ಬೆಳಗಾವಿ ಎಪಿಎಂಸಿ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡ ಶ್ರೀಮತಿ ರೇಷ್ಮಾ ಯಲ್ಲಪ್ಪ ಪಾಟೀಲ್ ಹಾಗೂ ಬೆಳಗಾವಿ ಗ್ರಾಮೀಣ ಬಿಜೆಪಿ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಶ್ರೀಮತಿ ರಂಜನಾ ಅರುಣ್ ಕೋಲ್ಕಾರ್ ಅವರಿಗೆ ಇಂದು ನಗರದ ಕಾಡಾ ಕಚೇರಿಯಲ್ಲಿ ಸನ್ಮಾನಿಸಿ, ಶುಭಕೋರಲಾಯಿತು. ಈ ಸಂದರ್ಭದಲ್ಲಿ ಶ್ರೀ ವಿನಯ್ ಕದಮ್, ಶ್ರೀ ಪ್ರವೀಣ್ ಪಾಟೀಲ್, ಶ್ರೀ ಹೇಮಂತ್, ಶ್ರೀ ರಾಜೀವ್ ದೇಸಾಯಿ, ಶ್ರೀ ಅರುಣ್ ಕೋಲ್ಕಾರ್ ಹಾಗೂ ಡಾ. ಪಾಟೀಲ್ ರವರು ಉಪಸ್ಥಿತರಿದ್ದರು.
Read More »Yearly Archives: 2020
ಗ್ರಾಮದ ಮಂಡುಭಾಯಿ ಪವಾರ ಅವರ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ತಲಾ ಐದು ಲಕ್ಷ ರೂಪಾಯಿ ಚೆಕ್ಕನ್ನು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ
ಅಥಣಿ: ತಾಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಬಂದೆನವಾಜ ಮುಲ್ಲಾ ಹಾಗೂ ದೇಸಾರಟ್ಟಿ ಗ್ರಾಮದ ಮಂಡುಭಾಯಿ ಪವಾರ ಅವರ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ತಲಾ ಐದು ಲಕ್ಷ ರೂಪಾಯಿ ಚೆಕ್ಕನ್ನು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಯವರು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಮಹೇಶ ಕುಮಠಳ್ಳಿ ಇಂತಹ ದುರ್ಘಟನೆ ಘಟಿಸಬಾರದಿತ್ತು ಆದರೆ ವಿಧಿ ಆಟದ ಎದುರು ಎಲ್ಲರೂ …
Read More »ಅಳತೆ, ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಮನೆ ಮೇಲೆ ದಾಳಿ ನಡೆದೆ ಅಸಿಸ್ಟೆಂಟ್ ಕಂಟ್ರೋಲರ್ ಸುಭಾಷ್ ಉಪ್ಪಾರ ನಿವಾಸ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿಯ ಅಳತೆ, ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಮನೆ ಮೇಲೆ ದಾಳಿ ನಡೆದೆ ಅಸಿಸ್ಟೆಂಟ್ ಕಂಟ್ರೋಲರ್ ಸುಭಾಷ್ ಉಪ್ಪಾರ ನಿವಾಸ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರುಕ್ಮಿಣಿ ನಗರದ ನಿವಾಸ ಮತ್ತು, ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.ಸುಭಾಷ್ ಉಪ್ಪಾರ್, ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆಯ ಇನ್ವೆಸ್ಟಿಗೇಷನ್ ಯೂನಿಟ್ 3ರ ಅಸಿಸ್ಟೆಂಟ್ ಕಂಟ್ರೋಲರ್ ಆಗಿದ್ದಾರೆ. ಏಕಕಾಲದಲ್ಲಿ ನಾಲ್ಕು ಕಡೆ ದಾಳಿ ಮಾಡಿದ 30 …
Read More »ಹೆಚ್ಎಎಲ್ ಪೊಲೀಸರು ಸಂತೋಷ್ ಸೇರಿ 9 ಜನರನ್ನು ಬಂಧನ ಮಾಡಿದ್ದಾರೆ.
