Breaking News

Yearly Archives: 2020

ಟಿವಿ ನೋಡಲು ಮನೆಗೆ ಬಂದ 11 ವರ್ಷದ ಬಾಲಕಿಯನ್ನು ಮನೆಯ ಮಾಲೀಕನ ಮಗ ಹಾಗೂ ಆತನ ಸ್ನೇಹಿತರು ಸೇರಿ ಅತ್ಯಾಚಾರ ಎಸಗಿದ ಘಟನೆ…

ಚೆನ್ನೈ : ಟಿವಿ ನೋಡಲು ಮನೆಗೆ ಬಂದ 11 ವರ್ಷದ ಬಾಲಕಿಯನ್ನು ಮನೆಯ ಮಾಲೀಕನ ಮಗ ಹಾಗೂ ಆತನ ಸ್ನೇಹಿತರು ಸೇರಿ ಅತ್ಯಾಚಾರ ಎಸಗಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಮಾಲೀಕನ ಮಗ 10ನೇ ತರಗತಿಯಲ್ಲಿ ಓದುತ್ತಿದ್ದ ಹಿನ್ನಲೆಯಲ್ಲಿ ಆನ್ ಲೈನ್ ಕ್ಲಾಸ್ ಗಾಗಿ ಮೊಬೈಲ್ ನೀಡಲಾಗಿತ್ತು. ಅದರಲ್ಲಿ ಆತ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ. ಒಮ್ಮೆ ಬಾಲಕಿ ಯಾರು ಇಲ್ಲದ ವೇಳೆ ಮನೆಗೆ …

Read More »

ಕೋವಿಡ್ ಸೋಂಕು ಮತ್ತು ಬಹು ಅಂಗಾಂಗ ವೈಫಲ್ಯದಿಂದ ಆದೋನಿ ಮೂಲದ ವ್ಯಕ್ತಿಯೊಬ್ಬರು ಸೋಮವಾರ ಬೆಳಗಿನ ಜಾವ ಮೃತಪಟ್ಟರು…

ಬಳ್ಳಾರಿ: ಕೋವಿಡ್ ಸೋಂಕು ಮತ್ತು ಬಹು ಅಂಗಾಂಗ ವೈಫಲ್ಯದಿಂದ ಆದೋನಿ ಮೂಲದ ವ್ಯಕ್ತಿಯೊಬ್ಬರು ಸೋಮವಾರ ಬೆಳಗಿನ ಜಾವ ಮೃತಪಟ್ಟರು. ವಿಮ್ಸ್‌ಗೆ ದಾಖಲಾಗಿದ್ದ ಅವರನ್ನು, ಸೋಂಕು ದೃಢಪಟ್ಟ ಬಳಿಕ ಜೂನ್ 17 ರಂದು‌ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅನಿಯಂತ್ರಿತ ಮಧುಮೇಹ, ಸೋಂಕು ತಗುಲಿದೆ ಎಂಬ ಆಘಾತ ಹಾಗೂ ಅಂಗಾಂಗ ವೈಫ್ಯಲ್ಯಕ್ಕೆ‌ ಒಳಗಾಗಿದ್ದ ಅವರಿಗೆ ವೆಂಟಿಲೇಟರ್ ಸೌಕರ್ಯದೊಂದಿಗೆ‌ ಚಿಕಿತ್ಸೆ ಮುಂದುವರಿಸಲಾಗಿತ್ತು‌. ಆದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು …

Read More »

ನವದೆಹಲಿಗೆ ತೆರಳಿದ್ದ ಕೃಷಿ ಇಲಾಖೆಯ ಅಧಿಕಾರಿಗೆ ಕೋವಿಡ್‌-19 ತಗುಲಿರುವುದು ದೃಢಪಟ್ಟಿದೆ.

ಪಾಟ್ನಾ: ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರುಗಳಿಗೆ ಈ ತಿಂಗಳ ಆರಂಭದಲ್ಲಿ ಲಿಚ್ಚಿ ಹಣ್ಣು ಕೊಡುಗೆ ನೀಡಲು ನವದೆಹಲಿಗೆ ತೆರಳಿದ್ದ ಕೃಷಿ ಇಲಾಖೆಯ ಅಧಿಕಾರಿಗೆ ಕೋವಿಡ್‌-19 ತಗುಲಿರುವುದು ದೃಢಪಟ್ಟಿದೆ. ಬಿಹಾರಕ್ಕೆ ಜೂನ್ 11ರಂದು ಮರಳಿದ್ದ, ಅವರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್‌ 20ರಂದು ಸೋಂಕು ಇರುವುದು ದೃಢಪಟ್ಟಿದ್ದು, ಇಲ್ಲಿನ ಕೋವಿಡ್‌ ಕೇರ್ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಆದರೆ, ಮುಜಾಫರ್‌ಪುರ್ ಜಿಲ್ಲಾಡಳಿತವು ಸ್ಪಷ್ಟನೆ ನೀಡಿದ್ದು, ಈ ಅಧಿಕಾರಿಗೆ ಹೆಸರಾಂತ …

