್ತದೆ ಎನ್ನುವದಕ್ಜೆ ಕೋರೆ ಕತ್ತಿ ಕಿತ್ತಾಟವೇ ಅದಕ್ಕೆ ಸಾಕ್ಷಿಯಾಗಿದ್ದು.ರಾಜ್ಯ ಸಭಾ ಟಿಕೆಟ್ ಈರಣ್ಣಾ ಕಡಾಡಿಗೆ ಒಲಿದು ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣಾ ಕಡಾಡಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು ಬಿಜೆಪಿ ಹೈಕಮಾಂಡ್ ಪ್ರಾಮಾಣಿಕ ಕಾರ್ಯಕರ್ತನಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಕಿತ್ತಾಟ ನಡೆಸಿದ ಪ್ರಭಾವಿ ನಾಯಕರಿಗೆ ಅಚ್ಚರಿ ಮೂಡಿಸಿದೆ. …

Read More »

ರಾಜ್ಯಸಭೆ ಚುನಾವಣೆ : ಖರ್ಗೆಗೆ ಬಿ ಫಾರಂ ನೀಡಿದ ಡಿಕೆಶಿ

ಬೆಂಗಳೂರು,ಜೂ.8-ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬಿ ಫಾರಂ ನೀಡಿದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಸುಮಾರು 50 ಮಂದಿ ಖರ್ಗೆ ಅವರ ಬಿ ಫಾರಂಗೆ ಸಹಿ ಹಾಕಿದರು. ಐದು ನಾಮಪತ್ರಗಳನ್ನು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‍ಕುಮಾರ್ ಪರಿಶೀಲನೆ ನಡೆಸಿ …

Read More »

ನಾವು ಆತ್ಮೀಯ ಸ್ನೇಹಿತನನ್ನ ಕಳ್ಕೊಂಡಿದ್ದೇವೆ: ರಾಧಿಕಾ ಸಂತಾಪ………….

ಬೆಂಗಳೂರು: ನಾವು ಇಂದು ಆತ್ಮೀಯ ಸ್ನೇಹಿತ ಚಿರುವನ್ನು ಕಳೆದುಕೊಂಡಿದ್ದೇವೆ ಎಂದು ನಟಿ ರಾಧಿಕಾ ಪಂಡಿತ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಚಿರಂಜೀವಿನ ಸಾವಿನ ಸುದ್ದಿ ತಿಳಿದ ತಕ್ಷಣ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. “ನನಗೆ ಚಿರಂಜೀವಿ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ, ಸುಂದರ ಆತ್ಮ ನಮ್ಮನ್ನು ಬಿಟ್ಟು ಬೇಗನೇ ಹೋಗಿದೆ. ಹೀಗಾಗಿ ಪತ್ನಿ ಮೇಘನಾ, ಧ್ರುವ, ಅವರ ಅಮ್ಮ …

Read More »

ಸಿದ್ದರಾಮಯ್ಯ ಗೊಂದಲ ಸೃಷ್ಟಿಮಾಡೋದರಲ್ಲಿ ನಂಬರ್ ಒನ್: ನಳಿನ್ ಕುಮಾರ್ ಕಟೀಲ್

ಕೊಪ್ಪಳ: ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ, ಎಲ್ಲರೂ ಒಂದಾಗಿದ್ದೇವೆ. ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಇಂದು ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟಿಲ್, ಶಾಸಕರು ಸೇರಿ ಒಟ್ಟಾಗಿ ಊಟ ಮಾಡಿದ್ರೆ, ಚಹಾ ಕುಡಿದ್ರೆ ಭಿನ್ನಮತನಾ ಎಂದು ಪ್ರಶ್ನೆ ಮಾಡಿದ್ರು. ರಾಜ್ಯದಲ್ಲಿ ಇಬ್ಬರು ಸಿಎಂ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಕಟಿಲ್, ಸಿದ್ದರಾಮಯ್ಯ ಗೊಂದಲ ಸೃಷ್ಟಿಮಾಡೋದರಲ್ಲಿ …

Read More »