ಬೆಂಗಳೂರು; ಕಳ್ಳತನ ಮಾಡಿದ್ದ ಹಣವನ್ನು ಹಂಚಿಕೊಳ್ಳೋ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜೆ.ಪಿ. ನಗರದ ರೌಡಿಶೀಟರ್ ಆಗಿದ್ದ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಂತೋಷ್ ಆ್ಯಂಡ್ ಟೀಂನಿಂದ ಈ ಕೊಲೆ ನಡೆದಿದ್ದು, ಸದ್ಯ ಹೆಚ್ಎಎಲ್ ಪೊಲೀಸರು ಸಂತೋಷ್ ಸೇರಿ 9 ಜನರನ್ನು ಬಂಧನ ಮಾಡಿದ್ದಾರೆ. ಜೂನ್ 6ರಂದು ಸಂತೋಷ್ ಆ್ಯಂಡ್ ಟೀಂನಿಂದ ಪಾಗಲ್ ಶ್ರೀನಿವಾಸ್ ಕೊಲೆ ಮಾಡಲಾಗಿತ್ತು. ಇನ್ನು ಪಾಗಲ್ ಸೀನ ಹಾಗೂ ಸಂತೋಷ್ …
Read More »ಒಂದೇ ದಿನ 24 ಗಂಟೆಯಲ್ಲಿ 1,647 ಮಂದಿಗೆ ಕೊರೋನಾ ವೈರಸ್ ಬಂದಿದೆ. ಈ ಮೂಲಕ ದೆಹಲಿಯಲ್ಲಿ
ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರಿದದೆ. ಸೋಮವಾರ ಒಂದೇ ದಿನ 24 ಗಂಟೆಯಲ್ಲಿ 1,647 ಮಂದಿಗೆ ಕೊರೋನಾ ವೈರಸ್ ಬಂದಿದೆ. ಈ ಮೂಲಕ ದೆಹಲಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 42,829ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಿಂದ ತಿಳಿದು ಬಂದಿದೆ. ಇನ್ನು, ಮಹಾಮಾರಿ ಕೋವಿಡ್-19 ಸೋಂಕು ನಿನ್ನೆಯೂ 73 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಈ ಮೂಲಕ ಕೊರೋನಾ ವೈರಸ್ನಿಂದ …
Read More »ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಗರಗಳ ಗರಿಷ್ಠ, …
Read More »ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಉಡುಪಿ: ಕರಾವಳಿ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ಜೂನ್ 20ರ ವರೆಗೂ ಬಿರುಸಿನ ಮುಂಗಾರು ಸಾಧ್ಯತೆ ಇದೆ. ಹೀಗಾಗಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ವಾರಾಂತ್ಯದವರೆಗೂ ಧಾರಾಕಾರ ಮಳೆ ಸುರಿಯಲಿದ್ದು, ಜಿಲ್ಲೆಯಲ್ಲಿ ಹಳದಿ ಅಲರ್ಟನ್ನು ಹವಾಮಾನ ಇಲಾಖೆ ಘೋಷಿಸಿದೆ. ಒಂದು ವಾರದ ಅಂತರದಲ್ಲಿ ಸುಮಾರು 500 …
Read More »2 ದಿನ ರಜೆ ಹಾಕಿ ಆಸ್ಪತ್ರೆ ಹೋದ ಕಾನ್‍ಸ್ಟೇಬಲ್‍ಗೂ ಕೊರೊನಾ ಸೋಂಕು…………
ಹಾವೇರಿ: ಜಿಲ್ಲೆಗೆ ಮತ್ತೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ. 9 ವರ್ಷದ ಬಾಲಕ ಹಾಗೂ ಪೊಲೀಸ್ ಕಾನ್‍ಸ್ಟೇಬಲ್ ನಲ್ಲಿ ಸೋಂಕು ದೃಢಪಟ್ಟಿದೆ. 41 ವರ್ಷದ ಕಾನಸ್ಟೇಬಲ್ ಪಿ-7030ರಲ್ಲಿ ಸೋಂಕು ದೃಢಪಟ್ಟಿದ್ದು, ಹಾವೇರಿ ಜಿಲ್ಲೆ ಬ್ಯಾಡಗಿ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲತಃ ಕದರಮಂಡಲಿ ಗ್ರಾಮದ ನಿವಾಸಿಯಾಗಿದ್ದು, ಎರಡು ದಿನ ರಜೆ ಹಾಕಿ ದಾವಣಗೆರೆ ಜಿಲ್ಲೆ ಮಲೇಬೆನ್ನೂರಿಗೆ ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲದೇ …
Read More »ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ
ಹಾಸನ: ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೂ.11ರ ಸರ್ಕಾರಿ ಆದೇಶದಂತೆ ಕೊಬ್ಬರಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತರಬೇಕಿದೆ. ಕೇಂದ್ರ ಸರ್ಕಾರ ಬೆಂಬಲಬೆಲೆಯೊಂದಿಗೆ ಕೊಬ್ಬರಿ ಖರೀದಿಸಲು ನೆಫೆಡ್ ಸಂಸ್ಥೆಯನ್ನು ಗುರುತಿಸಿದ್ದು, ರಾಜ್ಯ ಸರ್ಕಾರ ಸಹಕಾರ ಮಾರಾಟ ಮಂಡಳಿ ಮೂಲಕ ಖರೀದಿಸಲು ಸೂಚನೆ ನೀಡಿದೆ. ಅದರಂತೆ …
Read More »ಅಧಿಕಾರಿಗಳ ಎಡವಟ್ಟು- 10 ಹಳ್ಳಿಗಳಿಗೆ ಜೀವನಾಡಿಯಾಗಿದ್ದ ದಡ್ಡಿ ಗ್ರಾಮ ಸೀಲ್‍ಡೌನ್………
ಬೆಳಗಾವಿ: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಹತ್ತು ಹಳ್ಳಿ ಜನರ ಜೀವನಾಡಿಯಾಗಿತ್ತು. ಪ್ರತಿಯೊಂದು ವಸ್ತು ಖರೀದಿಗೂ ಜನರು ಈ ಗ್ರಾಮಕ್ಕೆ ಬರಬೇಕಿತ್ತು. ಆದರೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಇದೀಗ ಊರಿಗೆ ಊರೇ ಸ್ತಬ್ಧವಾಗಿದೆ. ಬಿತ್ತನೆ ಕಾರ್ಯ ಮಾಡಬೇಕಿದ್ದ ರೈತರು ಮನೆ ಸೇರುವಂತಾಗಿದೆ. ದಡ್ಡಿ ಗ್ರಾಮದಿಂದ ಕೇವಲ ಮೂರು ಕಿ.ಮೀ ಅಂತರದಲ್ಲಿ ಮಹಾರಾಷ್ಟ್ರ ಗಡಿಯಿದೆ. ಕೊರೊನಾ ಆರಂಭದಲ್ಲಿ ಮಹಾರಾಷ್ಟ್ರದ ಪಕ್ಕದಲ್ಲಿದ್ದರೂ ಈ ಗ್ರಾಮದಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿರಲಿಲ್ಲ. …
Read More »