Read More »

ತಮ್ಮ ಊರಿನಲ್ಲಿ ಮಗನ ಮೊದಲ ಹುಟ್ಟುಹಬ್ಬ ಆಚರಿಸಿದ ರಿಷಭ್​ ಶೆಟ್ಟಿ ದಂಪತಿ

ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ‘ಹರಿಕಥೆ ಅಲ್ಲಾ ಗಿರಿಕಥೆ’ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ. ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಅವರ ಅಭಿನಯದ ಹೊಸ ಸಿನಿಮಾ ‘ಹರಿಕಥೆ ಅಲ್ಲಾ ಗಿರಿಕಥೆ’ ಬಗ್ಗೆ ಕಳೆದ ಶನಿವಾರವಷ್ಟೆ ನಿಮಗೆ ತಿಳಿಸಿದ್ದೆವು. ಪ್ರತಿ ಸಲ ಏನಾದರೂ ಹೇಳಬೇಕಾದರೆ ಅದನ್ನು ವಿಡಿಯೋ ಮೂಲಕ ಹೇಳುವ ರಿಷಭ್ ಶೆಟ್ಟಿ, ಈ ಸಲವೂ ತಮ್ಮ ಚಿತ್ರದ ಕುರಿತು ಒಂದು ವಿಡಿಯೋ ತುಣುಕು …

Read More »

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ.

ನವದೆಹಲಿ: ವಿಶ್ವದೆಲ್ಲೆಡೆ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ನಡುವೆಯೇ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಇಂದು 10 ಗ್ರಾಂ ಚಿನ್ನದ ಬೆಲೆ 47,950 ರೂನಿಂದ 47,960 ರೂಪಾಯಿಗೆ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರದಲ್ಲಿ ಕೂಡ ಏರಿಕೆ ಕಂಡಿದ್ದು, 1 ಕೆ.ಜಿ ಬೆಳ್ಳಿಗೆ 48,670 ರೂಪಾಯಿ ಆಗಿದೆ. ಈ ಮೂಲಕ ದೇಶಾದ್ಯಂತ ಚಿನ್ನದ …

Read More »

ಸರ್ಕಾರದಿಂದ ನಡೆಸಲ್ಪಡುವ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಕ್ಕಳ ನಿರಾಶ್ರಿತರ ಕೇಂದ್ರ (ಶೆಲ್ಟರ್ ಹೋಂ)ನಲ್ಲಿದ್ದ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ ಸೋಂಕು ತಗುಲಿದೆ.

ಲಕ್ನೋ : ಸರ್ಕಾರದಿಂದ ನಡೆಸಲ್ಪಡುವ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಕ್ಕಳ ನಿರಾಶ್ರಿತರ ಕೇಂದ್ರ (ಶೆಲ್ಟರ್ ಹೋಂ)ನಲ್ಲಿದ್ದ 57 ಅಪ್ರಾಪ್ತ ಯುವತಿಯರಿಗೆ ಕೊರೋನಾ ಸೋಂಕು ತಗುಲಿದೆ. ಆ 57 ಅಪ್ರಾಪ್ತರಲ್ಲಿ ಐವರು ಗರ್ಭಿಣಿಯಾಗಿದ್ದಾರೆ. ಕೊರೋನಾ ಸೋಂಕಿತರಲ್ಲದ ಇನ್ನಿಬ್ಬರು ಯುವತಿಯರು ಕೂಡ ಗರ್ಭಿಣಿಯಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ವೈದ್ಯಕೀಯ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.  ಸರ್ಕಾರಿ ಶೆಲ್ಟರ್​ ಹೋಂನಲ್ಲಿರುವ ಈ ಅಪ್ರಾಪ್ತ ಯುವತಿಯರಿಗೆ ಯಾರಿಂದ ಸಾಮೂಹಿಕವಾಗಿ ಕೊರೋನಾ ಸೋಂಕು ತಗುಲಿದೆ? ಅವರು …

Read More »

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸೀಲ್‍ಡೌನ್ ಶುರುವಾಗಲಿದೆ………..?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನಗರದಲ್ಲಿ ಸೀಲ್‍ಡೌನ್ ಶುರುವಾಗಲಿದೆ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನ ಬಹುತೇಕ ಏರಿಯಾಗಳು ಸೀಲ್‍ಡೌನ್ ಆಗಲಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಆಯ್ದ ಏರಿಯಾಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಇಂದು ಸಿಎಂ ಜೊತೆ ಈ ಬಗ್ಗೆ ಗಂಭೀರ ಚರ್ಚೆ ಮಾಡಲಾಗುತ್ತಿದೆ. ಒಂದು ವೇಳೆ ಹೀಗೆ ನಗರದಲ್ಲಿ ಸಡಲಿಕೆ ಮುಂದುವರಿಸಿದರೆ …

Read More »

ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆದಿದೆ.

ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆದಿದೆ. ಸೋಮವಾರ ನಸುಕಿನಜಾವ 3:30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ಹಾಗೂ ನೌಶೇರಾ ವಲಯಗಳಲ್ಲಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನವು ಮತ್ತೆ ಬೆಳಗ್ಗೆ 5:30ರ ಸುಮಾರಿಗೆ ನೌಶೇರಾ ಸೆಕ್ಟರ್‌ನ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆಯು ಸರಿಯಾದ ಪ್ರತ್ಯುತ್ತರ ನೀಡಿದೆ. ಭಯೋತ್ಪಾದಕರು ಭಾರತಕ್ಕೆ ಪ್ರವೇಶಿಸಲು ಪಾಕಿಸ್ತಾನವು …

Read More »

ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಸಿಗ್ತಿಲ್ಲ ಡಯಾಲಿಸಿಸ್ ಚಿಕಿತ್ಸೆ….

ಬೀದರ್/ಚಿತ್ರದುರ್ಗ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ. ಜೀವ ಉಳಿಸಿ ಅಂತ ಹೋದರೆ ಅದೊಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಹೌದು. ಆರೋಗ್ಯ ಸಚಿವ ಶ್ರೀರಾಮುಲುರ ತವರು ಜಿಲ್ಲೆ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದೆಡೆ ಖಾಲಿ ಖಾಲಿಯಾಗಿರುವ ಡಯಾಲಿಸಿಸ್ ವಾರ್ಡಿನ ಬೆಡ್‍ಗಳು, ಇನ್ನೊಂದೆಡೆ ಆಸ್ಪತ್ರೆ ಹೊರಗೆ ಡಯಾಲಿಸಿಸ್ ಚಿಕಿತ್ಸೆ ಸಿಗಲಾರದೇ ಕಂಗಾಲಾಗಿ ಕುಳಿತ ರೋಗಿಗಳು. ಕೊರೊನಾ ಮಧ್ಯೆ ಮುಖ್ಯವಾಗಿ ಸಿಗಬೇಕಿರುವ ಡಯಾಲಿಸಿಸ್ ಚಿಕಿತ್ಸೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. …

Read More »

ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ರೈತ ತಮಾಷೆ- ಮಾರುಕಟ್ಟೆ ಅಲ್ಲೋಲ ಕಲ್ಲೋಲ……

ಚಾಮರಾಜನಗರ: ರೈತರೊಬ್ಬರು ರೇಷ್ಮೆ ಮಾರುಕಟ್ಟೆಯಲ್ಲಿ ಕೆಮ್ಮಿದ್ದು, ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ತಮಾಷೆ ಮಾಡಿದ್ದಾರೆ. ಇಷ್ಟಕ್ಕೆ ಮಾರುಕಟ್ಟೆಯಲ್ಲಿ ರಾದ್ಧಾಂತ ನಡೆದಿದೆ. ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಘಟನೆ ನಡೆದಿದ್ದು, ಪದೇ ಪದೇ ಕೆಮ್ಮಿದ್ದರಿಂದ ಆತಂಕಗೊಂಡು ಅಕ್ಕಪಕ್ಕದವರು ವಿಚಾರಿಸಿದ್ದಾರೆ. ಈ ವೇಳೆ ತನಗೆ ಕೊರೊನಾ ಇದೆ ಎಂದು ರೈತ ತಮಾಷೆಗೆ ಹೇಳಿದ್ದಾರೆ. ಇದರಿಂದ ಬೆಚ್ಚಿಬಿದ್ದ ರೇಷ್ಮೆಗೂಡಿನ ಮಾರುಕಟ್ಟೆ ವ್ಯಾಪಾರಿಗಳು, ತೀವ್ರ ಆತಂಕಗೊಂಡಿದ್ದು, ತಕ್ಷಣವೇ ರೇಷ್ಮೆ ರೀಲರ್ಸ್ ಗಳು ತಹಸೀಲ್ದಾರ್‍ಗೆ ದೂರು ನೀಡಿದ್ದಾರೆ. …

Read More »