Breaking News

Yearly Archives: 2020

ಪ್ರಭಾವಿ ರಾಜಕಾರಣಿಯ ಕೈವಾಡ ದೊಡ್ಡದಾಗಿದೆ – ಸಿಸಿಬಿ ತನಿಖೆ ಅಷ್ಟು ಖುಷಿ ಕೊಟ್ಟಿಲ್:ಇಂದ್ರಜಿತ್

ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ನಟಿಯರಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ ಎಂದು ನಟ, ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್, ನನಗೆ ಗೊತ್ತಿರುವ ವಿಚಾರವನ್ನು …

Read More »

ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್

ಬೆಂಗಳೂರು: ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಎನ್‍ಡಿಪಿಎಸ್ ವಿಶೇಷ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿ ಆದೇಶಿಸಿದೆ. ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶ ಕೇಳಿತ್ತು. ಸಿಸಿಬಿ ಮನವಿಗೆ ಸಮ್ಮಿಸಿದ ನ್ಯಾಯಾಲಯ ಸಂಜನಾ ಬೇಲ್ ಅರ್ಜಿಯನ್ನ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸಂಜನಾ ಇನ್ನು ಮೂರು ದಿನ ಪರಪ್ಪನ ಅಗ್ರಹಾರದಲ್ಲಿರಬೇಕಾಗಿದೆ. ರಾಗಿಣಿ ಅರ್ಜಿಯ ವಿಚಾರಣೆ ನಡೆಸಿದ್ದು, …

Read More »

ಶಾಸಕ ಬೆಳ್ಳಿ ಪ್ರಕಾಶ್ ಸಚಿವರ ಮೇಲೆ ಹಲ್ಲೆಗೆ ಯತ್ನಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಶಾಸಕರನ್ನು ತಡೆದಿದ್ದಾರೆ

ಬೆಂಗಳೂರು: ಒಂದೆಡೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೆ ಇನ್ನೊಂದೆಡೆ ವಿಧಾನಸೌಧದ ಕ್ಯಾಂಟೀನ್ ನಲ್ಲೇ ಜನಪ್ರತಿನಿಧಿಗಳಿಬ್ಬರೂ ಹೊಡೆದಾಡಿಕೊಳ್ಳುವ ಹಂತಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಚಿವ ನಾರಾಯಣಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಗಲಾಟೆ ನಡೆದಿದ್ದು, ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಕಡೂರು ಕ್ಷೇತ್ರದ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ತಿಂಗಳಿಂದ ಅಲೆದರೂ ಕೆಲಸ ಮಾಡಿಕೊಡದ ಸಚಿವರ ನಡೆ ವಿರುದ್ಧ …

Read More »

ಶಾಸಕ ಐಹೊಳೆಗೆ ಕೋವಿಡ್ ದೃಢ.

ಬೆಳಗಾವಿ: ರಾಯಬಾಗ ಬಿಜೆಪಿ ಶಾಸಕ ಡಿ.ಎಂ. ಐಹೊಳೆ ಅವರಿಗೆ ಸೋಮವಾರ ಕೋವಿಡ್-19 ದೃಢಪಟ್ಟಿದೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ‌ ಬರೆದುಕೊಂಡಿರುವ ಅವರು, ‘ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆಗೆ ಒಳಪಟ್ಟಿದ್ದೆ. ನನಗೆ ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ. ಆರೋಗ್ಯವಾಗಿದ್ದು, ಬೆಂಗಳೂರಿನ ಮನೆಯಲ್ಲಿ ಪ್ರತ್ಯೇಕವಾಗಿರುತ್ತೇನೆ. ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗದಂತೆ ಬೆಂಗಳೂರಿನಿಂದಲೇ ನಿಗಾ ವಹಿಸುತ್ತೇನೆ’ ಎಂದು ತಿಳಿಸಿದ್ದಾರೆ.

Read More »

ಜೂಜಾಟ: 22 ಮಂದಿ ಬಂಧನ.

ಬೆಳಗಾವಿ: ಇಲ್ಲಿನ ರಾಜಹಂಸ ಗಲ್ಲಿಯ ಸದಾನಂದ ಮಠದ ಪಕ್ಕದ ಗಲ್ಲಿಯಲ್ಲಿ ಭಾನುವಾರ ಮಧ್ಯರಾತ್ರಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 22 ಮಂದಿಯನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜೂರ ಚೋಪಧಾರ, ಪ್ರದೀಪ ಲಾಟೂಕರ, ಮೋಯಿಜ ಗಚವಾಲೆ, ವಿಜಯ ಪಾಟೀಲ, ಪರಶುರಾಮ ಮೇತ್ರಿ, ಸುಶೀಲ ಮುದೋಳಕರ, ಬಾಬು ಯಾದವ, ಅನಿಲ ಯಳ್ಳೂರಕರ, ಕಿಸನ ಪಾಟೀಲ, ಜಹಾಂಗೀರಖಾನ ಪಠಾಣ, ವಿಜಯ ಶಿಂದೋಳಕರ, ದೀಪಕ ಹೊನ್ಯಾಳಕರ, ಆಕಾಶ ಜಕ್ಕಾನೆ, ವಿನಾಯಕ ಗಣಾಚಾರಿ, ಸಾಗರ ಮುತಗೇಕರ, …