ಶ್ರೀ ರಮೇಶ ಜಾರಕಿಹೊಳಿ ಯವರಿಗೆ ಕುರುಬರ ವತಿಯಿಂದ ಸನ್ಮಾನಿಸಿ ಟಗರು ಕೊಡಲಾಯಿತು

ಗೋಕಾಕ : ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೊಕಾಕ ನಗರಕ್ಕೆ ಆಗಮಿಸಿದ್ದ ರಮೇಶ ಅಣ್ಣಾ ಜಾರಕಿಹೊಳಿ ಅವರಿಗೆ ಗೋಕಾಕ ತಾಲೂಕಿನ ಕುರುಬರ ವತಿಯಿಂದ ಸನ್ಮಾನಿಸಿ ಟಗರು ಕೊಡಲಾಯಿತು ………. ಅದೇ ಸಂದಭ೯ದಲ್ಲಿ ಬೆಳಗಾವಿ ಸುವರ್ಣ ಸೌದದ ಆವರಣದಲ್ಲಿ ದೇಶ ಪ್ರೇಮಿ ಕ್ರಾಂತಿಯ ಜ್ಯೋತಿ ಹಚ್ಚಿದ ಕ್ರಾಂತೀವಿರ ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆಯನ್ನು ಪ್ರತಿಸ್ಟಾಪಿಸಬೆಕೆಂದು ಕ್ರಾಂತೀವಿರ ಸಂಗೊಳ್ಳಿ ರಾಯಣ್ಣ ಸೇನೆಯ ವತಿಯಿಂದ ಹಾಗೂ ಸಮಾಜದ ಯುವಕರು ಹಾಗೂ ರಾಯಣ್ಣನ ಅಭಿಮಾನಿಗಳು ಮನವಿಯನ್ನು …

Read More »

ಸುಂದರ್ ರಾಜ್‍ಗೆ ಸಾಂತ್ವನ ಹೇಳಿದ ಟಿ.ಎನ್.ಸೀತಾರಾಮ್ – ಮೇಘನಾಗೆ ನೀನು ಮಾತ್ರ ಧೈರ್ಯ ನೀಡಬಲ್ಲೆ ಸುಂದರ್

ಬೆಂಗಳೂರು: ಎಲ್ಲರ ಪ್ರೀತಿಯ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಳಿಯ ಅಗಲಿಕೆ, ಪ್ರೀತಿಯ ಮಗಳ ದುಃಖವನ್ನು ಕಂಡು ಹಿರಿಯ ನಟ ಸುಂದರ್ ರಾಜ್ ಕಣ್ಣೀರಾಗಿದ್ದಾರೆ. ಅವರಿಗೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಸಾಂತ್ವನ ಹೇಳಿದ್ದಾರೆ. ತಮ್ಮ ಫೇಸ್‍ಬುಕ್‍ನಲ್ಲಿ ಚಿರಂಜೀವಿ ಸರ್ಜಾ ಫೋಟೋವನ್ನು ಪೋಸ್ಟ್ ಮಾಡಿರುವ ಟಿ.ಎನ್.ಸೀತಾರಾಮ್, ‘ಪ್ರೀತಿಯ ಸುಂದರ್ ರಾಜ’ ಎಂದು ಮಾತುಗಳನ್ನು ಆರಂಭಿಸಿದ್ದಾರೆ. “ಈ ಕ್ಷಣದಲ್ಲಿ ಎಲ್ಲ ಬಗೆಯ ಸಾಂತ್ವನದ ಮಾತುಗಳೂ ಕೂಡ …

Read More »

ಖರ್ಗೆಯವರನ್ನು ಅಭ್ಯರ್ಥಿಯಾಗಿಸಿದ್ದೇವೆ, ಕಾಂಗ್ರೆಸ್​ನಿಂದ ಎರಡನೇ ಅಭ್ಯರ್ಥಿ ಹಾಕಲ್ಲ; ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಎಲ್ಲಾ ಶಾಸಕರು, ಎಂಎಲ್​ಸಿಗಳು ಸಭೆಗೆ ಬಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಅಧ್ಯಕ್ಷ ಡಿ.ಕೆ ಶಿವಕುಮಾರ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ಬಿ’ ಫಾರಂ ನೀಡಿದರು. ಆನಂತರ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಖರ್ಗೆಯವರನ್ನು ನಾವು ಅಭ್ಯರ್ಥಿಯಾಗಿಸಿದ್ದೇವೆ. ಕಾಂಗ್ರೆಸ್​ನಿಂದ ಎರಡನೇ ಅಭ್ಯರ್ಥಿ ಹಾಕಲ್ಲ …

Read More »

