Breaking News

Yearly Archives: 2020

ಬಸ್ ಡಿಕ್ಕಿಯಲ್ಲಿದ್ದ 64 ಲಕ್ಷ ನಗದು ಸೀಜ್

ತುಮಕೂರು: ಖಾಸಗಿ ಬಸ್ಸಿನ ಡಿಕ್ಕಿಯಲ್ಲಿ 64,40,000 ನಗದು ಪತ್ತೆಯಾಗಿದೆ.ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿರುವ ಯಾವುದೇ ದಾಖಲೆ ಇಲ್ಲದ 64,40,000 ಹಣ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ 48 ರಲ್ಲಿರೋ ಕಳ್ಳಂಬೆಳ್ಳ ಚೆಕ್ ಪೋಸ್ಟ್ ನಲ್ಲಿ ಈ ಹಣ ಖಾಸಗಿ ಬಸ್ಸಿನ ಡಿಕ್ಕಿಯಲ್ಲಿ ಸಿಕ್ಕಿದೆ. ಹಣವನ್ನು ಚುನಾವಣಾಧಿಕಾರಿ ನಂದಿನಿದೇವಿ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.

Read More »

ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾದ ಮೈಸೂರಿನ ವೈದ್ಯ ದಂಪತಿ

ಮೈಸೂರು: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಪ್ರಯೋಗ ಹಂತದಲ್ಲಿರುವ ಕೋವಿಶಿಲ್ಡ್‌ ಲಸಿಕೆಯನ್ನು ಮೈಸೂರಿನ ವೈದ್ಯ ದಂಪತಿಯನ್ನು ಹಾಕಿಸಿಕೊಂಡಿದ್ದಾರೆ. 3ನೇ ಹಂತದ ಲಸಿಕೆಯನ್ನು ಮೈಸೂರಿನ ವೈದ್ಯೆ ಶಿಲ್ಪ ಸಂತೃಪ್ತ್ ಹಾಗೂ ಅವರ ಪತಿ ಡಾ. ಸಂತೃಪ್ತ್ ಹಾಕಿಸಿ ಕೊಂಡಿದ್ದಾರೆ. ಈ ಬಗ್ಗೆ ಡಾ. ಶಿಲ್ಪ ಸಂತೃಪ್ತ್ ಮಾತನಾಡಿದ್ದಾರೆ. ಅ. 1 ರಂದು ಕೊರೊನಾ‌ ಲಸಿಕೆ ಹಾಕಿಸಿಕೊಂಡಿರುವ ವೈದ್ಯೆ ಶಿಲ್ಪ ಲಸಿಕೆ ಪಡೆದು 28 ದಿನಗಳಿಂದ ಆರೋಗ್ಯದಿಂದಿದ್ದಾರೆ. ಇನ್ನೂ ಎರಡು ಇಂಜೆಕ್ಷನ್ ಪಡೆಯಬೇಕಿದ್ದು …

Read More »

ಮುನಿರತ್ನ ಕೂಡ ದರ್ಶನ್ ಆಪ್ತರಲ್ಲಿ ಒಬ್ಬರಾಗಿದ್ದು ಚುನಾವಣಾ ಪ್ರಚಾರಕ್ಕೆ ಗಜ ಬರ್ತಾರೆ ಎನ್ನಲಾಗ್ತಿದೆ.