Read More »

ವಿಧಾನಸಭೆಯಲ್ಲಿ ಸಂತಾಪ ಸೂಚನೆ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊರೊನಾ ಬಗ್ಗೆ  ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು: ಇಂದಿನಿಂದ ವಿಧಾನಸಭಾ ಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಸಂತಾಪ ಸೂಚನೆ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊರೊನಾ ಬಗ್ಗೆ  ಆತಂಕ ವ್ಯಕ್ತಪಡಿಸಿದರು. ನನಗೆ, ನನ್ನ ಹೆಂಡತಿಗೆ, ಮಗನಿಗೆ ಕೊರೊನಾ ಬಂದುಬಿಟ್ಟಿತ್ತು. ಯಾರೂ ನಮ್ಮ ನೋಡಂಗಿಲ್ಲ, ನಮ್ಮ ಹತ್ರ ಬರಂಗಿಲ್ಲ. ಯಾರಿಗೆ ಕೊರೊನಾ ಬಂದಿದೆಯೋ ಅವರು ಯಾರೂ ಭಯಪಡಬೇಕಿಲ್ಲ ಎಂದರು ಈ ಕೊರೊನಾ ಇದ್ಯಲ್ಲಾ ಇದು ಬಹಳ ಅಪಾಯಕಾರಿ. ಅದರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಈಶ್ವರಪ್ಪನಿಗೂ ಬಂದಿತ್ತು ಅಂತ …

Read More »

ಸಿಎಂ ಬಿ ಎಸ್ ಯಡಿಯೂರಪ್ಪ ಓರ್ವ ಸರ್ವಾಧಿಕಾರಿ ; ವಾಟಾಳ್ ನಾಗರಾಜ್ ಗಂಭೀರ ಆರೋಪ

ಬೆಳಗಾವಿ : ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ನಾನು ನೋಡಿದ್ದೇನೆ. ಆದರೆ, ಬಿ ಎಸ್ ಯಡಿಯೂರಪ್ಪ ಅವರು ಓರ್ವ ಸರ್ವಾಧಿಕಾರಿ ಮುಖ್ಯಮಂತ್ರಿ. ನನ್ನನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರವೇಶ ಆಗದಂತೆ ನೋಡಿಕೊಂಡಿದ್ದಾರೆ. ನನ್ನ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಸೋಲಿಸುತ್ತಾರೆ ಎಂದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ವಿಶೇಷ ಅಧಿವೇಶನ ನಡೆಸಬೇಕು. ಪ್ರವಾಹ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ, …

Read More »

‘ಕೇಂದ್ರ ಸರ್ಕಾರದಿಂದ ರೈತ ಪರ ಕಾಯ್ದೆ, ಮಧ್ಯವರ್ತಿಗಳ ಪರ ಇರುವವರಿಂದ‌ ವಿರೋಧ’

ಮಂಗಳೂರು: ರೈತರಿಗೆ ಮೋಸ ಮಾಡುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿರುವ ಪ್ರತಿಪಕ್ಷಗಳು ಈ ರೈತಪರ ಕಾಯ್ದೆಯನ್ನು ವಿರೋಧಿಸುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಸ್ವತಂತ್ರ ಭಾರತದಲ್ಲಿ ಮೊದಲಬಾರಿಗೆ ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಬಹುದಾಗಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದ್ದು ರೈತರು ಆಹಾರ ತಯಾರಿಕಾ …

Read More »

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಪಾಲಿನ ಮರಣಶಾಸನ: ಸಿದ್ದರಾಮಯ್ಯ

ಬೆಂಗಳೂರು: ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಅಂಗೀಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಂಸತ್ ನಲ್ಲಿ ವಿರೋಧಪಕ್ಷಗಳ ಅಭಿವ್ಯಕ್ಕಿ ಸ್ವಾತಂತ್ರ್ಯದ ಕೊರಳನ್ನು ಹಿಚುಕಿ, ರೈತರ ಪಾಲಿಗೆ ಮರಣಶಾಸನವಾಗಿರುವ ಕೃಷಿ ಉತ್ಪನ್ನ ಮಾರಾಟ ಮತ್ತು …

Read More »

ವಿಜಯಪುರ: ನೇಣು ಬಿಗಿದುಕೊಂಡು ಮಹಿಳಾ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ

ವಿಜಯಪುರ : ಎಂಕಾಂ ಅಂತಿಮ ವರ್ಷದ ಕೊನೆಯ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆವರಣದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೂಲತಃ ಕಲಬುರಗಿ ನಗರದ ಐಶ್ವರ್ಯ ಶಂಕರ ನಾಟಿಕಾರ (24) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾಳೆ. ತಂಗಿ ಆತ್ಮಹತ್ಯೆಗೆ ಕಾರಣವೆಂದು ಭಾವನನ್ನೇ ಹತ್ಯೆಗೈದ ಯೋಧ ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಸಾವಿನ ನಿಖರ …

Read More »