ಮಂತ್ರಾಲಯದಲ್ಲಿ ಇಂದು ತೆರೆಯದ ದ್ವಾರ ಬಾಗಿಲು- ನಿರಾಸೆಯಿಂದ ಮರಳಿದ ಭಕ್ತರು

ರಾಯಚೂರು: 75 ದಿನಗಳ ಬಳಿಕ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ರಾಯಚೂರಿನಲ್ಲಿ ದೇವಾಲಯಗಳಲ್ಲಿ ಪ್ರವೇಶ ಮುಕ್ತವಾಗಿದ್ದರೂ ಭಕ್ತರ ಸಂಖ್ಯೆ ಅತ್ಯಂತ ವಿರಳವಾಗಿದೆ. ಇತ್ತ ಮಂತ್ರಾಲಯದಲ್ಲಿ ಅಗತ್ಯ ಸಿದ್ಧತೆಯ ಕೊರತೆ ಹಿನ್ನೆಲೆ ಮಠ ಮಹಾದ್ವಾರವನ್ನ ತೆರೆದಿಲ್ಲ. ಮಂತ್ರಾಲಯ ಮಠದ ಮಹಾದ್ವಾರವನ್ನು ತೆರೆಯದೆ ಇರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಭಾಗ್ಯ ಇಂದು ಭಕ್ತರಿಗೆ ಸಿಕ್ಕಿಲ್ಲ. ಕೇಂದ್ರ ಹಾಗೂ ಆಂಧ್ರ ಸರ್ಕಾರದ ಸೂಚನೆ ಹಿನ್ನೆಲೆ ಇಂದಿನಿಂದ ದರ್ಶನಕ್ಕೆ …

Read More »

ಎರಡೂವರೆ ತಿಂಗಳ ಬಳಿಕ ಬಹುತೇಕ ದೇವಾಲಯಗಳು ಓಪನ್

ಮಂಗಳೂರು/ಉಡುಪಿ: ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಲಾಕ್ ಆಗಿದ್ದ ದೇವಾಲಯಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಎರಡೂವರೆ ತಿಂಗಳ ಬಳಿಕ ಬಹುತೇಕ ದೇವಾಲಯಗಳು ಇಂದು ಮುಂಜಾನೆಯಿಂದಲೇ ಓಪನ್ ಆಗಿವೆ. ಮಂಗಳೂರಿನಾದ್ಯಂತ ಇಂದು ದೇವಸ್ಥಾನಗಳು ಓಪನ್ ಆಗಿವೆ. ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಗಣಪತಿ ದೇವಸ್ಥಾನ ಮತ್ತು ಮಂಗಳಾದೇವಿ ದೇವಸ್ಥಾನ ಓಪನ್ ಆಗಿವೆ. ಬೆಳಗ್ಗೆ 6 ಗಂಟೆಯಿಂದ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಧರ್ಮಸ್ಥಳ …

Read More »

ಕೊರೋನಾ ವಾರಿಯರ್ಸ್ ಸನ್ಮಾನ ಸಮಾರಂಭಗಳು ನಡೆಯುತ್ತಿವೆ. ಈ ಸಮಾರಂಭಕ್ಕೆ ನೇಕಾರರ ಬಳಿ ಸೀರೆಗಳನ್ನು:

ಬೆಳಗಾವಿ :ಕೊರೋನಾ ವೈರಸ್ ಮಾಹಾಮಾರಿಯಿಂದ ಇಡೀ ದೇಶವನ್ನು ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಲಾಕ್ ಡೌನ್ ನಿಂದ ಬಹುತೇಕ ಎಲ್ಲಾ ಉದ್ಯಮಗಳ ಮೇಲೆ ಎಫೆಕ್ಟ್ ತಟ್ಟಿದೆ. ಅತಿ ಹೆಚ್ಚು ಬೆಳಗಾವಿಯ ನೇಕಾರರಿಗೆ ಇದರಿಂದ ತೊಂದರೆಯಾಗಿದ್ದು, ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಕಷ್ಟದಲ್ಲಿ ಇರುವ ನೇಕಾರರಿಗೆ ನೆರವಾಗಲು ಎಲ್ಲಾ ಶಾಸಕರಿಗೆ ಬೆಳಗಾವಿ ದಕ್ಷಿಣ ಕ್ಷೇತ್ರ ಶಾಸಕ ಅಭಯ ಪಾಟೀಲ್ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆ ನಂಬಿಕೊಂಡು …

Read More »