ಬೆಂಗಳೂರು: ಆರ್.ಆರ್ ನಗರ ಕ್ಚೇತ್ರದ ಉಪಚುನಾವಣೆ ಪ್ರಚಾರ ಕಣ ಕ್ಲೈಮಾಕ್ಸ್ ಗೆ ಬರ್ತಿದೆ. ಕ್ಲೈಮಾಕ್ಸ್ ನಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಈ ಮೂಲಕ ಆರ್ ಆರ್ ನಗರದಲ್ಲಿ ಸಾರಥಿ ಧೂಳೆಬ್ಬಿಸ್ತಾರೆ ಎನ್ನಲಾಗ್ತಿದೆ. ಸ್ಯಾಂಡಲ್‍ವುಡ್‍ನ ಚಾಲೆಜಿಂಗ್ ಸ್ಟಾರ್ ದರ್ಶನ್, ಕನ್ನಡದ ಸೂಪರ್ ಸ್ಟಾರ್ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರೋ ಯಜಮಾನ ಎರಡು ವರ್ಷಗಳ ಹಿಂದೆ ಇದೇ ದಾಸ ಮಂಡ್ಯ ಎಲೆಕ್ಷನ್‍ನಲ್ಲಿ ಮಿಂಚಿದ್ದನ್ನು …

Read More »

ಭಾರೀ ಸಂಚಲನ ಸೃಷ್ಟಿಸಿದ್ದ ಐಎಂಎ ಬಹುಕೋಟಿ ವಂಚನೆ,ಮನ್ಸೂರ್ ಖಾನ್‍ಗೆ ಹೈಕೋರ್ಟ್ ಜಾಮೀನು ನೀಡಿದೆ.

ಬೆಂಗಳೂರು: ಭಾರೀ ಸಂಚಲನ ಸೃಷ್ಟಿಸಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್ ಖಾನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನೀಡಿದೆ. ಮನ್ಸೂರ್ ಖಾನ್ ವಿರುದ್ಧ ಇಡಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಅಧೀನ ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು, ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. …

Read More »

ನಮ್ಮಲ್ಲಿರುವುದು ಕೆಂಪು, ಬಿಳಿ ರಕ್ತ ಕಣ, ಡಿ.ಕೆ.ಸುರೇಶ್‍ಗೆ ಬಯಾಲಜಿ ಪುಸ್ತಕ ಕೊಡಿ- ಸುಧಾಕರ್

ಕೋಲಾರ: ಸಂಸದ ಡಿ.ಕೆ.ಸುರೇಶ್ ಅವರ ಕೇಸರಿ ರಕ್ತ ಹೇಳಿಕೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಟಾಂಗ್ ನೀಡಿದ್ದು, ನಮ್ಮಲ್ಲಿರುವುದು ಕೆಂಪು ಹಾಗೂ ಬಿಳಿ ರಕ್ತ ಕಣಗಳು ಎಂದಿದ್ದಾರೆ. ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಕೇಸರಿ ರಕ್ತ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಅವರಿಗೆ ಬಯಾಲಜಿ ಪುಸ್ತಕ ಕೊಡಿಸುತ್ತೇನೆ ನೋಡಿಕೊಳ್ಳಲಿ. ನನಗೆ ಗೊತ್ತಿರೋದು ಬಿಳಿ ಹಾಗೂ ಕೆಂಪು ರಕ್ತ ಕಣ ಅಷ್ಟೆ ಕೇಸರಿ ರಕ್ತ ಕಣ ಇರೋದು …

Read More »

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.

ಮಂಡ್ಯ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.ಪ್ರಸಾದ ಸೇವನೆ ಬಳಿಕ ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿದ 60 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. 60 ಜನರ ಪೈಕಿ ಐವರು ತೀವ್ರ ಸುಸ್ತಿನಿಂದ ಬಳಲಿದ್ದು. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ …

Read More »

2 ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಇದೀಗ ಆಕೆಯನ್ನು ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಲೆ

ಭೋಪಾಲ್: ಪೋಷಕರ ಒಪ್ಪಿಗೆಯ ನಂತರ ಪ್ರೀತಿಸಿದ್ದ ಯುವತಿಯನ್ನೇ 2 ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಇದೀಗ ಆಕೆಯನ್ನು ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಶವದ ಮುಂದೆ ಕುಳಿತು ರೋಧಿಸಿದ್ದಾನೆ. ಮೊದಲಿಗೆ ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಂದ ಬಳಿಕ ಚೂರಿಯಿಂದ ಮನಸೋ ಇಚ್ಛೆ ಇರಿದಿದ್ದಾನೆ. ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಪಕ್ಕ ಕೆಲ ಸಮಯ ಕುಳಿತ ಆರೋಪಿ ನಂತರ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪತಿ …

Read More »

ನಿವೃತ್ತ ಪ್ರಾಂಶುಪಾಲರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ

ಮೈಸೂರು: ನಿವೃತ್ತ ಪ್ರಾಂಶುಪಾಲರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ ವಿಶ್ವನಾಥ್​​ ಭಟ್​​ ಅವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು ಮೂವರು ಶಿಕ್ಷಕರು ಸೇರಿ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಪ್ಟೆಂಬರ್​ 20ರಂದು ಮೈಸೂರಿನ ಶರದಾದೇವಿ ನಗರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪರಶಿವಮೂರ್ತಿ ಅವರ ಹತ್ಯೆ ಮಾಡಲಾಗಿತ್ತು. ಸದ್ಯ ಆರೋಪಿ ವಿಶ್ವನಾಥ್ ಭಟ್ ಪರಶಿವಮೂರ್ತಿ ಕೊಲೆಗೆ ₹7 ಲಕ್ಷ ಸುಪಾರಿ …

Read More »

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಜೆಪಿಗೆ ಧಮ್ ಇದೆಯಾ ಎಂಬ ಪ್ರಶ್ನೆ ಕಮಲ ನಾಯಕರನ್ನು ಕೆರಳಿಸಿದೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಜೆಪಿಗೆ ಧಮ್ ಇದೆಯಾ ಎಂಬ ಪ್ರಶ್ನೆ ಕಮಲ ನಾಯಕರನ್ನು ಕೆರಳಿಸಿದ್ದು, ಸಿದ್ದು ವಿರುದ್ಧ ವಾಗ್ದಾಳಿಗಳ ಸುರಿಮಳೆಗಳೇ ಬರುತ್ತಿದೆ. ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಸಿದ್ದರಾಮಯ್ಯ ಬಿಜೆಪಿಗೆ ಧಮ್ ಇದೆಯಾ ಅಂತ ಕೇಳ್ತಾರೆ. ನಮಗೆ ಧೈರ್ಯ ಇರೋದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ್ತಿದೆ. 370 ವಿಧಿ ರದ್ದು ಮಾಡಿದ್ದು ಬಿಜೆಪಿ, ಇದು ಬಿಜೆಪಿಯ ಧೈರ್ಯ. …

Read More »

ಸಚಿವ ರಮೇಶಜಾರಕಿಹೊಳಿ ಅವರಿಗೆ ಕಿಂಗ್ ಆಗುವ ಅವಕಾಶವಿತ್ತು. ಆದ್ರೆ ಅವರು ಕಿಂಗ್ ಮೇಕರ್ ಆಗಿದ್ದಾರೆ

ಬೆಳಗಾವಿ: ಸಚಿವ ರಮೇಶಜಾರಕಿಹೊಳಿ  ಅವರಿಗೆ ಕಿಂಗ್ ಆಗುವ ಅವಕಾಶವಿತ್ತು. ಆದ್ರೆ ಅವರು ಕಿಂಗ್ ಮೇಕರ್ ಆಗಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ  ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಲ್ಲಿನ  ಸುವರ್ಣಸೌಧ ಎದುರು ಲಿಂಗಾಯತ ಸಮುದಾಯವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಸತ್ಯಾಗ್ರಹ ವೇಳೆ ಮನವಿ ಸ್ವೀಕರಿಸಲು ಸ್ಥಳಕ್ಕೆ ಸಚಿವರು ಬಂದಿದ್ದ ವೇೆಳೆ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ರಮೇಶ ಜಾರಕಿಹೊಳಿ ಅವರು ದೊಡ್ಡ …

Read More »